14 ವರ್ಷದಿಂದ ಬದಲಾಗ್ದೆ ಇರೋದು ಕೊಹ್ಲಿ- ಟಿ ಶರ್ಟ್ ಬೆಲೆ: ಯಾಕಿಷ್ಟ ಎಂದು ಸಿಂಪಲ್ ಸುನಿ ಭಾವುಕ ಪೋಸ್ಟ್ 14 ವರ್ಷದಿಂದ ಬದಲಾಗ್ದೆ ಇರೋದು ಅಂದರೆ ಕೊಹ್ಲಿ ಮತ್ತು ಟಿ ಶರ್ಟ್ ಬೆಲೆ ಎಂದು ನಿರ್ದೇಶಕ ಸಿಂಪಲ್ ಸುನಿ ಯಾಕಿಷ್ಟ ಅಂತ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇ ಆಫ್ ಚಾನ್ಸ್ ಮಿಸ್ ಆಗಿದೆ. ಗುಜರಾತ್ ಟೈಟಾನ್ಸ್ ವಿರುದ್ಧ ಸೋಲು ಅನುಭವಿಸಿದ ಆರ್‌ಸಿಬಿ ಟೂರ್ನಿಯಿಂದ ಹೊರಬಿದ್ದಿದೆ. ಈ ಬಾರಿಯೂ ಆರ್ ಸಿ ಬಿ ಕಪ್ ಗೆಲ್ಲುವ ಕನಸು ನುಚ್ಚುನೂರಾಗಿದೆ. ಆರ್ ಸಿ ಬಿ ಸೋಲಿನ ಬಳಿಕ ನಿರ್ದೇಶಕ ಸಿಂಪಲ್ ಸುನಿ ದೀರ್ಘವಾದ ಪೋಸ್ಟ್ ಶೇರ್ ಮಾಡಿದ್ದಾರೆ. ಕಪ್ ಗೆಲ್ಲದಿದ್ದರೂ ಆರ್ ಸಿ ಬಿ ಎಂದರೆ ಯಾಕಿಷ್ಟ ಎಂದು ಭಾವುಕ ಸಾಲು ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಿಂಪಲ್ ಸುನಿ ಶೇರ್ ಮಾಡಿರುವ ಪೋಸ್ಟ್ ಹಿಗೆದೆ. '2008 ರಲ್ಲಿ ಎನ್ನುವ ಟೂರ್ನಿ ಅನೌನ್ಸ್ ಆದಾಗ ಭಾರತದ 28 ರಾಜ್ಯಗಳಲ್ಲಿ ಕೇವಲ 8 ರಾಜ್ಯ ಮಾತ್ರ ಸೆಲೆಕ್ಟ್ ಆಗಿತ್ತು. ಅದರಲ್ಲೊಂದು ಆಯ್ಕೆ ಆಗಿದ್ದೂ ಕರ್ನಾಟಕದ ವಾಣಿಜ್ಯನಗರಿಬೆಂಗಳೂರು. ನಮ್ಮ ಮೊದಲ ಪ್ರೇಮ ಅದೇ. ಗೆ ಆಗಿದ್ದು ರಾಹುಲ್ ದ್ರಾವಿಡ್. ಟೀಂಲ್ಲಿ ಇದ್ದಿದ್ದೂ ಅನಿಲ್ ಕುಂಬ್ಳೆ. ಇದಕ್ಕಿನ್ನಾ ಬೇರೇನೂ ಬೇಕು ಸಪೋರ್ಟ್ ಮಾಡಲು.ಅಂಡರ್ 19 ವರ್ಲ್ಡ್ ಕಪ್ ವಿಜೇತ ಕ್ಯಾಪ್ಟನ್ ವಿರಾಟ್ ಅನ್ನೂ ಕೂಡ ದೆಹಲಿ ಖರೀದಿಸದ ಕಾರಣ ತನ್ನ ತೆಕ್ಕೆಗೆ ಸೇರಿಸಿಕೊಂಡಿತು. ನಮ್ಮ ಆಶಯದಷ್ಟು ಮನ್ನಣೆ ಕೊಟ್ಟಿಲ್ಲವಾದರೂ ಮನೀಶ್ ಪಾಂಡೆ. ರಾಹುಲ್, ಶ್ರೀನಾಥ್ ಅರವಿಂದ್, ವಿನಯ್, ಬಿನ್ನಿ, ಮಿಥುನ್, ವೈಶಾಕ್ ಹೀಗೆ ಹಲವಾರು ಲೋಕಲ್ ಪ್ಲೇಯರ್ಸ್‌ಗೆ ಕೂಡ ಅಡಿಪಾಯ ಹಾಕಿದೆ' 'ಅಲ್ಲಿಂದ ಶುರುವಾದ ನಮ್ಮ ಅಭಿಮಾನ. ಒಂದೊಂದೇ ಮೆಟ್ಟಿಲು ಏರುತ್ತಾ. , ಇವರ ಆಟಗಳಿಗೆ, Recordಗಳಿಗೆ, ಪ್ಲೇಯರ್ಸ್ ನಮಗೆ ಹೇಳುವ ಬಗೆ. ಕೊಹ್ಲಿಯನ್ನು ಬೇರೆ ಜೆರ್ಸಿ ಯಲ್ಲೂ ನೆನೆಸಿಕೊಳ್ಳಲು ಸಾಧ್ಯವಿಲ್ಲ ಎನ್ನುವ ಹೇಳಿಕೆಗಳು. ಹಾಗೂ ಇನ್ನಿತರ ಬೆಳವಣಿಗಳು ನಮ್ಮನ್ನೂ ಎಂದಿಗೂ ಬಿಡದ ನಿಷ್ಠಾವಂತ ಅಭಿಮಾನಿ ಮತ್ತುಅತ್ಯಂತ ರಿಚ್ ಅಭಿಮಾನಿಗಳಾದೆವು' 'ಗೆದ್ದೆತ್ತಿನ ಬಾಲ ಹಿಡಿಯೋರು ಗೆಲ್ಲೋವರೆಗೂ. ಆದ್ರೆ ಸೋತಗಲೂ ಜೊತೆ ಇರುವವರು ಸಾಯುವವರೆಗೂ. ನಮಗೆ ಗೆಲ್ಲುವ ಹಂಬಲ. ಆದರೆ ಗೆಲ್ಲದಿದ್ದರೂ ನಿಯತ್ತಿನ ತಂಡ ಎನ್ನುವ ಬಲ. ಪ್ಲೇಯರ್ಸ್ ಗುರಾಯಿಸುವಾಗ, ಬಯ್ಯುವಾಗ ಅಭಿಮಾನಿಗಳು ಒಳಗೊಳಗೆ ಬೈತಾನೆ. ಆದರೆ ನಮ್ಮ ಫ್ಯಾನ್ಸ್ rcbiansಗೆ ವಿರೋಧಿ ತಂಡದ ಅಟಗಾರರು ಬೈದರೆ ನಮ್ಮ ಪರವಾಗಿ ಕೊಹ್ಲಿ ನೇ ಬೈತಾನೆ. ಅದು ಆಟಗಾರ ಆದರೂ ಸರಿ. ಆದ್ರೂ ಸರಿ. ಮ್ಯಾಂಗೋ ಮಾರುವವನಾದ್ರೂ ಸರಿ' ಎಂದು ಹೇಳಿದ್ದಾರೆ. : ಮುಂದಿನ ಸಲ ಬನ್ನಿ, ಜಾತ್ರೆನೆ ಮಾಡ್ತಾರೆ: ಗಂಭೀರ್ ಪಡೆಗೆ ಸಿಂಪಲ್ ಸುನಿ ಸವಾಲ್ ಹಾಕ್ತಾರೆ. ಮಾಡುವವರನ್ನು ಕರೆದು ಆಡಿಸುತ್ತಾರೆ. ಚಾನ್ಸ್ ಮೇಲೆ ಚಾನ್ಸ್ ಕೊಡ್ತಾರೆ. ಸ್ಕೌಟಿಂಗ್ ಸರಿ ಇಲ್ಲಾ. ಲೋಕಲ್ ಪ್ಲೇಯರ್ಸ್ ಗೆ ವಾಲ್ಯೂ ಕೊಡೋಲ್ಲ. ಬೆಂಗಳೂರು ಆಗಿಲ್ಲ. ಈ ರೀತಿ ಹಲವು ಮಿಸ್ಟೇಕ್ ಇದ್ದರೂ ನಮ್ಮ ಮಗು. ಸ್ವಲ್ಪ ರಚ್ಚೆ. ಕೊನೆ ಬೆಂಚ್. ಆಗಾಗ ಫೇಲ್. ಏನೇ ಆದರೂ ಅದು ನಮ್ಮ ಮಗು. ಯಾವುದೋ ಮಗು ರ್ಯಾಂಕ್ ಬರುತ್ತದೆ ಎಂದು ನಾವು ಆ ಮಗುವನ್ನು ನಮ್ಮ ಮಗು ಎಂದೇಳಲು ಇಷ್ಟ ಪಡುವುದಿಲ್ಲ' : ಖುಷಿ ಪಡಿ, ವಿಶಲ್ ಹೊಡಿ, ಆದ್ರೆ ರೇಗಿಸೋಕೆ ಬರಬೇಡಿ; ಫ್ಯಾನ್ಸ್‌ಗೆ ಸಿಂಪಲ್ ಸುನಿ ತಿರುಗೇಟು ಇವತ್ತಲ್ಲ ನಾಳೆ ನಮ್ಮದಾಗಬಹುದು. ಆಗದಿದ್ರು ನಾವು ಬೇರೆ ಆಗುವುದಿಲ್ಲ. ಸೋಲು ಅಥವಾ ಗೆಲುವು ನಾವು . 14 ವರ್ಷದಿಂದ ಬದಲಾವಣೆ ಆಗದಿರುವುದು ಎರಡೇ, 1) ತಂಡದಲ್ಲಿ ಕೊಹ್ಲಿ. 2) ಇನ್ನೊಂದು ಗ್ರೌಂಡ್ ಆಚೆ ಮ್ಯಾಚ್ ದಿನ ಸಿಗುವ 150 ರೂಪಾಯಿ . ಹಣದುಬ್ಬರ ಅಷ್ಟು ಏರಿಳಿತ ಕಂಡರೂ ಟಿ ಶರ್ಟ್ ಬೆಲೆ ಮಾತ್ರ ಅಷ್ಟೇ ಇದೆ. ಮೊದಲ ಮ್ಯಾಚ್ ಹೋದಾಗ ಟೀಶರ್ಟ್ ತಗೊಂಡ ನೆನಪು ಹಾಗೆ ಇದೆ. ಈ ಸಲ ನಮ್ದೇ, ಈ ಅಂತೂ ನಮ್ದೇ' ಎಂದು ದೀರ್ಘವಾಗಿ ಹೇಳಿದ್ದಾರೆ.