2022: ರಾಕಿ ಭಾಯ್​​​ಗೆ ವೈಲೆನ್ಸ್ ಹಿಡಿಸಲ್ಲ, ಡಿಕೆ ಬಾಸ್​​​ಗೆ ಸಿಕ್ಸರ್ಸ್​ ಹಿಡಿಸಲ್ಲ..! * ಆರ್‌ಸಿಬಿ ಪಾಲಿಗೆ ಆಪತ್ಬಾಂದವ ಎನಿಸಿಕೊಂಡಿರುವ ದಿನೇಶ್ ಕಾರ್ತಿಕ್ * 20ನೇ ಓವರ್‌ನಲ್ಲಿ ಅಕ್ಷರಶಃ ಅಬ್ಬರಿಸುತ್ತಿರುವ ಡಿಕೆ ಬಾಸ್ * ಸಿಕ್ಸಸ್​​​, ಸಿಕ್ಸಸ್​​​, ಸಿಕ್ಸಸ್​​​​ ಐ ಡೋಂಟ್​​ ಲೈಕ್​​​, ಐ ಅವೈಡ್. ಬಟ್​ ಸಿಕ್ಸಸ್​ ಲೈಕ್​​ ಮಿ, ಐ ಕಾಂಟ್ ಅವೈಡ್ ಅಂತಾರೆ ಡಿಕೆ ಬೆಂಗಳೂರು(ಮೇ.10): ಕೆಜಿಎಫ್​​​-2 ಚಾಪ್ಟರ್ (-2) ಚಿತ್ರ ತೆರೆಗೆ ಅಪ್ಪಳಿಸಿದ್ದೇ ಬಂತು, ಇನ್ನೂ ಈ ಚಿತ್ರದ ಅಬ್ಬರ ಕಮ್ಮಿಯಾಗಿಲ್ಲ. ಗಳಿಕೆಯಲ್ಲಿ ಸಾವಿರ ಕೋಟಿ ದಾಟಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಗಲ್ಲಾಪೆಟ್ಟಿಯಲ್ಲಿ ಅಷ್ಟೆ ಆಲ್ಲದೇ ಸೋಷಿಯಲ್​ ಮೀಡಿಯಾದಲ್ಲಿ ಈ ಚಿತ್ರದ ಮಾಸ್​​ ಡೈಲಾಗ್​ಗಳು ಬಾರಿ ವೈರಲ್ ಆಗ್ತಿವೆ. ಆದ್ರಲ್ಲೂ ವೈಲೆನ್ಸ್ ವೈಲೆನ್ಸ್​ ಅನ್ನೋ ಫೇಮಸ್ ಡೈಲಾಗ್ ಅಂತೂ ಚಿಂದಿ. ಸದ್ಯ ಈ ವೈಲೆನ್ಸ್ ಅನ್ನೋ ಡೈಲಾಗ್​ಅನ್ನ ಆರ್​ಸಿಬಿ ತಂಡದ ಮಾನ್ಸಟರ್​​​​ ಆಟಕ್ಕೆ ಹೋಲಿಸಲಾಗ್ತಿದೆ. ಯಾಕಂದ್ರೆ ಈತ ಕೂಡ ರಾಕಿಯಂತೆ ಫುಲ್​ ವೈಲೆಂಟ್​​. ಕೆಜಿಎಫ್​​ ರಾಕಿ ಮಿಶಿನ್​​ ಗನ್ ಹಿಡಿದು ವಿಲನ್​​​​ಗಳನ್ನ ಹೊಡೆದುರುಳಿಸಿದ್ರೆ ಈತ ತನ್ನ ಬ್ಯಾಟ್ ಅನ್ನೋ ಗನ್​ನಿಂದ ಎದುರಾಳಿಯನ್ನ ಕಿಲ್​ ಮಾಡ್ತಿದ್ದಾನೆ. ಅಷ್ಟಕ್ಕೂ ಆರ್​​ಸಿಬಿ ತಂಡದ ಮಾನ್ಸ್​ಸ್ಟಾರ್ ಬೇರಾರು ಅಲ್ಲ, ಆತನೇ ಎಂಟೆದೆಯ ಬಂಟ ದಿನೇಶ್ ಕಾರ್ತಿಕ್​​. ಸಿಕ್ಸಸ್​​​, ಸಿಕ್ಸಸ್​​​, ಸಿಕ್ಸಸ್​​​​ ಐ ಡೋಂಟ್​​ ಲೈಕ್​​​, ಐ ಅವೈಡ್. ಬಟ್​ ಸಿಕ್ಸಸ್​ ಲೈಕ್​​ ಮಿ, ಐ ಕಾಂಟ್ ಅವೈಡ್ ಅಂತಾರೆ ಡಿಕೆ: ಸನ್‌ರೈಸರ್ಸ್‌ ಹೈದ್ರಾಬಾದ್​ ( ) ವಿರುದ್ಧ ಕೊನೆಯಲ್ಲಿ ಅಬ್ಬರಿಸಿದ್ದ ದಿನೇಶ್ ಕಾರ್ತಿಕ್ ( ) ಕೇವಲ 8 ಎಸೆತಗಳಲ್ಲಿ 30 ರನ್​ ಸಿಡಿಸಿ ಆರ್​ಸಿಬಿ ಬಿಗ್​ ಸ್ಕೋರ್​ ಕಲೆಹಾಕಲು ಕಾರಣರಾಗಿದ್ರು. ಡಿಕೆ ರೋರಿಂಗ್​​ ನೋಡಿ ಅಭಿಮಾನಿಗಳು ಈತನ ಆಟವನ್ನ ಕೆಜಿಎಫ್​​ನ ವೈಲೆನ್ಸ್ ವೈಲೆನ್ಸ್​ ಡೈಲಾಗ್​ಗೆ ಹೋಲಿಕೆ ಮಾಡಲಾಗ್ತಿದೆ. ಹಾಗಾದ್ರೆ ಆ ಮಾಸ್ ಡೈಲಾಗ್​ ಅನ್ನ ಡಿಕೆ ಹೇಳಿದ್ರೆ ಹೇಗಿರುತ್ತೆ ಹೇಳ್ತೀವಿ ಕೇಳಿ. ‘‘ಸಿಕ್ಸಸ್, ಸಿಕ್ಸಸ್​​​, ಸಿಕ್ಸಸ್​. ಐ ಡೋಂಟ್​​ ಲೈಕ್ ಇಟ್​​. ಐ ಅವೈಡ್​​​ ಇಟ್​​. ಬಟ್​​ ಸಿಕ್ಸಸ್​ ಲೈಕ್ಸ್ ಮಿ, ಐ ಕಾಂಟ್​ ಅವೈಡ್​ ಇಟ್​​​. 2022: ಗ್ರೀನ್​ ಜೆರ್ಸಿಯಲ್ಲಿ ಗೆದ್ರೆ ಫೈನಲ್​​​​ ಟಿಕೆಟ್​​ ಫಿಕ್ಸ್​​..! 20ನೇ ಓವರ್​​​, 23 ಎಸೆತ, ಅಜೇಯ 71 ರನ್​​: ಆರ್​ಸಿಬಿ () ಪಾಲಿನ ಸೇವಿಯರ್​ ಆಪತ್ಬಾಂಧವ, ದಿ ಬೆಸ್ಟ್​ ಫಿನಿಶರ್ ಅಂತೆಲ್ಲಾ ಕರೆಸಿಕೊಳ್ಳೋ ಡಿಕೆ ಈ ಸಲದ ಐಪಿಎಲ್​​ನಲ್ಲಿ ಧೂಳೆಬ್ಬಿಸಿದ್ದಾರೆ.ಆರಂಭದಿಂದ ಇಲ್ಲಿತನಕ 20ನೇ ಓವರ್​​ನಲ್ಲಿ ಒಟ್ಟು 23 ಎಸೆತಗಳನ್ನ ಪೇಸ್​ ಮಾಡಿದ್ದಾರೆ. ಆದ್ರಲ್ಲಿ ಸ್ಪೋಟಕ 71 ರನ್​ ಗಳಿಸಿದ್ದಾರೆ. ಇನ್ನೂ ಈ ವೇಳೆ ದಿನೇಶ್​ ಕಾರ್ತಿಕ್​ ಒಮ್ಮೆಯೂ ಔಟಾಗಿಯೇ ಇಲ್ಲ. ಒಟ್ಟಿನಲ್ಲಿ ಆರಂಭದಲ್ಲೇ ಹೇಳಿದಂತೆ ಕೆಜಿಎಫ್​​​​​​ನ ರಾಕಿ ಬಾಯ್​​​ನಂತೆ ದಿನೇಶ್​ ಕಾರ್ತಿಕ್​​​ ಆರ್​ಸಿಬಿ ತಂಡದಲ್ಲಿ ವೈಲೆಂಟ್​​​. ಈ ಮಾನ್‌ಸ್ಟರ್​​ನ ವೈಲೆಂಟ್ ಅಬ್ಬರಕ್ಕೆ ಎದುರಾಳಿ ತಂಡಗಳು ಅದ್ಯಾವ ರೀತಿ ಪತರುಗುಟ್ತಾವೋ ಆ ದೇವರೇ ಬಲ್ಲ.