ಆಫ್ಘಾನ್ ವಿರುದ್ಧ ಭರ್ಜರಿ ಸೆಂಚುರಿ;ಸಚಿನ್, ಪಾಂಟಿಂಗ್ ದಾಖಲೆ ಮುರಿದ ರೋಹಿತ್ ಶರ್ಮಾ! ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ಸೆಂಚುರಿ ಸಿಡಿಸಿದ್ದಾರೆ. ಆಫ್ಘಾನಿಸ್ತಾನ ವಿರುದ್ಧ ರೋಹಿತ್ ಸೆಂಚುರಿಯಿಂದ ಹಲವು ದಾಖಲೆ ನಿರ್ಮಾಣವಾಗಿದೆ. ಸಚಿನ್ ತೆಂಡುಲ್ಕರ್,ರಿಕಿ ಪಾಂಟಿಂಗ್, ಸನತ್ ಜಯಸೂರ್ಯ ಸೇರಿದಂತೆ ಹಲವು ದಿಗ್ಗರ ದಾಖಲೆ ಪುಡಿ ಮಾಡಿದ್ದಾರೆ. ದೆಹಲಿ(ಅ.11) ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ದಿಗ್ಗಜರ ದಾಖಲೆ ಪುಡಿ ಮಾಡಿದ್ದಾರೆ. ಆಫ್ಘಾನಿಸ್ತಾನ ವಿರುದ್ಧ ಪಂದ್ಯದಲ್ಲಿ ರೋಹಿತ್ ಶರ್ಮಾ ಶತಕ ಸಿಡಿಸಿ ಮಿಂಚಿದ್ದಾರೆ. ರೋಹಿತ್ ಶರ್ಮಾ 63 ಎಸೆತದಲ್ಲಿ ಶತಕ ಪೂರೈಸಿದ್ದಾರೆ. ಏಕದಿನದಲ್ಲಿ 31ನೇ ಸೆಂಚುರಿ ದಾಖಲಿಸಿದ ರೋಹಿತ್ ಶರ್ಮಾ, ಸಚಿನ್ ತೆಂಡೂಲ್ಕರ್, ರಿಕಿ ಪಾಟಿಂಗ್, ಸನತ್ ಜಯಸೂರ್ಯ ಸೇರಿದಂತೆ ಹಲವರ ದಾಖಲೆ ಪುಡಿ ಮಾಡಿದ್ದಾರೆ. ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ಸೆಂಚುರಿ ಸಿಡಿಸಿದ ದಾಖಲೆ ಇದೀಗ ರೋಹಿತ್ ಶರ್ಮಾ ಪಾಲಾಗಿದೆ. ರೋಹಿತ್ ಶರ್ಮಾ ಇದೀಗ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 7ನೇ ಸೆಂಚುರಿ ದಾಖಲಿಸಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ 6 ಶತಕದ ಮೂಲಕ ಗರಿಷ್ಠ ಸೆಂಚುರಿ ದಾಖಲೆ ಬರೆದಿದ್ದ ಸಚಿನ್ ತೆಂಡೂಲ್ಕರ್ ಇದೀಗ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. : ಸಿಕ್ಸರ್‌ಗಳ ವಿಶ್ವದಾಖಲೆ ನಿರ್ಮಿಸಿದ ಹಿಟ್‌ಮ್ಯಾನ್‌! ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ಸೆಂಚುರಿರೋಹಿತ್ ಶರ್ಮಾ: 7 ಸೆಂಚುರಿಸಚಿನ್ ತೆಂಡೂಲ್ಕರ್:6 ಸೆಂಚುರಿರಿಕಿ ಪಾಟಿಂಗ್ :5 ಸೆಂಚುರಿಕುಮಾರ್ ಸಂಗಕ್ಕಾರ:5 ಸೆಂಚುರಿ ಏಕದಿನದಲ್ಲಿ ಗರಿಷ್ಠ ಸೆಂಚುರಿ ದಾಖಲೆಯಲ್ಲಿ ಸಚಿನ್ ತೆಂಡೂಲ್ಕರ್ ಮೊದಲ ಸ್ಥಾನದಲ್ಲಿದ್ದಾರೆ. ಇದೀಗ ರೋಹಿತ್ ಶರ್ಮಾ 3ನೇ ಸ್ಥಾನದಲ್ಲಿದ್ದ ರಿಕಿ ಪಾಟಿಂಗ್ ಹಿಂದಿಕ್ಕಿದ್ದಾರೆ. ಏಕದಿನದಲ್ಲಿ ಗರಿಷ್ಠ ಸೆಂಚುರಿ ದಾಖಲೆಸಚಿನ್ ತೆಂಡೂಲ್ಕರ್: 49ವಿರಾಟ್ ಕೊಹ್ಲಿ: 47ರೋಹಿತ್ ಶರ್ಮಾ:31ರಿಕಿ ಪಾಂಟಿಂಗ್: 30ಸನತ್ ಜಯಸೂರ್ಯ: 28 ಆರಂಭಿಕನಾಗಿ ಗರಿಷ್ಠ ಸೆಂಚುರಿ ದಾಖಲೆಸಚಿನ್ ತೆಂಡೂಲ್ಕರ್ : 45ರೋಹಿತ್ ಶರ್ಮಾ: 29ಸನತ್ ಜಯಸೂರ್ಯ: 28ಹಾಶಿಮ್ ಆಮ್ಲಾ: 27ಕ್ರಿಸ್ ಗೇಲ್:25 ಹಶ್ಮತುಲ್ಲಾ ಶಾಹಿದಿ ನಾಯಕನ ಆಟ, ಭಾರತಕ್ಕೆ ಸವಾಲಿನ ಗುರಿ ನೀಡಿದ ಆಫ್ಘಾನ್‌..! ವಿಶ್ವಕಪ್ ಟೂರ್ನಿಯಲ್ಲಿ ಅತೀ ವೇಗದ ಶತಕದ ದಾಖಲೆಆ್ಯಡಿನ್ ಮರ್ಕ್ರಮ್(ಸೌತ್ ಆಫ್ರಿಕಾ) 49 ಎಸೆತದಲ್ಲಿ ಸೆಂಚುರಿ, 2023ಕೇವಿನ್ ಒಬ್ರಿಯನ್(ಐರ್ಲೆಂಡ್) 50 ಎಸೆತದಲ್ಲಿ ಸೆಂಚುರಿ, 2011ಗ್ಲೆನ್ ಮ್ಯಾಕ್ಸ್‌ವೆಲ್(ಆಸ್ಟ್ರೇಲಿಯಾ) 51 ಎಸೆತದಲ್ಲಿ ಸೆಂಚುರಿ, 2015ಎಬಿ ಡಿವಿಲಿಯರ್ಸ್(ಸೌತ್ ಆಫ್ರಿಕಾ) 52 ಎಸೆತದಲ್ಲಿ ಸೆಂಚುರಿ, 2015ಇಯಾನ್ ಮಾರ್ಗನ್(ಇಂಗ್ಲೆಂಡ್)57 ಎಸೆತದಲ್ಲಿ ಸೆಂಚುರಿ, 2019ರೋಹಿತ್ ಶರ್ಮಾ(ಭಾರತ) 63 ಎಸೆತದಲ್ಲಿ ಸೆಂಚುರಿ, 2023