ಗಾಯಾಳು ರೂಪಿಂದರ್‌ ಸಿಂಗ್ ಏಷ್ಯಾಕಪ್‌ ಹಾಕಿ ಟೂರ್ನಿಯಿಂದಲೇ ಔಟ್‌ * ಏಷ್ಯಾ ಕಪ್‌ ಹಾಕಿ ಟೂರ್ನಿಯಿಂದ ಹಿರಿಯ ಹಾಕಿ ಆಟಗಾರ ರೂಪಿಂದರ್‌ ಸಿಂಗ್‌ ಔಟ್ * ಅಭ್ಯಾಸದ ವೇಳೆ ಮೊಣಕೈ ಗಾಯಕ್ಕೆ ತುತ್ತಾಗಿದ್ದು, ಟೂರ್ನಿಯಿಂದ ಹೊರಬಿದ್ದಿದ್ದಾರೆ. * ಉಪನಾಯಕನಾಗಿ ಆಯ್ಕೆಯಾಗಿದ್ದ ಬೀರೇಂದ್ರ ಲಾಕ್ರಾ ತಂಡದ ನಾಯಕತ್ವ ವಹಿಸಿದ್ದಾರೆ ಬೆಂಗಳೂರು(ಮೇ.14): ನಿವೃತ್ತಿ ತ್ಯಜಿಸಿ ಭಾರತ ತಂಡಕ್ಕೆ ವಾಪಸಾಗಿ ನಾಯಕನ ಸ್ಥಾನ ಪಡೆದಿದ್ದ ಹಿರಿಯ ಹಾಕಿ ಆಟಗಾರ ರೂಪಿಂದರ್‌ ಸಿಂಗ್‌ ( ) ಗಾಯಗೊಂಡಿದ್ದು, ಮೇ 23ರಿಂದ ಜಕಾರ್ತದಲ್ಲಿ ಆರಂಭವಾಗಲಿರುವ ಏಷ್ಯಾ ಕಪ್‌ ಹಾಕಿ ಟೂರ್ನಿಯಿಂದ ( ) ಹೊರಬಿದ್ದಿದ್ದಾರೆ. ಅಭ್ಯಾಸ ವೇಳೆ ಅವರು ಮೊಣಕೈ ಗಾಯಕ್ಕೆ ತುತ್ತಾಗಿದ್ದು, ಟೂರ್ನಿಗೆ ಲಭ್ಯರಿಲ್ಲ ಎಂದು ಹಾಕಿ ಇಂಡಿಯಾ ( ) ಶುಕ್ರವಾರ ಮಾಹಿತಿ ನೀಡಿದೆ. 20 ಆಟಗಾರರನ್ನೊಳಗೊಂಡ ಭಾರತ ಹಾಕಿ ತಂಡಕ್ಕೆ ರೂಪಿಂದರ್ ಪಾಲ್ ಸಿಂಗ್ ನಾಯಕರಾಗಿದ್ದರು. ಇದೀಗ ಉಪನಾಯಕನಾಗಿ ಆಯ್ಕೆಯಾಗಿದ್ದ ಬೀರೇಂದ್ರ ಲಾಕ್ರಾ ತಂಡದ ನಾಯಕತ್ವ ವಹಿಸಲಿದ್ದು, ಕರ್ನಾಟಕದ ಹಿರಿಯ ಆಟಗಾರ ಎಸ್‌.ವಿ.ಸುನಿಲ್‌ ( ) ಉಪನಾಯಕನಾಗಿ ನೇಮಕಗೊಂಡಿದ್ದಾರೆ. ರೂಪಿಂದರ್‌ ಬದಲು ನೀಲಂ ಸಂಜೀಪ್‌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಭಾರತ ಹಾಕಿ ತಂಡ ಹೀಗಿದೆ ನೋಡಿ: ಗೋಲ್ ಕೀಪರ್:ಪಂಕಜ್‌ ಕುಮಾರ್ ರಜಾಕ್, ಸೂರಜ್ ಕಾರ್ಕೇರ ಡಿಫೆಂಡರ್ಸ್‌:ಯಶ್ದೀಪ್ ಸಿವಾಚ್, ಅಭಿಷೇಕ್ ಲಾಕ್ರಾ, ಬೀರೇಂದ್ರ ಲಾಕ್ರಾ(ನಾಯಕ), ಮನ್ಜೀತ್, ಡಿಪ್ಸಾನ್ ತಿರ್ಕೆ. ಮಿಡ್‌ ಫೀಲ್ಡರ್ಸ್‌:ವಿಷ್ಣುಕಾಂತ್ ಸಿಂಗ್, ರಾಜ್ ಕುಮಾರ್ ಪಾಲ್, ಮರಿಸ್ವರೆನ್ ಸ್ಕೆತಿವೆಲ್, ಶೇಷೇಗೌಡ ಬಿ ಎಂ, ಸಿಮರ್‌ಜಿತ್ ಸಿಂಗ್. ಫಾರ್ವಡ್ಸ್‌:ಪವಾನ್ ರಾಬ್ಬಾರ್, ಆಭರಣ್ ಸುದೇವ್, ಎಸ್ ವಿ ಸುನಿಲ್(ಉಪನಾಯಕ), ಉತ್ತಮ್ ಸಿಂಗ್, ಎಸ್. ಕಾರ್ತಿ, ನಿಲಮ್ ಸಂಜೀಪ್ ವಿಶ್ವ ಚೆಸ್‌ ಉಪಾಧ್ಯಕ್ಷ ಸ್ಥಾನಕ್ಕೆ ಆನಂದ್‌ ಸ್ಪರ್ಧೆ ಚೆನ್ನೈ: ಭಾರತದ ದಿಗ್ಗಜ ಚೆಸ್‌ ಆಟಗಾರ ವಿಶ್ವನಾಥನ್‌ ಆನಂದ್‌ ಅವರು ವಿಶ್ವ ಚೆಸ್‌ ಫೆಡರೇಷನ್‌ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಚೆನ್ನೈನಲ್ಲಿ ಜುಲೈ-ಆಗಸ್ಟ್‌ನಲ್ಲಿ ನಡೆಯಲಿರುವ 44ನೇ ಚೆಸ್‌ ಒಲಿಂಪಿಯಾಡ್‌ ವೇಳೆ ಫೆಡರೇಶನ್‌ ಚುನಾವಣೆ ನಡೆಯಲಿದ್ದು, ಆನಂದ್‌ ಅವರು ಉಪಾಧ್ಯಕ್ಷ ಹುದ್ದೆಗೆ ಸ್ಪರ್ಧಿಸಲಿದ್ದಾರೆ. ಐತಿಹಾಸಿಕ ಸಾಧನೆ ಮಾಡಿದ ಭಾರತ ಬ್ಯಾಡ್ಮಿಂಟನ್ ತಂಡ, ಥಾಮಸ್ ಕಪ್ ಫೈನಲ್ ಗೆ ಲಗ್ಗೆ! 5 ಬಾರಿ ವಿಶ್ವ ಚಾಂಪಿಯನ್‌ ಆನಂದ್‌ ಅವರು ಮತ್ತೊಮ್ಮೆ ಅಧಿಕಾರ ಬಯಸಿರುವ ಹಾಲಿ ಅಧ್ಯಕ್ಷ ರಷ್ಯಾದ ಅರ್ಕಾಡಿ ಡ್ವೊರ್ಕೊವಿಚ್‌ ತಂಡದಿಂದ ಕಣಕ್ಕಿಳಿಯಲಿದ್ದಾರೆ. ಆನಂದ್‌ ಈ ಬಾರಿ ಒಲಿಂಪಿಯಾಡ್‌ನಲ್ಲಿ ಸ್ಪರ್ಧಿಸುತ್ತಿರುವ ಭಾರತ ತಂಡಕ್ಕೆ ಮಾರ್ಗದರ್ಶಕರಾಗಿ ಕಾರ‍್ಯನಿರ್ವಹಿಸಲಿದ್ದಾರೆ. ಕಿವುಡರ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಬೆಳ್ಳಿ ನವದೆಹಲಿ: ಬ್ರೆಜಿಲ್‌ನಲ್ಲಿ ನಡೆಯುತ್ತಿರುವ 24ನೇ ಕಿವುಡರ ಒಲಿಂಪಿಕ್ಸ್‌ನಲ್ಲಿ ಭಾರತ ಮತ್ತೊಂದು ಪದಕ ತನ್ನದಾಗಿಸಿಕೊಂಡಿದ್ದು, 12 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಶುಕ್ರವಾರ ನಡೆದ ಪುರುಷರ ಡಬಲ್ಸ್‌ ಟೆನಿಸ್‌ ಫೈನಲ್‌ನಲ್ಲಿ ಧನರಾಜ್‌ ದುಬೆ-ಪೃಥ್ವಿ ಶೇಖರ್‌ ಜೋಡಿ ಫ್ರಾನ್ಸ್‌ನ ಅಲಿಕ್ಸ್‌ ಲಾರೆಂಟ್‌-ವಿನ್ಸೆಂಟ್‌ ಜೋಡಿ ವಿರುದ್ಧ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತು. ಕಳೆದ ಬಾರಿ ಮಿಶ್ರ ಡಬಲ್ಸ್‌ನಲ್ಲಿ ಕಂಚು ಗೆದ್ದಿದ್ದ ಪೃಥ್ವಿಗೆ ಇದು 2ನೇ ಪದಕ. ವಿಶ್ವ ಬಾಕ್ಸಿಂಗ್‌: ಲವ್ಲೀನಾಗೆ ಪ್ರಿ ಕ್ವಾರ್ಟರ್‌ನಲ್ಲಿ ಸೋಲು ನವದೆಹಲಿ: ಟೋಕಿಯೋ ಒಲಿಂಪಿಕ್ಸ್‌ ( ) ಕಂಚಿನ ಪದಕ ವಿಜೇತ ಬಾಕ್ಸರ್‌ ಲವ್ಲೀನಾ ಬೊರ್ಗೊಹೈನ್‌ ಮಹಿಳಾ ಬಾಕ್ಸಿಂಗ್‌ ವಿಶ್ವ ಚಾಂಪಿಯನ್‌ಶಿಪ್‌ನ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಅಭಿಯಾನ ಕೊನೆಗೊಳಿಸಿದ್ದಾರೆ. ಇಸ್ತಾನ್‌ಬುಲ್‌ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಶುಕ್ರವಾರ ಲವ್ಲೀನಾ 70 ಕೆ.ಜಿ. ವಿಭಾಗದ ಅಂತಿಮ 16ರ ಸುತ್ತಿನ ಸ್ಪರ್ಧೆಯಲ್ಲಿ ನೈಜೀರಿಯಾದ ಸಿಂಡಿ ವಿರುದ್ಧ 1-4 ಅಂತರದಲ್ಲಿ ಪರಾಭವಗೊಂಡರು. ಇನ್ನು, 50 ಕೆ.ಜಿ. ವಿಭಾಗದಲ್ಲಿ ಭಾರತದ ಅನಾಮಿಕಾ, 54 ಕೆ.ಜಿ. ವಿಭಾಗದಲ್ಲಿ ಶಿಕ್ಷಾ, 60 ಕೆ.ಜಿ. ವಿಭಾಗದಲ್ಲಿ ಜಾಸ್ಮಿನ್‌ ಅಂತಿಮ 16ರ ಸುತ್ತಿಗೆ ಪ್ರವೇಶಿದ್ದಾರೆ.