'ಮಯಾಂತಿಯಿಂದ ಮಂದಿರಾ ಬೇಡಿವರೆಗೆ': ಐಪಿಎಲ್ ಖದರ್ ಹೆಚ್ಚಿಸಿದ ಹಾಟ್ ನಿರೂಪಕಿಯರಿವರು..! ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್, ಜಗತ್ತಿನ ಅತ್ಯಂತ ಶ್ರೀಮಂತ ಟಿ20 ಕ್ರಿಕೆಟ್‌ ಲೀಗ್ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಐಪಿಎಲ್‌ ಟೂರ್ನಿಯಲ್ಲಿ ಪಾಲ್ಗೊಳ್ಳಲು ವಿದೇಶಿ ಕ್ರಿಕೆಟಿಗರು ತುದಿಗಾಲಿನಲ್ಲಿ ನಿಂತಿರುತ್ತಾರೆ. ಐಪಿಎಲ್‌ನಲ್ಲಿ ಮೈದಾನದೊಳಗೆ ಇರಲಿ ಅಥವಾ ಮೈದಾನದಾಚೆಯೇ ಇರಲಿ ಗ್ಲಾಮರಸ್‌ಗೇನು ಕೊರತೆಯಿಲ್ಲ.ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿ ಎನಿಸಿಕೊಂಡಿರುವ ಐಪಿಎಲ್‌ನಲ್ಲಿ ಮುದ್ದಾದ ನಿರೂಪಕಿಯರು ತನ್ನದೇ ಆದ ಅಭಿಮಾನಿಗಳನ್ನು ಹೊಂದಿದ್ದಾರೆ. 17ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಈ ಹಿಂದೆ ಐಪಿಎಲ್‌ನಲ್ಲಿ ಮಿಂಚಿದ ಟಾಪ್ ನಿರೂಪಕಿಯರ ಕಿರುಪರಿಚಯ ಹೀಗಿದೆ ನೋಡಿ. ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್, ಜಗತ್ತಿನ ಅತ್ಯಂತ ಶ್ರೀಮಂತ ಟಿ20 ಕ್ರಿಕೆಟ್‌ ಲೀಗ್ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಐಪಿಎಲ್‌ ಟೂರ್ನಿಯಲ್ಲಿ ಪಾಲ್ಗೊಳ್ಳಲು ವಿದೇಶಿ ಕ್ರಿಕೆಟಿಗರು ತುದಿಗಾಲಿನಲ್ಲಿ ನಿಂತಿರುತ್ತಾರೆ. ಐಪಿಎಲ್‌ನಲ್ಲಿ ಮೈದಾನದೊಳಗೆ ಇರಲಿ ಅಥವಾ ಮೈದಾನದಾಚೆಯೇ ಇರಲಿ ಗ್ಲಾಮರಸ್‌ಗೇನು ಕೊರತೆಯಿಲ್ಲ. ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿ ಎನಿಸಿಕೊಂಡಿರುವ ಐಪಿಎಲ್‌ನಲ್ಲಿ ಮುದ್ದಾದ ನಿರೂಪಕಿಯರು ತನ್ನದೇ ಆದ ಅಭಿಮಾನಿಗಳನ್ನು ಹೊಂದಿದ್ದಾರೆ. 17ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಈ ಹಿಂದೆ ಐಪಿಎಲ್‌ನಲ್ಲಿ ಮಿಂಚಿದ ಟಾಪ್ ನಿರೂಪಕಿಯರ ಕಿರುಪರಿಚಯ ಹೀಗಿದೆ ನೋಡಿ. 1. ಅರ್ಚನಾ ವಿಜಯಾ: ಭಾರತದಲ್ಲಿನ ಕ್ರಿಕೆಟ್‌ ಅಭಿಮಾನಿಗಳಿಗೆ ಅರ್ಚನಾ ವಿಜಯಾ ಅವರ ಪರಿಚಯ ಮರೆಯಲು ಸಾಧ್ಯವೇ ಇಲ್ಲ. ಅರ್ಚನಾ 2011ರಿಂದೀಚೆಗೆ ಐಪಿಎಲ್ ಟೂರ್ನಿಯ ಸಂದರ್ಭದಲ್ಲಿ ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಲೇ ಬಂದಿದ್ದಾರೆ. ಐಪಿಎಲ್ ಎಕ್ಸ್‌ಟ್ರಾ ಇನಿಂಗ್ಸ್‌ ನಡೆಸಿಕೊಡುವ ಅರ್ಚನಾ ತನ್ನ ಮುದ್ದಾದ ನಗುವಿನ ಮೂಲಕ ಹಲವಾರು ಹುಡುಗರ ಹೃದಯ ಕದ್ದಿದ್ದಾರೆ. 2. ಮಂದಿರಾ ಬೇಡಿ: ಪ್ರಖ್ಯಾತ ನಿರೂಪಕಿ, ಬಾಲಿವುಡ್ ನಟಿ, ಪ್ಯಾಷನ್ ಡಿಸೈನರ್, ಮಾಡೆಲ್ ಹಾಗೂ ಟಿವಿ ನಿರೂಪಕಿ ಹೀಗೆ ವಿವಿಧ ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಮಂದಿರಾ ಬೇಡಿ, ಈ ಮೊದಲು 2003 ಹಾಗೂ 2007ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟಿವಿ ನಿರೂಪಕಿಯಾಗಿ ಕಾಣಿಸಿಕೊಂಡಿದ್ದರು. 2009ರಲ್ಲಿ ಕೇವಲ ಒಂದು ವರ್ಷ ಮಾತ್ರ ನಿರೂಪಕಿಯಾಗಿ ಕಾಣಿಸಿಕೊಂಡಿದ್ದರೂ ಮಂದಿರಾ ಬೇಡಿ, ತಮ್ಮ ಪ್ರತಿಭೆ ಅನಾವರಣ ಮಾಡಿ ಸೈ ಎನಿಸಿಕೊಂಡಿದ್ದರು. 3. ಶಿಬಾನಿ ದಂಡೇಕರ್: ಪುಣೆ ಮೂಲದ ನಟಿ ತಮ್ಮ ಅದ್ಭುತ ಲುಕ್‌ ಮೂಲಕ ದೇಶಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಕ್ರಿಕೆಟ್‌ ಕುರಿತಂತೆ ಅಪಾರ ಅನುಭವ ಹೊಂದಿರುವ ಶಿಬಾನಿ 2011ರಿಂದ 2015ರ ವರೆಗೆ 5 ಆವೃತ್ತಿಗಳಲ್ಲಿ ಅದ್ಭುತ ನಿರೂಪಣೆ ಮಾಡಿ ಗಮನ ಸೆಳೆದಿದ್ದರು. 4. ಮಯಾಂತಿ ಲ್ಯಾಂಗರ್: ಗ್ಲಾಮರ್ ಗೊಂಬೆ ಮಯಾಂತಿ ಲ್ಯಾಂಗರ್, ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸ್ಟುವರ್ಟ್ ಬಿನ್ನಿಯವರ ಪತ್ನಿ. ಭಾರತದ ಕ್ರೀಡಾ ನಿರೂಪಕಿಯರ ಪೈಕಿ ಅತ್ಯಂತ ಜನಪ್ರಿಯವಾಗಿರುವ ಲ್ಯಾಂಗರ್, ಮತ್ತೊಮ್ಮೆ 16ನೇ ಆವೃತ್ತಿಯ ಐಪಿಎಲ್‌ನಲ್ಲಿ ತಮ್ಮ ಮಾತಿನ ಮೂಲಕ ಟೂರ್ನಿಗೆ ಕಿಚ್ಚು ಹಚ್ಚಲು ಸಜ್ಜಾಗಿದ್ದಾರೆ. 5. ಲೇಖಾ ವಾಷಿಂಗ್ಟನ್‌: ಇಂಡಿಯನ್‌ ಪ್ರೀಮಿಯರ್ ಲೀಗ್ ಟೂರ್ನಿಯ ಮೊದಲ ನಿರೂಪಕಿ ಲೇಖಾ ವಾಷಿಂಗ್ಟನ್ ಬಹುತೇಕ ಮಂದಿ ಈಗ ಈಕೆಯನ್ನು ಮರೆತಿರಬಹುದು. ದಕ್ಷಿಣ ಭಾರತದ ನಟಿ ಹಾಗೂ ಎಸ್ಎಸ್‌ ಮ್ಯೂಸಿಕ್‌ನ ವಿಡಿಯೋ ಜಾಕಿಯಾಗಿರುವ ಈಕೆ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಅಪ್ಪಟ ಅಭಿಮಾನಿ ಕೂಡಾ ಹೌದು. 6. ಇಶಾ ಗುಹಾ: ಭಾರತೀಯ ಮೂಲದ ಇಂಗ್ಲೆಂಡ್ ಮಾಜಿ ಕ್ರಿಕೆಟ್ ಆಟಗಾರ್ತಿ, ಐಪಿಎಲ್‌ನ ನಿರೂಪಕಿಯರ ಪೈಕಿ ಅತ್ಯಂತ ಚಿರಪರಿಚಿತ ಮುಖ. ಸ್ವತಃ ಆಟಗಾರ್ತಿಯಾಗಿರುವ ಇಶಾ ಗುಹಾಗೆ ಕ್ರಿಕೆಟ್‌ ಬಗ್ಗೆ ಅಪಾರ ಅನುಭವವಿದ್ದು, ತಮ್ಮ ಕ್ರಿಕೆಟ್‌ ವಿಶ್ಲೇಷಣೆಯ ಮೂಲಕ ಅಭಿಮಾನಿಗಳು ಹಾಗೂ ಆಟಗಾರರಿಂದ ಗೌರವ ಸಂಪಾದಿಸಿದ್ದಾರೆ. 7. ರೊಚೆಲ್ಲೇ ಮರಿಯಾ ರಾವ್‌: ಭಾರತೀಯ ಮಾಡೆಲ್‌ ಹಾಗೂ ಖ್ಯಾತ ನಿರೂಪಕಿಯಾಗಿರುವ ರೊಚೆಲ್ಲೆ ರಾವ್, ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚುಟುಕಾಗಿ ಕಾಣಿಸಿಕೊಂಡು ಗಮನ ಸೆಳೆದಿದ್ದರು. ಕಿಂಗ್‌ಫಿಶರ್ ಕ್ಯಾಲೆಂಡರ್‌ನಲ್ಲಿಯೂ ಕಾಣಿಸಿಕೊಂಡಿದ್ದ ರೊಚೆಲ್ಲೇ, 2015-16ರ ಅವಧಿಯಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡಿದ್ದರು. 8. ಕರಿಷ್ಮಾ ಕೋಟಕ್: 2013ರಲ್ಲಿ ಆರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕಾಣಿಸಿಕೊಂಡಿದ್ದ ಲಂಡನ್ ಮೂಲದ ಭಾರತೀಯ ಬ್ಯೂಟಿ ಕರಿಷ್ಮಾ ಕೋಟಕ್‌, ತಮ್ಮ ಸುಲಲಿತ ನಿರೂಪಣೆ ಮೂಲಕ ಮಿಂಚಿದ್ದರು. ಇದಷ್ಟೇ ಅಲ್ಲದೇ ಸ್ನಿಗ್ದ ಸೌಂದರ್ಯದ ಚಿಲುಮೆ ಕರಿಷ್ಮಾ ಕಿಂಗ್‌ಫಿಶರ್ ಕ್ಯಾಲೆಂಡರ್‌ನಲ್ಲೂ ಕಾಣಿಸಿಕೊಂಡಿದ್ದರು.