ದುಬೈ; ಕ್ರಿಕೆಟಿಗ ಕ್ರಿಸ್ ಗೇಲ್ ಜೊತೆ ನಟಿ ದೀಪಿಕಾ ದಾಸ್… ಫೋಟೋ ವೈರಲ್ ಕಿರುತೆರೆ ನಟಿ ದೀಪಿಕಾ ದಾಸ್ ದುಬೈನಲ್ಲಿ ಕ್ರಿಕೆಟಿಗ ಕ್ರಿಸ್ ಗೇಲ್ ಅವರೊಂದಿಗೆ ಫ್ಯಾನ್-ಗರ್ಲ್ ಕ್ಷಣವನ್ನು ಆನಂದಿಸುತ್ತಿರುವ ವಿಶೇಷ ಚಿತ್ರವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ದುಬೈನಲ್ಲಿ ದೀಪಿಕಾ ಏನ್ ಮಾಡ್ತಾ ಇದ್ದಾರೆ ನೀವೇ ನೋಡಿ. ಕಿರುತೆರೆ ನಟಿ ದೀಪಿಕಾ ದಾಸ್ ದುಬೈನಲ್ಲಿ ಕ್ರಿಕೆಟಿಗ ಕ್ರಿಸ್ ಗೇಲ್ ಅವರೊಂದಿಗೆ ಫ್ಯಾನ್-ಗರ್ಲ್ ಕ್ಷಣವನ್ನು ಆನಂದಿಸುತ್ತಿರುವ ವಿಶೇಷ ಚಿತ್ರವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ದುಬೈನಲ್ಲಿ ದೀಪಿಕಾ ಏನ್ ಮಾಡ್ತಾ ಇದ್ದಾರೆ ನೀವೇ ನೋಡಿ. ಕಿರುತೆರೆ ನಟಿ ದೀಪಿಕಾ ದಾಸ್ ( ) ಸದಾ ಒಂದಲ್ಲ ಒಂದು ಕಾರಣದಿಂದ ಸದಾ ಸುದ್ದಿಯಲ್ಲಿರುತ್ತಾರೆ. ಕಳೆದ ಬಾರಿ ಶೈನ್ ಶೆಟ್ಟಿ ಜೊತೆ ಫೋಟೋ ಹಂಚಿಕೊಂಡು ಭಾರಿ ಸುದ್ದಿಗೆ ಕಾರಣವಾಗಿದ್ದರು. ಈ ಬಾರಿ ಇವರು ಜನಪ್ರಿಯ ಕ್ರಿಕೇಟರ್ ಕ್ರಿಸ್ ಗೇಲ್ ಜೊತೆಗಿನ ಫೋಟೋ ಶೇರ್ ಮಾಡಿಕೊಂಡು ಸಂಭ್ರಮಿಸಿದ್ದಾರೆ. ಸದ್ಯ ದುಬೈನಲ್ಲಿ ತಮ್ಮ ರಜೆಯನ್ನು ( ) ಎಂಜಾಯ್ ಮಾಡುತ್ತಿರುವ ಕನ್ನಡ ನಟಿ ದೀಪಿಕಾ ದಾಸ್, ಕ್ರಿಕೆಟರ್ ಕ್ರಿಸ್ ಗೇಲ್ ಅವರನ್ನು ಭೇಟಿಯಾಗಿದ್ದರು. ನಟಿ ದುಬೈನಲ್ಲಿ ಊಟ ಮಾಡುತ್ತಿದ್ದ ಅದೇ ರೆಸ್ಟೋರೆಂಟ್ನಲ್ಲಿ ತನ್ನ ನೆಚ್ಚಿನ ಕ್ರಿಕೆಟಿಗನನ್ನು ಭೇಟಿಯಾಗುವ ಅದೃಷ್ಟ ಪಡೆದುಕೊಂಡಿದ್ದರು ಎನ್ನಲಾಗಿದೆ. ದೀಪಿಕಾ ತನ್ನ ನೆಚ್ಚಿನ ಕ್ರೀಡಾಪಟುವಿನೊಂದಿಗೆ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವರು ಚಿತ್ರಕ್ಕೆ ಶೀರ್ಷಿಕೆ ನೀಡಿದ್ದು, "ಇದು ಗೇಲ್ ಕ್ಷಣ...ಅತ್ಯಂತ ಅನಿರೀಕ್ಷಿತ ಭೇಟಿ, ನಮ್ಮ ಆರ್ಸಿಬಿ ಡೇಸ್ ಅನ್ನು ನೆನಪಿಸಿತು ಎಂದು ಬರೆದುಕೊಂಡಿದ್ದಾರೆ.. (’ … 💙 , ❤️ …. 😍) ಕ್ರಿಸ್ ಗೇಲ್ ಅವರನ್ನು ಭೇಟಿಯಾದ ದೀಪಿಕಾ ಅವರ ಸಂತೋಷಕ್ಕೆ ಯಾವುದೇ ಮಿತಿಯಿಲ್ಲ ಎಂದು ತೋರುತ್ತದೆ ಮತ್ತು ಅವರು ಹಂಚಿಕೊಂಡ ಚಿತ್ರವು ಅವರಿಗೆ ಈ ಕ್ಷಣ ಎಷ್ಟು ಖುಷಿ ತಂದಿದೆ ಅನ್ನೋದನ್ನು ಸಹ ತೋರಿಸುತ್ತಿದೆ. ದೀಪಿಕಾ ಈ ಸಂಭ್ರಮದ ಕ್ಷಣದ ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮತ್ತೊಂದೆಡೆ, ಬಿಗ್ ಬಾಸ್ ಕನ್ನಡ ಸೀಸನ್ 9 ( 9) ಪ್ರಯಾಣವನ್ನು ಮುಗಿಸಿದ ಒಂದು ತಿಂಗಳ ನಂತರ, ಎರಡನೇ ರನ್ನರ್ ಅಪ್ ದೀಪಿಕಾ ದಾಸ್ ಪ್ರಸ್ತುತ ದುಬೈನಲ್ಲಿ ರಜೆಯನ್ನು ಸಖತ್ತಾಗಿ ಎಂಜಾಯ್ ಮಾಡ್ತಾ ಇದ್ದಾರೆ. ಕಳೆದ ಕೆಲವು ದಿನಗಳಿಂದ ದುಬೈನ ಹಲವಾರು ಫೋಟೋಗಳನ್ನು ಸಹ ಹಂಚಿಕೊಳ್ಳುತ್ತಿದ್ದಾರೆ. ಯುಎಇಯ ರಾಜಧಾನಿಯನ್ನು ಎಕ್ಸ್ ಪ್ಲೋರ್ ಮಾಡುತ್ತಿರುವ ನಟಿ ತನ್ನ ರಜೆಯನ್ನು ಪೂರ್ಣವಾಗಿ ಆನಂದಿಸುತ್ತಿದ್ದಾರೆ. ಶಾಪಿಂಗ್ ನಿಂದ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವವರೆಗೆ, ದೀಪಿಕಾ ತನ್ನ ಗೆಳತಿಯರೊಂದಿಗೆ ರಜೆಯನ್ನು ಪೂರ್ಣವಾಗಿ ಎಂಜಾಯ್ ಮಾಡ್ತಾ ಇದ್ದಾರೆ. ದುಬೈನಲ್ಲಿರುವ ಎಂಜಾಯ್ ಮಾಡ್ತಾ ಇರೋ ದೀಪಿಕಾ ದಾಸ್ ಅಲ್ಲೇ ವ್ಯಾಲೆಂಟೈನ್ಸ್ ಡೇ ( ) ಸೆಲೆಬ್ರೇಶನ್ ಮಾಡಿದ್ದಾರೆ. ಹ್ಯಾಪಿ ವ್ಯಾಲೆಂಟೈನ್ಸ್ ಡೇ ಎಂದು ಪ್ರೇಮದ ಸಂದೇಶ ಕೂಡ ಕಳುಹಿಸಿದ್ದಾರೆ. ಈ ಸಂದೇಶ ಯಾರಿಗೆ ಎಂದು ನೆಟ್ಟಿಗರು ಕಮೆಂಟ್ ಮಾಡ್ತಿದ್ದಾರೆ.