ಯಶಸ್ವಿಯಾಗಿ ಮುಕ್ತಾಯವಾದ ಕಪಿಲ್ ಕ್ರಿಕೆಟ್ ಕ್ಲಬ್ ತರಬೇತಿ ಶಿಬಿರ! ಏಪ್ರಿಲ್ 1 ರಿಂದ ಮೇ 14 ರವರೆಗೆ ಬಸವೇಶ್ವರನಗರದ ಕಾರ್ಮೆಲ್ ಶಾಲಾ ಮೈದಾನದಲ್ಲಿ ನಡೆದ ಶಿಬಿರದದಲ್ಲಿ 150 ಕ್ಕೂ ಹೆಚ್ಚು ಬಾಲಕರು ತರಬೇತಿ ಪಡೆದರು ಬೆಂಗಳೂರು (ಮೇ.15):ಬೆಂಗಳೂರಿನ ಪ್ರತಿಷ್ಠಿತ ಕಪಿಲ್ ಕ್ರಿಕೆಟ್ ಕ್ಲಬ್ ( ) ಈ ಬಾರಿ ಆಯೋಜಿಸಿದ್ದ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರ ( ) ಯಶಸ್ವಿಯಾಯಿತು. ಏಪ್ರಿಲ್ 1 ರಿಂದ ಮೇ 14 ರವರೆಗೆ ಬಸವೇಶ್ವರನಗರದ ( ) ಕಾರ್ಮೆಲ್ ಶಾಲಾ ಮೈದಾನದಲ್ಲಿ ( ) ನಡೆದ ಶಿಬಿರದದಲ್ಲಿ 150 ಕ್ಕೂ ಹೆಚ್ಚು ಬಾಲಕರು ತರಬೇತಿ ಪಡೆದರು.. ಇಂದು ಶಿಬಿರದ ಸಮಾರೋಪ ಮತ್ತು ಪ್ರಮಾಣಪತ್ರ ವಿತರಣಾ ಸಮಾರಂಭ ನಡೆಯಿತು. ಸಮಾರಂಭದಲ್ಲಿ ಉದ್ಯಮಿ ಸಮಾಜ ಸೇವಕ ಶ್ರೀಧರ್ , ಮಾಕ್ಸ್ ಮುಲ್ಲರ್ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಸುರೇಶ್, ಕಪಿಲ್ ಕ್ರಿಕೆಟ್ ಕ್ಲಬ್ ಅಧ್ಯಕ್ಷ ನರಸಿಂಹಮೂರ್ತಿ ಶಿಬಿರದಲ್ಲಿ ಪಾಲ್ಗೊಂಡವರಿಗೆ ಪ್ರಮಾಣಪತ್ರ ಮತ್ತು ಸ್ಮರಣಿಕೆ ವಿತರಿಸಿದರು..ಈ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕಪಿಲ್ ಕ್ರಿಕೆಟ್ ಕ್ಲಬ್ ಅಧ್ಯಕ್ಷ ನರಸಿಂಹಮೂರ್ತಿ , 15 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಕ್ಲಬ್ ಕಳೆದ 14 ವರ್ಷಗಳಿಂದ ಸತತವಾಗಿ ಶಿಬಿರಗಳನ್ನು ಆಯೋಜಿಸಿ ಪ್ರತಿಭಾವಂತ ಕ್ರಿಕೆಟ್ ಪಟುಗಳ ಶೋಧಕಾರ್ಯದಲ್ಲಿ ನಿರತವಾಗಿದೆ ಎಂದರು. 5 ವರ್ಷದಿಂದ 16 ವರ್ಷ ವಯೋಮಾನದ ಮಕ್ಕಳಿಗೆ ಬೇಸಿಗೆ ತರಬೇತಿ ಆಯೋಜಿಸಲಾಗುತ್ತಿದೆ.. ಸರಾಸರಿ ಪ್ರತಿವರ್ಷ 150 ಕ್ಕೂ ಹೆಚ್ಚು ಮಕ್ಕಳು ನಮ್ಮಲ್ಲಿ ತರಬೇತಿ ಪಡೆಯುತ್ತಿದ್ದಾರೆ ಎಂದು ನರಸಿಂಹಮೂರ್ತಿ ಹೇಳಿದರು.. ನಮ್ಮಲ್ಲಿ ತರಬೇತಿ ಪಡೆಯುವವರ ಪೈಕಿ ಕನಿಷ್ಠ ಶೇಕಡಾ 10 ರಷ್ಟು ಮಕ್ಕಳು ವೃತ್ತಿಪರ ಕ್ರಿಕೆಟ್ ನಲ್ಲಿ ಭಾಗವಹಿಸ್ತಾರೆ. ಜಿಲ್ಲಾಮಟ್ಟ, ವಲಯಮಟ್ಟ, ರಾಜ್ಯಮಟ್ಟ ಹಾಗೂ ರಾಷ್ಟ್ರಮಟ್ಟದಲ್ಲೂ ಭಾಗಿವಹಿಸ್ತಾ ಇರುವುದು ನಮಗೆ ಹೆಮ್ಮೆಯ ವಿಷಯ ಎಂದರು.. ಗಾಯಕ್ವಾಡ್ ಫಿಫ್ಟಿ, ಗುಜರಾತ್ ಟೈಟಾನ್ಸ್‌ಗೆ ಸಾಧಾರಣ ಗುರಿ ನೀಡಿದ ಸಿಎಸ್‌ಕೆ..!ಸಮಾಜಸೇವಕ ಶ್ರೀಧರ್ ಮಾತನಾಡಿ, ಕಪಿಲ್ ಕ್ರಿಕೆಟ್ ಕ್ಲಬ್ ನ ಸೇವೆಯನ್ನು ಶ್ಲಾಘಿಸಿ , ನಾಡಿಗೆ ಒಳ್ಳೆಯ ಪ್ರತಿಭಾವಂತ ಕ್ರಿಕೆಟ್ ಪಟುಗಳನ್ನು ಕೊಡುಗೆಯಾಗಿ ನೀಡುವಲ್ಲಿ ಮಹತ್ತರ ಪಾತ್ರ ವಹಿಸಿ ಎಂದು ಹಾರೈಸಿದರು..ಭವಿಷ್ಯದಲ್ಲೂ ಕ್ಲಬ್ ನ ಉತ್ತಮ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು ಐಪಿಎಲ್‌ನಲ್ಲಿ ಗುಜರಾತ್‌ ಟೈಟನ್ಸ್‌ ಗೆಲ್ಲಲಿದೆ: ಪ್ರಿಯಾಂಕ್ ಖರ್ಗೆ ಮಾರ್ಮಿಕ ಟ್ವೀಟ್‌ ಜೂನ್ ಮೊದಲ ವಾರದಲ್ಲಿ ವಾರ್ಷಿಕ ತರಬೇತಿ ಶಿಬಿರ ಕೂಡ ಆರಂಭವಾಗಲಿದ್ದು 100 ಹೆಚ್ಚು ಆಟಗಾರರು ಭಾಗವಹಿಸಲಿದ್ದಾರೆ.. ಶಿಬಿರದಲ್ಲಿ ಮಕ್ಕಳ ದೈಹಿಕ ಸಾಮರ್ಥ್ಯ ವೃದ್ಧಿ, ಮಾನಸಿಕ ಸ್ಥೈರ್ಯ ತುಂಬಿ ಮನೋಬಲ ಹೆಚ್ಚಿಸುವುದರ ಜೊತೆಗೆ ವೃತ್ತಿಪರ ಕ್ರಿಕೆಟ್ ಗೆ ಪೂರಕವಾಗಿ ತಯಾರಿ ಮಾಡಲಾಗುವುದು ಎಂದು ಕಪಿಲ್ ಕ್ರಿಕೆಟ್ ಕ್ಲಬ್ ಹೇಳಿದೆ.