ಖೋ ಖೋಗೂ ಬಂತು ಐಪಿಎಲ್‌ ರೀತಿ ಲೀಗ್..! * ದೇಸಿ ಕ್ರೀಡೆ ಖೋ ಖೋ ಗೇಮ್ಸ್‌ಗೆ ಐಪಿಎಲ್ ಮಾದರಿಯ ಟಚ್* ಆಗಸ್ಟ್‌ 14ರಿಂದ ಪುಣೆಯ ಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ಯುಕೆಕೆ ಟೂರ್ನಿ* ಈ ಆವೃತ್ತಿಯಲ್ಲಿ 6 ಖೋ ಖೋ ತಂಡಗಳು ಪಾಲ್ಗೊಳ್ಳಲಿವೆ ನವದೆಹಲಿ(ಜು.14): ಕ್ರಿಕೆಟ್‌, ಕಬಡ್ಡಿ, ಫುಟ್ಬಾಲ್‌ನಂತೆಯೇ ದೇಶದಲ್ಲೀಗ ಖೋ ಖೋ ಆಟಕ್ಕೂ ಹೊಸ ಲೀಗ್‌ ಆರಂಭಗೊಳ್ಳಲಿದೆ. ಚೊಚ್ಚಲ ಆವೃತ್ತಿಯ ಅಲ್ಟಿಮೇಟ್‌ ಖೋ-ಖೋ(ಯುಕೆಕೆ) ಲೀಗ್‌ ಆಗಸ್ಟ್‌ 14ರಿಂದ ಪುಣೆಯ ಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ಆರಂಭಗೊಳ್ಳಲಿದ್ದು, ಕುತೂಹಲ ಸೃಷ್ಟಿಸಿದೆ. ಡಾಬರ್‌ ಸಮೂಹದ ಮುಖ್ಯಸ್ಥ ಅಮಿತ್‌ ಬರ್ಮನ್‌ ಅವರು ಭಾರತೀಯ ಖೋ ಖೋ ಫೆಡರೇಶನ್‌(ಕೆಕೆಎಫ್‌ಐ) ಸಹಭಾಗಿತ್ವದಲ್ಲಿ ಲೀಗ್‌ ಆರಂಭಿಸುತ್ತಿದ್ದು, ಸೆಪ್ಟೆಂಬರ್ 4ರಂದು ಲೀಗ್‌ ಮುಕ್ತಾಯಗೊಳ್ಳಲಿದೆ. ಇದು ಫ್ರಾಂಚೈಸಿ ಆಧಾರಿತ ಲೀಗ್‌ ಆಗಿದ್ದು ಈ ಆವೃತ್ತಿಯಲ್ಲಿ 6 ತಂಡಗಳು ಪಾಲ್ಗೊಳ್ಳಲಿವೆ. ಒಡಿಶಾ ಸರ್ಕಾರ ಕೂಡಾ ತಂಡವೊಂದನ್ನು ಖರೀದಿಸಿದೆ. ಲೀಗ್‌ನಲ್ಲಿ ಕೆಎಲ್‌ಒ ಸ್ಪೋರ್ಟ್ಸ್‌ ಮಾಲಿಕತ್ವದ ಚೆನ್ನೈ ಕ್ವಿಕ್‌ ಗನ್ಸ್‌, ಅದಾನಿ ಸ್ಪೋಟ್ಸ್‌ರ್‍ಲೈನ್‌ ಮಾಲಿಕತ್ವದ ಗುಜರಾತ್‌ ಜೈಂಟ್ಸ್‌, ಬಾದ್‌ಶಾ ಮತ್ತು ಪುನೀತ್‌ ಬಾಲನ್‌ ಒಡೆತನದ ಮುಂಬೈ ಕಿಲಾಡೀಸ್‌, ಒಡಿಶಾ ಸರ್ಕಾರದ ಒಡಿಶಾ ಜಗ್ಗರ್‌ನಟ್ಸ್‌, ಕ್ಯಾಪ್ರಿ ಗ್ಲೋಬಲ್‌ ಮಾಲಿಕತ್ವ ಹೊಂದಿರುವ ರಾಜಸ್ಥಾನ ವಾರಿಯ​ರ್ಸ್ಸ್‌ ಹಾಗೂ ಜಿಎಂಆರ್‌ ಸ್ಪೋಟ್ಸ್‌ರ್‍ನ ತೆಲುಗು ಯೋಧಾಸ್‌ ತಂಡಗಳು ಪಾಲ್ಗೊಳ್ಳಲಿವೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ. ಲೀಗ್‌ ಮಾದರಿ ಹೇಗೆ:ರೌಂಡ್‌ ರಾಬಿನ್‌ ಮಾದರಿಯಲ್ಲಿ ಲೀಗ್‌ ನಡೆಯಲಿದ್ದು, ಪ್ರತೀ ತಂಡ ಇತರೆ 5 ತಂಡಗಳ ವಿರುದ್ಧ ತಲಾ 2 ಪಂದ್ಯಗಳನ್ನಾಡಲಿವೆ. ಲೀಗ್‌ ಹಂತದಲ್ಲಿ 34 ಪಂದ್ಯಗಳು ನಡೆಯಲಿದ್ದು, ನಾಕೌಟ್‌ ಹಂತದಲ್ಲಿ ಕ್ವಾಲಿಫೈಯರ್‌ ಮತ್ತು ಎಲಿಮಿನೇಟರ್‌ ಪಂದ್ಯಗಳು ಇರಲಿವೆ ಎಂದು ಆಯೋಜಕರು ತಿಳಿಸಿದ್ದಾರೆ. : ಕ್ವಾರ್ಟರ್ ಫೈನಲ್‌ನಲ್ಲಿ ಸಿಂಧು, ಸೆನ್‌ಗೆ ಆಘಾತ, ಭಾರತದ ಹೋರಾಟ ಅಂತ್ಯ ವಿದೇಶಿ ಆಟಗಾರರೂ ಭಾಗಿ:ಲೀಗ್‌ನಲ್ಲಿ ಭಾರತದ ಮಾತ್ರವಲ್ಲದೇ ವಿದೇಶಿ ಆಟಗಾರರೂ ಇರಲಿದ್ದಾರೆ. ಇಂಗ್ಲೆಂಡ್‌, ಇರಾನ್‌, ದಕ್ಷಿಣ ಕೊರಿಯಾ, ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ನೇಪಾಳದ ಆಟಗಾರರು ವಿವಿಧ ತಂಡಗಳನ್ನು ಪ್ರತಿನಿಧಿಸಲಿದ್ದಾರೆ. ಗುರುವಾರ ಆಟಗಾರರ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು ಒಟ್ಟು 240 ಆಟಗಾರರು ಪಾಲ್ಗೊಳ್ಳಲಿದ್ದಾರೆ. ಹಾಕಿ ವಿಶ್ವಕಪ್‌: ಜಪಾನ್‌ ವಿರುದ್ಧ ಗೆದ್ದ ಭಾರತ ಟೆರ್ರಾಸ್ಸಾ(ಸ್ಪೇನ್‌): ಎಫ್‌ಐಎಚ್‌ ಮಹಿಳಾ ಹಾಕಿ ವಿಶ್ವಕಪ್‌ ( ' ) ಟೂರ್ನಿಯಲ್ಲಿ ಭಾರತ 9ನೇ ಸ್ಥಾನದೊಂದಿಗೆ ಅಭಿಯಾನ ಕೊನೆಗೊಳಿಸಿದೆ. ಬುಧವಾರ ಜಪಾನ್‌ ವಿರುದ್ಧ 9ರಿಂದ 12ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಭಾರತ 3-1 ಗೋಲುಗಳಿಂದ ಗೆಲುವು ಸಾಧಿಸಿತು. 19ನೇ ನಿಮಿಷದಲ್ಲಿ ಪೆನಾಲ್ಟಿಕಾರ್ನರ್‌ ಮೂಲಕ ಅಸೈ ಯು ಗೋಲು ಬಾರಿಸಿ ಜಪಾನ್‌ಗೆ ಮುನ್ನಡೆ ಒದಗಿಸಿದರು. ಬಳಿಕ ತಿರುಗಿ ಬಿದ್ದ ಭಾರತ ಪಂದ್ಯದ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸಿತು. ನವನೀತ್‌ ಕೌರ್‌ 29 ಹಾಗೂ 44ನೇ ನಿಮಿಷದಲ್ಲಿ 2 ಗೋಲು ಹೊಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮತ್ತೊಂದು ಗೋಲನ್ನು ದೀಪ್‌ ಗ್ರೇಸ್‌(39ನೇ ನಿ.) ದಾಖಲಿಸಿದರು. : 100 ಮೀಟರ್ ಓಟದಲ್ಲಿ ಚಿನ್ನ ಗೆದ್ದ 94 ವರ್ಷದ ಭಗ್ವಾನಿ ದೇವಿ..! ಸಿಂಗಾಪುರ ಓಪನ್‌: 2ನೇ ಸುತ್ತಿಗೆ ಸಿಂಧು, ಪ್ರಣಯ್‌ ಸಿಂಗಾಪುರ: ಭಾರತದ ತಾರಾ ಶಟ್ಲರ್‌ಗಳಾದಪಿ.ವಿ.ಸಿಂಧುಮತ್ತು ಎಚ್‌.ಎಸ್‌.ಪ್ರಣಯ್‌ ಸಿಂಗಾಪುರ ಓಪನ್‌ನ 2ನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಮೊದಲ ಸುತ್ತಿನ ಪಂದ್ಯದಲ್ಲಿ ಸಿಂಧು, ಬೆಲ್ಜಿಯಂನ ಲಿಯಾನೆ ಟಾನ್‌ ವಿರುದ್ಧ 21-15, 21-11 ಗೇಮ್‌ಗಳಲ್ಲಿ ಗೆದ್ದರೆ, ಥಾಯ್ಲೆಂಡ್‌ನ ಸಿಟ್ಟಿಕೊಮ್‌ ವಿರುದ್ಧ ಪ್ರಣಯ್‌ 21-13, 21-16ರಲ್ಲಿ ಜಯಿಸಿದರು. ಬೆಂಗಳೂರಿನ ಮಿಥುನ್‌ ಮಂಜುನಾಥ್‌ ಭಾರತದ ಜನಪ್ರಿಯ ಶಟ್ಲರ್‌ ಕಿದಂಬಿ ಶ್ರೀಕಾಂತ್‌ ವಿರುದ್ಧ ಗೆದ್ದರೆ, ಮಹಿಳಾ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಅಶ್ಮಿತಾ ಚಲಿಹಾ ವಿಶ್ವ ನಂ.12 ಥಾಯ್ಲೆಂಡ್‌ನ ಬುಸಾನನ್‌ ವಿರುದ್ಧ ಜಯಗಳಿಸಿದರು.