: ತವರಿನ ಕ್ರಿಕೆಟ್‌ ಸರಣಿಗಳ ವೇಳಾಪಟ್ಟಿ ರಿಲೀಸ್‌ ಮಾಡಿದ ಬಿಸಿಸಿಐ : ಬಿಸಿಸಿಐ 2023-24 ನೇ ಸಾಲಿನ ಟೀಮ್ ಇಂಡಿಯಾದ ತವರಿನ ಕ್ರಿಕೆಟ್‌ ಸರಣಿಯ ವೇಳಾಪಟ್ಟಿ ಪ್ರಕಟಿಸಿದೆ. ಟೀಂ ಇಂಡಿಯಾ ತನ್ನ ತವರು ಋತುವಿನಲ್ಲಿ ಮೊದಲು ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಮುಂಬೈ (ಜು.25):ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 2023-24ನೇ ಸಾಲಿನ ಟೀಮ್ ಇಂಡಿಯಾದ ತವರಿನ ಕ್ರಿಕೆಟ್‌ ಸರಣಿಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಮುಂಬರುವ ದೇಶೀಯ ಋತುವಿನಲ್ಲಿ, ಟೀಮ್‌ ಇಂಡಿಯಾ 5 ಟೆಸ್ಟ್, 3 ಏಕದಿನ ಮತ್ತು 8 ಟಿ20 ಗಳನ್ನು ಒಳಗೊಂಡಂತೆ ಒಟ್ಟು 16 ಅಂತರಾಷ್ಟ್ರೀಯ ಪಂದ್ಯಗಳನ್ನು ಭಾರತದಲ್ಲಿ ಆಡಲಿದೆ. ಟೀಂ ಇಂಡಿಯಾ 2024ರ ವರ್ಷವನ್ನು 3 ಪಂದ್ಯಗಳ ಟಿ20 ಸರಣಿಯೊಂದಿಗೆ ಆರಂಭ ಮಾಡಲಿದೆ. ವಿಶೇಷವೆಂದರೆ, ಈ ತಂಡದ ವಿರುದ್ಧ ಭಾರತ ಇದೇ ಮೊದಲ ಬಾರಿಗೆ ತವರಿನಲ್ಲಿ ದ್ವಿಪಕ್ಷೀಯ ಸರಣಿಯನ್ನು ಆಡಲಿದೆ. 2023-24ರ ದೇಶೀಯ ಋತುವಿನಲ್ಲಿ ಟೀಂ ಇಂಡಿಯಾ ಮೊದಲು ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಏಕದಿನ ವಿಶ್ವಕಪ್‌ಗೂ ಮುನ್ನ ಅಂದರೆ, ಸೆಪ್ಟೆಂಬರ್ 22 ರಿಂದ 27 ರವರೆಗೆ, ಆಸ್ಟ್ರೇಲಿಯಾ ತಂಡವು ಭಾರತದಲ್ಲಿ ಟೀಮ್ ಇಂಡಿಯಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. 2023ರ ವಿಶ್ವಕಪ್ ಬಳಿಕ ಈ ಎರಡು ತಂಡಗಳ ನಡುವೆ 5 ಟಿ20 ಪಂದ್ಯಗಳ ಸರಣಿ ನಡೆಯಲಿದೆ. ಈ ಟಿ20 ಸರಣಿಯು ನವೆಂಬರ್ 23 ರಿಂದ ಆರಂಭವಾಗಲಿದ್ದು, ಡಿಸೆಂಬರ್ 3 ರವರೆಗೆ ನಡೆಯಲಿದೆ.ಅಫ್ಘಾನಿಸ್ತಾನ ವಿರುದ್ಧ ಮೊದಲ ಬಾರಿಗೆ ಟಿ20 ಸರಣಿ:ಹೊಸ ವರ್ಷದ ಆರಂಭದಲ್ಲಿ, ಅಫ್ಘಾನಿಸ್ತಾನ ತಂಡವು ಸೀಮಿತ ಓವರ್‌ಗಳ ದ್ವಿಪಕ್ಷೀಯ ಪ್ರವಾಸಕ್ಕಾಗಿ ಭಾರತಕ್ಕೆ ಬರಲಿದೆ. ಈ ಟಿ20 ಸರಣಿಯ ಮೊದಲ ಪಂದ್ಯ ಮೊಹಾಲಿಯಲ್ಲಿ, ಎರಡನೇ ಪಂದ್ಯ ಇಂದೋರ್‌ನಲ್ಲಿ ಮತ್ತು ಅಂತಿಮ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದೆ. ಜನವರಿ 11ರಿಂದ ಜನವರಿ 17ರವರೆಗೆ ಈ ಸರಣಿ ನಡೆಯಲಿದ್ದು, ಅಫ್ಘಾನಿಸ್ತಾನದ ಬಳಿಕ ಇಂಗ್ಲೆಂಡ್ ತಂಡ ಭಾರತ ಪ್ರವಾಸಕ್ಕೆ ಬರಲಿದೆ. ಈ ಪ್ರವಾಸದಲ್ಲಿ ಉಭಯ ತಂಡಗಳ ನಡುವೆ 5 ಟೆಸ್ಟ್ ಪಂದ್ಯಗಳು ನಡೆಯಲಿವೆ. ಆಸ್ಟ್ರೇಲಿಯಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಮೊದಲ ಏಕದಿನ - ಸೆಪ್ಟೆಂಬರ್ 22, ಮೊಹಾಲಿ2ನೇ ಏಕದಿನ - ಸೆಪ್ಟೆಂಬರ್ 24, ಇಂದೋರ್3ನೇ ಏಕದಿನ - ಸೆಪ್ಟೆಂಬರ್ 27, ರಾಜ್‌ಕೋಟ್‌ ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳ ಟಿ20 ಸರಣಿ1ನೇ ಟಿ20 - 23 ನವೆಂಬರ್, ವಿಶಾಖಪಟ್ಟಣ2ನೇ ಟಿ20 - 26 ನವೆಂಬರ್, ತಿರುವನಂತಪುರ3ನೇ ಟಿ20 - 28 ನವೆಂಬರ್, ಗುವಾಹಟಿ4ನೇ ಟಿ20 - 1 ಡಿಸೆಂಬರ್, ನಾಗ್ಪುರ5ನೇ ಟಿ20 - 3 ಡಿಸೆಂಬರ್, ಹೈದರಾಬಾದ್ ಅಫ್ಘಾನಿಸ್ತಾನ ವಿರುದ್ಧ 3 ಟಿ20 ಪಂದ್ಯದ ಸರಣಿಮೊದಲ ಟಿ20 - 11 ಜನವರಿ 2024, ಮೊಹಾಲಿ2 ನೇ T20 - 14 ಜನವರಿ 2024, ಇಂದೋರ್3ನೇ ಟಿ20 - 17 ಜನವರಿ 2024, ಬೆಂಗಳೂರು : ಕಡುಕತ್ತಲ ದಾರಿಯಲ್ಲಿ ಚಂದ್ರನೂರಿಗೆ ಭಾರತದ ಯಾನ, ಟೆಲಿಸ್ಕೋಪ್‌ನಲ್ಲಿ ಸೆರೆಯಾಯ್ತು ಚಂದ್ರಯಾನ! ಇಂಗ್ಲೆಂಡ್ ವಿರುದ್ಧ 5 ಟೆಸ್ಟ್ ಪಂದ್ಯದ ಸರಣಿ1 ನೇ ಟೆಸ್ಟ್ - 25-29 ಜನವರಿ 2024, ಹೈದರಾಬಾದ್2ನೇ ಟೆಸ್ಟ್ - 2-6 ಫೆಬ್ರವರಿ 2024, ವಿಶಾಖಪಟ್ಟಣ3ನೇ ಟೆಸ್ಟ್ - 15-19 ಫೆಬ್ರವರಿ 2024, ರಾಜ್‌ಕೋಟ್4 ನೇ ಟೆಸ್ಟ್ - 23-27 ಫೆಬ್ರವರಿ 2024, ರಾಂಚಿ5 ನೇ ಟೆಸ್ಟ್ - 7-11 ಮಾರ್ಚ್ 2024, ಧರ್ಮಶಾಲಾ ಕ್ರೀಡಾಗ್ರಾಮದಲ್ಲಿ ಮಗುವಿಗೆ ಅವಕಾಶವಿಲ್ಲ, ಏಷ್ಯಾಡ್‌ನಿಂದ ಹಿಂದೆ ಸರಿದ ಬಿಸ್ಮಾ!