: ಏಷ್ಯಾಕಪ್ ನಡೆಯುತ್ತಿರುವಾಗಲೇ ಲಂಕಾ ಮಾಜಿ ಕ್ರಿಕೆಟಿಗ ಆರೆಸ್ಟ್‌..! ಕೊಲಂಬೊ: ಒಂದು ಕಡೆ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಏಷ್ಯಾಕಪ್ ಟೂರ್ನಿ ಭರದಿಂದ ಸಾಗುತ್ತಿದೆ ಹೀಗಿರುವಾಗಲೇ ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗನನ್ನು ಲಂಕಾ ಪೊಲೀಸರು ಬಂಧನ ಮಾಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ. ಕೊಲಂಬೊ: ಒಂದು ಕಡೆ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಏಷ್ಯಾಕಪ್ ಟೂರ್ನಿ ಭರದಿಂದ ಸಾಗುತ್ತಿದೆ ಹೀಗಿರುವಾಗಲೇ ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗನನ್ನು ಲಂಕಾ ಪೊಲೀಸರು ಬಂಧನ ಮಾಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ. ಕಳೆದ ರಾತ್ರಿಯಷ್ಟೇ ಶ್ರೀಲಂಕಾ ಕ್ರಿಕೆಟ್ ತಂಡವು ಆಫ್ಘಾನಿಸ್ತಾನ ಎದುರು ರೋಚಕ ಜಯ ಸಾಧಿಸುವ ಮೂಲಕ ಕೂದಲೆಳೆ ಅಂತರದಲ್ಲಿ ಸೋಲಿನಿಂದ ಪಾರಾಗಿ ಏಷ್ಯಾಕಪ್ ಟೂರ್ನಿಯ ಸೂಪರ್‌ 4 ಹಂತಕ್ಕೆ ಲಗ್ಗೆಯಿಟ್ಟಿದೆ. ವಿಶೇಷ ತನಿಖಾ ಸಂಸ್ಥೆಯ ವರದಿ ಪ್ರಕಾರ, ಸೇನಾನಾಯಕೆ 2020ರ ಚೊಚ್ಚಲ ಆವೃತ್ತಿಯ ಲಂಕಾ ಪ್ರೀಮಿಯರ್ ಲೀಗ್ ಟೂರ್ನಿಯ ವೇಳೆ ಮ್ಯಾಚ್ ಫಿಕ್ಸಿಂಗ್ ಮಾಡಲು ಇಬ್ಬರು ಆಟಗಾರರನ್ನು ದುಬೈನಲ್ಲಿ ಫೋನ್‌ ಮೂಲಕ ಮನವೊಲಿಸುವ ಪ್ರಯತ್ನ ಮಾಡಿದ್ದರು ಎನ್ನಲಾಗಿದೆ. ಈ ಸಂಬಂಧ ಪ್ರತಿಕ್ರಿಯೆ ನೀಡಿದ್ದ ಸೇನಾನಾಯಕೆ, ಇವೆಲ್ಲವೂ ಆಧಾರರಹಿತವಾದ ಶುದ್ದ ಸುಳ್ಳುಗಳಾಗಿವೆ ಎಂದು ಈ ಆರೋಪಗಳನ್ನು ತಳ್ಳಿ ಹಾಕಿದ್ದರು. ಸೇನಾನಾಯಕೆ ಶ್ರೀಲಂಕಾ ಪರ 73 ಸೀಮಿತ ಓವರ್‌ಗಳ ಪಂದ್ಯಗಳನ್ನಾಡಿ 78 ವಿಕೆಟ್ ಕಬಳಿಸಿದ್ದಾರೆ.