ಹಿಮಾಚಲ ಮೌಂಟೈನ್ ಸೈಕ್ಲಿಂಗ್, ಪರ್ವತ ಶ್ರೇಣಿಯಲ್ಲಿ 37 ಕಿ.ಮೀ ಕ್ರಮಿಸಿದ 48 ರೈಡರ್ಸ್! ಹಿಮಾಚಲ ಪ್ರದೇಶ(ಜೂ.25):ಮೊದಲ ಆವೃತ್ತಿ ಎಂಟಿಬಿ ಹಿಮಾಚಲ ಮೌಂಟೈನ್ ಸೈಕ್ಲಿಂಗ್ ರೇಸ್ ಸ್ಪರ್ಧೆ ಹಂತ ಹಂತಕ್ಕ ರೋಚಕತೆ ಹೆಚ್ಚಿಸುತ್ತಿದೆ. ಅತೀ ದುರ್ಗಮ ಹಾದಿ ಮೂಲಕ ಬರೋಬ್ಬರಿ 37 ಕಿಲೋಮೀಟರ್ ದೂರ ಕ್ರಮಿಸಿದ 48 ರೈಡರ್ಸ್ ಹೊಸ ಮೈಲಿಗಲ್ಲು ನಿರ್ಮಿಸಿದ್ದಾರೆ. ಇದೇ ಮೊದಲಬಾರಿಗೆ ನಡೆಯುತ್ತಿರುವ ಹಿಮಾಚಲ್ ಮೌಂಟೈನ್ ಸೈಕ್ಲಿಂಗ್ ರೇಸ್‌ನ ಮೊದಲ ಹಂತದಲ್ಲಿ 54 ರೈಡರ್ಸ್ ಬರೋಬ್ಬರಿ 80 ಕಿ.ಮೀ ಪ್ರಯಾಣ ಮಾಡಿದ್ದರು. ಇದೀಗ ಸನಾರ್ಲಿ ಬಳಿ ಇರುವ ಶಿಕಾರಿ ಮಾತಾ ದೇವಸ್ಥಾನದಿಂದ 2750 ಮೀಟರ್ ಎತ್ತರದ ಹಾದಿಯನ್ನು ಕ್ರಮಿಸಲಾಗಿದೆ. ಈ ಮೂಲಕ ಕಾರ್ಸೋಗ್‌ನಿಂದ ರಾಯೈಘರ್ ವರೆಗೆ ಪ್ರಯಾಣ ಮಾಡುವ ಮೂಲಕ 2ನೇ ಹಂತವನ್ನು ಯಶಸ್ವಿಯಾಗಿ ಮುಗಿಸಲಾಗಿದೆ. ಹಿಮಾಚಲ ಪ್ರದೇಶ ಮೌಂಟೈನ್ ಸೈಕ್ಲಿಂಗ್, ಮೊದಲ ಹಂತದಲ್ಲಿ 54 ರೈಡರ್‌ಗಳಿಂದ 80 ಕಿ.ಮೀ ಪ್ರಯಾಣ! ಹಿಮಾಚಲ ಪ್ರದೇಶದಲ್ಲಿ ಸೈಕ್ಲಿಂಗ್ ಟೂರಿಸಂ ಪ್ರಚುರ ಪಡಿಸಲು ಈ ಸ್ಪರ್ಧೆ ಆಯೋಜಿಸಲಾಗಿದೆ. ಇದಕ್ಕಾಗಿ ಸುತೇಲ್ಜ್ ನದಿ ಹಾದು ಹೋಗುವ ಪರ್ವತಶ್ರೇಣಿ ಪ್ರದೇಶದಲ್ಲಿ ಸೈಕ್ಲಿಂಗ್ ರೇಸ್ ಆಯೋಜಿಸಲಾಗಿದೆ. ಈ ಮೂಲಕ ಹಿಮಾಚಲ ಪ್ರದೇಶದ ಐತಿಹಾಸಿಕ ಸುತೇಲ್ಜ್ ನದಿ ಹಾಗೂ ಪರ್ವತ ಶ್ರೇಣಿ ಪ್ರದೇಶದಲ್ಲಿರುವ 100ಕ್ಕೂ ತಾಣಗಳ ಪರಿಚಯ ಹಾಗೂ ಹಿಮಾಚಲ ಪ್ರದೇಶದ ಪ್ರವಾಸೋದ್ಯಮವನ್ನು ದೇಶಾದ್ಯಂತ ಪ್ರಚಾರ ಪಡಿಸುವುದಾಗಿದೆ. ಹಿಮಾಚಲ ಪ್ರದೇಶದಲ್ಲಿರುವ ಸೈಕ್ಲಿಂಗ್ ತಾಣಗಳು, ಹಿಮಾಲಯ ಶ್ರೇಣಿಯನ್ನೇ ಸೆಡ್ಡು ಹೊಡೆಯಬಲ್ಲ ತಾಣಗಳು ಸೇರಿದಂತೆ ಹಲವು ಐತಿಹಾಸಿಕ ತಾಣಗಳ ಪ್ರಚಾರ ಪಡಿಸುವಿಕೆಯನ್ನು ಒಳಗೊಂಡಿದೆ. ಹಿಮಾಚಲ ಪ್ರದೇಶ ಸರ್ಕಾರ, ಹಿಮಾಚಲ ಪ್ರದೇಶ ಪ್ರವಾಸೋದ್ಯಮ ಸಚಿವಾಲಯ ಹಾಗೂ ಹಿಮಾಲಯನ್ ಅಡ್ವೆಂಚರ್ ಸ್ಪೋರ್ಟ್ಸ್ ಹಾಗೂ ಟೂರಿಸಂ ಅಭಿವೃದ್ಧಿ ಸಂಸ್ಥೆ ಜಂಟಿಯಾಗಿ ಈ ಸೈಕ್ಲಿಂಗ್ ರೇಸ್ ಆಯೋಜಿಸಿದೆ. ಹಿಮಾಚಲ ಮೌಂಟೈನ್ ಸೈಕ್ಲಿಂಗ್ ರೇಸ್, ಎರಡನೇ ಹಂತದ ಫಲಿತಾಂಶಅಂಡರ್ 16 ವಿಭಾಗ1st:ಯುಗಲ್ ಠಾಕೂರ್2nd: ವಂಶ್ ಕಾಲಿಯಾ3rd: ಅಧೀರತ್ ವಾಲಿಯಾ ಹಿಮಾಚಲ ಜಾಂಜೆಹ್ಲಿ 2022ರ ಬೈಕಿಂಗ್ ರೇಸ್‌ನ 1ನೇ ಆವೃತ್ತಿ ಆರಂಭ ಅಂಡರ್ 19(ಹುಡುಗರ ವಿಭಾಗ)1st: ರಾಜ್‌ಬೀರ್ ಸಿಂಗ್ ಶ್ಯಾನ್2nd: ಅರ್ಪಿತ್ ಶರ್ಮಾ3rd: ಕುನಾಲ್ ಬನ್ಸಾಲ್ ಅಂಡರ್ 19(ಹುಡುಗಿಯರ ವಿಭಾಗ)1st: ದಿವಿಜಾ ಸೂದ್2nd: ಕ್ಯಾನಾ ಸೂದ್ -19 ವಿಭಾಗ1st: ಸುನೀತಾ ಬರೋನ್ಪಾ2nd: ಆಸ್ತಾ ದುಬೆ ಅಂಡರ್ 23(ಯುವಕರ ವಿಭಾಗ)1st: ಪೃಥ್ವಿರಾಜ್ ಸಿಂಗ್ ರಾಥೋರ್2nd: ಆರುಷ್ ಉಪಮನ್ಯು3rd: ಅನೀಶ್ ದುಬೆ ಅಂಡರ್ 35(ಪುರುಷರ ವಿಭಾಗ)1st: ರಾಕೇಶ್ ರಾನಾ2nd: ಕೃಷ್ಣವೇಂದ್ರ ಯಾದವ್3rd: ರಾಮಕೃಷ್ಣ ಪಟೇಲ್ ಅಂಡರ್ 50(ಪುರುಷರ ವಿಭಾಗ)1st: ಸುನಿಲ್ ಬರೋಂಗ್ಪಾ2nd:ಅಮಿತ್ ಬಯಾನ್ -50 ವಿಭಾಗ1st: ಮಹೇಶ್ವರ್ ದತ್