ವಿರಾಟ್ ಕೊಹ್ಲಿ ಶಿಖರ್ ಧವನ್: ಈ ವರ್ಷ ಟೀಂ ಇಂಡಿಯಾಗೆ 7 ಮಂದಿ ನಾಯಕರು..! * ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಭಾರತ ತಂಡ ಪ್ರಕಟವಾಗಿದ್ದು, ಶಿಖರ್ ಧವನ್‌ಗೆ ನಾಯಕ ಪಟ್ಟ* ಈ ವರ್ಷ ಭಾರತ ತಂಡದಲ್ಲಿ 7 ಮಂದಿ ನಾಯಕರು* ವಿರಾಟ್ ಕೊಹ್ಲಿ ನಾಯಕದ ವಿದಾಯದ ಬಳಿಕ ಹಲವು ಬಾರಿ ಕ್ಯಾಪ್ಟನ್ಸ್ ಬದಲಾವಣೆ ಮುಂಬೈ(ಜು.07):ಟೀಂ ಇಂಡಿಯಾ ಕ್ಯಾಪ್ಟನ್ಸಿ ಮ್ಯೂಸಿಕಲ್ ಚೇರ್ ಆಗಿಬಿಟ್ಟಿದೆ. ಅವರ್​ ಬಿಟ್, ಇವರ್ ಬಿಟ್ಟು ಅವರ್ಯಾರು ಅನ್ನೋ ಹಾಗೆ ಆಗಿದೆ ನಾಯಕತ್ವ. ಈ ವರ್ಷ ಒಬ್ಬರಲ್ಲ ಇಬ್ಬರಲ್ಲ ಬರೋಬ್ಬರಿ 7 ಮಂದಿ ಭಾರತ ತಂಡದ ನಾಯಕರಾಗಿದ್ದಾರೆ. ಆ ಏಳನೇಯವರೇ ಶಿಖರ್ ಧವನ್. ಇದೇ ತಿಂಗಳು ಅಂತ್ಯದಲ್ಲಿ ನಡೆಯುವ ವೆಸ್ಟ್ ಇಂಡೀಸ್ ವಿರುದ್ದದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್, ಟೀಂ ಇಂಡಿಯಾವನ್ನು ನಾಯಕನಾಗಿ ಲೀಡ್ ಮಾಡಲಿದ್ದಾರೆ. ಕೊಹ್ಲಿ ಕ್ಯಾಪ್ಟನ್ಸಿ ಬಿಟ್ಟು 6 ತಿಂಗಳು, 6 ತಿಂಗಳಲ್ಲಿ 6 ಮಂದಿ ನಾಯಕರು: ಈ ವರ್ಷ ಜನವರಿಯಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟೆಸ್ಟ್​ ನಂತರವಿರಾಟ್ ಕೊಹ್ಲಿ( ) ಕ್ಯಾಪ್ಟನ್ಸಿಗೆ ಗುಡ್ ಬೈ ಹೇಳಿದ್ರು. ಅಂದ್ರೆ ಅವರು ಟೀಂ ಇಂಡಿಯಾ ( ) ನಾಯಕತ್ವ ಬಿಟ್ಟು 6 ತಿಂಗಳಾಗಿದೆ. ಈ ಆರು ತಿಂಗಳಲ್ಲಿ ಭಾರತ ತಂಡವನ್ನು ಆರು ಮಂದಿ ಮುನ್ನಡೆಸಿದ್ದಾರೆ. ರೋಹಿತ್ ಶರ್ಮಾ ( ), ಕೆಎಲ್ ರಾಹುಲ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ ( ), ಜಸ್​ಪ್ರೀತ್ ಬುಮ್ರಾ ಮತ್ತು ಈಗ ಶಿಖರ್ ಧವನ್. ಅಂದರೆ ಈ ವರ್ಷ ಕೊಹ್ಲಿ ಸೇರಿದಂತೆ 7 ಮಂದಿ ಟೀಂ ಇಂಡಿಯಾ ನಾಯಕರಾಗಿದ್ದಾರೆ. ಈ ಮೂಲಕ ಭಾರತೀಯ ಕ್ರಿಕೆಟ್ ಇತಿಹಾಸ ಪುಟ ಸೇರಿತು. ಜಸ್ಟ್ ಆರೇ ಆರು ತಿಂಗಳಲ್ಲಿಟೀಂ ಇಂಡಿಯಾಗೆ 7 ಮಂದಿ ನಾಯಕರಾಗಿರೋ ಇತಿಹಾಸವೇ ಇಲ್ಲ. ಸೀನಿಯರ್ಸ್​​ಗೆ ರೆಸ್ಟ್​​, ಧವನ್​ಗೆ ಒಲಿದ ನಾಯಕತ್ವ: ಇದೇ ವರ್ಷ ಅಕ್ಟೋಬರ್​-ನವೆಂಬರ್​ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯುವಐಸಿಸಿ ಟಿ20 ವಿಶ್ವಕಪ್( T20 ) ದೃಷ್ಟಿಯಿಂದ ಸತತ ಕ್ರಿಕೆಟ್ ಆಡಿ ದಣಿದಿರುವ ಸೀನಿಯರ್ ಪ್ಲೇಯರ್ಸ್​ಗೆ ವಿಶ್ರಾಂತಿ ನೀಡಲಾಗಿದೆ. ಹಾಗಾಗಿ ಶಿಖರ್ ಧವನ್​ಗೆ ( ) ನಾಯಕತ್ವ ಪಟ್ಟ ಕಟ್ಟಲಾಗಿದೆ. ಕಳೆದ ವರ್ಷ ಶ್ರೀಲಂಕಾ ಟೂರ್​ನಲ್ಲೂ ಗಬ್ಬರ್ ಸಿಂಗ್ ನಾಯಕರಾಗಿದ್ದರು. ಆಲ್​ರೌಂಡರ್ ರವೀಂದ್ರ ಜಡೇಜಾ ( ) ವೈಸ್ ಕ್ಯಾಪ್ಟನ್. ಈ ಇಬ್ಬರ ಜೊತೆ ಯುಜುವೇಂದ್ರ ಚಹಲ್ ಇದ್ದಾರೆ. ಉಳಿದವರೆಲ್ಲಾ ಅಷ್ಟೇನು ಇಂಟರ್​ನ್ಯಾಷನಲ್ ಕ್ರಿಕೆಟ್ ಆಡಿಲ್ಲ. ಕೆಲವರು ಹೊಸಬರು. : ವಿಂಡೀಸ್ ಎದುರಿನ ಸರಣಿಗೆ ಭಾರತ ತಂಡ ಪ್ರಕಟ, ಧವನ್‌ಗೆ ನಾಯಕ ಪಟ್ಟ..! ವಿಂಡೀಸ್ ಸಿರೀಸ್​ಗೆ ಭಾರತ ಏಕದಿನ ತಂಡ ಹೀಗಿದೆ. ಶಿಖರ್ ಧವನ್, ರವೀಂದ್ರ ಜಡೇಜಾ, ರುತುರಾಜ್ ಗಾಯಕ್ವಾಡ್, ಶುಭ್‌​ಮನ್ ಗಿಲ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಯುಜವೇಂದ್ರ ಚಹಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಆರ್ಶದೀಪ್ ಸಿಂಗ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ ಸೀನಿಯರ್ಸ್ ಅನುಪಸ್ಥಿತಿಯಲ್ಲಿ ಜೂನಿಯರ್ಸ್​ಗೆ ಒಂದು ಅವಕಾಶ ಸಿಕ್ಕಿದ್ದು, ಆ ಅವಕಾಶ ಸದ್ಭಳಕೆ ಮಾಡಿಕೊಂಡವರಿಗೆ ಭವಿಷ್ಯವಿದೆ. ಜುಲೈ 22ರಿಂದ 27ರವರೆಗೆ ಒನ್​ಡೇ ಸಿರೀಸ್ ಆದ್ಮೇಲೆ 5 ಪಂದ್ಯಗಳ ಟಿ20 ಸಿರೀಸ್ ಅನ್ನೂ ವಿಂಡೀಸ್ ವಿರುದ್ಧ ಭಾರತ ಆಡಲಿದೆ. ವಿಂಡೀಸ್ ಎದುರಿನ ಟಿ20 ಸರಣಿಗೆ ಟೀಂ ಇಂಡಿಯಾ ಆನೌನ್ಸ್ ಆಗಿಲ್ಲ. ವಿಶ್ವಕಪ್ ಇರೋದ್ರಿಂದ ಇಂಗ್ಲೆಂಡ್ ಸರಣಿ ಬಳಿಕ ಬಲಿಷ್ಠ ಟಿ20 ತಂಡವನ್ನ ಆಯ್ಕೆ ಮಾಡುವ ಸಾಧ್ಯತೆ ಇದೆ.