ಹಿಮಾಚಲ ಮೌಂಟೈನ್ ಬೈಕಿಂಗ್ ರೇಸ್, ಅಂತಿಮ ಸುತ್ತಿನಲ್ಲಿ 3.5 ಕಿ.ಮೀ ಕ್ರಮಿಸಿದ 43 ರೈಡರ್ಸ್! ಜಾಂಜೇಹ್ಲಿ(ಜೂ.27): ಎಂಟಿಬಿ ಹಿಮಾಚಲ ಪ್ರದೇಶ ಮೌಂಟೈನ್ ಬೈಕಿಂಗ್ ರೇಸ್ ಅಂತಿಮ ಸುತ್ತು ತೀವ್ರ ರೋಚಕತೆಗೆ ಸಾಕ್ಷಿಯಾಗಿತ್ತು. ಅಂತಿಮ ಸುತ್ತಿನಲ್ಲಿ 43 ರೈಡರ್ಸ್ ಜಾಂಜೇಹ್ಲಿ ಪರ್ವತ ಶ್ರೇಣಿಯ ಪ್ರಕೃತಿ ಸುಂದರಣ ತಾಣಗಳ ಮೂಲಕ 3.5 ಕಿಲೋಮೀಟರ್ ಕ್ರಮಿಸಿ ರೇಸಿಂಗ್ ಪೂರ್ಣಗೊಳಿಸಿದರು. ಸಾಂಗ್ಲಾರವಾಲ ಹಳ್ಳಿಯಿಂದ ಆರಂಭಗೊಂಡ ಈ ರೇಸಿಂಗ್, ಆ್ಯಪಲ್ ತೋಟದ ಮೂಲಕ, ಜಲಪಾತ, ತೊರೆಗಳನ್ನು ದಾಟಿ ಸಾಗಿತ್ತು. ಹಿಮಾಚಲ ಪ್ರದೇಶದ ಪ್ರವಾಸೋದ್ಯಮ ದೃಷ್ಟಿಯಿಂದ ಈ ರೇಸಿಂಗ್ ಆಯೋಜಿಸಲಾಗಿದೆ. ಸೈಕ್ಲಿಂಗ್ ಟೂರಿಸಂ ಪ್ರಚುರ ಪಡಿಸಲು ಆಯೋಜಿಸಿರುವ ಈ ಮೌಂಟೈನ್ ಬೈಕಿಂಗ್ ರೇಸ್, ಮೊದಲ ಆವೃತ್ತಿಯಲ್ಲೇ ಅತ್ಯಂತ ಯಶಸ್ವಿಯಾಗಿದೆ. ಹಿಮಾಚಲ ಪ್ರದೇಶ ಮೌಂಟೈನ್ ಸೈಕ್ಲಿಂಗ್, ಮೊದಲ ಹಂತದಲ್ಲಿ 54 ರೈಡರ್‌ಗಳಿಂದ 80 ಕಿ.ಮೀ ಪ್ರಯಾಣ! ಹಿಮಾಚಲ ಪ್ರದೇಶ ಮೌಂಟೈನ್ ಬೈಕಿಂಗ್ ರೇಸಿಂಗ್ ಒಟ್ಟು ಮೂರು ಹಂತಗಳನ್ನು ಒಳಗೊಂಡಿತ್ತು. ಮೊದಲ ಹಂತ, ಎರಡನೇ ಹಂತ ಹಾಗೂ ಅಂತಿಮ ಹಂತದ ಮೂಲಕ ರೋಚಕವಾಗಿ ರೇಸಿಂಗ್ ಸಾಗಿತ್ತು. ಅಂಡರ್ 16 ವಿಭಾಗದ ಸ್ಪರ್ಧಿಗಳು 4 ಸುತ್ತು ಪೂರ್ಣಗೊಳಿಸಬೇಕಿತ್ತು. ಇನ್ನು ಇತರ ವಿಭಾಗದ ಸ್ಪರ್ಧಿಗಳು ಒಟ್ಟು 6 ಸುತ್ತುಗಳನ್ನು ಪೂರ್ಣಗೊಳಿಸಲು ಟಾಸ್ಕ್ ನೀಡಲಾಗಿತ್ತು. ಅಂತಿಮ ಸುತ್ತಿನ ಫಲಿತಾಂಶಅಂಡರ್ 16 ವಿಭಾಗ1st: ಯುವಗಲ್ ಠಾಕೂರ್2nd: ವಂಶ್ ಕಾಲಿಯಾ3rd: ಅಧೀರತ್ ಸಿಂಗ್ -19 ಹುಡುಗರ ವಿಭಾಗ1st: ಅರ್ಪಿತ್ ಶರ್ಮಾ2nd: ವಿಶಾಲ್ ಆರ್ಯ3rd: ಕುನಾಲ್ ಬನ್ಸಾಲ್ -19 ಹುಡುಗಿಯರ ವಿಭಾಗ1st: ದಿವಿಜಾ ಸೂದ್2nd: ಕ್ಯಾನ ಸೂದ್3rd: ಶಾಂಭವಿ ಸಿಂಗ್ -19 ವಿಭಾಗ1st: ಸುನೀತಾ ಶ್ರೆಷ್ಠ2nd: ಆಸ್ತಾ ದೋಭಾಲ್ ಹಿಮಾಚಲ ಮೌಂಟೈನ್ ಸೈಕ್ಲಿಂಗ್, ಪರ್ವತ ಶ್ರೇಣಿಯಲ್ಲಿ 37 ಕಿ.ಮೀ ಕ್ರಮಿಸಿದ 48 ರೈಡರ್ಸ್! -23 ಯುವಕರ ವಿಭಾಗ1st: ಪೃಥ್ವಿ ಸಿಂಗ್ ರಾಥೋರ್2nd: ಅಮನ್‌ದೀಪ್ ಸಿಂಗ್ ದಯಾಲ್3rd: ಅನಿಶ್ ದುಬೆ -35 ಪುರುಷರ ವಿಭಾಗ1st: ರಾಕೇಶ್ ರಾಣಾ2nd: ಕ್ರಂಶವೇಂದ್ರ ಸಿಂಗ್ ಯಾದವ್3rd: ರಾಮಕೃಷ್ಣ ಪಟೇಲ್ -50 ಪುರುಷರ ವಿಭಾಗ1st: ಸುನಿಲ್ ಬರೊಂಗ್ಪ2nd: ಅಮಿತ್ ಬಲ್ಯಾನ್3rd: ಜಸ್ಪ್ರೀತ್ ಪೌಲ್ -50 ವಿಭಾಗ1st ಭಾರತ್ ಸಾ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈ ರಾಂ ರಮೇಶ್ ಪತ್ನಿ ಡಾ ಸಾಧನಾ ಠಾಕೂರ್ ವಿಜೇತರಿಗೆ ಪ್ರಶಸ್ತಿ ವಿತರಿಸಿದರು. ಇದೇ ವೇಳೆ ಅತ್ಯುತ್ತಮ ಅಡ್ವೆಂಚರ್ ಸ್ಪೋರ್ಟ್ಸ್ ಆಯೋಜಿಸಿದ ಹಿಮಾಚಲ ಪ್ರದೇಶ ಸರ್ಕಾರ, ಹಿಮಾಲಯನ್ ಅಡ್ವೆಂಚರ್ ಸ್ಪೋರ್ಟ್ಸ್‌ಗೆ ಅಭಿನಂದನೆ ಸಲ್ಲಿಸಿದರು. ಈ ರೇಸ್‌ನಿಂದ ಹಿಮಾಚಲ ಪ್ರದೇಶದ ನೈಸರ್ಗಿಕ ಸೌಂದರ್ಯ ಅನಾವರಣಗೊಂಡಿದೆ. ಜೊತೆಗೆ ಹಿಮಾಚಲ ಪ್ರದೇಶ ಸೈಕ್ಲಿಂಗ್ ರೇಸ್‌ಗೆ ನೆಚ್ಚಿನ ತಾಣ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ ಎಂದರು. ಜೂನ್ 26 ರಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಹಿಮಾಚಲ ಪ್ರದೇಶ ಮೌಂಟೈನ್ ಬೈಕಿಂಗ್ ರೇಸ್ ಕುರಿತು ಉಲ್ಲೇಖಿಸಿದ್ದಾರೆ. ವಿಶೇಷ ಕಾರ್ಯಕ್ರಮದ ಮೂಲಕ ನಮ್ಮ ತಾಣಗಳನ್ನು ದೇಶಾದ್ಯಂತ ಪ್ರಚಾರ ಪಡಿಸಲು ಹಾಗೂ ಭಾರತದಲ್ಲಿ ಎಲ್ಲಾ ರೀತಿಯ ಕ್ರೀಡೆ ಹಾಗೂ ಪ್ರವಾಸಿ ತಾಣಗಳಿವೆ ಅನ್ನೋದು ಈ ಸ್ಪರ್ಧೆಯಿಂದ ತಿಳಿಯಲಿದೆ ಎಂದಿದ್ದರು.