ಇಂದಿನಿಂದ ಭಾರತ ಕಿವೀಸ್ ಟಿ20 ಸೆಣಸಾಟ..! ವೆಲ್ಲಿಂಗ್ಟನ್‌ನಲ್ಲಿಂದು ಭಾರತ-ನ್ಯೂಜಿಲೆಂಡ್ ಸೆಣಸಾಟರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾ ನಾಯಕ2024ರ ಟಿ20 ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಈಗಿನಿಂದಲೇ ಸಿದ್ದತೆ ವೆಲ್ಲಿಂಗ್ಟನ್‌(ನ.18): ಕಳೆದ ಕೆಲ ವರ್ಷಗಳಿಂದ ಪ್ರತಿ ಸೀಮಿತ ಓವರ್‌ ಸರಣಿಯನ್ನು ಮುಂಬರುವ ಐಸಿಸಿ ಜಾಗತಿಕ ಮಟ್ಟದ ಟೂರ್ನಿಗೆ ಸಿದ್ಧತೆ ಎಂದೇ ಪರಿಗಣಿಸಲಾಗುತ್ತಿದೆ. ಈಗ ಟಿ20 ವಿಶ್ವಕಪ್‌ ಮುಕ್ತಾಯಗೊಂಡಿದ್ದು, 2024ರಲ್ಲಿ ನಡೆಯುವ ಮುಂದಿನ ಟಿ20 ವಿಶ್ವಕಪ್‌ನತ್ತ ಎಲ್ಲರ ಚಿತ್ತ ನೆಟ್ಟಿದೆ. ಈ ನಡುವೆ 2023ರ ಏಕದಿನ ವಿಶ್ವಕಪ್‌ಗೂ ತಂಡಗಳು ಸಿದ್ಧತೆ ನಡೆಸಲಿವೆ. ಕಳೆದ ವಾರ ಮುಕ್ತಾಯಗೊಂಡ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳು 3 ಪಂದ್ಯಗಳ ಟಿ20 ಸರಣಿಯಲ್ಲಿ ಮುಖಾಮುಖಿಯಾಗಲಿದ್ದು, ಮೊದಲ ಪಂದ್ಯ ಶುಕ್ರವಾರ ಇಲ್ಲಿನ ಬೇಸಿನ್‌ ರಿಸರ್ವ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತ ತಂಡದ ಆಟದ ಶೈಲಿ ಹಾಗೂ ಆಟಗಾರರ ವೈಯಕ್ತಿಕ ಪ್ರದರ್ಶನಗಳ ಬಗ್ಗೆ ಕುತೂಹಲವಿದೆ. ಹಿರಿಯ ಆಟಗಾರರಾದ ರೋಹಿತ್‌ ಶರ್ಮಾ, ವಿರಾಟ್ ಕೊಹ್ಲಿ, ರವಿಚಂದ್ರನ್ ಅಶ್ವಿನ್‌, ಕೆ ಎಲ್ ರಾಹುಲ್‌, ದಿನೇಶ್ ಕಾರ್ತಿಕ್‌ ವಿಶ್ರಾಂತಿ ಪಡೆದಿರುವ ಕಾರಣ ಯುವ ಆಟಗಾರರಿಗೆ ಆಯ್ಕೆ ಸಮಿತಿ ಗಮನ ಸೆಳೆಯಲು ಇದು ಉತ್ತಮ ಅವಕಾಶ. ಭಾರತ ಟಿ20 ಕ್ರಿಕೆಟ್‌ನ ಭವಿಷ್ಯ ತಜ್ಞ ಆಟಗಾರರು ಹಾಗೂ ಆಕ್ರಮಣಕಾರಿ ಆಟದ ಮೇಲೆ ಅವಲಂಬಿತವಾಗಿದೆ ಎಂದು ಹಂಗಾಮಿ ಕೋಚ್‌ ವಿವಿಎಸ್‌ ಲಕ್ಷ್ಮಣ್‌ ಹೇಳಿದ್ದಾರೆ. ಈ ಸರಣಿಯಲ್ಲಿ ಭಾರತ ತಂಡದ ಆಡಳಿತ ಆಯ್ಕೆ ಮಾಡುವ ಆಟಗಾರರು ಹಾಗೂ ಆ ಆಟಗಾರರ ಆಟದ ಶೈಲಿ ಮೇಲೆ ಎಲ್ಲರ ಕಣ್ಣಿದೆ. ಭಾರತ ತಂಡ ಈ ಸರಣಿಯಲ್ಲಿ ಹೊಸ ಆರಂಭಿಕ ಜೋಡಿಯೊಂದಿಗೆ ಕಣಕ್ಕಿಳಿಯಲಿದೆ. ಆರಂಭಿಕರಾಗಿ ಇಶಾನ್‌ ಕಿಶನ್‌, ಶುಭ್‌ಮನ್‌ ಗಿಲ್‌ ಆಡುವ ಸಾಧ್ಯತೆ ಇದೆಯಾದರೂ, ರಿಷಭ್‌ ಪಂತ್‌ರನ್ನು ಇನ್ನಿಂಗ್‌್ಸ ಆರಂಭಿಸುವಂತೆ ಕೇಳಬಹುದು ಎನ್ನುವ ಚರ್ಚೆಯೂ ನಡೆಯುತ್ತಿದೆ. 3ನೇ ಕ್ರಮಾಂಕಕ್ಕೆ ಸಂಜು ಸ್ಯಾಮ್ಸನ್‌, ಶ್ರೇಯಸ್‌ ಅಯ್ಯರ್‌ ಹಾಗೂ ದೀಪಕ್‌ ಹೂಡಾ ನಡುವೆ ಸ್ಪರ್ಧೆ ಏರ್ಪಡಬಹುದು. ವಿಶ್ವಕಪ್‌ ಪಂದ್ಯಗಳನ್ನು ಡಗೌಟ್‌ನಲ್ಲಿ ಕೂತು ವೀಕ್ಷಿಸಿದ ಯಜುವೇಂದ್ರ ಚಹಲ್‌ಗೆ ಅವಕಾಶ ಸಿಗುವುದು ಬಹುತೇಕ ಖಚಿತ. ಹಾರ್ದಿಕ್ ಪಾಂಡ್ಯ ನಾಯಕತ್ವ ಕೊಂಡಾಡಿದ ವಿವಿಎಸ್‌ ಲಕ್ಷ್ಮಣ್ ಇನ್ನು ವೇಗಿ ಉಮ್ರಾನ್‌ ಮಲಿಕ್‌ರನ್ನು ಈ ಸರಣಿಯಲ್ಲಿ ಆಡಿಸಿದರೆ ನ್ಯೂಜಿಲೆಂಡ್‌ನ ಸಣ್ಣ ಮೈದಾನಗಳಲ್ಲಿ ಎದುರಾಳಿಯನ್ನು ಹೇಗೆ ನಿಯಂತ್ರಿಸುತ್ತಾರೆ ಎನ್ನುವ ಪ್ರಶ್ನೆ ಎದ್ದಿದೆ. ಭುವನೇಶ್ವರ್‌, ಅಶ್‌ರ್‍ದೀಪ್‌, ಸಿರಾಜ್‌ ಹಾಗೂ ಹರ್ಷಲ್‌ ಪಟೇಲ್‌ ಪೈಕಿ ಯಾರನ್ನು ಆಯ್ಕೆ ಮಾಡಬೇಕು ಎನ್ನುವ ಗೊಂದಲವೂ ತಂಡದ ಆಡಳಿತದ ಮುಂದಿರಬಹುದು. ಇನ್ನು ನ್ಯೂಜಿಲೆಂಡ್‌ ತವರಿನಲ್ಲಿ ನಡೆಯುವ ಸರಣಿ ಗೆದ್ದು ವಿಶ್ವಕಪ್‌ ಸೋಲಿನ ಕಹಿ ಮರೆಯುವ ವಿಶ್ವಾಸದಲ್ಲಿದೆ. ಅಲ್ಲದೇ ಕಳೆದ ಬಾರಿ ಭಾರತ ಪ್ರವಾಸ ಕೈಗೊಂಡಿದ್ದಾಗ 0-5ರಲ್ಲಿ ಟಿ20 ಸರಣಿಯನ್ನು ಸೋತಿತ್ತು. ಆ ಸೋಲಿಗೆ ಸೇಡು ತೀರಿಸಿಕೊಳ್ಳುವ ಒತ್ತಡವೂ ವಿಲಿಯಮ್ಸನ್‌ ಪಡೆ ಮೇಲಿದೆ. ಸಂಭವನೀಯ ಆಟಗಾರರ ಪಟ್ಟಿ ಭಾರತ: ಇಶಾನ್ ಕಿಶನ್‌, ಶುಭ್‌ಮನ್ ಗಿಲ್‌, ಶ್ರೇಯಸ್‌ ಅಯ್ಯರ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್‌, ಹಾರ್ದಿಕ್‌ ಪಾಂಡ್ಯ(ನಾಯಕ), ಹರ್ಷಲ್‌ ಪಟೇಲ್, ಭುವನೇಶ್ವರ್‌ ಕುಮಾರ್, ಅಶ್‌ರ್‍ದೀಪ್‌ ಸಿಂಗ್, ಯುಜುವೇಂದ್ರ ಚಹಲ್‌. ನ್ಯೂಜಿಲೆಂಡ್‌: ಫಿನ್‌ ಆ್ಯಲೆನ್‌, ಡೆವೊನ್ ಕಾನ್‌ವೇ, ಕೇನ್ ವಿಲಿಯಮ್ಸನ್‌(ನಾಯಕ), ಗ್ಲೆನ್ ಫಿಲಿಫ್ಸ್‌, ಡೇರಲ್ ಮಿಚೆಲ್‌, ಜೇಮ್ಸ್ ನೀಶಮ್‌, ಮಿಚೆಲ್ ಸ್ಯಾಂಟ್ನರ್‌, ಟಿಮ್‌ ಸೌಥಿ, ಇಶ್‌ ಸೋಧಿ, ಆ್ಯಡಂ ಮಿಲ್ನೆ, ಲಾಕಿ ಫಗ್ರ್ಯೂಸನ್‌. ಪಂದ್ಯ: ಮಧ್ಯಾಹ್ನ 12ಕ್ಕೆ,ನೇರ ಪ್ರಸಾರ: ಡಿಡಿ ಸ್ಪೋರ್ಟ್ಸ್ ಪಿಚ್‌ ರಿಪೋರ್ಚ್‌ ನ್ಯೂಜಿಲೆಂಡ್‌ನ ಬಹುತೇಕ ಕ್ರೀಡಾಂಗಣಗಳು ಟಿ20ಯಲ್ಲಿ ದೊಡ್ಡ ಮೊತ್ತಕ್ಕೆ ಸಾಕ್ಷಿಯಾಗುತ್ತವೆಯಾದರೂ, ವೆಲ್ಲಿಂಗ್ಟನ್‌ನಲ್ಲಿ ಅಂತಹ ಟ್ರೆಂಡ್‌ ಇಲ್ಲ. ಇಲ್ಲಿ ಮೊದಲ ಇನ್ನಿಂಗ್‌್ಸನ ಸರಾಸರಿ ಮೊತ್ತ 162 ರನ್‌. ಕಳೆದ 20 ತಿಂಗಳಲ್ಲಿ ಇಲ್ಲಿ ಅಂ.ರಾ.ಟಿ20 ಪಂದ್ಯ ನಡೆದಿಲ್ಲ.