2022: ಗೆದ್ದು ಗುಡ್‌ಬೈ ಹೇಳಲು ಸನ್‌ರೈಸರ್ಸ್‌, ಪಂಜಾಬ್ ಕಾತರ * ಸನ್‌ರೈಸರ್ಸ್ ಹೈದರಾಬಾದ್‌ ತಂಡಕ್ಕಿಂದು ಪಂಜಾಬ್ ಕಿಂಗ್ಸ್‌ ಸವಾಲು * ಗೆಲುವಿನೊಂದಿಗೆ ಗುಡ್‌ ಬೈ ಹೇಳಲು ಎದುರು ನೋಡುತ್ತಿವೆ ಉಭಯ ತಂಡಗಳು * ಈಗಾಗಲೇ ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದಿರುವ ಎರಡೂ ತಂಡಗಳು ಮುಂಬೈ(ಮೇ.22): 15ನೇ ಆವೃತ್ತಿಐಪಿಎಲ್‌ನ ಲೀಗ್‌ ಪಂದ್ಯಗಳು ( 2022) ಮುಕ್ತಾಯದ ಹಂತ ತಲುಪಿದ್ದು, ಕೊನೆ ಪಂದ್ಯದಲ್ಲಿ ಭಾನುವಾರಪಂಜಾಬ್‌ ಕಿಂಗ್ಸ್‌( ) ಹಾಗೂ ಸನ್‌ರೈಸ​ರ್ಸ್‌ ಹೈದರಾಬಾದ್‌ ( ) ತಂಡಗಳು ಮುಖಾಮುಖಿಯಾಗಲಿವೆ. ಎರಡೂ ತಂಡಗಳು ಈಗಾಗಲೇ ಪ್ಲೇ-ಆಫ್‌ ರೇಸ್‌ನಿಂದ ಹೊರಬಿದ್ದಿದ್ದು, ಗೆಲುವಿನೊಂದಿಗೆ ಟೂರ್ನಿಗೆ ವಿದಾಯ ಹೇಳಲು ಕಾಯುತ್ತಿವೆ. ಆರ್‌ಸಿಬಿ ವಿರುದ್ಧ ಗೆಲ್ಲುವ ಮೂಲಕ ಅಭಿಯಾನ ಆರಂಭಿಸಿದ್ದ ಮಯಾಂಕ್‌ ಅಗರ್‌ವಾಲ್‌ ( ) ನಾಯಕತ್ವದ ಪಂಜಾಬ್‌ ಬಳಿಕ ಸ್ಥಿರ ಪ್ರದರ್ಶನ ನೀಡಲು ವಿಫಲವಾಗಿದೆ. ಆಡಿರುವ 13 ಪಂದ್ಯಗಳಲ್ಲಿ ಕೇವಲ 6ರಲ್ಲಿ ಗೆದ್ದಿದ್ದು, ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಮೊದಲು ಮುಖಾಮುಖಿಯಲ್ಲಿ ಸನ್‌ರೈಸರ್ಸ್‌ಗೆ ಶರಣಾಗಿದ್ದ ತಂಡ ಈ ಪಂದ್ಯದಲ್ಲಿ ಸೇಡು ತೀರಿಸಿಕೊಳ್ಳಲು ಎದುರು ನೋಡುತ್ತಿದೆ. ಪಂಜಾಬ್ ಕಿಂಗ್ಸ್ ತಂಡವು ಬ್ಯಾಟಿಂಗ್‌ನಲ್ಲಿ ಶಿಖರ್ ಧವನ್, ಜಾನಿ ಬೇರ್‌ಸ್ಟೋವ್, ನಾಯಕ ಮಯಾಂಕ್ ಅಗರ್‌ವಾಲ್ ಹಾಗೂ ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನು ಹೆಚ್ಚಾಗಿ ನೆಚ್ಚಿಕೊಂಡಿದೆ. ಇನ್ನು ಬೌಲಿಂಗ್‌ನಲ್ಲಿ ಕಗಿಸೋ ರಬಾಡಗೆ ( ) ರಾಹುಲ್ ಚಹರ್, ಆರ್ಶದೀಪ್ ಸಿಂಗ್ ಉತ್ತಮ ಸಾಥ್ ನೀಡಬೇಕಿದೆ ಮತ್ತೊಂದೆಡೆಸನ್‌ರೈಸ​ರ್ಸ್‌ ಹೈದರಾಬಾದ್‌ಕೂಡಾ 13 ಪಂದ್ಯಗಳಲ್ಲಿ 6ರಲ್ಲಿ ಗೆದ್ದಿದ್ದು, ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ನಾಯಕಕೇನ್‌ ವಿಲಿಯಮ್ಸನ್‌ತವರಿಗೆ ಮರಳಿರುವ ಕಾರಣ ಈ ಪಂದ್ಯದಲ್ಲಿ ಭುವನೇಶ್ವರ್‌ ಕುಮಾರ್‌ ಅಥವಾ ನಿಕೋಲಸ್‌ ಪೂರನ್‌ ತಂಡ ಮುನ್ನಡೆಸುವ ಸಾಧ್ಯತೆ ಇದೆ. ಸನ್‌ರೈಸರ್ಸ್‌ ಹೈದರಾಬಾದ್ ತಂಡವು ಬೃಹತ್ ಮೊತ್ತ ಗಳಿಸಬೇಕಿದ್ದರೆ ರಾಹುಲ್ ತ್ರಿಪಾಠಿ, ಏಯ್ಡನ್ ಮಾರ್ಕ್‌ರಮ್, ನಿಕೋಲಸ್‌ ಪೂರನ್ ಅಬ್ಬರಿಸಬೇಕಿದೆ. ಇನ್ನು ಬೌಲಿಂಗ್‌ನಲ್ಲಿ ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್, ವಾಷಿಂಗ್ಟನ್ ಸುಂದರ್‌ ಜವಾಬ್ದಾರಿಯುತ ಪ್ರದರ್ಶನ ತೋರಬೇಕಿದೆ. 2022 ಡೆಲ್ಲಿ ವಿರುದ್ಧ ಮುಂಬೈಗೆ ಗೆಲುವು, ಆರ್‌ಸಿಬಿಗೆ ಸಿಕ್ತು ಪ್ಲೇ ಆಫ್ ಚಾನ್ಸ್! ಐಪಿಎಲ್ ಇತಿಹಾಸದಲ್ಲಿ ಇದುವರೆಗೂ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಒಟ್ಟು 19 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಸ್ಪಷ್ಟ ಮೇಲುಗೈ ಸಾಧಿಸಿದೆ. 19 ಪಂದ್ಯಗಳ ಪೈಕಿ ಸನ್‌ರೈಸರ್ಸ್ ಹೈದರಾಬಾದ್ ತಂಡವು 13 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದರೆ, ಪಂಜಾಬ್ ಕಿಂಗ್ಸ್‌ ತಂಡವು 6 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ. ಸಂಭಾವ್ಯ ತಂಡಗಳು ಹೀಗಿವೆ ನೋಡಿ ಸನ್‌ರೈಸರ್ಸ್ ಹೈದರಾಬಾದ್: ಪ್ರಿಯಂ ಗರ್ಗ್‌, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಏಯ್ಡನ್ ಮಾರ್ಕ್‌ರಮ್‌, ಗ್ಲೆನ್‌ ಫಿಲಿಫ್ಸ್, ನಿಕೋಲಸ್ ಪೂರನ್(ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ರೊಮ್ಯಾರಿಯೋ ಶೆಫರ್ಡ್‌, ಭುವನೇಶ್ವರ್ ಕುಮಾರ್(ನಾಯಕ), ಟಿ ನಟರಾಜನ್, ಉಮ್ರಾನ್ ಮಲಿಕ್. ಪಂಜಾಬ್ ಕಿಂಗ್ಸ್‌: ಜಾನಿ ಬೇರ್‌ಸ್ಟೋವ್, ಶಿಖರ್‌ ಧವನ್, ಮಯಾಂಕ್‌ ಅಗರ್‌ವಾಲ್(ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ(ವಿಕೆಟ್ ಕೀಪರ್), ಬೆನ್ನಿ ಹೋವೆಲ್, ಶಾರುಕ್ ಖಾನ್, ರಿಷಿ ಧವನ್, ರಾಹುಲ್ ಚಹರ್, ಕಗಿಸೋ ರಬಾಡ, ಆರ್ಶದೀಪ್ ಸಿಂಗ್. ಸ್ಥಳ: ಮುಂಬೈ, ವಾಂಖೇಡೆ ಕ್ರೀಡಾಂಗಣಪಂದ್ಯ: ಸಂಜೆ 7.30ಕ್ಕೆಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌