ರಜನಿಕಾಂತ್ ಬಗ್ಗೆ ನಿಮಗೆ ತಿಳಿದಿರದ 10 ವಿಷಯಗಳು ನಟ ರಜನಿಕಾಂತ್ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಯಾವಾಗಲೂ ಆಸಕ್ತಿ ತೋರಿಸುತ್ತಾರೆ. ರಜನಿ ಬಗ್ಗೆ ಹಲವರಿಗೆ ತಿಳಿಯದ ಕೆಲವು ವಿಷಯಗಳು ಇಲ್ಲಿವೆ. ನಟ ರಜನಿಕಾಂತ್ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಯಾವಾಗಲೂ ಆಸಕ್ತಿ ತೋರಿಸುತ್ತಾರೆ. ರಜನಿ ಬಗ್ಗೆ ಹಲವರಿಗೆ ತಿಳಿಯದ ಕೆಲವು ವಿಷಯಗಳು ಇಲ್ಲಿವೆ. ಭಾರತೀಯ ಚಿತ್ರರಂಗದ ಬೇಡಿಕೆ ನಟ ರಜನಿಕಾಂತ್ () ಕನ್ನಡ ನಾಡಿನಲ್ಲಿ ಹುಟ್ಟಿದ್ದರೂ, ಅವರು ಮರಾಠಿ ಕುಟುಂಬದಲ್ಲಿ ಜನಿಸಿದ್ದಾರೆ. ಆದರೂ ಅವರಿಗೆ ಮರಾಠಿ ಭಾಷೆ ಓದಲು, ಬರೆಯಲು ಬರುವುದಿಲ್ಲ. ಆದರೆ ಮಾತನಾಡಬಲ್ಲರು. ರಜನಿಕಾಂತ್ ಕನ್ನಡ ನಾಡಿನಲ್ಲಿ ಹುಟ್ಟಿ ಬೆಳದು ಕಂಡಕ್ಟರ್ ಆಗಿ ನೌಕರಿ ಗಿಟ್ಟಿಸಿಕೊಂಡಿದ್ದರು. ಹೀಗಾಗಿ, ಈಗಲೂ ರಜನಿಕಾಂತ್ ಅವರಿಗೆ ಕನ್ನಡ ಭಾಷೆಯನ್ನು ಮಾತ್ರ ಓದಲು, ಬರೆಯಲು ಬರುತ್ತದೆ. ದಕ್ಷಿಣ ಭಾರತ ಬಹುಬೇಡಿಕೆ ನಟನಾಗಿದ್ದರೂ ತಮಿಳು ಸಿನಿಮಾದಲ್ಲಿ ನಟಿಸುತ್ತಾರೆ. ಆದರೆ, ತಮಿಳು ಸಿನಿಮಾದಲ್ಲಿ ನಟಿಸುವಾಗ ಕನ್ನಡದಲ್ಲಿ ಕಥೆ, ಸಂಭಾಷಣೆಗಳನ್ನು ಬರೆಸಿಕೊಂಡು ಅರ್ಥಮಾಡಿಕೊಂಡು ನಟಿಸುತ್ತಾರೆ. ನಟ ರಜನಿಕಾಂತ್ ಅವರು ಲತಾ ಅವರ ಕನ್ನಡದ ಹೆಸರನ್ನು ನೋಡಿ, ಕೇವಲ ಹೆಸರಿನ ಕಾರಣದಿಂದಲೇ ತಮ್ಮ ಪತ್ನಿಯನ್ನು ಆಯ್ಕೆ ಮಾಡಿಕೊಂಡರು. ರಜನಿಕಾಂತ್ ಅವರು ತಮ್ಮ 50ನೇ ಸಿನಿಮಾವರೆಗೂ ರಾಘವೇಂದ್ರ ಸ್ವಾಮಿ ಭಕ್ತರಾಗಿದ್ದರು. ಇದಾದ ನಂತರ ಇತ್ತೀಚೆಗೆ ಬಾಬಾ ಭಕ್ತರಾಗಿದ್ದಾರೆ. ಜೀವನ ಎಂದೆಂದಿಗೂ ನಮ್ಮ ಶ್ರಮ, ದುಡಿಮೆಯೆಡೆಗೆ ಒಲವು, ನಟನೆ ಹಾಗೂ ಒಳ್ಳಯತನಕ್ಕೆ ಸೀಮಿತವಾಗಿದೆ ಎಂದುಕೊಂಡು ಆಧ್ಯಾತ್ಮಿಕತೆಯಿಂದ ನಟ ರಜನಿಕಾಂತ್ ದೂರವಿದ್ದರು. ರಜನಿಕಾಂತ್ ಅವರು ಆಧ್ಯಾತ್ಮಿಕ ಗುರುವಾಗಿ ಬಾಬಾ ಅವರನ್ನು ಆಯ್ಕೆ ಮಾಡಿಕೊಂಡ ನಂತರ, ರಾಜಕೀಯಕ್ಕೆ ಪ್ರವೇಶ ಮಾಡಲಿ ಪಕ್ಷ ಸ್ಥಾಪನೆ ಮಾಡಿದರು. ರಜನಿ ಅವರಿ ರಾಜಕೀಯ ಗುರು ಚೋ ರಾಮಸ್ವಾಮಿ ಆಗಿದ್ದಾರೆ. ರಜನಿಕಾಂತ್ ಅವರನ್ನು ತೀವ್ರವಾಗಿ ವಿರೋಧಿಸಿದ ತಮಿಳರುವಿ ಮಣಿ ಅವರನ್ನು ತಮ್ಮ ಪಕ್ಷಕ್ಕೆ ಪರಿಶೀಲಕರನ್ನಾಗಿ ನೇಮಿದುವ ಮೂಲಕ ರಾಜಕೀಯ ವಿರೋಧಿಗಳೇ ಇಲ್ಲದಂತೆ ಹೆಜ್ಜೆ ಇಡಲು ಮುಂದಾಗಿದ್ದರು. ಸಿನಿಮಾ ಹಾಗೂ ನಟನೆಯ ವಿಷಯದಲ್ಲಿ ಎಷ್ಟೇ ಪೈಪೋಟಿ ಇದ್ದರೂ.. ತಮಿಳು ಚಿತ್ರರಂಗದಲ್ಲಿ ರಜನಿಕಾಂರ್‌ಗೆ ಸುದೀರ್ಘ ಕಾಲದ ಆತ್ಮೀಯ ಗೆಳೆಯ ಎಂದರೆ ಅದು ಕಮಲ್ ಹಾಸನ್ ಮಾತ್ರ. ರಜನಿಕಾಂತ್ ಅವರ ಅಭಿಮಾನಿಗಳು ನೀವು ರಾಜಕೀಯಕ್ಕೆ ಬಂದು ಸಿಎಂ ಆಗಬೇಕು ಎಂದು ಮನವಿ ಮಾಡಿದ್ದರು. ಆದರೆ, ರಜನಿಕಾಂತ್ ಪಕ್ಷ ಕಟ್ಟಿದರೂ, ಚುನಾವಣೆಗೆ ಸ್ಪರ್ಧೆಗೆ ಹೋಗದೇ ರಾಜಕೀಯದಿಂದಲೇ ಹಿಂದಕ್ಕೆ ಸರಿದರು. ಈ ಮೂಲಕ ರಜನಿಕಾಂತ್ ಕೊನೆಯವರೆಗೂ ಅಭಿಮಾನಿಗಳ ರಾಜಕೀಯ ಆಸೆಯನ್ನು ಮಾತ್ರ ಈಡೇರಿಸಲಾಗಲಿಲ್ಲ.