ಯಾರಿಗುಂಟು ಯಾರಿಗಿಲ್ಲ..! ಯುವರಾಜ್ ಸಿಂಗ್ ಮನೆಯಲ್ಲಿ ಉಳಿದುಕೊಳ್ಳಲು ನಿಮಗೂ ಇದೆ ಅವಕಾಶ..! ಗೋವಾದಲ್ಲಿನ ಯುವರಾಜ್ ಸಿಂಗ್ ಅವರ ಐಶಾರಾಮಿ ಮನೆಯಲ್ಲಿ ಉಳಿದುಕೊಳ್ಳುವ ಅವಕಾಶಎರಡು ದಿನ ತಂಗಲು ಅವಕಾಶ ನೀಡಿದ ಯುವಿಆರು ಜನರ ಗುಂಪಿಗೆ ಒಂದು ಬಾರಿ ಮಾತ್ರ ತಂಗಲು ವಿಶೇಷ ಅವಕಾಶ ಬೆಂಗಳೂರು(ಸೆ.21): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಅವರು ಆತಿಥ್ಯ ವಹಿಸುತ್ತಿದ್ದಾರೆ. ಗೋವಾದಲ್ಲಿರುವ ತಮ್ಮ ಮನೆಯಲ್ಲಿ ಆರು ಜನರ ಗುಂಪಿಗೆ ಒಂದು ಬಾರಿ ಮಾತ್ರ ತಂಗಲು ವಿಶೇಷ ಅವಕಾಶವನ್ನು ನೀಡುತ್ತಿದ್ದಾರೆ. ಗೋವಾದಲ್ಲಿನ ಬೆಟ್ಟದ ಮೇಲಿರುವ ಯುವರಾಜ್ ಸಿಂಗ್ ಅವರ ಮನೆಯಿಂದ ವಿಸ್ತಾರವಾದ ಸಮುದ್ರದ ರಮ್ಯ ನೋಟವನ್ನೂ ನೋಡಲು ಸಿಗುತ್ತದೆ. ಗೋವಾ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ. ಪ್ರಾಚೀನ ಕಡಲತೀರಗಳು, ಅದ್ಭುತ ಪಾಕಪದ್ಧತಿ ಮತ್ತು ಬೆಚ್ಚಗಿನ ಆತಿಥ್ಯಕ್ಕೆ ಗೋವಾ ಪ್ರಸಿದ್ಧವಾಗಿದೆ. ಈ ಕಾರಣಕ್ಕಾಗಿಯೇ ಪ್ರವಾಸಿಗರು ಜಗತ್ತಿನೆಲ್ಲೆಡೆಯಿಂದ ಗೋವಾಕ್ಕೆ ದಾಂಗುಡಿ ಇಡುತ್ತಾರೆ ಎಡಗೈ ಬ್ಯಾಟರ್ ಯುವರಾಜ್ ಸಿಂಗ್ ತಮ್ಮ ಅಮೋಘ ಆಟದೊಂದಿಗೆ ತಮ್ಮ ಸುದೀರ್ಘ ವೃತ್ತಿ ಜೀವನವನ್ನು ಸುವರ್ಣಾಕ್ಷರಗಳಿಂದ ಬರೆದಿದ್ದಾರೆ. ಅವರೀಗ ಆತಿಥ್ಯ ವಹಿಸುವ ಮೂಲಕ ಈ ಮೈಲಿಗಲ್ಲನ್ನು ಸ್ಥಾಪಿಸಿದ ಭಾರತದ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟಿಗ ಎನ್ನುವ ಹಿರಿಮೆಗೂ ಪಾತ್ರರಾಗಿದ್ದಾರೆ. ಮೂರು ಬೆಡ್‌ರೂಂಗಳುಳ್ಳ ಈ ಹಾಲಿಡೇ ಹೋಮ್ ಯುವರಾಜ್ ಸಿಂಗ್ ಅವರ ಪಾಲಿಗೆ ವಿಶೇಷ ನೆನಪುಗಳು ಮತ್ತು ಅವರ ಸುದೀರ್ಘ ಕ್ರಿಕೆಟ್ ಬದುಕಿನ ಅರ್ಥಪೂರ್ಣ ಸ್ಮರಣಿಕೆಗಳನ್ನು ಒಳಗೊಂಡಿದ್ದು, ಆರು ಅತಿಥಿಗಳು ಇದಕ್ಕೆ ಪ್ರವೇಶವನ್ನು ಪಡೆಯಲಿದ್ದಾರೆ. ಯುವರಾಜ್ ಸಿಂಗ್ ಅವರ ಜನ್ಮದಿನ ಹಾಗೂ ಜೆರ್ಸಿ ಸಂಖ್ಯೆಗೆ ಸರಿಹೊಂದುವಂತೆ ಅವರ ಮನೆಗೆ ಪ್ರವೇಶವು ಒಂದು ರಾತ್ರಿಗೆ ರೂ. 1212* ಕ್ಕೆ ಲಭ್ಯವಿರುತ್ತದೆ. ಅಕ್ಟೋಬರ್ 14ರಿಂದ 16, 2022ರ ವರೆಗೆ ಎರಡು ರಾತ್ರಿಗಳ ಕಾಲ ತಂಗಲು ಅವಕಾಶವಿರುತ್ತದೆ. ಬುಕ್ ಮಾಡಲು ಈ ಲಿಂಕ್ ಕ್ಲಿಕ್‌ ಮಾಡಬಹುದಾಗಿದೆ: ./ “ಗೋವಾದ ನನ್ನ ಮನೆ ನನಗೆ ಯಾವಾಗಲೂ ಅತ್ಯಂತ ಸ್ಪೆಷಲ್ ಆಗಿರುತ್ತದೆ. ಕೆಲಸದ ನಿಮಿತ್ತ ನಾನು ಪ್ರಪಂಚದ ಎಲ್ಲ ಕಡೆಗಳಲ್ಲಿ ಓಡಾಡುತ್ತಿರುತ್ತೇನೆ. ನನ್ನ ಪತ್ನಿ, ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಕಾಲ ಕಳೆಯಲು ಆಗಾಗ ಈ ವಿಲ್ಲಾದಲ್ಲಿ ಒಟ್ಟಿಗೆ ಸೇರುತ್ತೇವೆ. ನಾನು ಆತಿಥ್ಯ ವಹಿಸಲು ಎದುರು ನೋಡುತ್ತಿದ್ದೇನೆ. ಅದೃಷ್ಟಶಾಲಿ ಆರು ಜನರ ಗುಂಪಿಗೆ ನನ್ನ ಮನೆಯ ಬಾಗಿಲು ತೆರೆಯಲು ಉತ್ಸುಕನಾಗಿದ್ದೇನೆ" ಎಂದು ಯುವರಾಜ್ ಸಿಂಗ್ ಹೇಳಿಕೊಂಡಿದ್ದಾರೆ. ಮನೆಯ ಬಗ್ಗೆ: ಸಮುದ್ರದ ಆಚೆಗೆ, ಬೆಟ್ಟದ ಮೇಲಿರುವ ಈ ಮನೆ 180-ಡಿಗ್ರಿ ವಿಹಂಗಮ ನೋಟಗಳನ್ನು ಹೊಂದಿದೆ. ತನ್ನ ವಾಂಟೇಜ್ ಪಾಯಿಂಟ್‌ನಿಂದ, 'ಕಾಸಾ ಸಿಂಗ್' ಸೂರ್ಯನ ಕಿರಣಗಳು ನವಿರಾಗಿ ಸ್ಪರ್ಶಿಸುವ ಗೋವಾದ ಹಳ್ಳಿಗಳ ಮನಮೋಹಕ ದೃಶ್ಯಗಳನ್ನು ಆನಂದಿಸಲು ಪ್ರಶಾಂತವಾದ ತಾಣವಾಗಿದೆ. ವಿಸ್ತಾರವಾದ ಡೆಕ್‌ಗಳು ಮತ್ತು ಟೆರೇಸ್‌ಗಳು ಬೋಗನ್ ವಿಲ್ಲಾ ಮತ್ತು ಇತರ ಹೂವುಗಳಿಂದ, ವರ್ಣರಂಜಿತ ಸಸ್ಯಗಳು ಮತ್ತು ಹಸಿರಿನಿಂದ ಸಮೃದ್ಧವಾಗಿದೆ. ಒಂದು ಐಷಾರಾಮಿ ಈಜುಗೊಳವು ಸ್ವಿಮ್ ಅಪ್ ಬಾರ್ ಮತ್ತು ಮಧ್ಯಾಹ್ನದ ಊಟವನ್ನು ಸವಿಯಲು ಹಾಗೂ ಓದುತ್ತ ಕುಳಿತುಕೊಳ್ಳಲು ಹಲವಾರು ಸ್ಥಳಗಳನ್ನು ಹೊಂದಿದೆ. ಗೋವಾದ ಸ್ಥಳೀಯ ಭಕ್ಷ್ಯಗಳನ್ನು ವಿಲ್ಲಾದ ವೈಯಕ್ತಿಕ ಬಾಣಸಿಗರು ಉಣಬಡಿಸುತ್ತಾರೆ. ಮನೆಯು ಯುವರಾಜ್ ಸಿಂಗ್ ಅವರ ಕುಟುಂಬದ ಫೋಟೋಗಳಿಂದ ಹಾಗೂ ಏಕದಿನ ಕ್ರಿಕೆಟ್ ಪಂದ್ಯವೊಂದರಲ್ಲಿ ಮೊದಲ ಸಲ 150 ಬಾರಿಸಿದ್ದಕ್ಕೆ ಪಡೆದಿರುವ ಪುರಸ್ಕಾರವೂ ಸೇರಿದಂತೆ ಹಲವು ಪ್ರಶಸ್ತಿಗಳಿಂದ ತುಂಬಿವೆ. “ಒಂದು ಬಾರಿ-ಮಾತ್ರ ವಾಸ್ತವ್ಯಕ್ಕಾಗಿ ಯಲ್ಲಿ ಗೋವಾದಲ್ಲಿರುವ ತಮ್ಮ ಸುಂದರವಾದ ಮನೆಯನ್ನು ಲಿಸ್ಟ್ ಮಾಡಲು ಕ್ರಿಕೆಟ್ ದಂತಕಥೆ ಯುವರಾಜ್ ಸಿಂಗ್ ಅವರೊಂದಿಗೆ ಪಾಲುದಾರರಾಗಲು ನಾವು ರೋಮಾಂಚನಗೊಂಡಿದ್ದೇವೆ. ಅಂತಾರಾಷ್ಟ್ರೀಯ ಪ್ರಯಾಣವು ಮತ್ತೊಮ್ಮೆ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿದ್ದು, ಜಾಗತಿಕ ಪ್ರೇಕ್ಷಕರಿಗೆ ಈ ಅವಿಸ್ಮರಣೀಯ ಅನುಭವವನ್ನು ನೀಡಲು ಮತ್ತು ಭಾರತದಲ್ಲಿನ ನಮ್ಮ ರೋಮಾಂಚಕ ಆತಿಥೇಯ ಸಮುದಾಯಕ್ಕೆ ಸಿಂಗ್ ಅವರನ್ನು ಸೇರಿಸಲು ನಾವು ಸಂತೋಷಪಡುತ್ತೇವೆ ಎಂದು ಯ ಭಾರತ, ಆಗ್ನೇಯ ಏಷ್ಯಾ, ಹಾಂಗ್ ಕಾಂಗ್ ಮತ್ತು ತೈವಾನ್‌ ವಿಭಾಗದ ಪ್ರಥಾನ ವ್ಯವಸ್ಥಾಪಕ ಅಮನ್‌ಪ್ರೀತ್ ಬಜಾಜ್ ಹೇಳಿದರು. ವಾಸ್ತವ್ಯದ ಬಗ್ಗೆ: ಅತಿಥಿಗಳು 'ಕಾಸಾ ಸಿಂಗ್‌'ಗೆ ವಿಶೇಷ ಪ್ರವೇಶವನ್ನು ಹೊಂದಿರುತ್ತಾರೆ, ಸಮುದ್ರದ ಪಕ್ಕದಲ್ಲಿರುವ ಜೀವನದ ಶಾಂತವಾದ ಲಯಗಳಲ್ಲಿ ತನ್ಮಯರಾಗುತ್ತಾರೆ. ವಾಸ್ತವ್ಯದ ಅಂಶಗಳು ಹೀಗಿವೆ: ● ಆಗಮಿಸಿದ ಬಳಿಕ ಯುವರಾಜ್ ಸಿಂಗ್ ಅವರಿಂದ ವರ್ಚುವಲ್ ಭೇಟಿ ಮತ್ತು ಶುಭಾಶಯ ● ಗೋವಾದಲ್ಲಿ ಯುವರಾಜ್ ಸಿಂಗ್ ಅವರ ನೆಚ್ಚಿನ ಪ್ರವಾಸಿ ತಾಣಗಳನ್ನು ಹಂಚಿಕೊಳ್ಳುವ ವೈಯಕ್ತೀಕರಿಸಿದ ಸ್ವಾಗತ ಭಾಷಣ ● ಮ್ಯಾಂಗ್ರೋವ್ ಕ್ಷೇತ್ರಗಳು, ಚರ್ಚ್‌ಗಳು, ದೇವಾಲಯಗಳು ಮತ್ತು ಸುಂದರವಾದ ಮನೆಗಳಿಗೆ ಹಾಗೂ ದಿವಾರ್ ದ್ವೀಪಕ್ಕೆ ಇ-ಬೈಕ್‌ನಲ್ಲಿ ವಿಹಾರ ● ಹೊರಾಂಗಣ ಡೆಕ್‌ನಲ್ಲಿರುವ ಸನ್‌ಡೌನರ್‌ಗಳು ಯುವರಾಜ್ ಅವರ ನೆಚ್ಚಿನ ಸ್ಥಳೀಯ ಭಕ್ಷ್ಯಗಳಿರುವ ಬೆಸ್ಪೋಕ್ ಭೋಜನವನ್ನು ಒಳಗೊಂಡಿವೆ ● ಯುವರಾಜ್ ಅವರ ಅಮೋಘ ಇನ್ನಿಂಗ್ಸ್‌ ಒಂದರ ಪ್ರದರ್ಶನ - ಕ್ರಿಕೆಟಿಗನ ಮನೆಯಲ್ಲಿ ಆ ಕ್ಷಣಗಳನ್ನು ಮೆಲುಕು ಹಾಕುವಂತೆ ಮಾಡಲಿದೆ ● ತಂಗುವ ಅವಧಿಯು ಯುವರಾಜ್ ಅವರ ಮೆಚ್ಚಿನ ಭಕ್ಷ್ಯಗಳಿರುವ ಮೆನುವನ್ನು ಒಳಗೊಂಡಿರುತ್ತದೆ ● ಯುವರಾಜ್‌ ಅವರ ವೈಯಕ್ತಿಕ ಸ್ಮರಣಿಗೆಗಳೂ ಇವೆ ಬುಕ್ ಮಾಡುವುದು ಹೇಗೆ?: ಬುಕಿಂಗ್‌ಗಳನ್ನು ಸೆಪ್ಟೆಂಬರ್ 28ರಂದು ಭಾರತೀಯ ಕಾಲಮಾನದಲ್ಲಿ ಮಧ್ಯಾಹ್ನ 1 ಗಂಟೆಗೆ ./ ನಲ್ಲಿ ತೆರೆಯಲಾಗುತ್ತದೆ. ಅತಿಥಿಗಳು ಗೋವಾಕ್ಕೆ ಮತ್ತು ಮರುಪ್ರಯಾಣಕ್ಕೆ ತಾವೇ ವ್ಯವಸ್ಥೆ ಮಾಡಿಕೊಳ್ಳಬೇಕು. * ತೆರಿಗೆಗಳು ಮತ್ತು ಶುಲ್ಕಗಳು ಅನ್ವಯ. ಈ ಎರಡು ರಾತ್ರಿಯ ವಾಸ್ತವ್ಯವು ಸ್ಪರ್ಧೆಯಲ್ಲ. ಭಾರತದಲ್ಲಿ -19 ಸೋಂಕಿನ ದರಗಳು ಮತ್ತು ಸರ್ಕಾರದ ನೀತಿಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ ಮತ್ತು ವಾಸ್ತವ್ಯವನ್ನು ರದ್ದುಗೊಳಿಸಲು ಅಗತ್ಯವಿದ್ದರೆ ಬುಕಿಂಗ್ ಮಾಡಿರುವ ಅತಿಥಿಗಳಿಗೆ 1,000 ವನ್ನು ಜಮಾ ಮಾಡುತ್ತದೆ. ಅತಿಥಿಗಳು ಗೋವಾಕ್ಕೆ ಹೋಗಿ ಬರುವ ಪ್ರಯಾಣಕ್ಕೆ ತಾವೇ ವ್ಯವಸ್ಥೆ ಮಾಡಿಕೊಳ್ಳಬೇಕು ಮತ್ತು ನಲ್ಲಿ ನೋಂದಾಯಿತ ಖಾತೆಯನ್ನು ಹೊಂದಿರಬೇಕು. ಅನ್ವಯಿಸುವ ಇತರ ನಿಯಮಗಳು ಮತ್ತು ಷರತ್ತುಗಳಿಗಾಗಿ, ದಯವಿಟ್ಟು ./ ನೋಡಿ.