ಆರ್ಲಿ​ಯಾ​ನ್ಸ್‌ ಮಾಸ್ಟ​ರ್ಸ್‌ ಪ್ರಶ​ಸ್ತಿ ಗೆದ್ದ 21 ವರ್ಷದ ಪ್ರಿಯಾನ್ಶು ರಾಜವಾತ್ ಆರ್ಲಿಯಾನ್ಸ್‌ ಮಾಸ್ಟ​ರ್ಸ್‌ ಸೂಪರ್‌ 300 ಬ್ಯಾಡ್ಮಿಂಟನ್‌ ಟೂರ್ನಿ ಭಾರತದ ಯುವ ಶಟ್ಲರ್ಪ್ರಿಯಾನ್ಶು ರಾಜವಾತ್‌ ಆರ್ಲಿಯಾನ್ಸ್‌ ಮಾಸ್ಟ​ರ್ಸ್‌ ಸೂಪರ್‌ 300 ಬ್ಯಾಡ್ಮಿಂಟನ್‌ ಟೂರ್ನಿ ಚಾಂಪಿಯನ್ಚೊಚ್ಚಲ ಬಾರಿ ಸೂಪರ್‌ 300 ವಿಶ್ವ ಟೂರ್‌ ಸ್ಪರ್ಧೆಯಲ್ಲಿ ಫೈನ​ಲ್‌​ಗೇ​ರಿದ್ದ ಪ್ರಿಯಾನ್ಶು ಆರ್ಲಿಯಾನ್ಸ್‌(ಫ್ರಾನ್ಸ್‌): ಭಾರತದ ಯುವ ಶಟ್ಲರ್‌ ಪ್ರಿಯಾನ್ಶು ರಾಜವಾತ್‌ ಆರ್ಲಿಯಾನ್ಸ್‌ ಮಾಸ್ಟ​ರ್ಸ್‌ ಸೂಪರ್‌ 300 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಚಾಂಪಿ​ಯನ್‌ ಆಗಿ ಹೊರ​ಹೊ​ಮ್ಮಿ​ದ್ದಾರೆ. ಭಾನು​ವಾರ ನಡೆದ ಪುರುಷರ ಸಿಂಗಲ್ಸ್‌ ಫೈನಲ್‌ನಲ್ಲಿ 21 ವರ್ಷದ ಪ್ರಿಯಾನ್ಶು, ವಿಶ್ವ ನಂ.49 ಡೆನ್ಮಾರ್ಕ್ನ ಮ್ಯಾಗ್ನಸ್‌ ಜೊಹಾನ್ಸೆನ್‌ ವಿರುದ್ಧ 21-​15, 19​-21, 21-​16 ಗೇಮ್‌​ಗ​ಳಲ್ಲಿ ರೋಚಕ ಗೆಲುವು ಸಾಧಿ​ಸಿದ​ರು. 3ನೇ ಗೇಮ್‌​ನ ಆರಂಭ​ದಲ್ಲಿ ಪ್ರಿಯಾನ್ಶು 6-1ರಿಂದ ಮುನ್ನಡೆ ಸಾಧಿ​ಸಿ​ದರೂ ಅಂಕ​ಗಳ ಅಂತ​ರ​ವನ್ನು ಜೊಹಾ​ನ್ಸೆನ್‌ 7-5ಕ್ಕೆ ತಗ್ಗಿಸಿ ಪ್ರತಿ​ರೋಧ ತೋರಿ​ದರು. ಆದರೆ ಕೊನೆವರೆಗೂ ಹೋರಾಟ ಬಿಡದೆ ಪ್ರಿಯಾನ್ಶು ಪಂದ್ಯ ತಮ್ಮ​ದಾ​ಗಿ​ಸಿ​ಕೊಂಡರು. ಚೊಚ್ಚಲ ಬಾರಿ ಸೂಪರ್‌ 300 ವಿಶ್ವ ಟೂರ್‌ ಸ್ಪರ್ಧೆಯಲ್ಲಿ ಫೈನ​ಲ್‌​ಗೇ​ರಿದ್ದ ಪ್ರಿಯಾನ್ಶು ಮೊದಲ ಪ್ರಯ​ತ್ನ​ದಲ್ಲೇ ಚಾಂಪಿ​ಯನ್‌ ಎನಿ​ಸಿ​ಕೊಂಡ​ರು. ಭಾರ​ತಕ್ಕೆ 2ನೇ ಪ್ರಶ​ಸ್ತಿ ಆರ್ಲಿಯಾನ್ಸ್‌ ಮಾಸ್ಟ​​ರ್ಸ್‌​ನಲ್ಲಿ ಭಾರ​ತಕ್ಕೆ ಇದು 2ನೇ ಪ್ರಶಸ್ತಿ. ಎರಡೂ ಕೂಡಾ ಪುರುಷರ ಸಿಂಗ​ಲ್ಸ್‌​ನಲ್ಲಿ ಒಲಿ​ದಿದ್ದು ವಿಶೇಷ. 2012ರ ಚೊಚ್ಚಲ ಆವೃತ್ತಿ ಟೂರ್ನಿ​ಯಲ್ಲಿ ಆನಂದ್‌ ಪವಾರ್‌ ಪುರು​ಷರ ಸಿಂಗ​ಲ್ಸ್‌​ ಚಾಂಪಿಯನ್‌ ಆಗಿದ್ದರು. ಬಾಸ್ಕೆ​ಟ್‌​ಬಾಲ್‌: ಮಂಗ​ಳೂರು ಚಾಂಪಿ​ಯ​ನ್‌ ಕರ್ನಾ​ಟಕ ರಾಜ್ಯ ಬಾಸ್ಕೆ​ಟ್‌​ಬಾಲ್‌ ಸಂಸ್ಥೆ ಆಯೋ​ಜಿ​ಸಿದ 2ನೇ ಆವೃತ್ತಿ ಕರ್ನಾ​ಟಕ ಗ್ರಾಮೀಣ ಬಾಸ್ಕೆ​ಟ್‌​ಬಾಲ್‌ ಲೀಗ್‌​ನಲ್ಲಿ ಮಂಗ​ಳೂರು ತಂಡ ಚಾಂಪಿ​ಯನ್‌ ಆಗಿ ಹೊರ​ಹೊ​ಮ್ಮಿತು. ಕಂಠೀ​ರವ ಕ್ರೀಡಾಂಗ​ಣ​ದಲ್ಲಿ ನಡೆದ ಫೈನ​ಲಲ್ಲಿ ಮೈಸೂರು ವಿರು​ದ್ಧ 83-58 ಅಂಕ​ಗ​ಳಿಂದ ಜಯ​ಗ​ಳಿ​ಸಿತು. ಫಿಬಾ ಏಷ್ಯಾ ಅಧ್ಯಕ್ಷ ಡಾ.ಕೆ.​ಗೋ​ವಿಂದ​ರಾಜು ವಿಜೇ​ತ​ರಿಗೆ ಪ್ರಶಸ್ತಿ ವಿತ​ರಿ​ಸಿ​ದ​ರು. ಕೊಡವ ಹಾಕಿ: ಕುಪ್ಪಂಡ ಚೊಚ್ಚಲ ಚಾಂಪಿಯನ್‌! ವಿಘ್ನೇಶ್‌ ಎಂ. ಭೂತನಕಾಡು, ಕನ್ನಡಪ್ರಭ ನಾಪೋಕ್ಲು: ಕೊಡವ ಕೌಟುಂಬಿಕ ಹಾಕಿ ಉತ್ಸವದಲ್ಲಿ ಕುಪ್ಪಂಡ (ಕೈಕೇರಿ) ಚೊಚ್ಚಲ ಬಾರಿ ಚಾಂಪಿಯನ್‌ ಆಗಿ ಹೊರ​ಹೊ​ಮ್ಮಿದೆ. ಅಪ್ಪಚೆಟ್ಟೋಳಂಡ ಕುಟುಂಬ ಆಯೋ​ಜಿ​ಸಿದ್ದ 23ನೇ ಆವೃ​ತ್ತಿಯ ಟೂರ್ನಿ​ಯಲ್ಲಿ ಭಾನು​ವಾರ ಫೈನ​ಲ್‌​ನಲ್ಲಿ ಕುಲ್ಲೇ​ಟಿರ ವಿರುದ್ಧ ಶೂಟೌ​ಟ್‌​ನಲ್ಲಿ 4-2 ಗೋಲು​ಗ​ಳಿಂದ ಮಣಿಸಿ ಪ್ರಶಸ್ತಿ ಗೆದ್ದು​ಕೊಂಡಿತು. 4ನೇ ಬಾರಿ ಚಾಂಪಿ​ಯನ್‌ ಎನಿ​ಸಿ​ಕೊ​ಳ್ಳುವ ಕುಲ್ಲೇ​ಟಿರ ತಂಡದ ಕನಸು ಭಗ್ನ​ಗೊಂಡಿತು. ಪುದಿಯೊಕ್ಕಡ ತೃತೀಯ, ಪಳಂಗಂಡ 4ನೇ ಸ್ಥಾನಿ​ಯಾ​ಯಿ​ತು. ಆರ್‌ಸಿಬಿ- ಲಕ್ನೋ ಪಂದ್ಯಕ್ಕೆ ಬೆಂಗಳೂರಲ್ಲಿ ಟ್ರಾಫಿಕ್‌ ಬಿಸಿ: ವಾಹನ ಸಂಚಾರ ಮಾರ್ಗ ಬದಲಾವಣೆ ಫೈನಲ್‌ನಲ್ಲಿ ಕುಪ್ಪಂಡ ಪರ ಸೋಮಯ್ಯ ಗೋಲು ಬಾರಿಸಿದರೆ, ಕುಲ್ಲೇಟಿರ ತಂಡದ ಅವನೀಷ್‌ ಮಂದಪ್ಪ ಗೋಲು ಬಾರಿಸಿದರು. ನಿಗದಿತ ಅವಧಿಯಲ್ಲಿ ಉಭಯ ತಂಡಗಳು 1-1 ಸಮಬಲ ಸಾಧಿಸಿದವು. ಹೀಗಾಗಿ ಶೂಟೌಟ್‌ ಮೊರೆಹೋಗಲಾಯಿತು. ಚಾಂಪಿ​ಯನ್‌ ಆದ ಕುಪ್ಪಂಡ ತಂಡ 3 ಲಕ್ಷ ರು.ಹಾಗೂ ರನ್ನರ್‌-ಅಪ್‌ ಕುಲ್ಲೇಟಿರ 2 ಲಕ್ಷ ರು. ಬಹುಮಾನ ಪಡೆದವು. ಫೈನಲ್‌ ವೀಕ್ಷಿಸಿದ ಗಣ್ಯರು ಮಾಜಿ ಒಲಿಂಪಿಯನ್‌ಗಳಾದ ಧನರಾಜ್‌ ಪಿಳ್ಳೈ, ಇಕ್ಬಾಲ್‌ ಹುಸೇನ್‌, ಚೆಪ್ಪುಡಿರ ಪೂಣಚ್ಚ, ಅಂಜಪರವಂಡ ಸುಬ್ಬಯ್ಯ ಮತ್ತಿತರು ಫೈನಲ್‌ ಪಂದ್ಯದ ವೇಳೆ ಉಪ​ಸ್ಥಿ​ತ​ರಿ​ದ್ದ​ರು. ಫೈನಲ್‌ ಪಂದ್ಯವನ್ನು ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಕೆ. ಬೋಪಣ್ಣ ಉದ್ಘಾಟಿಸಿದರು. ಸುಮಾರು 20 ಸಾವಿರಕ್ಕೂ ಅಧಿಕ ಮಂದಿ ನೆರೆ​ದಿ​ದ್ದ​ರು.