ಮದುವೆ ಪ್ರಪೋಸಲ್ ನಿರಾಕರಿಸಿದ ಯುವತಿಯ ಹತ್ಯೆಗೈದು ನಾಲ್ಕು ತುಂಡು ಮಾಡಿದ ಹಂತಕ! ಯುವತಿಗೆ ಅರಿವಿಲ್ಲದಂತೆ ಹಲವು ದಿನಗಳಿಂದ ಹಿಂಬಾಸಿದ್ದಾನೆ. ಬಳಿಕ ಮದುವೆ ಪ್ರಪೋಸಲ್ ಮುಂದಿಟ್ಟಿದ್ದಾನೆ. ಅಷ್ಟೇ ವೇಗದಲ್ಲಿ ಆಕೆ ನಿರಾಕರಿಸಿದ್ದಾಳೆ. ಆದರೆ ಎಲ್ಲದ್ದಕ್ಕೂ ಸಜ್ಜಾಗಿ ಬಂದಿದ್ದ ಪಾಗಲ್ ಪ್ರೇಮಿ, ಯುವತಿಯ ಹತ್ಯೆ ಮಾಡಿ ದೇಹ ಕತ್ತರಿಸಿದ್ದಾನೆ. ಶ್ರದ್ಧವಾಕರ್ ರೀತಿಯ ಭೀಕ ಹತ್ಯೆ ನಡೆದಿದೆ. ಶ್ರೀನಗರ(ಮಾ.12):ದೆಹಲಿಯ ಶ್ರದ್ಧವಾಕಾರ್ ಹತ್ಯೆ ಪ್ರಕರಣ ದೇಶದಲ್ಲಿ ಎಚ್ಚರಿಕೆ ಕರೆಗಂಟೆಯಾಗಬೇಕಿತ್ತು. ಈ ಘಟನೆ ಎಲ್ಲರಲ್ಲೂ ಜಾಗೃತಿ ಮೂಡಬೇಕಿತ್ತು. ಆದರೆ ಈ ಘಟನೆ ಬಳಿಕ ಇದೇ ರೀತಿಯ ಹತ್ಯೆಗಳು ಮರುಕಳಿಸುತ್ತಿದೆ. ಹತ್ಯೆ ಮಾಡಿ ದೇಹವನ್ನು ತುಂಡು ತುಂಡು ಮಾಡಿ ಫ್ರಿಡ್ಜ್‌ನಲ್ಲಿಡುವ, ಎಸೆಯುವ ಪದ್ಧತಿ ಹೆಚ್ಚಾಗುತ್ತಿದೆ.ಇದೀಗ ಜಮ್ಮು ಮತ್ತು ಕಾಶ್ಮೀರದ ಬದ್ಗಾಮ್ ಜಿಲ್ಲೆಯಲ್ಲಿ ಮದುವೆ ನಿರಾಕರಿಸಿದ ಕಾರಣಕ್ಕೆ ಯುವತಿಯನ್ನು ಹತ್ಯೆಗೈದು ತುಂಡು ತುಂಡ ಮಾಡಿದ ಘಟನೆ ನಡೆದಿದೆ. ಇಷ್ಟೇ ಅಲ್ಲ ಯುವತಿ ದೇಹದ ಒಂದೊಂದು ಭಾಗವನ್ನು ಒಂದೊಂದು ಕಡೆ ಸುಟ್ಟಿದ್ದಾನೆ. ಯುವತಿಯ ಕುಟುಂಬಸ್ಥರು ನಾಪತ್ತೆ ಕೇಸ್ ದಾಖಲಿಸಿದ ಬಳಿಕ ಕಾರ್ಯಾಚರಣೆ ನಡೆಸಿದ ಪೊಲೀಸರು ಹತ್ಯೆ ಭಯಾನಕತೆಯನ್ನು ಭೇದಿಸಿದ್ದಾರೆ. ಮಾರ್ಚ್ 7 ರಂದು 30 ಹರೆಯದ ಯುವತಿ ಕೋಚಿಂಗ್ ಕ್ಲಾಸ್‌ಗೆ ತೆರಳಿದ್ದಾಳೆ. ಆದರೆ ರಾತ್ರಿಯಾದರೂ ಮನೆಗೆ ಹಿಂತಿರುಗಿಲ್ಲ. ಹೀಗಾಗಿ ಯುವತಿ ಸಹೋದರ ಅಹಮ್ಮದ್ ಖಾನ್ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ. ಮಾರ್ಚ್ 8 ರಂದು ಪ್ರಕರಣದ ಗಂಭೀರತೆ ಅರಿತ ಪೊಲೀಸರು ತೀವ್ರ ಹುಡುಕಾಟ ಆರಂಭಿಸಿದ್ದಾರೆ. ಇದೇ ವೇಳೆ ಯುವತಿಯ ಹಿಂದೆ ಬಿದ್ದಿದ್ದ ಯುವಕರ ಗುಂಪಿನ ಮಾಹಿತಿ ಪಡೆದು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. : ಸಾರ್ವಜನಿಕರೆದುರೇ ಮಹಿಳೆಯ ಸ್ತನ, ಕೈ, ಕಿವಿ ಕತ್ತರಿಸಿ ವಿಕೃತಿ ಮೆರೆದ ಹಂತಕ..! ಯುವಿತೆಗೆ ಪರಿಚಯವಿದ್ದ ಸಬ್ಬೀರ್ ಅಹಮ್ಮದ್ ವಾನಿ ಸೇರಿದಂತೆ ಕೆಲ ಯುವಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಸಬ್ಬೀರ್ ಅಹಮ್ಮದ್ ವಾನಿ ಯುವತಿಯ ಹತ್ಯೆಗೈದಿರುವುದಾಗಿ ಒಪ್ಪಿಕೊಂಡಿದ್ದಾನೆ. ಇಷ್ಟೇ ಅಲ್ಲ ಪ್ರಕರಣದ ಕುರಿತು ಮತ್ತಷ್ಟು ಮಾಹಿತಿ ಬಾಯ್ಬಿಟ್ಟಿದ್ದಾನೆ. ಯುವತಿಯನ್ನು ಹಿಂಬಾಲಿಸಿ ಮದುವೆಯಾಗುವ ಪ್ರಪೋಸಲ್ ಮುಂದಿಟ್ಟಿದ್ದ. ಅಹಮ್ಮದ್ ವಾನಿ ಪ್ರಪೋಸಲನ್ನು ಯುವತಿ ನಿರಾಕರಿಸಿದ್ದಳು. ಇದರಿಂದ ಆಕ್ರೋಶಗೊಂಡ ಅಹಮ್ಮದ್ ವಾನಿ ಕೋಚಿಂಗ್ ಕ್ಲಾಸ್ ಮುಗಿಸಿ ಮನೆಗೆ ಮರಳುತ್ತಿದ್ದಂತೆ ಅಪಹರಣ ಮಾಡಿದ್ದಾನೆ. ಬಳಿಕ ಮದುವೆಯಾಗುವಂತೆ ಬೆದರಿಕೆ ಹಾಕಿದ್ದಾನೆ. ಆದರೆ ಈತನ ಪ್ರಪೋಸಲ್ ನಿರಾಕರಿಸಿದ ಕಾರಣ ಅಹಮ್ಮದ್ ವಾನಿ ಆಕ್ರೋಶ ಹೆಚ್ಚಾಗಿದೆ. ಯುವತಿಯನ್ನು ಹತ್ಯೆಗೈದು ದೇಹವನ್ನು ನಾಲ್ಕು ತುಂಡಾಗಿ ಕತ್ತರಿಸಿದ್ದಾನೆ. ಪೋನ್‌ನಲ್ಲಿ ಮಾತಾಡ್ಬೇಡ ಅಂದಿದ್ದೆ ತಪ್ಪಾಯ್ತು..ಗಂಡನ ಖಾಸಗಿ ಅಂಗವನ್ನೇ ಕತ್ತರಿಸಿದ ಪತ್ನಿ! ದೇಹ ಕತ್ತರಿಸಿದ ಬಳಿಕ ಒಂದೊಂದು ದೇಹದ ತುಂಡುಗಳನ್ನು ಒಂದೊಂದು ಕಡೆ ಸುಟ್ಟಿದ್ದಾನೆ. ತನಗೆ ಸಿಗದೆ ಹುಡುಗಿ, ಇನ್ಯಾರಿಗೂ ಸಿಗಬಾರದು ಎಂದು ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಅಹಮ್ಮದ್ ವಾನಿ ಹೇಳಿಕೆ ಪ್ರಕಾರ ಪೊಲೀಸರು ದೇಹದ ಭಾಗಗಳನ್ನು ಸುಟ್ಟ ಜಾಗಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಯುವತಿಯ ದೇಹದ ಭಾಗಗಳನ್ನು ಪತ್ತೆ ಹಚ್ಚಿದ್ದಾರೆ. ಇದೀಗ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇತ್ತ ಯುವತಿ ಕುಟುಂಬಸ್ಥರು ಹಾಗೂ ಗ್ರಾಮಸ್ಧರು ಭಾರಿ ಪ್ರತಿಭಟನೆ ನಡೆಸಿದ್ದಾರೆ. ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು. ಕಾನೂನಿಗೆ ಸಾಧ್ಯವಾಗದಿದ್ದಲ್ಲಿ ನಮಗೆ ಕೊಡಿ ಎಂದು ಪಟ್ಟು ಹಿಡಿದ್ದಾರೆ.