ಮಂಗಳೂರು ಯುನೈಟೆಡ್‌ಗೆ ಸೋಲಿನ ಶಾಕ್ ನೀಡಿದ ಶಿವಮೊಗ್ಗ ಸ್ಟ್ರೈಕರ್ಸ್ * ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಶಿವಮೊಗ್ಗ ಸ್ಟ್ರೈಕರ್ಸ್‌ಗೆ ಭರ್ಜರಿ ಜಯ* ಮಂಗಳೂರು ಯುನೈಟೆಡ್‌ ಎದುರು ಶಿವಮೊಗ್ಗಗೆ 8 ವಿಕೆಟ್‌ಗಳ ಜಯ* ಮಂಗಳೂರು ಯುನೈಟೆಡ್‌ ತಂಡ ಸದ್ಯ ಸತತ 4ನೇ ಸೋಲಿನ ಆಘಾತ ಬೆಂಗಳೂರು(ಆ.21): ಹ್ಯಾಟ್ರಿಕ್‌ ಜಯದೊಂದಿಗೆ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದ ಮಂಗಳೂರು ಯುನೈಟೆಡ್‌ ತಂಡ ಸದ್ಯ ಸತತ 4ನೇ ಸೋಲಿನ ಆಘಾತ ಅನುಭವಿಸಿದ್ದು, ತಂಡದ ಪ್ಲೇ-ಆಫ್‌ ಹಾದಿ ಕಠಿಣಗೊಂಡಿದೆ. ಶನಿವಾರ ನಡೆದ ಪಂದ್ಯದಲ್ಲಿ ಶಿವಮೊಗ್ಗ ಸ್ಟ್ರೈಕ​ರ್ಸ್‌ ವಿರುದ್ಧ ಮಂಗಳೂರು 8 ವಿಕೆಟ್‌ ಸೋಲನುಭವಿಸಿತು. ಮೊದಲು ಬ್ಯಾಟ್‌ ಮಾಡಿದ ಮಂಗಳೂರು 20 ಓವರಲ್ಲಿ 8 ವಿಕೆಟ್‌ಗೆ ಕೇವಲ 136 ರನ್‌ ಕಲೆ ಹಾಕಿತು. ನಿಕಿನ್‌ ಜೋಸ್‌(38), ಅಭಿನವ್‌ ಮನೋಹರ್‌(36) ಮಾತ್ರ ಅಲ್ಪ ಹೋರಾಟ ಪ್ರದರ್ಶಿಸಿದರು. ಕೆ.ಗೌತಮ್‌, ಅವಿನಾಶ್‌ ಡಿ. ಕಾರಿಯಪ್ಪ ತಲಾ 2 ವಿಕೆಟ್‌ ಕಿತ್ತರು. ಸುಲಭ ಗುರಿ ಬೆನ್ನತ್ತಿದ ಶಿವಮೊಗ್ಗ 12.2 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟದಲ್ಲಿ ಜಯಗಳಿಸಿತು. ನಾಯಕ ಗೌತಮ್‌ 32 ಎಸೆತಗಳಲ್ಲಿ ಔಟಾಗದೆ 72 ರನ್‌ ಸಿಡಿಸಿದರೆ, ಸ್ಟಾಲಿನ್‌ ಹೂವರ್‌(ಔಟಾಗದೆ 53) ಅರ್ಧಶತಕದ ಕೊಡುಗೆ ನೀಡಿದರು. ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲೂ ಮಂಗಳೂರು, ಗುಲ್ಬರ್ಗಾ ಮೈಸ್ಟಿಕ್ಸ್‌ ವಿರುದ್ಧ 28 ರನ್‌ ಸೋಲನುಭವಿಸಿತ್ತು. ಸ್ಕೋರ್‌:ಮಂಗಳೂರು 20 ಓವರಲ್ಲಿ 136/8 (ಜೋಸ್‌ 36, ಅಭಿನವ್‌ 36, ಗೌತಮ್‌ 2-11)ಶಿವಮೊಗ್ಗ 12.2 ಓವರಲ್ಲಿ 137/2 (ಗೌತಮ್‌ 72*, ಹೂವರ್‌ 53*, ಶರತ್‌ 1-3) 2ನೇ ಏಕದಿನ: ಕಿವೀಸ್‌ಗೆ ಶರಣಾದ ವೆಸ್ಟ್‌ಇಂಡೀಸ್‌ ಬ್ರಿಡ್ಜ್‌ಟೌನ್‌: ಫಿನ್‌ ಆ್ಯಲೆನ್‌(96) ಅಬ್ಬರದ ಬ್ಯಾಟಂಗ್‌, ಟಿಮ್‌ ಸೌಥಿ(22ಕ್ಕೆ 4 ವಿಕೆಟ್‌) ಮಾರಕ ಬೌಲಿಂಗ್‌ ದಾಳಿ ನೆರವಿನಿಂದ ವೆಸ್ಟ್‌ಇಂಡೀಸ್‌ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್‌ ಡಕ್ವರ್ಥ್‌ ಲೂಯಿಸ್‌ ನಿಮಯದನ್ವಯ 50 ರನ್‌ ಗೆಲುವು ಸಾಧಿಸಿದೆ. : ಶಿವಮೊಗ್ಗ ಮಣಿಸಿದ ಹುಬ್ಬಳ್ಳಿ ಪ್ಲೇ-ಆಫ್ ಕನಸು ಜೀವಂತ ಇದರೊಂದಿಗೆ 3 ಪಂದ್ಯಗಳ ಸರಣಿ 1-1ರಿಂದ ಸಮಬಲಗೊಂಡಿದೆ. ಮೊದಲು ಬ್ಯಾಟ್‌ ಮಾಡಿದ ಕಿವೀಸ್‌ 48.2 ಓವರ್‌ಗಳಲ್ಲಿ 212 ರನ್‌ಗೆ ಆಲೌಟಾಯಿತು. ಮಳೆ ಕಾರಣ ವಿಂಡೀಸ್‌ಗೆ 41 ಓವರಲ್ಲಿ 212 ರನ್‌ ಗುರಿ ನೀಡಲಾಯಿತು. ಆದರೆ ವಿಂಡೀಸ್‌ 35.3 ಓವರಲ್ಲಿ 161 ರನ್‌ಗೆ ಆಲೌಟಾಯಿತು. ಜೂಲನ್‌ಗೆ ಲಾರ್ಡ್ಸ್ನಲ್ಲಿ ಸೆಪ್ಟೆಂಬರ್ 24ಕ್ಕೆ ವಿದಾಯದ ಪಂದ್ಯ ಲಂಡನ್‌: ಭಾರತ ಮಹಿಳಾ ತಂಡದ ಹಿರಿಯ ಬೌಲರ್‌ ಜೂಲನ್‌ ಗೋಸ್ವಾಮಿ ಸೆ.24ಕ್ಕೆ ಇಂಗ್ಲೆಂಡ್‌ ವಿರುದ್ಧ ಲಾರ್ಡ್ಸ್ನಲ್ಲಿ ನಡೆಯಲಿರುವ 3ನೇ ಏಕದಿನ ಪಂದ್ಯದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಲಿದ್ದಾರೆ. 39 ವರ್ಷದ ಜೂಲನ್‌ ಮಹಿಳಾ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ವಿಕೆಟ್‌ ಕಿತ್ತ ಆಟಗಾರ್ತಿ ಎನಿಸಿಕೊಂಡಿದ್ದು, ಮಾರ್ಚ್‌ನಲ್ಲಿ ಏಕದಿನ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೊನೆ ಬಾರಿ ತಂಡದಲ್ಲಿ ಕಾಣಿಸಿಕೊಂಡಿದ್ದರು. ಕೊನೆ ಬಾರಿ 2018ರಲ್ಲಿ ಟಿ20, 2021ರ ಅಕ್ಟೋಬರ್‌ನಲ್ಲಿ ಟೆಸ್ಟ್‌ ಆಡಿರುವ ಅವರನ್ನು ವಿದಾಯದ ಅಂತಾರಾಷ್ಟ್ರೀಯ ಪಂದ್ಯ ಆಡಲೆಂದೇ ಇಂಗ್ಲೆಂಡ್‌ ಸರಣಿಗೆ ಆಯ್ಕೆ ಮಾಡಲಾಗಿದೆ ಎನ್ನಲಾಗಿದೆ. 2002ರಲ್ಲಿ ಅಂತಾರಾಷ್ಟ್ರೀಯ ಪಾದಾರ್ಪಣೆ ಮಾಡಿದ್ದ ಅವರು ಈವರೆಗೆ 12 ಟೆಸ್ಟ್‌, 68 ಟಿ20 ಹಾಗೂ 201 ಏಕದಿನ ಪಂದ್ಯವಾಡಿದ್ದು, ಒಟ್ಟು 352 ವಿಕೆಟ್‌ ಪಡೆದಿದ್ದಾರೆ.