ವಿರಾಟ್ ಕೊಹ್ಲಿಯ ಘನಘೋರ ವೈಫಲ್ಯಕ್ಕೆ ಮರಗುತ್ತಿದೆ ಕ್ರಿಕೆಟ್​​​​ ಜಗತ್ತು..! * ಸತತವಾಗಿ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವ ವಿರಾಟ್ ಕೊಹ್ಲಿ * 19ರ ಎವರೇಜ್​ನಲ್ಲಿ ಬರೀ 233 ರನ್​​​ ಬಾರಿಸಿರುವ ಕೊಹ್ಲಿ * ಪಂಜಾಬ್ ಎದುರು ಕೊಹ್ಲಿ 20 ರನ್​ಗೆ ಔಟಾಗಿ ನಿರಾಸೆ ಮೂಡಿಸಿದ್ರು ಮುಂಬೈ(ಮೇ.15): ಹೇ, ವಿರಾಟ್ ಕೊಹ್ಲಿ ( ) ನಿಜಕ್ಕೂ ನಿನ್ನನ್ನು ಇಂತಹ ಸಂಕಷ್ಟದಲ್ಲಿ ನೋಡಲಾಗ್ತಿಲ್ಲ. ನೀನೆಂದು ಎದುರಾಳಿಗೆ ತಲೆಬಾಗಿದವನಲ್ಲ. ನಿನ್ನದೇನಿದ್ರೂ ತಲೆಎತ್ತಿ, ಎದುರಾಳಿ ಸೊಲ್ಲೆತ್ತದಂತೆ ಮಾಡಿದ ಶೂರ ನೀ. ಶರವೇಗದಲ್ಲಿ 70 ಶತಕ ಸಿಡಿಸಿ, ಸಚಿನ್​​​​ ತೆಂಡುಲ್ಕರ್ ( )​​​​ ರನ್​​​ ದಾಖಲೆಯನ್ನ ಅಳಿಸಿ 2ನೇ ಕ್ರಿಕೆಟ್ ದೇವರಾಗಲು ಹೊರಟ ದಿ ಗ್ರೇಟ್​​ ಲೆಜೆಂಡರಿ ನೀನು. ನೀನೆಂದು ಸೆಂಚುರಿ ದಾಹಕ್ಕಾಗಿ ದಣಿದವನಲ್ಲ ಅಥವಾ ರನ್​​​​ ಗಳಿಕೆಗಾಗಿ ಎಂದೂ ಸುಸ್ತಾದವನಲ್ಲ. ನೀನೆನಿದ್ರೂ ಆಧುನಿಕ ಕ್ರಿಕೆಟ್ನ ಶುದ್ಧ ಛಲಗಾರ. ಬದ್ಧತೆಗೆ ನೀನೆ ಸರಿಸಾಟಿ. ಇಂತಹ ಕಿಂಗ್​​ ಕೊಹ್ಲಿಗೆ ಈಗೇನಾಯ್ತು ? ನಿನ್ನ ಹತಾಶೆ, ಸತತ ವೈಫಲ್ಯವನ್ನ ಈ ಎರಡೂ ಕಣ್ಣುಗಳಿಂದ ನಿಜಕ್ಕೂ ನೋಡಲಾಗ್ತಿಲ್ಲ. ಪ್ರಸಕ್ತ ಐಪಿಎಲ್​​ನಲ್ಲಿ ನಿನ್ನ ಹಳೇ ಖದರ್​​​ ಮರೆಯಾಗಿದೆ. ನೀನೇನಾ ಆ ಕಿಂಗ್​ ಕೊಹ್ಲಿ ಅನ್ನೋ ಪ್ರಶ್ನೆ ಮೂಡಿಸಿಬಿಟ್ಟಿರುವೆ. 19ರ ಎವರೇಜ್​ನಲ್ಲಿ ಬರೀ 233 ರನ್​​​. ಅದ್ರಲ್ಲಿ 3 ಬಾರಿ ಡಕೌಟ್​​​​. ನಿಜಕ್ಕೂ ಹೃದಯ ಛಿದ್ರಗೊಳಿಸಿದೆ. ಅದ್ರಲ್ಲೂ ನೀನು ಸುಲಭವಾಗಿ ವಿಕೆಟ್​ ಒಪ್ಪಿಸಿ, ತಲೆತಗ್ಗಿಸುತ್ತಾ ಪೆವಿಲಿಯನ್​ ಕಡೆ ಸಾಗುವೆ ನೋಡು ಆ ಪ್ರಸ್ಟ್​ರೇಶನ್​​​​ ನೋಡಲಾಗ್ತಿಲ್ಲ. ಆಕಾಶದತ್ತ ಮುಖ ಮಾಡಿ ಏನನ್ನೋ ಮಾತನಾಡುವೆ. ಆ ನಿರಾಸೆಯ ಭಾವ ನಿನ್ನನ್ನ ಆವರಿಸಿದೆ. ಎಲ್ಲವನ್ನ ಕಳೆದುಕೊಂಡೆ ಬಿಟ್ಟೆ ಅನ್ನೋ ನಿನ್ನೊಳಗಿನ ಹತಾಶತನ ಬರೀ ನಿನ್ನಷ್ಟೇ ಅಲ್ಲ, ನಿನ್ನನ್ನ ಪ್ರೀತಿಸುವ ಇಡೀ ಕ್ರಿಕೆಟ್​​​ ಜಗತ್ತನ್ನ ಮರುಗುಂತೆ ಮಾಡಿದೆ. ಬಿಗ್​​ ಫೇಲಿವರ್​ ಕೊಹ್ಲಿಗೆ ಪಂಜಾಬ್​ ಸಾಂತ್ವನ: 15ನೇ ಐಪಿಎಲ್​​​ನಲ್ಲಿ ತೀರ ಕಳಪೆ ಆಟವಾಡ್ತಿರೋ ಕೊಹ್ಲಿಗೆ ಪಂಜಾಬ್​ ಕಿಂಗ್ಸ್ ( )​ ತಂಡ ಸಾಂತ್ವನದ ಮಾತುಗಳನ್ನ ಹೇಳಿದೆ. ವಿರಾಟ್ ಕೊಹ್ಲಿ, ನಾವು ಸಹ ಅದನ್ನು ಅನುಭವಿಸಿದ್ದೇವೆ. ಅದೃಷ್ಟವು ಶೀಘ್ರದಲ್ಲೇ ನಿಮ್ಮ ಕಡೆಗೆ ತಿರುಗುತ್ತದೆ ಎಂದು ಭಾವಿಸುತ್ತೇವೆ,' ಎಂದು ಪಂಜಾಬ್ ಕಿಂಗ್ಸ್ ಇನ್ಸ್ಟಾಗ್ರಾಂನಲ್ಲಿ ಹತಾಶೆಗೊಂಡ ಕೊಹ್ಲಿಯ ಚಿತ್ರದೊಂದಿಗೆ ಶೀರ್ಷಿಕೆ ಬರೆದುಕೊಂಡಿದ್ದಾರೆ. ನೋವಿನಲ್ಲಿ ಕೊಹ್ಲಿಗೆ ದೈರ್ಯ ತುಂಬೋ ಪೋಸ್ಟ್​ ಮಾಡಿರೋ ಪಂಜಾಬ್​​​ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗ್ತಿದೆ. ಆರ್​ಸಿಬಿ ಫ್ಯಾನ್ಸ್​ ( ) ವಿ ಲವ್​​ ಯೂ ಪಂಜಾಬ್. ನೀವು ನಮ್ಮ ಹೃದಯ ಗೆದ್ದಿದ್ದೀರಿ​​​ ಎಂದಿದ್ದಾರೆ. ಹೆಗಲ ಮೇಲೆ ಕೈ ಹಾಕಿ ಧೈರ್ಯ ತುಂಬಿದ ಡುಪ್ಲೆಸಿಸ್: ಇನ್ನೂ ಪಂಜಾಬ್​ ವಿರುದ್ಧ ಆರ್​ಸಿಬಿ ಹೀನಾಯ ಸೋಲಿನ ಬಳಿಕ ಕೊಹ್ಲಿ ತೀರ ಬೇಸರಗೊಂಡಿದ್ರು. ಈ ಪಂದ್ಯದಲ್ಲಿ ಕೊಹ್ಲಿ 20 ರನ್​ಗೆ ಔಟಾಗಿ ನಿರಾಸೆ ಮೂಡಿಸಿದ್ರು. ಹೀಗಾಗಿ ಪ್ರಸ್ಟ್​ರೇಶನ್​ಗೆ ಒಳಗಾಗಿದ್ರು. ಇದನ್ನ ಗಮನಿಸಿದ ಕ್ಯಾಪ್ಟನ್ ಡುಪ್ಲೆಸಿಸ್​ ಪಂದ್ಯದ ಬಳಿಕ ಕೊಹ್ಲಿ ಹೆಗಲ ಮೇಲೈ ಕೈ ಹಾಕಿ ಧೈರ್ಯ ತುಂಬಿದ್ರು. 2022 ಇಂದಿನಿಂದ ಮುಂಬೈ-ಚೆನ್ನೈಗೆ ಆರ್​ಸಿಬಿ ಫ್ಯಾನ್ಸ್ ಸಪೋರ್ಟ್​..! ಒಟ್ಟಿನಲ್ಲಿ ಸತತ ವೈಫಲ್ಯ ಕೊಹ್ಲಿಯನ್ನ ಹತಾಶೆಗೊಳಿಸಿದೆ. ಆದ್ರೆ ಯಾವ ವೈಫಲ್ಯವೂ ಕೊನೆಯಲ್ಲ. ಅದಕ್ಕೆ ಎಂಡ್​​​ ಅನ್ನೋದು ಇದ್ದೇ ಇದೆ. 1983 ರಲ್ಲಿ ಸುನೀಲ್​ ಗವಾಸ್ಕರ್​ ಹಾಗೂ ಸಚಿನ್​​​ 100ನೇ ಶತಕದ ಟೈಮ್​ ಅಲ್ಲಿ ಇಂತಹ ವೈಫಲ್ಯ ಕಂಡು ಬಳಿಕ ಲಯಕ್ಕೆ ಮರಳಿದ್ರು. ಸದ್ಯ ಕೊಹ್ಲಿಯೂ ಶೀಘ್ರವೇ ಅಂಗಳದಲ್ಲಿ ಹಳೇ ಖದರ್​ ತೋರಲಿ ಎಂದು ಆಶಿಸೋಣ.