' 2022: ಭಾರತಕ್ಕಿಂದು ಥಾಯ್ಲೆಂಡ್‌ ಸವಾಲು ಮಹಿಳಾ ಏಷ್ಯಾಕಪ್ ಟೂರ್ನಿಯಲ್ಲಿಂದು ಭಾರತಕ್ಕೆ ಥಾಯ್ಲೆಂಡ್ಈಗಾಗಲೇ ಬಹುತೇಕ ಸೆಮೀಸ್‌ ಹಾದಿ ಸುಗಮಗೊಳಿಸಿಕೊಂಡಿರುವ ಭಾರತರೌಂಡ್ ರಾಬಿನ್ ಹಂತದ ಕೊನೆಯ ಪಂದ್ಯದಲ್ಲಿ ಥಾಯ್ಲೆಂಡ್ ಮಣಿಸುವ ವಿಶ್ವಾಸದಲ್ಲಿ ಹರ್ಮನ್‌ ಪಡೆ ಸೈಲೆಟ್‌(ಅ.10): ಸೆಮಿಫೈನಲ್‌ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿರುವ ಭಾರತ, ಏಷ್ಯಾಕಪ್‌ ಮಹಿಳಾ ಟಿ20 ಟೂರ್ನಿಯ ರೌಂಡ್‌ ರಾಬಿನ್‌ ಹಂತದ ಅಂತಿಮ ಪಂದ್ಯದಲ್ಲಿ ಸೋಮವಾರ ಥಾಯ್ಲೆಂಡ್‌ ವಿರುದ್ಧ ಆಡಲಿದೆ. ಭಾರತ ಈವರೆಗೂ ಆಡಿರುವ ಎಲ್ಲಾ ಪಂದ್ಯಗಳಲ್ಲೂ ತಂಡದಲ್ಲಿ ಬದಲಾವಣೆಗಳನ್ನು ಮಾಡಿದೆ. ಈ ಪಂದ್ಯದಲ್ಲೂ ಕೆಲ ಪ್ರಯೋಗಗಳಿಗೆ ತಂಡ ಮುಂದಾಗಬಹುದು. 2018ರ ಏಷ್ಯಾಕಪ್‌ನಲ್ಲಿ ಥಾಯ್ಲೆಂಡ್‌ ವಿರುದ್ಧ ಭಾರತ ಸುಲಭ ಗೆಲುವು ದಾಖಲಿಸಿತ್ತು. ಪಂದ್ಯ ಆರಂಭ: ಮಧ್ಯಾಹ್ನ 1ಕ್ಕೆ ಟಿ20 ವಿಶ್ವಕಪ್‌: ಇಂದು ಭಾರತಕ್ಕೆ ಅಭ್ಯಾಸ ಪಂದ್ಯ ಪರ್ತ್‌: ಟಿ20 ವಿಶ್ವಕಪ್‌ಗೆ ಕೆಲವೇ ದಿನಗಳು ಬಾಕಿ ಇದ್ದು, ಈಗಾಗಲೇ ಆಸ್ಪ್ರೇಲಿಯಾಗೆ ತೆರಳಿರುವ ಭಾರತ ತಂಡ ಕಠಿಣ ಅಭ್ಯಾಸ ನಡೆಸುತ್ತಿದೆ. ಪರ್ತ್‌ನಲ್ಲಿ ಸೋಮವಾರ ಪಶ್ಚಿಮ ಆಸ್ಪ್ರೇಲಿಯಾ ತಂಡದ ವಿರುದ್ಧ ಮೊದಲ ಅಭ್ಯಾಸ ಪಂದ್ಯವನ್ನು ಆಡಲಿದೆ. ಅ.13ಕ್ಕೆ 2ನೇ ಪಂದ್ಯ ನಡೆಯಲಿದೆ. ಆ ಬಳಿಕ ತಂಡ ಬ್ರಿಸ್ಬೇನ್‌ಗೆ ತೆರಳಿ ಐಸಿಸಿ ಆಯೋಜಿಸಿರುವ 2 ಅಭ್ಯಾಸ ಪಂದ್ಯಗಳಲ್ಲಿ ಆಡಲಿದೆ. ಜಸ್‌ಪ್ರೀತ್‌ ಬುಮ್ರಾ, ರವೀಂದ್ರ ಜಡೇಜಾ ಗಾಯಗೊಂಡು ಹೊರಬಿದ್ದಿರುವ ಕಾರಣ ಅವರ ಬದಲು ಆಡುವ ಹನ್ನೊಂದಕ್ಕೆ ಸೂಕ್ತವೆನಿಸುವ ಆಟಗಾರರನ್ನು ಭಾರತ ಇನ್ನಷ್ಟೇ ಹೊಂದಿಸಿಕೊಳ್ಳಬೇಕಿದೆ. ಬೌಲಿಂಗ್‌ ಸಮಸ್ಯೆಗೆ ಪರಿಹಾರ ಹುಡುಕಿಕೊಳ್ಳುವುದು ಭಾರತದ ಪ್ರಮುಖ ಗುರಿ ಎನಿಸಿದೆ. ಟಿ20: ಆಸೀಸ್‌ ವಿರುದ್ಧ ಇಂಗ್ಲೆಂಡ್‌ಗೆ 8 ರನ್‌ ಜಯ ಪರ್ತ್‌: ಟಿ20 ವಿಶ್ವಕಪ್‌ಗೆ ಸಿದ್ಧತೆ ನಡೆಸುವ ಉದ್ದೇಶದಿಂದ ಇಂಗ್ಲೆಂಡ್‌ ಹಾಗೂ ಆಸ್ಪ್ರೇಲಿಯಾ 3 ಪಂದ್ಯಗಳ ಸರಣಿಯಲ್ಲಿ ಭಾಗಿಯಾಗಿದ್ದು, ಭಾನುವಾರ ಮೊದಲ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಇಂಗ್ಲೆಂಡ್‌ 8 ರನ್‌ ಗೆಲುವು ಸಾಧಿಸಿತು. ಅಯ್ಯರ್ ಸೆಂಚುರಿ, ಸೌತ್ ಆಫ್ರಿಕಾ ವಿರುದ್ಧ ಭಾರತಕ್ಕೆ ಗೆಲುವಿನ ನಗಾರಿ! ಮೊದಲು ಬ್ಯಾಟ್‌ ಮಾಡಿದ ಇಂಗ್ಲೆಂಡ್‌ ಅಲೆಕ್ಸ್‌ ಹೇಲ್ಸ್‌(84) ಹಾಗೂ ಜೋಸ್‌ ಬಟ್ಲರ್‌(68) ಮೊದಲ ವಿಕೆಟ್‌ಗೆ ನೀಡಿದ 132 ರನ್‌ ಜೊತೆಯಾಟದ ನೆರವಿನಿಂದ 20 ಓವರಲ್ಲಿ 6 ವಿಕೆಟ್‌ಗೆ 206 ರನ್‌ ಗಳಿಸಿತು. ಆಸ್ಪ್ರೇಲಿಯಾ 20 ಓವರಲ್ಲಿ 9 ವಿಕೆಟ್‌ಗೆ 200 ರನ್‌ ಗಳಿಸಿತು. ವಾರ್ನರ್‌ರ 73 ರನ್‌ ಹೋರಾಟ ವ್ಯರ್ಥವಾಯಿತು. ಟಿ20: ಬಾಂಗ್ಲಾ ವಿರುದ್ಧ ನ್ಯೂಜಿಲೆಂಡ್‌ಗೆ ಗೆಲುವು ಕ್ರೈಸ್ಟ್‌ಚರ್ಚ್‌ ತ್ರಿಕೋನ ಟಿ20 ಸರಣಿಯಲ್ಲಿ ಭಾನುವಾರ ಬಾಂಗ್ಲಾದೇಶ ವಿರುದ್ಧ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್‌ 8 ವಿಕೆಟ್‌ ಗೆಲುವು ಸಾಧಿಸಿದೆ. ಮೊದಲು ಬ್ಯಾಟ್‌ ಮಾಡಿದ ಬಾಂಗ್ಲಾ, 20 ಓವರಲ್ಲಿ 8 ವಿಕೆಟ್‌ಗೆ 137 ರನ್‌ ಗಳಿಸಿತು. ನಜ್ಮುಲ್‌ 33 ರನ್‌ ಗಳಿಸಿದರು. ಬ್ರೇಸ್‌ವೆಲ್‌ 14 ರನ್‌ಗೆ 2 ವಿಕೆಟ್‌ ಕಿತ್ತರು. ನ್ಯೂಜಿಲೆಂಡ್‌ 17.5 ಓವರಲ್ಲಿ 2 ವಿಕೆಟ್‌ಗೆ 142 ರನ್‌ ಗಳಿಸಿತು. ಡೆವೊನ್‌ ಕಾನ್‌ವೇ ಔಟಾಗದೆ 70, ವಿಲಿಯಮ್ಸನ್‌ 30 ರನ್‌ ಗಳಿಸಿದರು.