ಖಾತೆಯ ಮೂಲಕ ಗರಿಷ್ಠ ಹಣ ಸಂಪಾದನೆ ಮಾಡುವ ಟಾಪ್‌-10 ಸೆಲೆಬ್ರಿಟಿಗಳಿವರು! ಇನ್ಸ್ಟಾಗ್ರಾಮ್ ಇಂದು ಕೇವಲ ಸೋಶಿಯಲ್‌ ಮೀಡಿಯಾ ಮಾತ್ರವೇ ಆಗಿ ಉಳಿದಿಲ್ಲ. ಆದಾಯದ ಮೂಲವೂ ಆಗಿದೆ. ಹೆಚ್ಚಿನ ಫಾಲೋವರ್‌ಗಳನ್ನು ಹೊಂದಿರುವ ಸೆಲೆಬ್ರಿಟಿಗಳು ಇನ್ಸ್ಟಾಗ್ರಾಮ್ ಮೂಲಕವೇ ಇಂದು ಕೋಟಿ ಕೋಟಿ ಸಂಪಾದನೆ ಮಾಡುತ್ತಿದ್ದಾರೆ. ಇಂಥ ಅಗ್ರ 10 ಸೆಲೆಬ್ರಿಟಿಗಳ ವಿವರ ಇಲ್ಲಿದೆ. ಇನ್ಸ್ಟಾಗ್ರಾಮ್ ಇಂದು ಕೇವಲ ಸೋಶಿಯಲ್‌ ಮೀಡಿಯಾ ಮಾತ್ರವೇ ಆಗಿ ಉಳಿದಿಲ್ಲ. ಆದಾಯದ ಮೂಲವೂ ಆಗಿದೆ. ಹೆಚ್ಚಿನ ಫಾಲೋವರ್‌ಗಳನ್ನು ಹೊಂದಿರುವ ಸೆಲೆಬ್ರಿಟಿಗಳು ಇನ್ಸ್ಟಾಗ್ರಾಮ್ ಮೂಲಕವೇ ಇಂದು ಕೋಟಿ ಕೋಟಿ ಸಂಪಾದನೆ ಮಾಡುತ್ತಿದ್ದಾರೆ. ಇಂಥ ಅಗ್ರ 10 ಸೆಲೆಬ್ರಿಟಿಗಳ ವಿವರ ಇಲ್ಲಿದೆ. 7. ಅರಿಯಾನಾ ಗ್ರಾಂಡೆ: ಅಮೆರಿಕದ ಸಿಂಗರ್ ಸಾಂಗ್‌ ರೈಟರ್‌ ಹಾಗೂ ನಟಿ. 30 ವರ್ಷದ ವಯಸ್ಸಿನ ಈಕೆಗೆ ಇನ್ಸ್ಟಾಗ್ರಾಮ್‌ನಲ್ಲಿ 379 ಮಿಲಿಯನ್‌ ಫಾಲೋವರ್‌ಗಳಿದ್ದಾರೆ. ಒಂದು ಪ್ರಮೋಷಲ್‌ ಪೋಸ್ಟ್‌ನಿಂದ ಈಕೆ 13.99 ಕೋಟಿ ರೂಪಾಯಿ ಪಡೆದುಕೊಳ್ಳುತ್ತಾರೆ. 4. ಸೆಲೆನಾ ಗೋಮಜ್‌: ಅಮೆರಿಕದ ಖ್ಯಾತ ಗಾಯಕಿ, ನಟಿ, ನಿರ್ಮಾಪಕಿ ಹಾಗೂ ಮಹಿಳಾ ಉದ್ಯಮಿ. ಬರೀ 31 ವರ್ಷದ ಈಕೆ ಇನ್ಸ್ಟಾಗ್ರಾಮ್‌ ಪೋಸ್ಟ್‌ಗಾಗಿ ಪಡೆಯುವ ಹಣ 14.39 ಕೋಟಿ ರೂಪಾಯಿ. ಈಕೆಗೆ ಇರುವ ಫಾಲೋವರ್‌ಗಳ ಸಂಖ್ಯೆ 428 ಮಿಲಿಯನ್‌. 3. ಲಿಯೋನೆಲ್‌ ಮೆಸ್ಸಿ: ವಿಶ್ವದ ಮತ್ತೊಬ್ಬ ಪ್ರಖ್ಯಾತ ಫುಟ್‌ಬಾಲ್‌ ತಾರೆ. ಅರ್ಜೆಂಟೀನಾದ ಲಿಯೋನೆಲ್‌ ಮೆಸ್ಸಿ ಇನ್ಸ್ಟಾಗ್ರಾಮ್‌ನಲ್ಲಿ ತಮ್ಮ ಒಂದು ಪೋಸ್ಟ್‌ಗಾಗಿ 14.74 ಕೋಟಿ ರೂಪಾಯಿ ಹಣ ಪಡೆಯುತ್ತಾರೆ. ಇನ್ಸ್ಟಾಗ್ರಾಮ್‌ನಲ್ಲಿ 484 ಮಿಲಿಯನ್‌ ಫಾಲೋವರ್‌ಗಳನ್ನು ಮೆಸ್ಸಿ ಹೊಂದಿದ್ದಾರೆ. 1. ಕ್ರಿಶ್ಚಿಯಾನೋ ರೊನಾಲ್ಡೋ: ವಿಶ್ವದ ಅತ್ಯಂತ ಜನಪ್ರಿಯ ಫುಟ್‌ಬಾಲ್‌ ತಾರೆ. ಇನ್ಸ್‌ಟಾಗ್ರಾಮ್‌ನಲ್ಲಿ ಇವರ ಫಾಲೋವರ್‌ಗಳ ಸಂಖ್ಯೆ 602 ಮಿಲಿಯನ್‌. ಇನ್ಸ್ಟಾಗ್ರಾಮ್‌ನಲ್ಲಿ ಪ್ರಚಾರದ ಪೋಸ್ಟ್‌ಗಾಗಿ ಇವರು ಪಡೆಯುವ ಮೊತ್ತ 19.88 ಕೋಟಿ ರೂಪಾಯಿ.