: ಸೋಷಿಯಲ್‌ ಮೀಡಿಯಾದ ಕಿಂಗ್‌, ಟ್ವಿಟರ್‌ನಲ್ಲಿ 50 ಮಿಲಿಯನ್‌ ಫಾಲೋವರ್ಸ್ ಸಂಪಾದಿಸಿದ ಮೊದಲ ಕ್ರಿಕೆಟಿಗ! ಮೈದಾನದಲ್ಲಿ ದಾಖಲೆಗಳನ್ನು ಮುರಿಯುವುದರ ಜೊತೆಗೆ, ಸೋಷಿಯಲ್‌ ಮೀಡಿಯಾದಲ್ಲೂ ವಿರಾಟ್ ಕೊಹ್ಲಿ ತಮ್ಮ ಪಾರುಪತ್ಯ ಮುಂದುವರಿಸಿದ್ದಾರೆ. ಇತ್ತೀಚೆಗೆ 50 ಮಿಲಿಯನ್ ಟ್ವಿಟರ್ ಫಾಲೋವರ್ಸ್‌ಅನ್ನು ಹೊಂದಿರುವ ಮೊದಲ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಬೆಂಗಳೂರು (ಸೆ. 13):ಟೀಮ್‌ ಇಂಡಿಯಾದ ಬ್ಯಾಟ್ಸ್‌ಮನ್‌ ಕಿಂಗ್‌ ಕೊಹ್ಲಿ ಪಾಲಿಗೆ ಕಳೆದ ಮೂರು ವರ್ಷಗಳು ಅಷ್ಟಾಗಿ ಉತ್ತಮವಾಗಿರಲಿಲ್ಲ. ನಾಯಕತ್ವ ಕುರಿತಾದ ವಿಚಾರಗಳೊಂದಿಗೆ ಸುದ್ದಿಯಲ್ಲಿದ್ದ ಕಿಂಗ್‌ ಕೊಹ್ಲಿ ಕ್ರಿಕೆಟ್‌ ಮೈದಾನದಲ್ಲಿ ನಿರೀಕ್ಷಿತ ಮಟ್ಟದ ನಿರ್ವಹಣೆ ತೋರಿರಲಿಲ್ಲ. ಕಳಪೆ ಫಾರ್ಮ್‌ನಿಂದಾಗಿ ಕಷ್ಟಗಳನ್ನು ಎದುರಿಸಿದ್ದ ಕೊಹ್ಲಿ, ಅಂದಾಜು 1020 ದಿನಗಳ ಬಳಿಕ ಏಷ್ಯಾಕಪ್‌ ಟೂರ್ನಿಯಲ್ಲಿ ತಮ್ಮ 71ನೇ ಅಂತಾರಾಷ್ಟ್ರೀಯ ಶತಕ ಬಾರಿಸಿದ್ದಾರೆ. ಕ್ರಿಕೆಟ್‌ ವಿಚಾರವಾಗಿ ಏನೆ ಇದ್ದರೂ, ಸೋಷಿಯಲ್‌ ಮೀಡಿಯಾದಲ್ಲಿ ಮಾತ್ರ ಕೊಹ್ಲಿ ಸೂಪರ್‌ಸ್ಟಾರ್‌ ಆಗಿ ಮುಂದುವರಿದಿದ್ದಾರೆ. ಟ್ವಿಟರ್‌ನಲ್ಲಿ 50 ಮಿಲಿಯನ್‌ ಫಾಲೋವರ್ಸ್‌ಗಳನ್ನು ಗಳಿಸಿದ ವಿಶ್ವದ ಮೊಟ್ಟಮೊದಲ ಕ್ರಿಕೆಟಿಗ ಎನ್ನುವ ದಾಖಲೆ ಅವರದಾಗಿದೆ. 33 ವರ್ಷದ ಕ್ರಿಕೆಟ್‌ ಆಟಗಾರ, ಕ್ರಿಕೆಟ್‌ ಜಗತ್ತಿನಲ್ಲಿ ಗರಿಷ್ಠ ಮಂದಿ ಫಾಲೋವರ್ಸ್‌ಗಳನ್ನು ಹೊಂದಿರುವ ಅಟಗಾರ ಎನಿಸಿದ್ದಾರೆ. ಇನ್ನು ಇನ್ಸ್‌ಟಾಗ್ರಾಮ್‌ನಲ್ಲಿ 3ನೇ ಪ್ರಖ್ಯಾತ ಅಥ್ಲೀಟ್‌ ಎನಿಸಿದ್ದಾರೆ. ಇನ್ಸ್‌ಟಾಗ್ರಾಮ್‌ನಲ್ಲಿ 211 ಮಿಲಿಯನ್‌ ಫಾಲೋವರ್ಸ್‌ಗಳನ್ನು ಕೊಹ್ಲಿ ಹೊಂದಿದ್ದರೆ, ಕ್ರಿಶ್ವಿಯಾನೋ ರೊನಾಲ್ಡೋ 476 ಮಿಲಿಯನ್‌ ಹಾಗೂ ಲಿಯೋನೆಲ್‌ ಮೆಸ್ಸಿ 356 ಮಿಲಿಯನ್‌ ಫಾಲೋವರ್‌ಗಳನ್ನು ಹೊಂದುವ ಮೂಲಕ ಮೊದಲ ಎರಡು ಸ್ಥಾನದಲ್ಲಿದ್ದಾರೆ. ಇದರೊಂದಿಗೆ ಕೊಹ್ಲಿ ಫೇಸ್‌ಬುಕ್‌ನಲ್ಲಿ 49 ಮಿಲಿಯನ್‌ಗೂ ಅಧಿಕ ಫಾಲೋವರ್‌ಗಳನ್ನು ಹೊಂದಿದ್ದಾರೆ. ಅದರೊಂದಿಗೆ ಸೋಷಿಯಲ್‌ ಮೀಡಿಯಾದಲ್ಲಿ ಅವರನ್ನು ಅನುಸರಿಸುವ ಒಟ್ಟು ಜನರ ಸಂಖ್ಯೆಯನ್ನು 310 ಮಿಲಿಯನ್‌ಗಿಂತಲೂ ಹೆಚ್ಚಾಗಿದೆ. ಇತ್ತೀಚೆಗೆ ಮುಗಿದ ಏಷ್ಯಾಕಪ್‌ನಲ್ಲಿ ಎರಡು ಅರ್ಧಶತಕ ಹಾಗೂ ಒಂದು ಶತಕ ಸಿಡಿಸುವ ಮೂಲಕ ವಿರಾಟ್‌ ಕೊಹ್ಲಿ ಭರ್ಜರಿಯಾಗಿ ಫಾರ್ಮ್‌ಗೆ ಮರಳಿದ್ದಾರೆ. ಅದರೊಂದಿಗೆ ಟೂರ್ನಿಯಲ್ಲಿ ಭಾರತದ ಗರಿಷ್ಠ ರನ್‌ ಸ್ಕೋರರ್‌ ಎನಿಸಿಕೊಂಡರೆ, ಟೂರ್ನಿಯಲ್ಲಿ 2ನೇ ಗರಿಷ್ಠ ಸ್ಕೋರರ್‌ ಆಗಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸುವ ಮೂಲಕ ವಿರಾಟ್‌ ಕೊಹ್ಲಿ ಟಿ20ಯಲ್ಲಿ ತಮ್ಮ ಮೊದಲ ಶತಕ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 71ನೇ ಶತಕದ ದಾಖಲೆ ಮಾಡಿದರು. 2019ರ ನವೆಂಬರ್‌ನಲ್ಲಿ ವಿರಾಟ್‌ ಕೊಹ್ಲಿ ಕೊನೆಯ ಬಾರಿಗೆ ಶತಕ ಬಾರಿಸಿದ್ದರು. ಅಂದು ವಿರಾಟ್‌ ಕೊಹ್ಲಿ ಬಾಂಗ್ಲಾದೇಶದ ವಿರುದ್ಧ ಪಿಂಕ್‌ ಬಾಲ್‌ ಟೆಸ್ಟ್‌ನಲ್ಲಿ ಶತಕ ಸಿಡಿಸಿದ್ದರು. ಏಷ್ಯಾಕಪ್‌ಗೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಕೊಹ್ಲಿ, ಏಷ್ಯಾಕಪ್‌ಗೂ ಮುನ್ನ ಒಂದು ತಿಂಗಳ ಕಾಲ ತಾವು ಬ್ಯಾಟ್‌ ಮುಟ್ಟಿರಲಿಲ್ಲ ಎಂದಿದ್ದರು. 'ಭಾರತೀಯರು ಖುಷಿ ಆಗಿರಬಹುದು' ಪಾಕ್‌ ಸೋಲಿನ ಬಳಿಕ ಪಿಸಿಬಿ ಚೇರ್ಮನ್‌ ರಮೀಜ್‌ ರಾಜಾ ಕಿಡಿ! ಟಿ20 ವಿಶ್ವಕಪ್‌ಗೂ ಮುನ್ನ ಮೊದಲ ಟಿ20 ಶತಕ ಬಾರಿಸಿ ಫಾರ್ಮ್‌ಗೆ ಮರಳಿರುವುದಕ್ಕೆ ತಮಗೆ ಸಂತಸವಾಗಿದೆ. ಆಸ್ಟ್ರೇಲಿಯಾದ () ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಅನ್ನು (T20 ) ತಾವು ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ. ವಿರಾಟ್‌ ಕೊಹ್ಲಿ ಸೆ. 20ರಿಂದ ಮತ್ತೆ ಮೈದಾನಕ್ಕೆ ಇಳಿಯಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಸೆ. 20 ರಂದು ನಡೆಯಲಿದೆ.ಪಿಚ್‌ನಲ್ಲಿ ಕೊಹ್ಲಿ ತಮ್ಮ ಅಸಾಧಾರಣ ಆಕ್ರಮಣಶೀಲತೆ ಮತ್ತು ಶಕ್ತಿಗೆ ಹೆಸರುವಾಸಿಯಾಗಿದ್ದಾರೆ. ಅವರ ನಾಯಕತ್ವದಲ್ಲಿ ಭಾರತ ಸತತವಾಗಿ ಅತ್ಯಂತ ಆಕ್ರಮಣಕಾರಿ ತಂಡಗಳಲ್ಲಿ ಒಂದಾಗಿ ಹೊರಹೊಮ್ಮಿದೆ. 2022: ನನ್ನ ಜೊತೆ ರೋಹಿತ್‌ ಇಷ್ಟು ಶುದ್ಧ ಹಿಂದಿ ಮಾತಾಡ್ತಿರೋದು ಇದೇ ಮೊದಲು: ವಿರಾಟ್‌ ಕೊಹ್ಲಿ! ಅಫ್ಘಾನಿಸ್ತಾನ ( ) ವಿರುದ್ಧದ ಶತಕದ ನಂತರ, ಕೊಹ್ಲಿಯನ್ನು ಭಾರತೀಯ ನಾಯಕ ( ) ರೋಹಿತ್ ಶರ್ಮಾ ( ) ಸಂದರ್ಶನ ಮಾಡಿದ್ದರು. ಕೊಹ್ಲಿ ಶತಕದ ( ) ಬರವನ್ನು ಕೊನೆಗೊಳಿಸಿದ್ದಕ್ಕಾಗಿ ಕೊಹ್ಲಿಯನ್ನು ಅಭಿನಂದಿಸಿದರು ಮತ್ತು ತಂಡದ ದೃಷ್ಟಿಕೋನದಿಂದ ಅವರ ಫಾರ್ಮ್ ಹೇಗೆ ನಿರ್ಣಾಯಕವಾಗಿದೆ ಮತ್ತು ಡ್ರೆಸ್ಸಿಂಗ್ ರೂಮ್‌ನಲ್ಲಿ ಅವರ ಉಪಸ್ಥಿತಿಯು ಆಟಗಾರರಿಗೆ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಮಾತನಾಡಿದರು. ತನಗೆ ಬೇಕಾದ ರೀತಿಯಲ್ಲಿ ಆಡಲು ಅವಕಾಶ ನೀಡಿದ ರೋಹಿತ್ ಮತ್ತು ತಂಡದ ಮ್ಯಾನೇಜ್‌ಮೆಂಟ್‌ಗೆ ಕೊಹ್ಲಿ ಧನ್ಯವಾದ ಹೇಳಿದ್ದಾರೆ.