ನಿಧಿ ತಪಾಡಿಯಾ ಜೊತೆ 23 ವರ್ಷದ ಪೃಥ್ವಿ ಶಾ ಮದುವೆ? ಟೀಮ್‌ ಇಂಡಿಯಾ ಆಟಗಾರ ಮುಂಬೈನ ಪೃಥ್ವಿ ಶಾ ವಿವಾಹವಾಗಿದ್ದಾರೆಯೇ ಎನ್ನುವ ಅನುಮಾನ ವ್ಯಕ್ತವಾಗಿದೆ. 23 ವರ್ಷದ ಪೃಥ್ವಿ ಶಾ, ಪ್ರೇಮಿಗಳ ದಿನದಂದು, ಇನ್ಸ್‌ಟಾಗ್ರಾಮ್‌ನಲ್ಲಿ 'ಹ್ಯಾಪಿ ವ್ಯಾಲಂಟೈನ್ಸ್‌ ಡೇ ಮೈ ವೈಫೀ' ಎಂದು ಪೋಸ್ಟ್‌ ಮಾಡಿದ್ದರು. ಪೋಸ್ಟ್‌ ಮಾಡಿದ ಕೆಲವೇ ಕ್ಷಣದಲ್ಲಿ ಅದನ್ನು ಡಿಲೀಟ್‌ ಮಾಡಿ ಸ್ಪಷ್ಟೀಕರಣ ನೀಡಿದ್ದರು. ಬೆಂಗಳೂರು (ಫೆ,14):ಪ್ರೇಮಿಗಳ ದಿನವನ್ನು ಜಗತ್ತಿನಲ್ಲಿ ಬಹಳ ವಿಶೇಷವಾಗಿ ಆಚರಣೆ ಮಾಡುತ್ತಾರೆ. ಸಾಮಾನ್ಯ ಜನರಿಂದ ಹಿಡಿದ ಪ್ರಖ್ಯಾತ ವ್ಯಕ್ತಿಗಳು ಕೂಡ ಸಂಭ್ರಮದಿಂದಲೇ ವ್ಯಾಲಂಟೈನ್ಸ್‌ ಡೇ ಸಂಭ್ರಮವನ್ನು ಹಂಚಿಕೊಳ್ಳುತ್ತಾರೆ. ವಿಶೇಷ ದಿನದಂದು ಯಾರೊಬ್ಬರೂ ಕೂಡ ತಮ್ಮ ಫೀಲಿಂಗ್‌ ಅನ್ನು ಹೇಳಿಕೊಳ್ಳಲು ಹಿಂಜರಿಯುವುದಿಲ್ಲ. ಟೀಮ್‌ ಇಂಡಿಯಾ ಕ್ರಿಕೆಟಿಗ ಹಾಗೂ ಮುಂಬೈ ಆಟಗಾರ 23 ವರ್ಷದ ಪೃಥ್ವಿ ಶಾ ವಿಚಾರದಲ್ಲೂ ಹೀಗೆ ಆಗಿದೆ. ಇನ್ಸ್‌ಟಾಗ್ರಾಮ್‌ ಸ್ಟೋರಿಯಲ್ಲಿ ಅವರು ಮಾಡಿದ ಒಂದು ಪೋಸ್ಟ್‌ ಈಗ ಕ್ರಿಕೆಟ್‌ ಲೋಕದಲ್ಲಿ ಅಚ್ಚರಿಗೆ ಕಾರಣವಾಗಿದೆ. ಇನ್ಸ್‌ಟಾಗ್ರಾಮ್‌ ಸ್ಟೋರಿಯಲ್ಲಿ 'ಸಿಐಡಿ' ಧಾರಾವಾಹಿಯಲ್ಲಿ ನಟಿಸುತ್ತಿರುವ 22 ವರ್ಷದ ನಿಧಿ ರವಿ ತಪಾಡಿಯಾ ಫೋಟೋವನ್ನು ಶೇರ್‌ ಮಾಡಿಕೊಂಡಿದ್ದರು. ಅದರೊಂದಿಗೆ 'ಹ್ಯಾಪಿ ವ್ಯಾಲಂಟೈನ್ಸ್‌ ಮೈ ವೈಫೀ @ನಿಧಿ ತಪಾಡಿಯಾ' ಎಂದು ಬರೆದುಕೊಂಡಿದ್ದರು. ಆದರೆ, ಅದಾದ ಕೆಲವೇ ನಿಮಿಷಗಳಲ್ಲಿ ಟೀಮ್‌ ಇಂಡಿಯಾದ ಆರಂಭಿಕ ಆಟಗಾರ ಈ ಪೋಸ್ಟ್‌ಅನ್ನು ಡಿಲೀಟ್‌ ಮಾಡಿದ್ದರು. ಆದರೆ, ಕೆಲ ಕ್ರಿಕೆಟ್‌ ಅಭಿಮಾನಿಗಳು ಅಷ್ಟರಲ್ಲಾಗಲೇ ಸ್ಕ್ರೀನ್‌ಶಾಟ್‌ ತೆಗೆದಿರಿಸಿಕೊಂಡಿದ್ದರು. ಇದರ ಬೆನ್ನಲ್ಲಿಯೇ 23 ವರ್ಷದ ಪೃಥ್ವಿ ಶಾ ಅವರಿಗೆ ಈಗಾಗಲೇ ಮದುವೆಯಾಗಿದೆಯೇ ಎನ್ನುವ ಅನುಮಾನ ಎಲ್ಲರನ್ನೂ ಕಾಡಿದೆ. ನಿಧಿಯ ಬಳಿಕ ಡಾನ್ಸ್‌ ಕಲಿತಿದ್ದ ಪೃಥ್ವಿ: ಪೃಥ್ವಿ ಶಾ ಹಾಗೂ ನಿಧಿ ತಪಾಡಿಯಾ ರಿಲೇಷನ್‌ಷಿಪ್‌ನಲ್ಲಿದ್ದಾರೆ ಎನ್ನುವ ಗುಸುಗುಸು ಈ ಹಿಂದೆಯೇ ಆರಂಭವಾಗಿತ್ತು. ಕಳೆದ ವರ್ಷ ನಿಧಿ ಅವರ ಬಳಿಯಲ್ಲಿಯೇ ಪೃಥ್ವಿ ಶಾ ಗರ್ಬಾ ಡಾನ್ಸ್‌ ಅಭ್ಯಾಸ ಕ್ಕೆ ಹೋಗಿದ್ದರು. ಅದಾದ ಬಳಿಕ ಸಾಕಷ್ಟಿ ಬಾರಿ ಪೃಥ್ವಿ ಶಾ ಹಾಗೂ ನಿಧಿ ತಪಾಡಿಯಾ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಕಳೆದ ತಿಂಗಳು ಹಿಂದೆ ಪೃಥ್ವಿ ಶಾ ಅವರ ಪೋಸ್ಟ್‌ಗೆ ನಿಧಿ ಕಾಮೆಂಟ್‌ ಕೂಡ ಮಾಡಿದ್ದರು. ಆ ನಂತರವೇ ಇವರಿಬ್ಬರೂ ಡೇಟಿಂಗ್‌ ಮಾಡುತ್ತಿರಬಹುದು ಎನ್ನುವ ಚರ್ಚೆ ಆರಂಭವಾಗಿತ್ತು.ಆದರೆ, ಅವರಬ್ಬರೂ ಈವರೆಗೂ ರಿಲೇಷನ್‌ಷಿಪ್‌ನಲ್ಲಿ ಇರುವ ಬಗ್ಗೆ ಮುಕ್ತವಾಗಿ ಮಾತನಾಡಿಲ್ಲ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ನಿಧಿ ತಪಾಡಿಯಾಗೆ ಪ್ರೀತಿ ವ್ಯಕ್ತಪಡಿಸಿದ್ದು ಕೂಡ ಇದೇ ಮೊದಲ ಬಾರಿ. ಇದಕ್ಕೂ ಮುನ್ನ ರಣಜಿ ಟ್ರೋಫಿಯಲ್ಲಿ ಪೃಥ್ವಿ ಶಾ 300 ರನ್‌ ಬಾರಿಸಿದಾಗ ನಿಧಿ ತಪಾಡಿಯಾ ಅವರ ವಿಡಿಯೋವನ್ನು ಇನ್ಸ್‌ಟಾಗ್ರಾಮ್‌ ಸ್ಟೋರಿಯಲ್ಲಿ ಶೇರ್‌ ಮಾಡಿಕೊಂಡಿದ್ದರು. ನಟಿಯೊಬ್ಬರಿಗೆ ಪೃಥ್ವಿ ಶಾ ಹೆಸರು ತಳುಕು ಹಾಕಿಕೊಂಡಿರುವುದು ಇದೇ ಮೊದಲಲ್ಲ. ಈ ಹಿಂದೆ, ಟಿವಿ ಧಾರಾವಾಹಿ ಉಡಾನ್ ನಟಿ ಪ್ರಾಚಿ ಸಿಂಗ್ ಅವರೊಂದಿಗಿನ ಸಂಬಂಧದ ಬಗ್ಗೆ ಚರ್ಚೆಗಳು ನಡೆದಿದ್ದವು. ಐಪಿಎಲ್ 2021 ರ ಮೊದಲು, ಇಬ್ಬರೂ ಪರಸ್ಪರ ಹತ್ತಿರವಾಗಿದ್ದರು. ಆದರೆ, ಈ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ಚುಟುಕು ವಿಶ್ವಕಪ್ ಗೆದ್ದ ಭಾರತ ಅಂಡರ್ 19 ಮಹಿಳಾ ತಂಡಕ್ಕೆ ರಾಹುಲ್ ದ್ರಾವಿಡ್ ವಿಶೇಷ ಸಂದೇಶ..!ಇನ್ಸ್‌ಟಾಗ್ರಾಮ್‌ನಲ್ಲಿ ತಮ್ಮ ಚಿತ್ರಗಳು ವೈರಲ್‌ ಆಗುತ್ತಿದ್ದಂತೆ ಸ್ವತಃ ಪೃಥ್ವಿ ಶಾ ಸ್ಪಷ್ಟನೆ ನೀಡಿ ಇನ್ನೊಂದು ಪೋಸ್ಟ್‌ ಮಾಡಿದ್ದರು. 'ಯಾರೋ ಕೆಲವರು ನನ್ನ ಚಿತ್ರಗಳನ್ನು ಎಡಿಟ್‌ ಮಾಡಿದ್ದಾರೆ. ನನ್ನ ಪೇಜ್‌ನಲ್ಲಾಗಲಿ, ನನ್ನ ಸ್ಟೋರಿಯಲ್ಲಾಗಲಿ ಪೋಸ್ಟ್‌ ಮಾಡದ ಚಿತ್ರಗಳನ್ನು ಅವರು ನಾನು ಪೋಸ್ಟ್‌ ಮಾಡಿದಂತೆ ಬಿಂಬಿಸಿದ್ದಾರೆ. ಹಾಗಾಗಿ ಈ ಟ್ಯಾಗ್‌ಗಳು ಹಾಗೂ ಸಂದೇಶಗಳನ್ನು ಮರೆತುಬಿಡಿ' ಎಂದು ಪೋಸ್ಟ್‌ ಮಾಡಿದ್ದಾರೆ. : ಸಿಡಿಲಬ್ಬರದ ತ್ರಿಶತಕ ಚಚ್ಚಿದ ಪೃಥ್ವಿ ಶಾ..! ಅಸ್ಸಾಂ ಮೇಲೆ ಮುಂಬೈ ಸವಾರಿ..!ಅಸ್ಸಾಂ ವಿರುದ್ಧ ರಣಜಿ ಟ್ರೋಫಿಯಲ್ಲಿ ಆಕರ್ಷಕ 379 ರನ್‌ ಬಾರಿಸುವ ಮೂಲಕ ಪೃಥ್ವಿ ಶಾ ಗಮನಸೆಳೆದಿದ್ದರು. 383 ಎಸೆತಗಳಲ್ಲಿ 379 ರನ್‌ ಸಿಡಿಸುವ ಮೂಲಕ ಅವರು ಗಮನಸೆಳೆದಿದ್ದರು. ಇದರಲ್ಲಿ 49 ಬೌಂಡರಿಗಳು ಹಾಗೂ 4 ಸಿಕ್ಸರ್‌ಗಳು ಸೇರಿದ್ದವು. ಆ ಮೂಲಕ 1990-91ರ ರಣಜಿ ಋತುವಿನಲ್ಲಿ ಸಂಜಯ್‌ ಮಂಜ್ರೇಕರ್‌ ಬಾರಿಸಿದ್ದ 377 ರನ್‌ಗಳ ದಾಖಲೆಯನ್ನು ಮುರಿದು, ರಣಜಿ ಟ್ರೋಫಿಯಲ್ಲಿ 2ನೇ ವೈಯಕ್ತಿಕ ಗರಿಷ್ಠ ರನ್‌ ಬಾರಿಸಿದ ಸಾಧನೆ ಮಾಡಿದ್ದರು. ಬಿಬಿ ನಿಂಬಾಳ್ಕರ್‌ ಬಾರಿಸಿದ 443 ರನ್‌, ರಣಜಿ ಟ್ರೊಫಿಯಲ್ಲಿ ಆಟಗಾರನೊಬ್ಬನ ವೈಯಕ್ತಿಕ ಗರಿಷ್ಠ ಮೊತ್ತ ಎನಿಸಿದೆ.