: ನನ್ನನ್ನು ಗಲ್ಲಿ​ಗೇ​ರಿ​ಸಿ​, ಆದ​ರೆ ಕುಸ್ತಿ ಚಟು​ವ​ಟಿಕೆ ನಿಲ್ಲಿ​ಸ​ಬೇ​ಡಿ ಅಥ್ಲೀ​ಟ್‌​ಗಳ ಪ್ರತಿ​ಭ​ಟ​ನೆ​ಯಿಂದಾಗಿ ದೇಶದ ಕುಸ್ತಿ ಚಟು​ವ​ಟಿಕೆ ಸ್ಥಗಿ​ತ​ಡ​ಬ್ಲ್ಯು​ಎ​ಫ್‌​ಐ ಅಧ್ಯಕ್ಷ ಬ್ರಿಜ್‌​ಭೂ​ಷಣ್‌ ಸಿಂಗ್‌ ಮನ​ವಿರಾಷ್ಟ್ರೀಯ ಟೂರ್ನಿ​ಗ​ಳನ್ನು ಆಯೋ​ಜಿ​ಸಲು ಅವ​ಕಾಶ ನೀಡ​ಬೇಕು ನವ​ದೆ​ಹ​ಲಿ(ಏ.02): ಅಥ್ಲೀ​ಟ್‌​ಗಳ ಪ್ರತಿ​ಭ​ಟ​ನೆ​ಯಿಂದಾಗಿ ದೇಶದ ಕುಸ್ತಿ ಚಟು​ವ​ಟಿಕೆ ಸ್ಥಗಿ​ತ​ಗೊಂಡಿ​ರು​ವು​ದಾಗಿ ಭಾರ​ತೀಯ ಕುಸ್ತಿ ಫೆಡ​ರೇ​ಶನ್‌(ಡ​ಬ್ಲ್ಯು​ಎ​ಫ್‌​ಐ) ಅಧ್ಯಕ್ಷ ಬ್ರಿಜ್‌​ಭೂ​ಷಣ್‌ ಸಿಂಗ್‌ ಆಕ್ರೋಶ ವ್ಯಕ್ತ​ಪ​ಡಿ​ಸಿದ್ದು, ನನ್ನನ್ನು ಗಲ್ಲಿ​ಗೇ​ರಿ​ಸಿ​ದರೂ ಓಕೆ. ಆದರೆ ಕುಸ್ತಿ ಚಟು​ವ​ಟಿಕೆ ಮುಂದು​ವ​ರಿ​ಯಲಿ ಎಂದಿ​ದ್ದಾರೆ. ಸೋಮ​ವಾರ ಮಾಧ್ಯ​ಮ​ಗಳ ಜೊತೆ ಮಾತ​ನಾ​ಡಿದ ಅವರು, ‘4 ತಿಂಗ​ಳಿಂದ ಕುಸ್ತಿ ಚಟು​ವ​ಟಿ​ಕೆ ಮುಂದು​ವ​ರಿ​ಯ​ಬೇಕು. ಮಕ್ಕಳ ಭವಿ​ಷ್ಯದ ಜೊತೆ ಆಟ​ವಾ​ಡ​ಬಾ​ರ​ದು. ರಾಷ್ಟ್ರೀಯ ಟೂರ್ನಿ​ಗ​ಳನ್ನು ಆಯೋ​ಜಿ​ಸಲು ಅವ​ಕಾಶ ನೀಡ​ಬೇಕು. ಟೂರ್ನಿ ನಡೆ​ಸು​ವಂತೆ ಪ್ರತಿ​ಭ​ಟನಾ ನಿರತರು, ಒಲಿಂಪಿಕ್ಸ್‌ ಸಂಸ್ಥೆ ಹಾಗೂ ಸರ್ಕಾ​ರದ ಜೊತೆ ಮನವಿ ಮಾಡು​ತ್ತೇನೆ. ಅಲ್ಲ​ದಿ​ದ್ದರೆ ಡಬ್ಲ್ಯು​ಎ​ಫ್‌ಐಗೆ ಅವ​ಕಾಶ ನೀಡ​ಲಿ’ ಎಂದು ವಿನಂತಿ​ಸಿ​ದ್ದಾರೆ. ಬೆಂಬ​ಲ:ಇದೇ ವೇಳೆ ಪ್ರತಿ​ಭ​ಟನಾ ನಿರತ ಕುಸ್ತಿ​ಪ​ಟು​ಗ​ಳನ್ನು ಕಾಂಗ್ರೆಸ್‌ ನಾಯಕ, ಮಾಜಿ ಕ್ರಿಕೆ​ಟಿಗ ನವ್‌​ಜೋತ್‌ ಸಿಧು ಹಾಗೂ ಡಿಎಂಕೆ ರಾಜ್ಯ​ಸಭಾ ಸದಸ್ಯ ಎಂ.ಪಿ.ಅಬ್ದುಲ್ಲಾ ಭೇಟಿ​ಯಾಗಿ ಹೋರಾ​ಟಕ್ಕೆ ಬೆಂಬಲ ಸೂಚಿ​ಸಿ​ದರು. ಭಾರತೀಯ ಕುಸ್ತಿ ಫೆಡರೇಶನ್‌(ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ ವಿರುದ್ಧದ ಕುಸ್ತಿ​ಪ​ಟು​ಗಳ ಹೋರಾ​ಟ ಮುಂದು​ವ​ರಿ​ದಿದ್ದು, ಬ್ರಿಜ್‌ರನ್ನು ಬೆಂಬ​ಲಿ​ಸು​ತ್ತಿ​ದ್ದಾರೆ ಎಂದು ಮಾಧ್ಯ​ಮ​ಗಳನ್ನೇ ದೂಷಿಸಿದ್ದಾರೆ. ಭಾನು​ವಾರ ಮಾಧ್ಯ​ಮ​ಗಳ ಜೊತೆ ಮತನಾ​ಡಿದ ಭಜ​ರಂಗ್‌ ಪೂನಿಯಾ, ‘ಮಾಧ್ಯ​ಮ​ಗಳು ಕ್ರಿಮಿ​ನ​ಲ್‌​ಗ​ಳ​ಲ್ಲದ ಅಥ್ಲೀ​ಟ್‌​ಗ​ಳಿ​ಗಿಂತ ಕ್ರಿಮಿ​ನಲ್‌ ಹಿನ್ನೆಲೆಯ ಬ್ರಿಜ್‌ಗೆ ಹೆಚ್ಚಿನ ಬೆಂಬಲ ನೀಡು​ತ್ತಿದೆ. ಅಥ್ಲೀ​ಟ್‌​ಗಳು ದೇಶಕ್ಕೆ ಪದಕ ತಂದು​ಕೊ​ಟ್ಟಿ​ದ್ದಾರೆ. ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲು​ವುದು ಇಲ್ಲಿ ಸಂಸ​ದ​ರಾ​ಗು​ವು​ದ​ಕ್ಕಿಂತ ಕಷ್ಟ. ಒಲಿಂಪಿಕ್ಸ್‌ ಸಾಧ​ಕರು ದೇಶ​ದಲ್ಲಿ 40 ಮಂದಿ​ಯಷ್ಟೇ ಇದ್ದಾರೆ. ಆದರೆ ಸಾವಿ​ರಾರು ಸಂಸ​ದ​ರಿ​ದ್ದಾರೆ’ ಎಂದು ತೀಕ್ಷ್ಣ​ವಾಗಿ ಪ್ರತಿ​ಕ್ರಿ​ಯಿ​ಸಿ​ದ್ದಾರೆ. ವಿನೇಶ್‌ ಕೂಡಾ ಮಾತ​ನಾ​ಡಿದ್ದು, ‘ಮಾಧ್ಯ​ಮ​ಗಳು ಬ್ರಿಜ್‌​ರನ್ನು ವಿಜೃಂಭಿ​ಸು​ವು​ದನ್ನು ನಿಲ್ಲಿ​ಸಿ​ದರೆ ಅರ್ಧ​ದಷ್ಟು ಸಮಸ್ಯೆ ಕಡಿ​ಮೆ​ಯಾ​ಗು​ತ್ತದೆ. ಬ್ರಿಜ್‌ರ ಅಹಂ ರಾವ​ಣನಿ​ಗಿಂತ​ಲೂ ದೊಡ್ಡ​ದು’ ಎಂದಿ​ದ್ದಾರೆ. ವಿಶ್ವ ಪುರು​ಷರ ಬಾಕ್ಸಿಂಗ್‌: ಹುಸ್ಮು​ದ್ದೀನ್‌ 2ನೇ ಸುತ್ತಿ​ಗೆ ತಾಷ್ಕೆಂಟ್‌: ವಿಶ್ವ ಪುರುಷರ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರ​ತದ ತಾರಾ ಬಾಕ್ಸರ್‌ ಮಹ​ಮದ್‌ ಹುಸ್ಮು​ದ್ದೀನ್‌ 2ನೇ ಸುತ್ತು ಪ್ರವೇ​ಶಿ​ಸಿ​ದ್ದಾರೆ. ಸೋಮ​ವಾರ ಆರಂಭ​ಗೊಂಡ ಕೂಟ​ದಲ್ಲಿ 57 ಕೆ.ಜಿ. ವಿಭಾ​ಗದ ಸ್ಪರ್ಧೆ​ಯಲ್ಲಿ ಮೆಕೆ​ಡೋ​ನಿ​ಯಾದ ಆ್ಯಲೆನ್‌ ರುಸ್ತೆ​ಮೋವ್ಕಿ ವಿರುದ್ಧ 5-0 ಅಂತ​ರ​ದಲ್ಲಿ ಗೆಲುವು ಸಾಧಿ​ಸಿ​ದರು. ಜೈಲಿನಿಂದ ಬಿಡುಗಡೆಯಾದ ಬಳಿಕ ಸಿಧು ಸಕ್ರಿಯ, ಕುಸ್ತಿಪಟುಗಳ ಪ್ರತಿಭಟನೆಯಲ್ಲಿ ಭಾಗಿ! 2022ರ ಏಷ್ಯನ್‌ ಚಾಂಪಿ​ಯ​ನ್‌​ಶಿಪ್‌ ಕಂಚು ವಿಜೇತ ಹುಸ್ಮು​ದ್ದೀನ್‌ ಪಂದ್ಯ​ದು​ದ್ದಕ್ಕೂ ಪ್ರಾಬಲ್ಯ ಸಾಧಿಸಿ ಗೆಲುವು ತನ್ನ​ದಾ​ಗಿ​ಸಿ​ಕೊಂಡರು. ಆದರೆ 60 ಕೆ.ಜಿ. ವಿಭಾ​ಗ​ದಲ್ಲಿ ವರೀಂದರ್‌ ಸಿಂಗ್‌ ಉಜ್ಬೇ​ಕಿ​ಸ್ತಾ​ನದ ತುರ್ಸೊ​ನೋವ್‌ ವಿರುದ್ಧ 0-5 ಅಂತ​ರ​ದಲ್ಲಿ ಪರಾ​ಭ​ವ​ಗೊಂಡರು. ಟೂರ್ನಿ​ಯಲ್ಲಿ ಭಾರ​ತದ 13 ಬಾಕ್ಸ​ರ್‌​ಗಳು ಕಣ​ಕ್ಕಿ​ಳಿ​ದಿದ್ದು, ಮಂಗ​ಳ​ವಾರ ಆಶೀಶ್‌(80 ಕೆ.ಜಿ​), ಹಷ್‌ರ್‍ ಚೌಧರಿ(86 ಕೆ.ಜಿ.​) ಸ್ಪರ್ಧಿ​ಸ​ಲಿ​ದ್ದಾರೆ. ಏಷ್ಯನ್‌ ಗೇಮ್ಸ್‌ ಆಯ್ಕೆ ಪ್ರಕ್ರಿ​ಯೆಗೆ ಸೈನಾ ಗೈರು ನವ​ದೆ​ಹ​ಲಿ: 2 ಬಾರಿ ಕಾಮ​ನ್‌​ವೆಲ್ತ್‌ ಗೇಮ್ಸ್‌ ಚಾಂಪಿ​ಯನ್‌ ಸೈನಾ ನೆಹ್ವಾಲ್‌ ಫಿಟ್ನೆಸ್‌ ಸಮ​ಸ್ಯೆ​ಯಿಂದಾಗಿ ಮೇ 4ರಿಂದ 7ರ ವರೆಗೆ ನಡೆ​ಯ​ಲಿ​ರುವ ಏಷ್ಯನ್‌ ಗೇಮ್ಸ್‌ ಆಯ್ಕೆ ಪ್ರಕ್ರಿ​ಯೆ​ಯಿಂದ ಹೊರ​ಗು​ಳಿ​ದಿದ್ದು, ಹೀಗಾಗಿ ಈ ಬಾರಿ ಚೀನಾದ ಹ್ಯಾಂಗ್ಝೂ​ನಲ್ಲಿ ಸೆಪ್ಟಂಬ​ರ್‌-ಅಕ್ಟೋ​ಬ​ರ್‌​ನಲ್ಲಿ ನಡೆ​ಯ​ಲಿ​ರುವ ಏಷ್ಯನ್‌ ಗೇಮ್ಸ್‌ನಲ್ಲಿ ಆಡುವ ಅವ​ಕಾಶ ಕಳೆ​ದು​ಕೊಂಡಿ​ದ್ದಾರೆ. ಇದೇ ವೇಳೆ ಪಿ.ವಿ.​ಸಿಂಧು, ಎಚ್‌.​ಎ​ಸ್‌.​ಪ್ರ​ಣಯ್‌, ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಹಾಗೂ ತ್ರೀಸಾ ಜಾಸಿ-ಗಾಯತ್ರಿ ಗೋಪಿ​ಚಂದ್‌ ನೇರ​ವಾಗಿ ಏಷ್ಯನ್‌ ಗೇಮ್ಸ್‌ಗೆ ಅರ್ಹ​ತೆ ಪಡೆ​ದು​ಕೊಂಡಿ​ದ್ದಾರೆ. ಲಕ್ಷ್ಯ ಸೇನ್‌, ಕಿದಂಬಿ ಶ್ರೀಕಾಂತ್‌ ಆಯ್ಕೆ ಪ್ರಕ್ರಿ​ಯೆ​ಯಲ್ಲಿ ಪಾಲ್ಗೊ​ಳ್ಳ​ಲಿ​ದ್ದಾರೆ. ಮುರಳಿ ಶ್ರೀಶಂಕ​ರ್‌​ಗೆ ಲಾಂಗ್‌ ಜಂಪ್‌ ಚಿನ್ನ ನವ​ದೆ​ಹ​ಲಿ: ಭಾರ​ತದ ತಾರಾ ಲಾಂಗ್‌ಜಂಪ್‌ ಪಟು ಮುರಳಿ ಶ್ರೀಶಂಕರ್‌ ಅಮೆ​ರಿ​ಕದ ಚೂಲಾ ವಿಸ್ತಾ​ದಲ್ಲಿ ನಡೆದ ಎಂವಿಎ ಹೈ ಫರ್ಫಾ​ಮೆನ್ಸ್‌ ಅಥ್ಲೆ​ಟಿಕ್ಸ್‌ ಕೂಟ​ದಲ್ಲಿ ಚಿನ್ನದ ಪದಕ ಗೆದ್ದಿ​ದ್ದಾರೆ. ಕಳೆದ ವರ್ಷ ಕಾಮ​ನ್‌​ವೆಲ್ತ್‌ ಗೇಮ್ಸ್‌​ನಲ್ಲಿ ಬೆಳ್ಳಿ ಗೆದ್ದಿದ್ದ 24 ವರ್ಷದ ಮುರಳಿ 8.29 ದೂರಕ್ಕೆ ಜಿಗಿದು ಪ್ರಥಮ ಸ್ಥಾನಿ​ಯಾ​ದರು. ಚೀನಾದವರಾದ ಮಾ ವೀಡಾಂಗ್‌(7.99 ಮೀ.) ಬೆಳ್ಳಿ, ಹುವಾಂಗ್‌(7.61 ಮೀ.) ಕಂಚಿನ ಪದಕ ತಮ್ಮ​ದಾ​ಗಿ​ಸಿ​ಕೊಂಡರು. ಇತ್ತೀ​ಚೆ​ಗಷ್ಟೇ ಮುರಳಿ ಬೆಂಗ​ಳೂ​ರಿ​ನಲ್ಲಿ ನಡೆ​ದಿದ್ದ ಇಂಡಿ​ಯನ್‌ ಗ್ರ್ಯಾನ್‌ ಪ್ರಿ ಕೂಟ​ದಲ್ಲಿ 7.94 ಮೀ. ದೂರ ಜಿಗಿ​ದಿ​ದ್ದರು.