2022: 5ನೇ ದಿನದಾಟ ಮುಕ್ತಾಯದ ಬಳಿಕ ಪದಕ ಪಟ್ಟಿಯಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ? * ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮುಂದುವರಿದ ಭಾರತದ ಪದಕ ಬೇಟೆ* ಇದುವರೆಗೂ 5 ಚಿನ್ನದ ಪದಕ ಜಯಿಸಿದ ಭಾರತ* ಪದಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲೇ ಮುಂದುವರೆದ ಆಸ್ಟ್ರೇಲಿಯಾ ಬರ್ಮಿಂಗ್‌ಹ್ಯಾಮ್‌(ಆ.03): 22ನೇ ಕಾಮನ್‌ವೆಲ್ತ್‌ ಗೇಮ್ಸ್‌ ಕ್ರೀಡಾಕೂಟದ 5ನೇ ದಿನವಾದ ಮಂಗಳವಾರ ಭಾರತ ಮತ್ತೆರಡು ಬಂಗಾರದ ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಲಾನ್‌ ಬಾಲ್ಸ್‌ನಲ್ಲಿ ಭಾರತ ಮಹಿಳಾ ನಾಲ್ವರ ತಂಡವು ಐತಿಹಾಸಿಕ ಚಿನ್ನದ ಪದಕ ಜಯಿಸಿದರೇ, ಪುರುಷರ ಟೇಬಲ್‌ ಟೆನಿಸ್‌ ವಿಭಾಗದಲ್ಲಿ ಚಿನ್ನದ ಪದಕ ಉಳಿಸಿಕೊಳ್ಳುವಲ್ಲಿ ಭಾರತ ತಂಡವು ಯಶಸ್ವಿಯಾಗಿದೆ. ಇನ್ನು ಭಾರತೀಯ ಮಿಶ್ರ ಬ್ಯಾಡ್ಮಿಂಟನ್ ತಂಡವು ಫೈನಲ್‌ನಲ್ಲಿ ಮಲೇಷ್ಯಾ ಎದುರು ಮುಗ್ಗರಿಸುವ ಮೂಲಕ ಬೆಳ್ಳಿ ಪದಕ ಜಯಿಸುವಲ್ಲಿ ಯಶಸ್ವಿಯಾಗಿದೆ. ಸದ್ಯ ಭಾರತ, ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 5 ಚಿನ್ನ, 5 ಬೆಳ್ಳಿ ಹಾಗೂ 3 ಕಂಚಿನ ಪದಕಗಳ ಸಹಿತ 13 ಪದಕಗಳನ್ನು ಜಯಿಸಿದ್ದು, ಒಟ್ಟಾರೆ ಪದಕ ಪಟ್ಟಿಯಲ್ಲಿ ಆರನೇ ಸ್ಥಾನ ಪಡೆದಿವೆ. ಇದೀಗ ಮಂಗಳವಾರದ ಸ್ಪರ್ಧೆ ಮುಕ್ತಾಯದ ವೇಳೆಗೆ ಪದಕ ಪಟ್ಟಿಯಲ್ಲಿ ಯಾವ ರಾಷ್ಟ್ರ ಯಾವ ಸ್ಥಾನದಲ್ಲಿದೆ ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ. 2022: ಬೆಳ್ಳಿ ಪದಕ ಗೆದ್ದ ಭಾರತ ಬ್ಯಾಡ್ಮಿಂಟನ್ ಮಿಶ್ರ ತಂಡ..! ಸ್ಥಾನ- ದೇಶ- ಪದಕಗಳ ವಿವರ 1. ಆಸ್ಟ್ರೇಲಿಯಾ: 42 ಚಿನ್ನ, 32 ಬೆಳ್ಳಿ, 32 ಕಂಚು: ಒಟ್ಟು 106 ಪದಕಗಳು2. ಇಂಗ್ಲೆಂಡ್: 31 ಚಿನ್ನ, 34 ಬೆಳ್ಳಿ, 21 ಕಂಚು: ಒಟ್ಟು 86 ಪದಕಗಳು3. ನ್ಯೂಜಿಲೆಂಡ್: 13 ಚಿನ್ನ, 7 ಬೆಳ್ಳಿ, 6 ಕಂಚು: ಒಟ್ಟು 26 ಪದಕಗಳು4. ಕೆನಡಾ: 11 ಚಿನ್ನ, 16 ಬೆಳ್ಳಿ, 19 ಕಂಚು: ಒಟ್ಟು 46 ಪದಕಗಳು5. ದಕ್ಷಿಣ ಆಫ್ರಿಕಾ: 6 ಚಿನ್ನ, 5 ಬೆಳ್ಳಿ, 5 ಕಂಚು: ಒಟ್ಟು 16 ಪದಕಗಳು6. ಭಾರತ: 5 ಚಿನ್ನ, 5 ಬೆಳ್ಳಿ, 3 ಕಂಚು: ಒಟ್ಟು 13 ಪದಕಗಳು7. ಸ್ಕಾಟ್ಲೆಂಡ್: 3 ಚಿನ್ನ, 8 ಬೆಳ್ಳಿ, 15 ಕಂಚು: ಒಟ್ಟು 26 ಪದಕಗಳು8. ವೇಲ್ಸ್: 3 ಚಿನ್ನ, 2 ಬೆಳ್ಳಿ, 8 ಕಂಚು: ಒಟ್ಟು 13 ಪದಕಗಳು9. ಮಲೇಷ್ಯಾ: 3 ಚಿನ್ನ, 2 ಬೆಳ್ಳಿ, 3 ಕಂಚು: ಒಟ್ಟು 8 ಪದಕಗಳು10. ನೈಜೀರಿಯಾ: 3 ಚಿನ್ನ, 1 ಬೆಳ್ಳಿ, 4 ಕಂಚು: ಒಟ್ಟು 8 ಪದಕಗಳು11. ಸೈಪ್ರಸ್: 2 ಚಿನ್ನ, 1 ಬೆಳ್ಳಿ, 4 ಕಂಚು: ಒಟ್ಟು 7 ಪದಕಗಳು12. ಉಗಾಂಡ: 2 ಚಿನ್ನ: ಒಟ್ಟು 2 ಪದಕಗಳು13. ಸಿಂಗಾಪುರ: 1 ಚಿನ್ನ, 3 ಬೆಳ್ಳಿ, 1 ಕಂಚು: ಒಟ್ಟು 5 ಪದಕಗಳು14. ಸಮೊಹ: 1 ಚಿನ್ನ, 1 ಬೆಳ್ಳಿ: ಒಟ್ಟು 2 ಪದಕಗಳು15. ಬರ್ಮೊಡ: 1 ಚಿನ್ನ : ಒಟ್ಟು 1 ಪದಕ16. ನಾರ್ಥನ್ ಐಲ್ಯಾಂಡ್‌: 2 ಬೆಳ್ಳಿ, 3 ಕಂಚು: ಒಟ್ಟು 5 ಪದಕಗಳು17. ಕೀನ್ಯಾ: 2 ಬೆಳ್ಳಿ, 2 ಕಂಚು: ಒಟ್ಟು 4 ಪದಕಗಳು18. ಫಿಜಿ: 2 ಬೆಳ್ಳಿ, 1 ಕಂಚು: ಒಟ್ಟು 3 ಪದಕಗಳು19. ಮಾರಿಷಸ್: 1 ಬೆಳ್ಳಿ, 1 ಕಂಚು: ಒಟ್ಟು 2 ಪದಕಗಳು20. ಗ್ಯುರ್ನೆಸೆ: 1 ಬೆಳ್ಳಿ: ಒಟ್ಟು 1 ಪದಕ21. ಜಮೈಕಾ: 1 ಬೆಳ್ಳಿ: ಒಟ್ಟು 1 ಪದಕ22. ಪಪುವಾ ನ್ಯೂಗಿನಿ: 1 ಬೆಳ್ಳಿ: ಒಟ್ಟು 1 ಪದಕ23. ತಾಂಜೇನಿಯಾ: 1 ಬೆಳ್ಳಿ: ಒಟ್ಟು 1 ಪದಕ24. ದ ಜಾಂಬಿಯಾ: 1 ಬೆಳ್ಳಿ: ಒಟ್ಟು 1 ಪದಕ25. ಮಾಲ್ಟಾ: 1 ಕಂಚು: ಒಟ್ಟು 1 ಪದಕ26. ನಮೀಬಿಯಾ: 1 ಕಂಚು ಒಟ್ಟು 1 ಪದಕ27. ನೌರು: 1 ಕಂಚು ಒಟ್ಟು 1 ಪದಕ28. ಶ್ರೀಲಂಕಾ: 1 ಕಂಚು: ಒಟ್ಟು 1 ಪದಕ