: ಬ್ಯಾಟಿಂಗ್ ಸೂರ್ಯನಿಗೆ ಕವಿದಿದೆ ಕ್ರಿಕೆಟ್ ಗ್ರಹಣ..! * ಬ್ಯಾಟಿಂಗ್‌ನಲ್ಲಿ ಪದೇ ಪದೇ ವೈಫಲ್ಯ ಅನುಭವಿಸುತ್ತಿರುವ ವಿರಾಟ್ ಕೊಹ್ಲಿ * ರನ್ ಬೇಟೆಗಾರ, ಈಗ ಒಂದೊಂದು ರನ್ ಬಾರಿಸಲು ಪರದಾಟ * 71ನೇ ಶತಕಕ್ಕಾಗಿ ಎರಡುವರೆ ವರ್ಷಗಳಿಂದ ಕಾಯುತ್ತಿರುವ ಕಿಂಗ್ ಕೊಹ್ಲಿ ಬೆಂಗಳೂರು(ಮೇ11): ಎಂಥಾ ಆಟಗಾರನಿಗೆ ಅದೆಂಥಾ ದುಸ್ಥಿತಿ. ಭಾರತೀಯ ಕ್ರಿಕೆಟ್ ಕಂಡ ಪ್ರಚಂಡ ಬ್ಯಾಟ್ಸ್​​ಮನ್, ಅಪ್ರತಿಮ ಮ್ಯಾಚ್ ವಿನ್ನರ್, ಚೇಸ್ ಮಾಸ್ಟರ್, ಬ್ಯಾಟ್ ಹಿಡಿದು ನಿಂತ್ರೆ ಬೌಲರ್​​ಗಳನ್ನು ಬೆಂಡೆತ್ತಿ ಹುರಿದು ಮುಕ್ಕಿ ಬಿಡುತ್ತಿದ್ದ ರಣ ಬೇಟೆಗಾರ, ರನ್ ಬೇಟೆಗಾರ. ಅದೇ ಬೇಟೆಗಾರನೀಗ ಒಂದೊಂದು ರನ್​​​​ಗೂ ಪರದಾಡುತ್ತಿದ್ದಾನೆ. ಕ್ರಿಕೆಟ್ ಮೈದಾನದಲ್ಲಿ ಪ್ರಚಂಡನ ಘೋರ ವೈಫಲ್ಯ!: ಯೆಸ್, ಇದು ಗ್ರಹಣವಲ್ಲದೆ ಮತ್ತಿನ್ನೇನೂ ಅಲ್ಲ. ಶರವೇಗದಲ್ಲಿ 70 ಅಂತಾರಾಷ್ಟ್ರೀಯ ಶತಕಗಳನ್ನು ಚಚ್ಚಿ ಬಿಸಾಕಿದ್ದ ಬ್ಯಾಟಿಂಗ್ ಮಾಸ್ಟರ್, 71ನೇ ಶತಕಕ್ಕಾಗಿ ಎರಡುವರೆ ವರ್ಷಗಳಿಂದ ಕಾಯುತ್ತಲೇ ಇದ್ದಾನೆ. ನಾಯಕತ್ವವನ್ನು ಬಿಟ್ಟು, ಒತ್ತಡಗಳನ್ನೆಲ್ಲಾ ಬದಿಗಿಟ್ಟು ಆಡಿದ್ರೂ ವಿರಾಟ್ ಕೊಹ್ಲಿಗೆ ರನ್ ಗಳಿಸಲಾಗುತ್ತಿಲ್ಲ. ಈ ಬಾರಿಯ ಐಪಿಎಲ್​​ನಲ್ಲಿ ವಿರಾಟ್ ಅಬ್ಬರ ಕಾದಿದೆ ಅಂತ ಕಾದು ಕುಳಿತವರಿಗೆ ವಿರಾಟ್ ಕೊಹ್ಲಿ ( ) ನಿರಾಸೆ ಮಾಡಿ ಬಿಟ್ಟಿದ್ದಾನೆ. ಈ ಸೀಸನ್ ಐಪಿಎಲ್​ನಲ್ಲಿ ಆಡಿರೋ 12 ಇನ್ನಿಂಗ್ಸ್​ಗಳಲ್ಲಿ ವಿರಾಟ್ ಕೊಹ್ಲಿ ಗಳಿಸಿರೋದು ಕೇವಲ 216 ರನ್. ಸರಾಸರಿ 19.63, ಸ್ಟ್ರೈರ್​ರೇಟ್ 11.34. ಇದು ಕೊಹ್ಲಿ ಆಟ ಅಲ್ಲವೇ ಇಲ್ಲ. ಕೊಹ್ಲಿಗೆ ಎದುರಾಗಿರೋ ದುಸ್ಥಿತಿಯನ್ನು ನೆನೆದು ಆತನ ಅಭಿಮಾನಿಗಳು ಮರುಗುತ್ತಿದ್ದಾರೆ. ಯಾಕಂದ್ರೆ ವಿರಾಟ್ ಕೊಹ್ಲಿ ಯಾರದ್ದೋ ಕೃಪೆಯಿಂದ ಆಡಿದವನೂ ಅಲ್ಲ, ಯಾವುದೋ ಲಾಬಿಯಿಂದ ಇಲ್ಲಿಯವರೆಗೆ ಬಂದವನೂ ಅಲ್ಲ. ಆತನದ್ದು , , . ಆತ ಯಾರೋ ಚಿಲ್ಚು-ಪಲ್ಟುಗಳನ್ನು ಹೊಡೆದು ಸ್ಟಾರ್ ಆದವನಲ್ಲ. ಮದ್ದಾನೆಗಳ ಮದವನ್ನು ಕರಗಿಸಿದ ಭುಜಬಲವದು. ಕೂಕಬುರ ಚೆಂಡು ಭುಜದೆತ್ತರಕ್ಕೆ ನುಗ್ಗಿ ಬರುವ ಆಸ್ಟ್ರೇಲಿಯಾದಲ್ಲಿ, ಡ್ಯೂಕ್ ಬಾಲ್ ಯರ್ರಾಬಿರ್ರಿ ಸ್ವಿಂಗ್ ಆಗುವ ಇಂಗ್ಲೆಂಡ್​​ನಲ್ಲಿ ಒಂದೇ ಟೆಸ್ಟ್ ಸರಣಿಯಲ್ಲಿ ನಾಲ್ಕು ನಾಲ್ಕು ಸೆಂಚುರಿ..! ವಿರಾಟ್ ಕೊಹ್ಲಿ. ಈ 3 ಕಾರಣಕ್ಕಾಗಿಯಾದರೂ ಲೆಜೆಂಡ್​ ಧೋನಿಯ ನಿವೃತ್ತಿ ಚಿಂತೆ ಬಿಟ್ಟುಬಿಡಿ..! ದಾಖಲೆಗಳನ್ನು ಮುರಿಯುತ್ತಾ ಮುನ್ನಗ್ಗುತ್ತಿದ್ದ ಆಧುನಿಕ ಕ್ರಿಕೆಟ್​ನ ದಿಗ್ಗಜ ಆಟಗಾರನೀಗ ದಿಕ್ಕೇ ತೋಚದಂತೆ ನಿಂತು ಬಿಟ್ಟಿದ್ದಾನೆ. ವಿರಾಟ್ ಕೊಹ್ಲಿ ಇವತ್ತು ಸೆಂಚುರಿ ಹೊಡೀತಾನೆ, ನಾಳೆ ಹೊಡೀತಾನೆ. ಕೊಹ್ಲಿ ಬ್ಯಾಟ್​​ನಿಂದ ರನ್ ಪ್ರವಾಹ ಹರಿಯತ್ತೆ ಅಂತ ಅಭಿಮಾನಿಗಳು ಕಾಯುತ್ತಲೇ ಇದ್ದಾರೆ. ಆದ್ರೆ ಆ ದಿನ ಮಾತ್ರ ಬರ್ತಾನೇ ಇಲ್ಲ. ಹಾಗಾದ್ರೆ ಅಪ್ರತಿಮ ಆಟಗಾರನ ಕಥೆ ಮುಗಿದೇ ಹೋಯ್ತಾ..? ಖಂಡಿತಾ ಇಲ್ಲ. ಯಾಕಂದ್ರೆ ವಿರಾಟ್ ಕೊಹ್ಲಿಗೆ ಈಗ ಕವಿದಿರೋದು ಒಂದು ಗ್ರಹಣ ಅಷ್ಟೇ. ಜಗತ್ತಿಗೆ ಬೆಳಕು ಕೊಡುವ ಸೂರ್ಯನನ್ನೇ ಬಿಡದ ಗ್ರಹಣ, ವಿರಾಟ್ ಕೊಹ್ಲಿಯನ್ನು ಬಿಟ್ಟೀತೇ..? . .