141 ಎಸೆತಗಳಲ್ಲಿ 277 ರನ್‌..! ಲಿಸ್ಟ್‌ ಎ ಕ್ರಿಕೆಟ್‌ನ ವಿಶ್ವದಾಖಲೆ ಪುಡಿಗಟ್ಟಿದ ಎನ್‌.ಜಗದೀಶನ್‌! ತಮಿಳುನಾಡು ತಂಡದ ಆಟಗಾರ ನಾರಾಯಣನ್‌ ಜಗದೀಶನ್ ಲಿಸ್ಟ್‌ ಎ (50 ಓವರ್‌ಗಳ ಏಕದಿನ ಮಾದರಿ) ಕ್ರಿಕೆಟ್‌ನ ಹೊಸ ವಿಶ್ವದಾಖಲೆ ನಿರ್ಮಾಣ ಮಾಡಿದ್ದಾರೆ. ಕೇವಲ 141 ಎಸೆತಗಳಲ್ಲಿ 277 ರನ್‌ ಸಿಡಿಸುವ ಮೂಲಕ ಪುರುಷರ ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ ಗರಿಷ್ಠ ರನ್‌ಗಳ ವಿಶ್ವದಾಖಲೆ ನಿರ್ಮಿಸಿದ್ದಾರೆ. 20 ವರ್ಷಗಳ ಹಿಂದೆ ಆಲಿಸ್ಟರ್‌ ಬ್ರೌನ್‌ ಅವರ 268 ರನ್‌ ದಾಖಲೆಯನ್ನು ಅವರು ಮುರಿದಿದ್ದಾರೆ. ಬೆಂಗಳೂರು (ನ.21):ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೋಮವಾರ ನಡೆದ ತಮಿಳುನಾಡು ಹಾಗೂ ಅರುಣಾಚಲ ಪ್ರದೇಶ ನಡುವವಿನ ವಿಜಯ್‌ ಹಜಾರೆ ಟ್ರೋಫಿಯ ಪಂದ್ಯದಲ್ಲಿ, ಎನ್‌.ಜಗದೀಶನ್‌ ಬಾರಿಸಿದ 141 ಎಸೆತಗಳ 277 ರನ್‌ಗಳ ನೆರವಿನಿಂದ ತಮಿಳುನಾಡು ತಂಡ 50 ಓವರ್‌ಗಳಲ್ಲಿ 2 ವಿಕೆಟ್‌ಗೆ 506 ರನ್‌ಗಳ ದಾಖಲೆ ಮೊತ್ತ ಪೇರಿಸಿದೆ. ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಮಾಜಿ ಆಟಗಾರ ಎನ್‌.ಜಗದೀಶನ್‌ ಬಾರಿಸಿರುವ ಈ ಮೊತ್ತ ಲಿಸ್ಟ್‌ ಎ ಕ್ರಿಕೆಟ್‌ನ ವಿಶ್ವದಾಖಲೆ ಎನಿಸಿದೆ. ಪುರುಷರ ಲಿಸ್ಟ್‌ ಎ ಕ್ರಿಕೆಟ್‌ ಅಂದರೆ 50 ಓವರ್‌ಗಳ ದೇಶೀಯ ಮಾದರಿಯ ಕ್ರಿಕೆಟ್‌ನಲ್ಲಿ ಸರ್ವಾಧಿಕ ಸ್ಕೊರ್‌ ಎನಿಸಿದೆ. ಇದಕ್ಕೂ ಮುನ್ನ 2002ರಲ್ಲಿ ಗ್ಲಾಮರ್ಗನ್‌ ವಿರುದ್ಧ ಇಂಗ್ಲೆಂಡ್‌ನ ಆಲಿಸ್ಟರ್‌ ಬ್ರೌನ್‌ ಬಾರಿಸಿದ 268 ರನ್‌ ಪುರುಷರ ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ ವಿಶ್ವದಾಖಲೆಯ ಮೊತ್ತ ಎನಿಸಿತ್ತು. ಅದಲ್ಲದೆ, ಪುರುಷರು ಹಾಗೂ ಮಹಿಳೆಯರ ಲಿಸ್ಟ್‌ ಎ ಕ್ರಿಕೆಟ್‌ನಲ್ಲೂ ಇದು ಸರ್ವಾಧಿಕ ಸ್ಕೋರ್‌ ಎನಿಸಿದೆ. 2007ರಲ್ಲಿ ಶ್ರೀಲಂಕಾದ ಮಹಿಳೆಯರ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ಶ್ರೀಪಾಲಿ ವೀರಕೋಡಿ, ಪುಷ್ಪಾದನಾ ಲೇಡೀಸ್‌ ತಂಡದ ವಿರುದ್ಧ ಅಜೇಯ 271 ರನ್‌ ಬಾರಿಸಿದ್ದು ಲಿಸ್ಟ್‌ ಎ ಕ್ರಿಕೆಟ್‌ನ ದೊಡ್ಡಮೊತ್ತ ಎನಿಸಿತ್ತು. 26 ವರ್ಷದ ಎನ್‌.ಜಗದೀಶನ್‌ ಅವರು ನಿರ್ಮಿಸಿರುವ ದಾಖಲೆಗಳು!