2022: ಭಾರತ ಹಾಕಿ ತಂಡಕ್ಕೆ ಮನ್‌ಪ್ರೀತ್ ಸಿಂಗ್ ನಾಯಕ ಕಾಮನ್‌ವೆಲ್ತ್ ಗೇಮ್ಸ್‌ ಕ್ರೀಡಾಕೂಟಕ್ಕೆ ಭಾರತ ಹಾಕಿ ತಂಡಕ್ಕೆ ಪ್ರಕಟಮತ್ತೊಮ್ಮೆ ಹಾಕಿ ತಂಡದ ನಾಯಕರಾಗಿ ಪುನಾರಾಯ್ಕೆಯಾದ ಮನ್‌ಪ್ರೀತ್ ಸಿಂಗ್18 ಆಟಗಾರರನ್ನೊಳಗೊಂಡ ಪುರುಷರ ಹಾಕಿ ತಂಡದಲ್ಲಿ ಕನ್ನಡಿಗ ಸುನಿಲ್‌ಗಿಲ್ಲ ಸ್ಥಾನ ನವದೆಹಲಿ(ಜೂ.21):ಮುಂಬರುವ ಕಾಮನ್‌ವೆಲ್ತ್‌ ಗೇಮ್ಸ್‌ಗೆ ( ) 18 ಮಂದಿಯ ಭಾರತದ ಪುರುಷರ ಹಾಕಿ ತಂಡವನ್ನು ಸೋಮವಾರ ಪ್ರಕಟಿಸಲಾಗಿದ್ದು, ಮನ್‌ಪ್ರೀತ್‌ ಸಿಂಗ್‌ ಮತ್ತೊಮ್ಮೆ ನಾಯಕನಾಗಿ ನೇಮಕಗೊಂಡಿದ್ದಾರೆ. ಹರ್ಮನ್‌ಪ್ರೀತ್‌ ಉಪನಾಯಕನಾಗಿ ಕಾರ‍್ಯನಿರ್ವಹಿಸಲಿದ್ದಾರೆ. ಈ ಮೊದಲು ಏಷ್ಯನ್‌ ಗೇಮ್ಸ್‌ ದೃಷ್ಟಿಯಲ್ಲಿಟ್ಟುಕೊಂಡು ಕಾಮನ್‌ವೆಲ್ತ್‌ಗೆ ಯುವ ಆಟಗಾರರ ತಂಡ ಕಳುಹಿಸಲು ಹಾಕಿ ಇಂಡಿಯಾ ನಿರ್ಧರಿಸಿತ್ತು. ಆದರೆ ಏಷ್ಯನ್‌ ಗೇಮ್ಸ್‌ ಮುಂದೂಡಿಕೆಯಾಗಿದ್ದರಿಂದ ಹಿರಿಯ ಆಟಗಾರರನ್ನೇ ಕಣಕ್ಕಿಳಿಸಲಾಗಿದೆ. ಗೋಲ್‌ಕೀಪರ್‌ ಪಿ.ಆರ್‌.ಶ್ರಿಜೇಶ್‌, ಅಭಿಷೇಕ್‌, ಅಮಿತ್‌ ರೋಹಿದಾಸ್‌ ಕೂಡಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 2 ಬಾರಿ ಬೆಳ್ಳಿ ಗೆದ್ದಿರುವ, 2018ರ ಗೇಮ್ಸ್‌ನಲ್ಲಿ 4ನೇ ಸ್ಥಾನ ಪಡೆದಿರುವಭಾರತ ಹಾಕಿ ತಂಡಈ ಬಾರಿ ‘ಬಿ’ ಗುಂಪಿನಲ್ಲಿ ಇಂಗ್ಲೆಂಡ್‌, ಕೆನಡಾ, ವೇಲ್ಸ್‌ ಮತ್ತು ಘಾನಾ ಜೊತೆ ಸ್ಥಾನ ಗಿಟ್ಟಿಸಿಕೊಂಡಿದೆ. ಜು.31ಕ್ಕೆ ಘಾನಾ ವಿರುದ್ಧ ಮೊದಲ ಪಂದ್ಯ ಆಡಲಿದೆ. ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವಕಾಮನ್‌ವೆಲ್ತ್‌ ಗೇಮ್ಸ್‌ ಕ್ರೀಡಾಕೂಟವು ಜುಲೈ 28ರಿಂದ ಆರಂಭವಾಗಲಿದೆ ಕಳೆದ ವರ್ಷ ನಡೆದ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತ ಹಾಕಿ ತಂಡವು ಬರೋಬ್ಬರಿ 4 ದಶಕಗಳ ಬಳಿಕ ಪದಕ ಭೇಟೆಯಾಡುವಲ್ಲಿ ಯಶಸ್ವಿಯಾಗಿತ್ತು. ಮನ್‌ಪ್ರೀತ್ ಸಿಂಗ್ ಪಡೆಟೋಕಿಯೋ ಒಲಿಂಪಿಕ್ಸ್‌( ) ಕ್ರೀಡಾಕೂಟದಲ್ಲಿ ಕಂಚಿನ ಪದಕವನ್ನು ಜಯಿಸಿತ್ತು. ಸದ್ಯ ನೆದರ್ಲೆಂಡ್ಸ್‌ನಲ್ಲಿ ನಡೆಯುತ್ತಿರುವ ಎಫ್‌ಐಎಚ್‌ ಪ್ರೊ ಹಾಕಿ ಲೀಗ್ ಟೂರ್ನಿಯಲ್ಲಿ ಅಮಿತ್ ರೋಹಿದಾಸ್ ಭಾರತ ಹಾಕಿ ತಂಡವನ್ನು ನಾಯಕನಾಗಿ ಮುನ್ನಡೆಸುತ್ತಿದ್ದಾರೆ. ರಾಜ್ಯದ ಸುನಿಲ್‌ಗಿಲ್ಲ ಸ್ಥಾನ ಕರ್ನಾಟಕದ ಹಿರಿಯ ಆಟಗಾರ ಎಸ್‌.ವಿ.ಸುನಿಲ್‌ ( ) ಅವರಿಗೆ ಕಾಮನ್‌ವೆಲ್ತ್‌ ಗೇಮ್ಸ್‌ ತಂಡದಲ್ಲಿ ಸ್ಥಾನ ಲಭಿಸಿಲ್ಲ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಹಾಕಿಗೆ ನಿವೃತ್ತಿ ಘೋಷಿಸಿದ್ದ ಸುನಿಲ್‌, ಬಳಿಕ ಇತ್ತೀಚೆಗೆ ತಂಡಕ್ಕೆ ಮರಳಿದ್ದರು. ಕಳೆದ ತಿಂಗಳು ನಡೆದ ಏಷ್ಯನ್‌ ಗೇಮ್ಸ್‌ನಲ್ಲಿ ಅವರು ಉಪನಾಯಕನಾಗಿ ಕಾರ‍್ಯನಿರ್ವಹಿಸಿದ್ದರು. ಮಹಿಳಾ ಪ್ರೊ ಹಾಕಿ: ಇಂದು ಭಾರತಕ್ಕೆ ಅಮೆರಿಕ ಸವಾಲು ರಾಟೆರ್ಡಾಮ್‌(ನೆದರ್ಲೆಂಡ್‌್ಸ): ಮುಂದಿನ ತಿಂಗಳು ಆರಂಭವಾಗಲಿರುವ ಎಫ್‌ಐಎಚ್‌ ಮಹಿಳಾ ಹಾಕಿ ವಿಶ್ವಕಪ್‌ಗೂ ಮುನ್ನ ಗೆಲುವಿನ ಲಯ ಕಂಡುಕೊಳ್ಳುವ ತವಕದಲ್ಲಿರುವ ಭಾರತ ಮಹಿಳಾ ಹಾಕಿ ತಂಡ ಪ್ರೊ ಲೀಗ್‌ ಹಾಕಿ ಟೂರ್ನಿಯಲ್ಲಿ ಮಂಗಳವಾರ ಅಮೆರಿಕ ಸವಾಲನ್ನು ಎದುರಿಸಲಿದೆ. ಉಭಯ ತಂಡಗಳ ನಡುವಿನ 2ನೇ ಪಂದ್ಯ ಬುಧವಾರ ನಿಗದಿಯಾಗಿದೆ. : ಭಾರತ ಮಹಿಳಾ ತಂಡಕ್ಕೆ ಭರ್ಜರಿ ಗೆಲುವು ಟೂರ್ನಿಯಲ್ಲಿ ಭಾರತ 14 ಪಂದ್ಯಗಳಲ್ಲಿ 24 ಅಂಕ ಸಂಪಾದಿಸಿದ್ದು, 3ನೇ ಸ್ಥಾನದಲ್ಲಿದೆ. 16 ಪಂದ್ಯಗಳಲ್ಲಿ 42 ಅಂಕ ಪಡೆದಿರುವ ಅರ್ಜೆಂಟೀನಾ ಈಗಾಗಲೇ ಪ್ರಶಸ್ತಿ ಖಚಿತಪಡಿಸಿಕೊಂಡಿದೆ. ಹೀಗಾಗಿ ಭಾರತ ಉಳಿದ ಎರಡೂ ಪಂದ್ಯಗಳಲ್ಲಿ ಗೆದ್ದರೂ ನಂ.1 ಸ್ಥಾನಕ್ಕೇರಿ ಪ್ರಶಸ್ತಿ ಗೆಲ್ಲಲು ಸಾಧ್ಯವಿಲ್ಲ. ಆದರೆ ಜುಲೈ 1ಕ್ಕೆ ವಿಶ್ವಕಪ್‌ ಆರಂಭವಾಗಲಿದ್ದು, ಬಲಿಷ್ಠ ತಂಡವನ್ನು ಕಟ್ಟಲು ಈ ಟೂರ್ನಿ ಸಹಕಾರಿಯಾಗಲಿದೆ. ಏಷ್ಯನ್‌ ಟ್ರ್ಯಾಕ್‌ ಸೈಕ್ಲಿಂಗ್‌: ಭಾರತಕ್ಕೆ ಮತ್ತೆರಡು ಕಂಚು ನವದೆಹಲಿ: ಏಷ್ಯನ್‌ ಟ್ರ್ಯಾಕ್‌ ಸೈಕ್ಲಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ 3ನೇ ದಿನವಾದ ಸೋಮವಾರ ಆತಿಥೇಯ ಭಾರತ 2 ಕಂಚಿನ ಪದಕ ಗೆದ್ದುಕೊಂಡಿದೆ. ಪುರುಷರು ಕಿರಿಯರ ವಿಭಾಗದ 1 ಕಿ.ಮೀ. ಟೈಮ್‌ ಟ್ರಯಲ್‌ ಇವೆಂಟ್‌ನಲ್ಲಿ ರೊನಾಲ್ಡೊ ಸಿಂಗ್‌ ದೇಶದ ಪರ ಪ್ರಥಮ ಅಂತಾರಾಷ್ಟ್ರೀಯ ಪದಕ ಗೆದ್ದರೆ, 10 ಕಿ.ಮೀ. 40 ಲ್ಯಾಪ್‌ ರೇಸ್‌ನಲ್ಲಿ ಬಿರ್ಜಿತ್‌ ಸಿಂಗ್‌ ಕಂಚು ತಮ್ಮದಾಗಿಸಿಕೊಂಡರು. ಭಾರತ ಒಟ್ಟಾರೆ 20 ಪದಕಗಳನ್ನು ಬಾಚಿಕೊಂಡಿದೆ.