ಏಷ್ಯನ್‌ ಗೇಮ್ಸ್‌: ಭಾರತ ತಂಡದಲ್ಲಿ ಸೈನಾ ನೆಹ್ವಾಲ್‌ಗಿಲ್ಲ ಸ್ಥಾನ! * ಏಷ್ಯನ್‌ ಗೇಮ್ಸ್‌ ಕ್ರೀಡಾಕೂಟಕ್ಕೆ ಭಾರತ ಬ್ಯಾಡ್ಮಿಂಟನ್ ತಂಡ ಪ್ರಕಟ* 2012ರ ಲಂಡನ್‌ ಒಲಿಂಪಿಕ್ಸ್‌ ಪದಕ ವಿಜೇತೆ ಸೈನಾ ನೆಹ್ವಾಲ್‌ಗಿಲ್ಲ ಸ್ಥಾನ* ಚೀನಾದ ಹಾಂಗ್ಝೂನಲ್ಲಿ ನಡೆಯಲಿರುವ ಏಷ್ಯನ್‌ ಗೇಮ್ಸ್‌ ನವದೆಹಲಿ(ಮೇ.08): ಈ ವರ್ಷ ಸೆಪ್ಟೆಂಬರ್‌-ಅಕ್ಟೋಬರ್‌ನಲ್ಲಿ ಚೀನಾದ ಹಾಂಗ್ಝೂನಲ್ಲಿ ನಡೆಯಲಿರುವ ಏಷ್ಯನ್‌ ಗೇಮ್ಸ್‌ಗೆ ಭಾರತ ಬ್ಯಾಡ್ಮಿಂಟನ್‌ ತಂಡ ಪ್ರಕಟಗೊಂಡಿದ್ದು, 2012ರ ಲಂಡನ್‌ ಒಲಿಂಪಿಕ್ಸ್‌ ಪದಕ ವಿಜೇತೆ ಸೈನಾ ನೆಹ್ವಾಲ್‌ಗೆ ಸ್ಥಾನ ಸಿಕ್ಕಿಲ್ಲ. ಸೈನಾ ಇತ್ತೀಚಿಗೆ ಸ್ಪರ್ಧಾತ್ಮಕ ಬ್ಯಾಡ್ಮಿಂಟನ್‌ನಿಂದ ದೂರವಿದ್ದು, ಆಯ್ಕೆ ಟ್ರಯಲ್ಸ್‌ನಲ್ಲೂ ಪಾಲ್ಗೊಂಡಿರಲಿಲ್ಲ. ಪುರುಷರ ಸಿಂಗಲ್ಸ್‌ನಲ್ಲಿ ಪ್ರಣಯ್‌, ಶ್ರೀಕಾಂತ್‌, ಲಕ್ಷ್ಯ ಹಾಗೂ ರಾಜ್ಯದ ಮಿಥುನ್‌ ಸ್ಪರ್ಧಿಸಲಿದ್ದು, ಮಹಿಳಾ ಸಿಂಗಲ್ಸ್‌ಗೆ ಸಿಂಧು, ಅಶ್ಮಿತಾ, ಅನುಪಮಾ, ಮಾಳ್ವಿಕಾ ಆಯ್ಕೆಯಾಗಿದ್ದಾರೆ. ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌-ಚಿರಾಗ್‌, ಧೃವ್‌-ಅರ್ಜುನ್‌ ಆಡಲಿದ್ದು, ಮಹಿಳಾ ಡಬಲ್ಸ್‌ನಲ್ಲಿ ಗಾಯತ್ರಿ-ತ್ರೀಸಾ, ತನಿಶಾ-ಅಶ್ವಿನಿ ಪೊನ್ನಪ್ಪ ಆಡಲಿದ್ದಾರೆ. ಮಿಶ್ರ ಡಬಲ್ಸ್‌ನಲ್ಲಿ ಸಾಯಿ ಪ್ರತೀಕ್‌-ತನೀಶಾ, ರೋಹನ್‌-ಸಿಕ್ಕಿ ಕಣಕ್ಕಿಳಿಯುವುದಾಗಿ ಭಾರತೀಯ ಬ್ಯಾಡ್ಮಿಂಟನ್‌ ಸಂಸ್ಥೆ(ಬಿಎಐ) ಮಾಹಿತಿ ನೀಡಿದೆ. ಅಥ್ಲೆ​ಟಿ​ಕ್ಸ್‌: ಪ್ರವೀಣ್‌, ಸಾಬ್ಳೆ ರಾಷ್ಟ್ರೀಯ ದಾಖ​ಲೆ ನವ​ದೆ​ಹ​ಲಿ: ಭಾರ​ತದ ತಾರಾ ಅಥ್ಲೀ​ಟ್‌​ಗ​ಳಾದ ಪ್ರವೀಣ್‌ ಚಿತ್ರ​ವೇಲ್‌ ಟ್ರಿಪಲ್‌ ಜಂಪ್‌​ನ​ಲ್ಲಿ, ಅವಿ​ನಾಶ್‌ ಸಾಬ್ಳೆ ಹಾಗೂ ಪಾರುಲ್‌ ಚೌಧರಿ 5000 ಮೀ. ಓಟ​ದ ಸ್ಪರ್ಧೆ​ಗ​ಳಲ್ಲಿ ರಾಷ್ಟ್ರೀಯ ದಾಖಲೆ ಬರೆ​ದಿ​ದ್ದಾರೆ. ಕ್ಯೂಬಾ​ದಲ್ಲಿ ನಡೆದ ಅಥ್ಲೆ​ಟಿಕ್ಸ್‌ ಚಾಂಪಿ​ಯ​ನ್‌​ಶಿ​ಪ್‌​ನಲ್ಲಿ ಪುರು​ಷರ ಟ್ರಿಪಲ್‌ ಜಂಪ್‌​ನಲ್ಲಿ ಪ್ರವೀಣ್‌ 17.37 ಮೀ. ದೂರಕ್ಕೆ ಜಿಗಿ​ದು, 2016ರಲ್ಲಿ ರಂಜಿತ್‌ ಮಹೇ​ಶ್ವರಿ(17.30) ನಿರ್ಮಿ​ಸಿದ್ದ ದಾಖಲೆ ಮುರಿ​ದರು. ಒಂದೇ ಒಂದು ಆರೋಪ ಸಾಬೀತಾದರೆ ನೇಣಿಗೆ: ಬ್ರಿಜ್‌ಭೂಷಣ್ ಸವಾಲು! ಇನ್ನು, ಅಮೆ​ರಿ​ಕದ ಲಾಸ್‌ವೇಗಾ​ಸ್‌​ನಲ್ಲಿ ನಡೆದ ಕೂಟ​ದಲ್ಲಿ 5000 ಮೀ. ಪುರು​ಷರ ವಿಭಾ​ಗ​ದಲ್ಲಿ ಸಾಬ್ಳೆ 13 ನಿಮಿಷ 25.65 ಸೆಕೆಂಡ್‌​ನಲ್ಲಿ ಕ್ರಮಿಸಿ ತಮ್ಮದೇ ದಾಖ​ಲೆ​ ಉತ್ತ​ಮ​ಗೊ​ಳಿ​ಸಿ​ದರೆ, ಮಹಿ​ಳೆ​ಯರ ವಿಭಾ​ಗ​ದಲ್ಲಿ ಪಾರುಲ್‌ 15:15.89 ನಿಮಿ​ಷ​ದಲ್ಲಿ ಕ್ರಮಿಸಿ ದಾಖಲೆ ಬರೆ​ದ​ರು. ಏಷ್ಯನ್‌ ವೇಟ್‌​ಲಿ​ಫ್ಟಿಂಗ್‌: ಜೆರೆ​ಮಿಗೆ ಸ್ನ್ಯಾಚ್‌ ಬೆಳ್ಳಿ ಜಿಂಜು​(​ಕೊ​ರಿ​ಯಾ​): ಇಲ್ಲಿ ನಡೆ​ಯು​ತ್ತಿ​ರುವ ಏಷ್ಯನ್‌ ವೇಟ್‌​ಲಿ​ಫ್ಟಿಂಗ್‌ ಚಾಂಪಿ​ಯ​ನ್‌​ಶಿ​ಪ್‌​ನಲ್ಲಿ ಭಾರ​ತದ ಯುವ ಅಥ್ಲೀ​ಟ್‌ ಜೆರೆಮಿ ಲಾಲ್ರಿ​ನುಂಗಾ ಸ್ನ್ಯಾಚ್‌ ವಿಭಾ​ಗ​ದಲ್ಲಿ ಬೆಳ್ಳಿ ಪದಕ ಗೆದ್ದಿದ್ದು, ಒಟ್ಟಾರೆ ಸ್ಪರ್ಧೆ​ಯಲ್ಲಿ ಪದಕ ಪಡೆ​ಯ​ಲು ವಿಫ​ಲ​ರಾ​ಗಿ​ದ್ದಾರೆ. ಕಳೆದ ವರ್ಷ ಕಾಮ​ನ್‌​ವೆಲ್ತ್‌ ಗೇಮ್ಸ್‌​ನಲ್ಲಿ ಚಿನ್ನ ಬಾಚಿದ್ದ 20 ವರ್ಷದ ಜೆರೆಮಿ ಭಾನು​ವಾರ ಪುರು​ಷರ 67 ಕೆ.ಜಿ. ವಿಭಾ​ಗದಲ್ಲಿ ಸ್ನ್ಯಾಚ್‌​ನಲ್ಲಿ 141 ಕೆ.ಜಿ. ಭಾರ ಎತ್ತಿ​ ತಮ್ಮ ಶ್ರೇಷ್ಠ ಪ್ರದ​ರ್ಶ​ನದ ದಾಖ​ಲೆ​ಯನ್ನು ಸರಿ​ಗ​ಟ್ಟಿ​ದರೂ, ಕ್ಲೀನ್‌ ಆಂಡ್‌ ಜರ್ಕ್​ನ ಮೂರೂ ಪ್ರಯ​ತ್ನ​ಗ​ಳಲ್ಲಿ ವಿಫ​ಲ​ರಾ​ದರು. ಹೀಗಾಗಿ ಒಟ್ಟಾರೆ ವಿಭಾ​ಗ​ದಲ್ಲಿ ಪದಕ ಕೈತ​ಪ್ಪಿತು. ಮ್ಯಾಡ್ರಿಡ್‌ ಓಪನ್‌ ಟೆನಿ​ಸ್‌​: ಬೋಪಣ್ಣ ರನ್ನ​ರ್‌-ಅಪ್‌ ಮ್ಯಾಡ್ರಿ​ಡ್‌: ಭಾರ​ತದ ತಾರಾ ಟೆನಿ​ಸಿಗ ರೋಹನ್‌ ಬೋಪಣ್ಣ ಹಾಗೂ ಆಸ್ಪ್ರೇ​ಲಿ​ಯಾದ ಮ್ಯಾಥ್ಯೂ ಎಬ್ಡೆನ್‌ ಮ್ಯಾಡ್ರಿಡ್‌ ಓಪನ್‌ ಎಟಿಪಿ 1000 ಟೆನಿಸ್‌ ಟೂರ್ನಿ​ಯಲ್ಲಿ ರನ್ನ​ರ್‌-ಅಪ್‌ ಸ್ಥಾನಕ್ಕೆ ತೃಪ್ತಿ​ಪಟ್ಟಿದ್ದಾರೆ. ಇದ​ರೊಂದಿಗೆ ಈ ಆವೃ​ತ್ತಿ​ಯಲ್ಲಿ 3ನೇ ಪ್ರಶಸ್ತಿ ಗೆಲ್ಲುವ 7ನೇ ಶ್ರೇಯಾಂಕಿತ ಇಂಡೋ-ಆಸೀಸ್‌ ಜೋಡಿಯ ಕನಸು ಭಗ್ನ​ಗೊಂಡಿತು. ಶನಿ​ವಾರ ನಡೆದ ಪುರು​ಷರ ಡಬಲ್ಸ್‌ ಫೈನ​ಲ್‌​ನಲ್ಲಿ ಈ ಜೋಡಿ ರಷ್ಯಾದ ತಾರಾ ಟೆನಿಸಿಗರಾದ ಕರೆನ್‌ ಕಚ​ನೋ​ವ್‌-ಆ್ಯಂಡ್ರೆ ರುಬ್ಲೆವ್‌ ವಿರುದ್ಧ 3-6, 6-3, 3-10 ಸೆಟ್‌ಗಳಲ್ಲಿ ಸೋತರು. ಈ ಪಂದ್ಯ 43 ವರ್ಷದ ಬೋಪಣ್ಣಗೆ ಮ್ಯಾಡ್ರಿ​ಡ್‌ನ ಮಣ್ಣಿ​ನ ಅಂಕ​ಣ​ದಲ್ಲಿ 2016ರ ಬಳಿಕ ಮೊದಲ ಫೈನಲ್‌ ಆಗಿತ್ತು.