ಈ 3 ಕಾರಣಕ್ಕಾಗಿಯಾದರೂ ಲೆಜೆಂಡ್​ ಧೋನಿಯ ನಿವೃತ್ತಿ ಚಿಂತೆ ಬಿಟ್ಟುಬಿಡಿ..! * ಐಪಿಎಲ್‌ನಲ್ಲಿ ಮಿಂಚುತ್ತಿದ್ದಾರೆ ಮ್ಯಾಚ್ ಫಿನಿಶರ್ ಮಹೇಂದ್ರ ಸಿಂಗ್ ಧೋನಿ * ಸದ್ಯಕ್ಕೆ ಐಪಿಎಲ್‌ನಿಂದ ನಿವೃತ್ತಿಯಾಗಲ್ಲ ಸಿಎಸ್‌ಕೆ ನಾಯಕ * ಇನ್ನು ಕೆಲ ವರ್ಷ ಐಪಿಎಲ್​​ ಆಡಲಿದ್ದಾರೆ ಕ್ಯಾಪ್ಟನ್ ಕೂಲ್ ಬೆಂಗಳೂರು(ಮೇ.11): ದಿ ಮಾಸ್ಟರ್ ಮೈಂಡ್​​ ಎಂ.ಎಸ್ ಧೋನಿ ( ) ಕಳೆದ ವರ್ಷ ಡೆಫಿನೇಟ್ಲಿ ನಾಟ್​ ಎನ್ನುವ ಮೂಲಕ ಐಪಿಎಲ್​ () ನಿವೃತ್ತಿ ಬಗೆಗಿನ ಗಾಸಿಪ್​​ಗೆ ಫುಲ್​​ ಸ್ಟಾಪ್​ ಹಾಕಿದ್ರು. ಅಭಿಮಾನಿಗಳು ಒಂದು ಕ್ಷಣ ನಿಟ್ಟುಸಿರು ಬಿಟ್ಟಿದ್ರು. ಆದ್ರೆ ಮತ್ತೆ ಕರೆಕ್ಟಾಗಿ ಒಂದು ವರ್ಷ. ಮಹಿ ವಿದಾಯ ವಿಚಾರ ಮತ್ತೆ ಮುನ್ನಲೆಗೆ ಬಂತು. ಆಗ ಚಾಂಪಿಯನ್​ ಕ್ಯಾಪ್ಟನ್ ಮತ್ತೆ ಹೇಳಿದ್ದು, ಡೆಫಿನೇಟ್ಲಿ ನಾಟ್​​​. ಆದ್ರೆ ಈ ಸಲ ಒಂದು ಹೆಜ್ಜೆ ಮುಂದೆ ಹೋದ ಎಂಎಸ್​​ಡಿ ಮುಂದಿನ ಸೀಸನ್​​ನಲ್ಲಿ ಯೆಲ್ಲೋ ಜೆರ್ಸಿಯಲ್ಲಿ ಮತ್ತೆ ಆಡೇ ಆಡ್ತೀನಿ. ಆದ್ರೆ ಅದು ಯಾವ ಯೆಲ್ಲೋ ಜೆರ್ಸಿ ಅನ್ನೋದು ನಿಮಗೆ ಮುಂದೆ ಗೊತ್ತಾಗುತ್ತೆ ಅನ್ನುವ ಮೂಲಕ ಸಸ್ಪೆನ್ಸ್​ ಕಾಯ್ದುಕೊಂಡ್ರು. ಧೋನಿ ಹೀಗೆ ನಿಗೂಢ ಮಾತುಗಳನ್ನಾಡಿದ ಮೇಲೆ ಸಿಎಸ್​ಕೆ ಫ್ಯಾನ್ಸ್ ಫುಲ್​ ಕನ್​​​​ಫ್ಯೂಶನ್​​ನಲ್ಲಿದ್ದಾರೆ. ಯಾಕಂದ್ರೆ ಧೋನಿ ಮುಂದಿನ ವರ್ಷ ಯೆಲ್ಲೋ ಜೆರ್ಸಿಯಲ್ಲಿ ಕಾಣಿಸಿಕೊಳ್ತೀನಿ ಅಂದಿದ್ದಾರೆ. ಆದ್ರೆ ಅದು ಕ್ಯಾಪ್ಟನ್​ ಆಗಿನಾ ಅಥವಾ ತಂಡದ ಮೆಂಟರ್ ಆಗಿನಾ ಅನ್ನೋ ಪ್ರಶ್ನೆ ಕಾಡ್ತಿದೆ. ವೀಕ್ಷಕರೇ ಮಹಿ ನಿವೃತ್ತಿ ಬಗ್ಗೆ ಏನೇ ಸಸ್ಪೆನ್ಸ್ ಟಾಕ್ಸ್ ಆಡಿಲ್ರಿ. ಅದರ ಬಗ್ಗೆ ನೀವು ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಯಾಕಂದ್ರೆ ಎಂಎಸ್​​ಡಿ 2023ನೇ ಐಪಿಎಲ್ ಅಷ್ಟೇ ಅಲ್ಲ, ಇನ್ನು ಕೆಲ ವರ್ಷ ಐಪಿಎಲ್​​ ಆಡಲಿದ್ದಾರೆ. ಅದಕ್ಕೆ ಮೂರು ರೀಸನ್ಸ್​ ಇವೆ. ಆ ಕಾರಣಗಳನ್ನ ಒನ್​​​​ ಬೈ ಒನ್ ಹೇಳ್ತೀವಿ ನೋಡಿ. ರೀಸನ್​​​​ ನಂ.1 - ಧೋನಿ ಈಗಲೂ ಫುಲ್​ ಫಿಟ್ ಆ್ಯಂಡ್ ಫೈನ್​:ಕ್ರಿಕೆಟರ್ಸ್​ ಸುದೀರ್ಘ ಕಾಲ ಆಡಬೇಕಂದ್ರೆ ಫಿಟ್ನೆಸ್​ ತುಂಬಾ ಮುಖ್ಯ. ಧೋನಿ ಈ ವಿಚಾರದಲ್ಲಿ ಒಂದು ಹೆಜ್ಜೆ ಮುಂದಿದ್ದಾರೆ. 40 ಹರೆಯದಲ್ಲೂ 20ರ ಯಂಗಸ್ಟರ್ಸ್​ನಂತೆ ಫಿಟ್ನೆಸ್ ಕಾಯ್ದುಕೊಂಡಿದ್ದಾರೆ. ಡೆಲ್ಲಿ ವಿರುದ್ಧ ಪಂದ್ಯದಲ್ಲಿ ಅದನ್ನ ಪ್ರೂವ್​ ಮಾಡಿದ್ರು. ಕೊನೆ ಓವರ್​​ನಲ್ಲಿ 1 ರನ್​ ಕದಿಯುವ ಬದಲಿ ವೇಗವಾಗಿ ಓಡಿ ಎರಡೆರಡು ರನ್​​​ ಕಲೆಹಾಕಿದ್ರು. ಜೊತೆ ಕೀಪಿಂಗ್​​ನಲ್ಲೂ ಅದೇ ಚುರುಕುತನವಿದೆ. ಹೀಗಾಗಿ ಫಿಟ್​ ಆಂಡ್​ ಫೈನ್​​ ಧೋನಿ ಇನ್ನು ಕೆಲ ವರ್ಷ ಐಪಿಎಲ್ ಆಡೋದನ್ನ ಅಲ್ಲಗಳೆಯುವಂತಿಲ್ಲ. ರೀಸನ್​​​​ ನಂ. 2- ಈಗಲೂ ಪೇಸ್​ ಹಿಟ್ಟರ್:ಧೋನಿಗೆ ಫಾಸ್ಟ್​ ಬೌಲರ್ಸ್​ ದಂಡಿಸೋದು ಅಂದ್ರೆ ತುಂಬಾನೇ ಇಷ್ಟ. ಈಗಲೂ ಅದೇ ರಿದಮ್ ಉಳಿಸಿಕೊಂಡಿದ್ದಾರೆ. ಸ್ಲಾಗ್ ಓವರ್​​ಗಳಲ್ಲಿ ವೇಗಿಗಳನ್ನ ಡೆಸ್ಟ್ರಾಯ್​ ಮಾಡ್ತಿದ್ದಾರೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ಅದನ್ನ ಸಾಬೀತು ಪಡಿಸಿದ್ರು. ಜಯದೇವ್​ ಉನಾದ್ಕತ್​​​ರ ಒಂದೇ ಓವರ್​​ನಲ್ಲಿ 16 ರನ್​​​ ಸಿಡಿಸಿ ಸಿಎಸ್​​ಕೆಗೆ ರೋಚಕ ಗೆಲುವಿಗೆ ಕಾರಣರಾಗಿದ್ರು. ಸೋ ಇಂತಹ ಪೇಸ್​​ ಹಿಟ್ಟರ್​​ ಮುಂದಿನ ಬಾರಿ ಹೇಗೆ ನಿವೃತ್ತಿ ಕೊಡಲು ಸಾಧ್ಯ. ಡೆಲ್ಲಿ ಎದುರಿನ ಪಂದ್ಯದ ವೇಳೆ ಧೋನಿ ಬ್ಯಾಟ್‌ ಕಚ್ಚಿದ್ದೇಕೆ..? ಈ ಬಗ್ಗೆ ಅಮಿತ್ ಮಿಶ್ರಾ ಹೇಳಿದ್ದೇನು..? ರೀಸನ್​​​​ ನಂ. 3- ಸಿಎಸ್​ಕೆಗೆ ಕ್ಯಾಪ್ಟನ್ಸಿ ಅಗತ್ಯ:ಭವಿಷ್ಯ ನಾಯಕನನ್ನ ರೆಡಿ ಮಾಡಲು ಹೋಗಿ ಸಿಎಸ್​ಕೆ ಈಗಾಗ್ಲೇ ಕೈ ಸುಟ್ಟುಕೊಂಡಿದೆ. ಜಡ್ಡು ಬಳಿಕ ಧೋನಿನೇ ಮತ್ತೆ ಸಿಎಸ್​​ಕೆಯನ್ನ ( ) ಮುನ್ನಡೆಸ್ತಿದ್ದಾರೆ. ಒಂದು ವೇಳೆ ಮಹಿ ನಿವೃತ್ತಿ ಕೊಟ್ರೆ ಸಿಎಸ್​ಕೆ ಹಳ್ಳ ಹಿಡಿಯಲಿದೆ. ಹೀಗಾಗಿ ಇನ್ನಷ್ಟು ವರ್ಷ ತಂಡವನ್ನ ಮುನ್ನಡೆಸುವ ಅಗತ್ಯವಿದೆ. ಫೈನಲಿ ಮೇಲಿನ ರೀಸನ್ಸ್ ನೋಡಿದ ಮೇಲೆ ಈಗ ನೀವೇ ಹೇಳಿ ಧೋನಿ ಮುಂದಿನ ವರ್ಷ ಐಪಿಎಲ್​​​ಗೆ ಗುಡ್​​​ ಬೈ ಹೇಳ್ತಾರಾ? ಇಲ್ಲ ಇನ್ನಷ್ಟು ವರ್ಷ ಮುಂದುವರಿತಾರಾ ಅನ್ನೋದನ್ನ.