: ಪ್ರೇಕ್ಷಕರ ಗ್ಯಾಲರಿಯಲ್ಲಿರುವ ಟೀಮ್‌ ಇಂಡಿಯಾ ! ಭಾರತ ಹಾಗೂ ಪಾಕಿಸ್ತಾನದ ಏಷ್ಯಾಕಪ್‌ ಮಹಾ ಕದನಕ್ಕೆ ಇನ್ನೊಂದೇ ದಿನ ಬಾಕಿ ಉಳಿದಿದೆ. ಸಾಂಪ್ರದಾಯಿಕ ಎದುರಾಳಿಗಳ ನಡುವೆ ರಣರೋಚಕ ಕಾಳಗ ಏರ್ಪಡುವ ನಿರೀಕ್ಷೆಯೂ ಇದೆ. ಇದರ ನಡುವೆ ಟೀಮ್‌ ಇಂಡಿಯಾ ಪ್ಲೇಯರ್‌ಗಳ ವ್ಯಾಗ್ಸ್‌ (ವೈಫ್‌ ಆಂಡ್‌ ಗರ್ಲ್‌ಫ್ರೆಂಡ್ಸ್‌) ಪಂದ್ಯವನ್ನು ಪ್ರೇಕ್ಷಕರ ಗ್ಯಾಲರಿಯಿಂದ ವೀಕ್ಷಿಸಲಿದ್ದಾರೆ. ಭಾರತ-ಪಾಕ್‌ ಮುಖಾಮುಖಿಯ ವೇಳೆ ತಮ್ಮ ಆಟಗಾರರಾಗಿರುವ ತಮ್ಮ ಪತಿ ಹಾಗೂ ಗೆಳೆಯನ್ನು ಬೆಂಬಲಿಸಲು ದುಬೈ ಸ್ಟ್ಯಾಂಡ್‌ನಲ್ಲಿ ಕಾಣಬಹುದಾದ ವ್ಯಾಗ್ಸ್‌ಗಳ ಪಟ್ಟಿ ಇಲ್ಲಿದೆ. ಭಾರತ ಹಾಗೂ ಪಾಕಿಸ್ತಾನದ ಏಷ್ಯಾಕಪ್‌ ಮಹಾ ಕದನಕ್ಕೆ ಇನ್ನೊಂದೇ ದಿನ ಬಾಕಿ ಉಳಿದಿದೆ. ಸಾಂಪ್ರದಾಯಿಕ ಎದುರಾಳಿಗಳ ನಡುವೆ ರಣರೋಚಕ ಕಾಳಗ ಏರ್ಪಡುವ ನಿರೀಕ್ಷೆಯೂ ಇದೆ. ಇದರ ನಡುವೆ ಟೀಮ್‌ ಇಂಡಿಯಾ ಪ್ಲೇಯರ್‌ಗಳ ವ್ಯಾಗ್ಸ್‌ (ವೈಫ್‌ ಆಂಡ್‌ ಗರ್ಲ್‌ಫ್ರೆಂಡ್ಸ್‌) ಪಂದ್ಯವನ್ನು ಪ್ರೇಕ್ಷಕರ ಗ್ಯಾಲರಿಯಿಂದ ವೀಕ್ಷಿಸಲಿದ್ದಾರೆ. ಭಾರತ-ಪಾಕ್‌ ಮುಖಾಮುಖಿಯ ವೇಳೆ ತಮ್ಮ ಆಟಗಾರರಾಗಿರುವ ತಮ್ಮ ಪತಿ ಹಾಗೂ ಗೆಳೆಯನ್ನು ಬೆಂಬಲಿಸಲು ದುಬೈ ಸ್ಟ್ಯಾಂಡ್‌ನಲ್ಲಿ ಕಾಣಬಹುದಾದ ವ್ಯಾಗ್ಸ್‌ಗಳ ಪಟ್ಟಿ ಇಲ್ಲಿದೆ. ಜಸ್‌ಪ್ರೀತ್‌ ಬುಮ್ರಾ ಏಷ್ಯಾಕಪ್‌ನಲ್ಲಿ ಭಾಗವಹಿಸುತ್ತಿಲ್ಲ. ಆದರೆ, ಅವರ ಪತ್ನಿ ಸಂಜನಾ ಗಣೇಶನ್‌ ನಿರೂಪಕಿಯಾಗಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ವೇಳೆ ದುಬೈ ಸ್ಟೇಡಿಯಂನಲ್ಲಿ ಕಾಣಿಸಲಿದ್ದಾರೆ. ರೋಹಿತ್ ಶರ್ಮಾ ಅವರ ಪತ್ನಿಯೂ ಅವರ ಮ್ಯಾನೇಜರ್ ಆಗಿರುವುದರಿಂದ ಅವರು ಹೋದಲ್ಲೆಲ್ಲಾ ಅವರೊಂದಿಗೆ ಪ್ರಯಾಣಿಸುತ್ತಾರೆ. ರೋಹಿತ್‌ ಕ್ರಿಕೆಟ್‌ಗಾಗಿ ವಿದೇಶಕ್ಕೆ ಪ್ರಯಾಣಿಸುವಾಗ ರಿತಿಕಾ, ಮಗಳು ಸಮೈರಾ ಸಾಮಾನ್ಯವಾಗಿ ಅವರೊಂದಿಗೆ ಪ್ರಯಾಣ ಮಾಡುತ್ತಾರೆ.