ಪಾಕಿಸ್ತಾನ ವಿರುದ್ಧ ಭಾರತಕ್ಕೆ ಸೋಲು: ಪಾಕ್‌ ಪರ ಜಯಘೋಷ, ಕೇಸ್ ಬುಕ್ ಪಾಕ್ ವಿರುದ್ದದ ಪಂದ್ಯದಲ್ಲಿ ಭಾರತ ಸೋಲು ಹಿನ್ನೆಲೆಯಲ್ಲಿ ಪಾಕಿಸ್ತಾನ ಪರ ಘೋಷಣೆ ಹಾಕಿ ಸಂದೇಶ ರವಾನಿಸಿದ್ದ ಮೂವರ ವಿರುದ್ದ ದಾಖಲಾಗಿದೆ. ಕೋಲಾರ , (ಸೆಪ್ಟೆಂಬರ್.08):ಮೊನ್ನೇ ಏಷ್ಯಾಕಪ್ ನಲ್ಲಿ ಭಾರತ ತಂಡದ ವಿರುದ್ದ ಪಾಕಿಸ್ತಾನ ಜಯ ಹಿನ್ನಲೆಯಲ್ಲಿ ಪಾಕ್‌ ಪರ ಜಯಘೋಷ ಮೊಳಗಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ಘಟನೆ ನಡೆದಿದೆ. ಪಾಕ್ ವಿರುದ್ದದ ಪಂದ್ಯದಲ್ಲಿ ಭಾರತ ಸೋಲು ಹಿನ್ನೆಲೆಯಲ್ಲಿ ಪಾಕಿಸ್ತಾನ ಪರ ಘೋಷಣೆ ಹಾಕಿ ಸಂದೇಶ ರವಾನಿಸಿದ್ದ ಮೂವರ ವಿರುದ್ದ ದಾಖಲಾಗಿದೆ. ಮೂವರಲ್ಲಿ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಇನ್ನಿಬ್ಬರ ಬಂಧನಕ್ಕೆ ಬಲೆ ಬೀಸಿದ್ದಾರೆ. 2022 ರಿಜ್ವಾನ್‌ ಅರ್ಧಶತಕದ ಆಟ, ಪಾಕಿಸ್ತಾನಕ್ಕೆ ಗೆಲುವು ಸಹೇಲ್ ಪಾಷಾ,ತೋಹಿದ್ ಪಾಷ,ಮುನ್ಸೂರ್ ಉಲ್ಲಾ ವಿರುದ್ದ ದಾಖಲಾಗಿದೆ. ಪಾಕಿಸ್ತಾನ ಧ್ಗವಜದೊಂದಿಗೆ ಭಾರತ ತಂಡಕ್ಕೆ ಅಣುಕಿಸುವ ಹಾಗೆ ವಾಟ್ಸಾಪ್ ಸ್ಟೇಟಸ್ ಹಾಕಿದ್ದ ಕಿಡಿಗೇಡಿಗಳು. . . , ಎಂದು ಪಾಕಿಸ್ಥಾನದ ಧ್ವಜ ಹಾಕಿದ್ದರು. ಸಧ್ಯ ಮೂವರ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಮುಖಂಡ ರಾಮಾಂಜಿ ದೂರು ನೀಡಿದ್ದರೆ. ಈ ದೂರಿನ ಅನ್ವಯ ಶ್ರೀನಿವಾಸಪುರ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನಿಬ್ಬರು ಎಸ್ಕೇಪ್ ಆಗಿದ್ದು, ಅವರ ಪತ್ತೆ ಪೊಲೀಸರು ಬಲೆ ಬೀಸಿದ್ದಾರೆ.