2022: ಇಂದಿನಿಂದ ವಿಂಬಲ್ಡನ್ ಗ್ರ್ಯಾನ್‌ಸ್ಲಾಂ ಟೆನಿಸ್ ಕದನ ಪ್ರತಿಷ್ಠಿತ ವಿಂಬಲ್ಡನ್ ಟೆನಿಸ್ ಗ್ರ್ಯಾನ್‌ಸ್ಲಾಂ ಟೂರ್ನಿ ಆರಂಭಕ್ಕೆ ಕ್ಷಣಗಣನೆವಿಶ್ವ ಶ್ರೇಷ್ಠ ಟೆನಿಸಿಗರ ನಡುವೆ ಮತ್ತೊಮ್ಮೆ ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಾಗಿ ಹೋರಾಟರಷ್ಯಾದ ಆಟಗಾರರಿಗೆ ಈ ಬಾರಿ ವಿಂಬಲ್ಡನ್‌ನಲ್ಲಿ ಆಡುವ ಅವಕಾಶವಿಲ್ಲ ಲಂಡನ್‌(ಜೂ.27):2022ರ ವಿಂಬಲ್ಡನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿ ಸೋಮವಾರದಿಂದ ಆರಂಭವಾಗಲಿದ್ದು, ವಿಶ್ವ ಶ್ರೇಷ್ಠ ಟೆನಿಸಿಗರ ನಡುವೆ ಮತ್ತೊಮ್ಮೆ ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಾಗಿ ಹೋರಾಟ ನಡೆಯಲಿದೆ. ಈ ಬಾರಿ ವಿಂಬಲ್ಡನ್‌ ಹಲವು ಕಾರಣಗಳಿಗೆ ಸುದ್ದಿಯಾಗುತ್ತಿದೆ. ಉಕ್ರೇನ್‌ ಮೇಲೆ ಯುದ್ಧ ಮುಂದುವರಿಸಿರುವ ಹಿನ್ನೆಲೆಯಲ್ಲಿ ರಷ್ಯಾದ ಆಟಗಾರರಿಗೆ ಈ ಬಾರಿ ವಿಂಬಲ್ಡನ್‌ನಲ್ಲಿ ಆಡುವ ಅವಕಾಶವಿಲ್ಲ. ಹೀಗಾಗಿ ವಿಶ್ವ ನಂ.1 ಟೆನಿಸಿಗ ರಷ್ಯಾದ ಡ್ಯಾನಿಲ್‌ ಮೆಡ್ವೆಡೆವ್‌ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇನ್ನು, ಟೆನಿಸ್‌ ಇತಿಹಾಸದಲ್ಲೇ ಅತೀ ಹೆಚ್ಚು(23) ಗ್ರ್ಯಾನ್‌ಸ್ಲಾಂ ಗೆದ್ದಿರುವ ಅಮೆರಿಕದ ಮಾಜಿ ವಿಶ್ವ ನಂ.1ಸೆರೆನಾ ವಿಲಿಯಮ್ಸ್‌( ) ವರ್ಷಗಳ ಬಳಿಕ ಟೆನಿಸ್‌ ಅಂಗಳದಲ್ಲಿ ಕಾಣಿಸಿಕೊಳ್ಳುತ್ತಿದ್ದು, 24ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. ಹಾಲಿ ವಿಂಬಲ್ಡನ್‌ ಚಾಂಪಿಯನ್‌, ಆಸ್ಪ್ರೇಲಿಯಾದ ಆ್ಯಶ್ಲೆ ಬಾರ್ಟಿ ( ) ಈಗಾಗಲೇ ನಿವೃತ್ತಿಯಾಗಿದ್ದು, ಈ ಬಾರಿ ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿಲ್ಲ. ಇವರನ್ನು ಹೊರತುಪಡಿಸಿದ ಈ ಬಾರಿಫ್ರೆಂಚ್‌ ಓಪನ್‌( ) ಗೆದ್ದಿರುವ ಪೋಲೆಂಡ್‌ನ ಇಗಾ ಸ್ವಿಯಾಟೆಕ್‌, 2021 ಯುಸ್‌ ಓಪನ್‌ ಚಾಂಪಿಯನ್‌ ಬ್ರಿಟನ್‌ನ ಎಮ್ಮಾ ರಾಡುಕಾನು, ಸ್ಪೇನ್‌ನ ಪಾಲಾ ಬಡೋಸಾ, ಕಳೆದ ಬಾರಿ ವಿಂಬಲ್ಡನ್‌ ರನ್ನರ್‌-ಅಪ್‌ ಚೆಕ್‌ ಗಣರಾಜ್ಯದ ಕರೋಲಿನಾ ಪಿಸ್ಕೋವಾ, ಅಮೆರಿಕದ ಜೆಸ್ಸಿಗಾ ಪೆಗುಲಾ ಕೂಡಾ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ. ರಾಫಾಗೆ 23ನೇ ಗ್ರ್ಯಾನ್‌ಸ್ಲಾಂ ಕನಸು: ಈ ವರ್ಷ ಈಗಾಗಲೇಆಸ್ಪ್ರೇಲಿಯನ್‌ ಓಪನ್‌( ) ಹಾಗೂ ಫ್ರೆಂಚ್‌ ಓಪನ್‌ ಪ್ರಶಸ್ತಿ ಗೆದ್ದಿರುವ ಸ್ಪೇನ್‌ನರಾಫೆಲ್‌ ನಡಾಲ್‌( ) ಮತ್ತೊಂದು ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದು, ಗ್ರ್ಯಾನ್‌ಸ್ಲಾಂ ಸಂಖ್ಯೆಯನ್ನು 23ಕ್ಕೆ ಏರಿಸಲು ಎದುರು ನೋಡುತ್ತಿದ್ದಾರೆ. ಅಲ್ಲದೇ 20 ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆದ್ದಿರುವ, ಹಾಲಿ ವಿಂಬಲ್ಡನ್‌ ಚಾಂಪಿಯನ್‌ನೋವಾಕ್‌ ಜೋಕೋವಿಚ್‌( ) ಸತತ 2ನೇ ಪ್ರಶಸ್ತಿ ಗೆಲ್ಲಲುವ ತವಕದಲ್ಲಿದ್ದಾರೆ. ಈ ಇಬ್ಬರೂ ಈ ಬಾರಿ ಕ್ವಾರ್ಟರ್‌ ಫೈನಲ್‌ನಲ್ಲಿ ಮುಖಾಮುಖಿಯಾಗುವ ಸಾಧ್ಯತೆ ಇದೆ. 2022: ಭಾರತ ಈಜು ತಂಡದಲ್ಲಿ ಸ್ಥಾನ ಪಡೆದ ಶ್ರೀಹರಿ ನಟರಾಜ್ ಆದರೆ ಈ ಬಾರಿ ರೋಜರ್‌ ಫೆಡರರ್‌ ( ), ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ಗಾಯದ ಕಾರಣದಿಂದ ಟೂರ್ನಿಯಲ್ಲಿ ಆಡುತ್ತಿಲ್ಲ. ಉಳಿದಂತೆ ಫ್ರೆಂಚ್‌ ಓಪನ್‌ ರನ್ನರ್‌-ಅಪ್‌ ನಾರ್ವೆಯ ಕ್ಯಾಸ್ಪೆರ್‌ ರುಡ್‌, ಗ್ರೀಕ್‌ನ ಸ್ಟೆಫಾನೊಸ್‌ ಸಿಟ್ಸಿಪಾಸ್‌, ಸ್ಪೇನ್‌ನ ಕಾರ್ಲೊಸ್‌ ಆಲ್ಕರಾಜ್‌, ಬ್ರಿಟನ್‌ನ ಆ್ಯಂಡಿ ಮರ್ರೆ ಕೂಡಾ ಟೂರ್ನಿಯಲ್ಲಿ ಸ್ಪರ್ಧಿಸಲಿದ್ದಾರೆ. ಆರ್ಚರಿ ವಿಶ್ವಕಪ್‌: 3ನೇ ಪದಕ ಬಾಚಿದ ಭಾರತ ಪ್ಯಾರಿಸ್‌: ಭಾರತ ಮಹಿಳಾ ರಿಕರ್ವ್‌ ತಂಡ ಆರ್ಚರಿ ವಿಶ್ವಕಪ್‌ 3 ಟೂರ್ನಿಯಲ್ಲಿ ಬೆಳ್ಳಿ ಪದಕ ಜಯಿಸಿದ್ದು, ಭಾರತ 3 ಪದಕಗಳೊಂದಿಗೆ ಅಭಿಯಾನ ಕೊನೆಗೊಳಿಸಿದೆ. ಭಾನುವಾರ ನಡೆದ ರಿಕವ್‌ರ್‍ ಫೈನಲ್‌ನಲ್ಲಿ ದೀಪಿಕಾ ಕುಮಾರಿ, ಅಂಕಿತಾ ಭಕತ್‌ ಹಾಗೂ ಸಿಮ್ರನ್‌ಜಿತ್‌ ಕೌರ್‌ ಅವರನ್ನೊಳಗೊಂಡ ತಂಡ 1-5 ಅಂಕಗಳಿಂದ ಚೈನೀಸ್‌ ತೈಪೆ ತಂಡದ ವಿರುದ್ಧ ಸೋತು ಬೆಳ್ಳಿಗೆ ತೃಪ್ತಿಪಟ್ಟುಕೊಂಡಿತು. ಇದಕ್ಕೂ ಮೊದಲು ಭಾರತದ ಪರ ಅಭಿಷೇಕ್‌ ವರ್ಮಾ-ಜ್ಯೋತಿ ಸುರೇಖಾ ಜೋಡಿ ಕಾಂಪೌಂಡ್‌ ಮಿಶ್ರ ಡಬಲ್ಸ್‌ನಲ್ಲಿ ಚಿನ್ನ ಗೆದ್ದಿದ್ದರೆ, ಜ್ಯೋತಿ ಅವರು ವೈಯಕ್ತಿಕ ವಿಭಾಗದಲ್ಲಿ ಬೆಳ್ಳಿ ಗೆದ್ದಿದ್ದರು.