36 ವರ್ಷದ ಮಾಜಿ ಚಾಂಪಿಯನ್, ರಸ್ಲರ್‌ ಬ್ರೇ ವ್ಯಾಟ್ ಹೃದಯಾಘಾತಕ್ಕೆ ಬಲಿ ರೆಸ್ಲರ್‌ ಲೋಕದಲ್ಲಿ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಮಾಜಿ ಚಾಂಪಿಯನ್ ಬ್ರೇ ವ್ಯಾಟ್ ಅವರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಅವರಿಗೆ ಕೇವಲ 36ನೇ ವರ್ಷ ವಯಸ್ಸಾಗಿದ್ದು, ಜಗತ್ತಿನೆಲ್ಲೆಡೆ ಇರುವ ಕೋಟ್ಯಾಂತರ ಅಭಿಮಾನಿಗಳು ಅವರ ಈ ಹಠಾತ್ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ. ನ್ಯೂಯಾರ್ಕ್‌: ರೆಸ್ಲರ್‌ ಲೋಕದಲ್ಲಿ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಮಾಜಿ ಚಾಂಪಿಯನ್ ಬ್ರೇ ವ್ಯಾಟ್ ಅವರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಅವರಿಗೆ ಕೇವಲ 36ನೇ ವರ್ಷ ವಯಸ್ಸಾಗಿದ್ದು, ಜಗತ್ತಿನೆಲ್ಲೆಡೆ ಇರುವ ಕೋಟ್ಯಾಂತರ ಅಭಿಮಾನಿಗಳು ಅವರ ಈ ಹಠಾತ್ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ. ಪಾಶ್ಚಾತ್ಯ ಕುಸ್ತಿ ಲೋಕದಲ್ಲಿ ಅಳವಾಗಿ ಬೇರೂರಿದ್ದ ತಮ್ಮ ಕುಟುಂಬದ ಮೂರನೇ ತಲೆಮಾರಿನಲ್ಲಿ ಒಬ್ಬರಾಗಿದ್ದ ಬ್ರೇ ವ್ಯಾಟ್ ಇಷ್ಟು ಸಣ್ಣ ವಯಸ್ಸಿಗೆ ಇಹಲೋಕ ತ್ಯಜಿಸಿರುವುದು ರಸ್ಲಿಂಗ್ ಲೋಕವನ್ನು ಆಘಾತಕ್ಕೆ ದೂಡಿದೆ. ಬ್ರೇ ವ್ಯಾಟ್ ಅವರ ನಿಜವಾದ ಹೆಸರು ವಿಂಡ್‌ಹ್ಯಾಮ್ ರೊಟುಂಡಾ ಆಗಿದ್ದು, ರೆಸ್ಲಿಂಗ್‌ ಲೋಕದಲ್ಲಿ ಅವರು ಬ್ರೇ ವ್ಯಾಟ್ ಎಂದೇ ಖ್ಯಾತಿ ಪಡೆದಿದ್ದರು.ಬ್ರೇ ವ್ಯಾಟ್ ಸಾವಿನ ವಿಚಾರವನ್ನು ( ) ಸಂಸ್ಥೆಯ ಮುಖ್ಯ ಕಂಟೆಂಟ್ ಅಧಿಕಾರಿ ಪೌಲ್ ಟ್ರಿಪಲ್ ಹೆಚ್ ಲೆವೆಸ್ಕ್ಯೂ ಸಾಮಾಜಿಕ ಜಾಲತಾಣದಲ್ಲಿ ಖಚಿತಪಡಿಸಿದ್ದು, ಹೃದಯಾಘಾತದಿಂದ ಅವರು ಸಾವನ್ನಪ್ಪಿದ್ದಾರೆ ಎಂದು ಲೆವೆಸ್ಕ್ಯೂ ಹೇಳಿದ್ದಾರೆ. ಇತಿಹಾಸದ ಟಾಪ್ 5 ಹಾಟ್‌ ಮಹಿಳಾ ಕುಸ್ತಿಪಟುಗಳಿವರು..! ಪೌಲ್ ಟ್ರಿಪಲ್ ಹೆಚ್ ಲೆವೆಸ್ಕ್ಯೂ ಅವರು, ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು, ಹಾಲ್‌ ಆಫ್ ಫೇಮ್ ಖ್ಯಾತಿ ಗಳಿಸಿದ್ದ ಮೈಕ್ ರೊಟಂಡ್ ಅವರಿಂದ ಈಗಷ್ಟೇ ಕರೆ ಸ್ವೀಕರಿಸಿದೆ. ನಮ್ಮ ಕುಟುಂಬದ ಜೀವಮಾನದ ಸದಸ್ಯ ಬ್ರೇ ವ್ಯಾಟ್ ಎಂದೇ ಫೇಮಸ್ ಆಗಿದ್ದ ವಿಂಡಮ್ ರೊಟಂಡ್ ಅವರು ಇಂದು ಮುಂಜಾನೆ ಅನಿರೀಕ್ಷಿತವಾಗಿ ಹೊರಟು ಹೋಗಿದ್ದಾರೆ. ಅವರ ಕುಟುಂಬಕ್ಕೆ ಅವರ ಅಗಲಿಕೆಯನ್ನು ಸಹಿಸುವ ಶಕ್ತಿ ಸಿಗಲಿ ಅವರ ಕುಟುಂಬದ ಜೊತೆ ನಾವಿದ್ದೇವೆ. ಈ ಸಂದರ್ಭದಲ್ಲಿ ನಾವು ಪ್ರತಿಯೊಬ್ಬರನ್ನು ಕೂಡ ಅವರ ಖಾಸಗಿತನವನ್ನು ಗೌರವಿಸುವಂತೆ ಮನವಿ ಮಾಡುತ್ತೇವೆ ಎಂದು ಅವರು ಟ್ವಿಟ್ ಮಾಡಿದ್ದಾರೆ. ಬ್ರೇ ವ್ಯಾಟ್, ಅವರ ನಿಜವಾದ ಹೆಸರು ವಿಂಡ್‌ಹ್ಯಾಮ್ ರೋಟುಂಡಾ ಕೆಲವು ಆರೋಗ್ಯ ಸಮಸ್ಯೆಯ ಕಾರಣದಿಂದ ಅವರು ಕಳೆದ ಹಲವಾರು ತಿಂಗಳಿನಿಂದ WWEನ ಕೂಟಗಳಲ್ಲಿ ಭಾಗಿಯಾಗಿರಲಿಲ್ಲ, 2009ರಿಂದಲೂ ಅವರು ಜೊತೆ ಇದ್ದರು. ಆದರೆ 2021 ಹಾಗೂ 22 ರಲ್ಲಿ ಅವರು ಆಶ್ಚರ್ಯಕರವಾಗಿ ವರ್ಷಗಳ ಕಾಲ ತಂಡದಿಂದ ಹೊರಗುಳಿದಿದ್ದರು. ಆದರೆ ಕಳೆದ ಸೆಪ್ಟೆಂಬರ್‌ನಲ್ಲಿ ಮತ್ತೆ WWEಗೆ ಮರಳಿದ್ದರು. ಇವರ ಪಂದ್ಯಾವಳಿಗಳು ಒಳ್ಳೆಯ ಟಿವಿ ರೇಟಿಂಗ್ ನೀಡಿದ್ದವು ಎಂದು ಇಎಸ್‌ಪಿಎನ್ ()ಸ್ಪೋರ್ಟ್ಸ್ ಚಾನೆಲ್ ವರದಿ ಮಾಡಿದೆ. ಲೆಜೆಂಡ್ ಅಂಡರ್‌ಟೇಕರ್ ನೋಡಿ ಬೆಚ್ಚಿಬಿದ್ದ ಡೇಂಜರಸ್ ಶಾರ್ಕ್‌..! ವಿಡಿಯೋ ವೈರಲ್ ಅವರು WWEನಲ್ಲಿ ಮೂರು ಬಾರಿ ವಿಶ್ವ ಚಾಂಪಿಯನ್ ಆಗಿದ್ದರು. ಯೂನಿವರ್ಸಲ್ ಚಾಂಪಿಯನ್‌ಶಿಪ್‌ನ್ನು ಎರಡು ಬಾರಿ ಹಾಗೂ ಚಾಂಪಿಯನ್‌ಶಿಪ್ ಒಂದು ಬಾರಿ ಗೆದ್ದಿದ್ದರು. ಆದರೆ ಆಗಸ್ಟ್ 2018ರಿಂದ ಏಪ್ರಿಲ್ 2019ರವರೆಗೆ ಅವರು ಬ್ರೇಕ್ ತೆಗೆದುಕೊಂಡು ದ ಫೈನ್ಡ್ ಎಂಬ ಹೊಸ ಪಾತ್ರದೊಂದಿಗೆ ಮತ್ತೆ ಬಂದಿದ್ದರು ಎಂದು ಟೈಮ್ಸ್ ಮ್ಯಾಗಜೀನ್ ವರದಿ ಮಾಡಿದೆ. ಬ್ರೇ ವ್ಯಾಟ್ ಇಡೀ ಕುಟುಂಬವೇ ರೆಸ್ಲರ್ ಹಿನ್ನೆಲೆಯನ್ನು ಹೊಂದಿದ್ದು, ಇವರ ತಂದೆ ಮೈಕ್ ರೊಟುಂಡ ( ) ಕೂಡ ಹಾಲ್ ಆಫ್ ಫೇಮ್ ಖ್ಯಾತಿ ಹೊಂದಿದ್ದರು. ಇವರ ಅಜ್ಜ ಬ್ಲ್ಯಾಕ್‌ಜಾಕ್ ಮುಲ್ಲಿಗನ್ ಅವರು ಕೂಡ ವೃತ್ತಿಪರ ಕುಸ್ತಿಪಟುವಾಗಿ ತಮ್ಮ ಛಾಪು ಮೂಡಿಸಿದ್ದರು. ಇದರ ಜೊತೆಗೆ ಇವರ ಚಿಕ್ಕಪ್ಪಂದಿರಾದ ಬ್ಯಾರಿ ಹಾಗೂ ಕೆಂಡಾಲ್ ವಿಂಡ್‌ಹ್ಯಾಮ್ ( ) ಕೂಡ ಕುಸ್ತಿ ಜಗತ್ತಿನಲ್ಲಿ ವೃತ್ತಿ ಜೀವನ ಆರಂಭಿಸಿದ್ದರು ಎಂದು ಸುದ್ದಿ ಸಂಸ್ಥೆಯೊಂದು ಹೇಳಿದೆ.