ಆಸೀಸ್‌ಗೆ ಮತ್ತೆ ಆಘಾತ, 3ನೇ ಟೆಸ್ಟ್‌ಗೆ ಸ್ಟೀವನ್‌ ಸ್ಮಿತ್‌ ನಾಯಕ! ನಾಲ್ಕು ಪಂದ್ಯಗಳ ಬಾರ್ಡರ್‌-ಗವಾಸ್ಕರ್‌ ಟೆಸ್ಟ್‌ ಸರಣಿಯಲ್ಲಿ 2-0 ಹಿನ್ನಡೆಯಲ್ಲಿರುವ ಪ್ರವಾಸಿ ಆಸ್ಟ್ರೇಲಿಯಾ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ತಂಡದ ನಾಯಕ ಪ್ಯಾಟ್‌ ಕಮ್ಮಿನ್ಸ್‌ ತವರಿಗೆ ವಾಪಾಸಾಗಿದ್ದಾರೆ. ಇದರಿಂದಾಗಿ ಇಂದೋರ್‌ನಲ್ಲಿ ನಡೆಯಲಿರುವ 3ನೇ ಟೆಸ್ಟ್‌ ಪಂದ್ಯದಲ್ಲಿ ಸ್ಟೀವ್‌ ಸ್ಮಿತ್‌ ತಂಡವನ್ನು ಮುನ್ನಡೆಸಲಿದ್ದಾರೆ. ಇಂದೋರ್‌ (ಫೆ.24):ತಾಯಿಗೆ ತೀವ್ರ ಅನಾರೋಗ್ಯವಿರುವ ಕಾರಣ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್‌ ಕಮ್ಮಿನ್ಸ್ ತವರಿಗೆ ವಾಪಾಸಾಗಿದ್ದಾರೆ. ಅವರ ಬದಲಿಗೆ ಭಾರತ ವಿರುದ್ಧ ನಡೆಯಲಿರುವ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಸ್ಟೀವನ್‌ ಸ್ಮಿತ್‌ ಪ್ರವಾಸಿ ತಂಡವನ್ನು ಮುನ್ನಡೆಸಲಿದ್ದಾರೆ. ಮೂರನೇ ಟೆಸ್ಟ್‌ ಪಂದ್ಯ ಬುಧವಾರದಿಂದ ಇಂದೋರ್‌ನಲ್ಲಿ ಆರಂಭವಾಗಲಿದೆ. "ನನ್ನ ತಾಯಿ ತೀವ್ರ ಅನಾರೋಗ್ಯದಲ್ಲಿದ್ದು ಅವರ ಆರೈಕೆಯಲ್ಲಿರುವ ಕಾರಣ ನಾನು ಈ ಸಮಯದಲ್ಲಿ ಭಾರತಕ್ಕೆ ಹಿಂತಿರುಗದೇ ಇರಲು ನಿರ್ಧರಿಸಿದ್ದೇನೆ. ನನ್ನ ಕುಟುಂಬದೊಂದಿಗೆ ನಾನು ಇಲ್ಲಿರುವುದೇ ಸರಿ ಎಂದು ಭಾವಿಸುತ್ತೇನೆ. ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ನನ್ನ ತಂಡದ ಸಹ ಆಟಗಾರರಿಂದ ನನಗೆ ದೊರೆತ ಬೆಂಬಲವನ್ನು ನಾನು ಪ್ರಶಂಸಿಸುತ್ತೇನೆ' ಎಂದು ಪ್ಯಾಟ್‌ ಕಮ್ಮಿನ್ಸ್‌ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡ 0-2 ಹಿನ್ನಡೆಯಲ್ಲಿದೆ. ಈಗಾಗಲೇ ಟ್ರೋಫಿ ಗೆಲ್ಲುವ ಕನಸನ್ನು ಭಗ್ನಮಾಡಿಕೊಂಡಿರುವ ಅಸೀಸ್‌, ಕನಿಷ್ಠ ಸರಣಿ ಸೋಲನ್ನು ತಪ್ಪಿಸಿಕೊಳ್ಳುವ ಯೋಚನೆಯಲ್ಲಿದೆ. ಸರಣಿ ಸೋಲು ತಪ್ಪಿಸಿಕೊಳ್ಳಬೇಕಾದರೆ, ಆಸೀಸ್‌ ಮುಂದಿನ ಎರಡೂ ಪಂದ್ಯಗಳಲ್ಲಿ ಗೆಲ್ಲಬೇಕಿದೆ.ಈಗಾಗಲೇ ಗಾಯದ ಕಾರಣದಿಂದಾಗಿ ಅನುಭವಿ ಆಟಗಾರರಾದ ಡೇವಿಡ್‌ ವಾರ್ನರ್‌ ಹಾಗೂ ಜೋಶ್‌ ಹ್ಯಾಸಲ್‌ವುಡ್‌ ಸೇವೆಯನ್ನೂ ಆಸೀಸ್‌ ಕಳೆದುಕೊಂಡಿದ್ದು, ಪ್ಯಾಟ್‌ ಕಮ್ಮಿನ್ಸ್‌ ಕೂಡ ಅಲಭ್ಯರಾಗುವುದರೊಂದಿಗೆ ಪ್ರವಾಸಿ ತಂಡ ಇನ್ನಷ್ಟು ಸಂಕಷ್ಟಕ್ಕೆ ಒಳಗಾಗಿದೆ. ' T20 : ಧೋನಿ ರೀತಿಯಲ್ಲಿ ಹರ್ಮಾನ್‌ ರನೌಟ್‌, ವಿಶ್ವಕಪ್‌ನಿಂದ ಭಾರತ ಔಟ್‌!2022ರ ಡಿಸೆಂಬರ್‌ನಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ನಡದ ಟೆಸ್ಟ್‌ ಪಂದ್ಯದಲ್ಲಿ ಹಾಗೂ 2021ರ ಆಶಸ್‌ ಟೆಸ್ಟ್‌ ಸರಣಿಯಲ್ಲಿ ಪ್ಯಾಟ್‌ ಕಮ್ಮಿನ್ಸ್‌ ಅಲಭ್ಯರಾಗಿದ್ದಾಗ ಸ್ಟೀವ್‌ ಸ್ಮಿತ್‌ ಆಸೀಸ್‌ನ ಹಂಗಾಮಿ ನಾಯಕರಾಗಿದ್ದರು. ಈ ಟೆಸ್ಟ್‌ಗೆ ಕಮ್ಮಿನ್ಸ್‌ಗೆ ಯಾವುದೇ ಬದಲಿ ಆಟಗಾರನನ್ನು ಕ್ರಿಕೆಟ್ ಆಸ್ಟ್ರೇಲಿಯಾ ಹೆಸರಿಸಿಲ್ಲವಾದರೂ, ಮೊದಲ ಟೆಸ್ಟ್‌ನಲ್ಲಿ ಕಾಣಿಸಿಕೊಂಡಿರುವ ಮಿಚೆಲ್ ಸ್ಟಾರ್ಕ್ (ಅವರು ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ) ಅಥವಾ ಸ್ಕಾಟ್ ಬೋಲ್ಯಾಂಡ್‌ನಿಂದ ಸ್ಥಾನ ಪಡೆದುಕೊರ್ಳಳುವ ಸಾಧ್ಯತೆ ಇದೆ. ದೆಹಲಿಯಲ್ಲಿ ನಡೆದ ಎರಡನೇ ಟೆಸ್ಟ್‌ಗೆ ಕಮ್ಮಿನ್ಸ್‌ ಮೂಲಕ ಏಕೈಕ ವೇಗದ ಬೌಲರ್‌ನೊಂದಿಗೆ ಕಣಕ್ಕಿಳಿದಿತ್ತು. ಎದುರಾಳಿಗಳನ್ನ ಮಣಿಸಲು ಅಂಬಾನಿ ತಂತ್ರ, ಜಿಯೋ ಸಿನಿಮಾದಲ್ಲಿ ಐಪಿಎಲ್‌ ಉಚಿತವಾಗಿ ಪ್ರಸಾರ!