2022: ಈ ಬಾರಿಯ ಐಪಿಎಲ್‌ನಿಂದ ಯೂನಿವರ್ಸೆಲ್‌ ಬಾಸ್ ಕ್ರಿಸ್ ಗೇಲ್‌ ಹೊರಬಿದ್ದಿದ್ದೇಕೆ? ಬೆಂಗಳೂರು: 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ( ) ಟೂರ್ನಿಯಲ್ಲಿ ಯೂನಿವರ್ಸೆಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್‌ ( ) ಪಾಲ್ಗೊಳ್ಳುತ್ತಿಲ್ಲ. 2009ರಿಂದಲೂ ಐಪಿಎಲ್‌ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದ ವಿಂಡೀಸ್ ದೈತ್ಯ ಕ್ರಿಕೆಟಿಗ, ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಅಷ್ಟಕ್ಕೂ ಕ್ರಿಸ್‌ ಗೇಲ್‌ ಈ ಬಾರಿ ಐಪಿಎಲ್‌ನಲ್ಲಿ ಯಾಕೆ ಪಾಲ್ಗೊಳ್ಳುತ್ತಿಲ್ಲ ಎನ್ನುವ ಸೀಕ್ರೇಟ್ಸ್‌ ಬಿಚ್ಚಿಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ ಬೆಂಗಳೂರು: 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ( ) ಟೂರ್ನಿಯಲ್ಲಿ ಯೂನಿವರ್ಸೆಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್‌ ( ) ಪಾಲ್ಗೊಳ್ಳುತ್ತಿಲ್ಲ. 2009ರಿಂದಲೂ ಐಪಿಎಲ್‌ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದ ವಿಂಡೀಸ್ ದೈತ್ಯ ಕ್ರಿಕೆಟಿಗ, ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಅಷ್ಟಕ್ಕೂ ಕ್ರಿಸ್‌ ಗೇಲ್‌ ಈ ಬಾರಿ ಐಪಿಎಲ್‌ನಲ್ಲಿ ಯಾಕೆ ಪಾಲ್ಗೊಳ್ಳುತ್ತಿಲ್ಲ ಎನ್ನುವ ಸೀಕ್ರೇಟ್ಸ್‌ ಬಿಚ್ಚಿಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ : iplt20. ವೆಸ್ಟ್ ಇಂಡೀಸ್‌ ತಂಡದ ಸ್ಪೋಟಕ ಆರಂಭಿಕ ಬ್ಯಾಟರ್‌ ಕ್ರಿಸ್‌ ಗೇಲ್ ಚೊಚ್ಚಲ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಂಡಿರಲಿಲ್ಲ. 2009ರಲ್ಲಿ ಗೇಲ್‌ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದರು. ಕೋಲ್ಕತಾ ನೈಟ್‌ ರೈಡರ್ಸ್ ತಂಡದ ಮೂಲಕ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದ ಗೇಲ್, ಆ ಬಳಿಕ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್‌ ತಂಡವನ್ನು ಪ್ರತಿನಿಧಿಸಿದ್ದರು. ಅದರೆ ಅಚ್ಚರಿ ಎನ್ನುವಂತೆ 2022ರ ಐಪಿಎಲ್‌ನಲ್ಲಿ ಹೊರಗುಳಿದು ಸುದ್ದಿಯಾಗಿದ್ದರು. 2019ನೇ ಸಾಲಿನ ಐಪಿಎಲ್‌ನಲ್ಲಿ ಪಂಜಾಬ್‌ ಕಿಂಗ್ಸ್‌ ತಂಡವನ್ನು ಪ್ರತಿನಿಧಿಸಿದ್ದ ಕ್ರಿಸ್ ಗೇಲ್‌ ಆರನೇ ಗರಿಷ್ಠ ಸ್ಕೋರರ್ ಎನಿಸಿದ್ದರು. ಆದರೆ 2020 ಹಾಗೂ 2021ರ ಐಪಿಎಲ್‌ನಲ್ಲಿ ಅಸ್ಥಿರ ಪ್ರದರ್ಶನ ತೋರುವ ಮೂಲಕ ಪಂಜಾಬ್ ಆಡುವ ಹನ್ನೊಂದರದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದರು. ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ 10 ಪಂದ್ಯಗಳನ್ನಾಡಿ 21.44ರ ಬ್ಯಾಟಿಂಗ್ ಸರಾಸರಿಯಲ್ಲಿ 193 ರನ್‌ ಗಳಿಸಿದ್ದರು. ಇದೀಗ ಐಪಿಎಲ್‌ 2022ನಲ್ಲಿ ತಾವು ಹೊರಗುಳಿದಿದ್ದೇಕೆ ಎನ್ನುವುದನ್ನು ಮಿರರ್‌ ಜತೆಗೆ ನೀಡಿದ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ಕಳೆದ ಕೆಲ ವರ್ಷಗಳ ಐಪಿಎಲ್‌ನಲ್ಲಿ ನನ್ನನ್ನು ಸೂಕ್ತವಾಗಿ ನಡೆಸಿಕೊಂಡಿಲ್ಲ. ಐಪಿಎಲ್‌ನಲ್ಲಿ ಸಾಕಷ್ಟು ಮಾಡಿದ್ದೂ ಸಹಾ ನಿಮಗೆ ಸೂಕ್ತವಾದ ಗೌರವ ಸಿಗದೇಹೋದಾಗ, ಇರಲಿ ಬಿಡು ಎಂದು ಸುಮ್ಮನಾದೆ. ಹೀಗಾಗಿ ನಾನು ಹರಾಜಿನಿಂದ ಹೊರಗುಳಿಯಲು ಬಯಸಿದೆ. ಕ್ರಿಕೆಟ್‌ ನಂತರವೂ ಜೀವನ ಇದೆ. ಹೀಗಾಗಿ ಸಹಜತೆಯನ್ನು ಅಳವಡಿಸಿಕೊಳ್ಳಲು ಬಯಸಿದೆ. ಮುಂದಿನ ವರ್ಷ ನಾನು ಕಮ್‌ಬ್ಯಾಕ್ ಮಾಡಲಿದ್ದೇನೆ. ಕೆಲವು ತಂಡಗಳಿಗೆ ನನ್ನ ಅಗತ್ಯವಿದೆ. ಐಪಿಎಲ್‌ನಲ್ಲಿ ನಾನು ಕೋಲ್ಕತಾ ನೈಟ್ ರೈಡರ್ಸ್‌, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ. ಈ ಮೂರು ತಂಡಗಳ ಪೈಕಿ ಎರಡು ತಂಡಗಳಲ್ಲಿ ಒಂದು ತಂಡಕ್ಕೆ ಚೊಚ್ಚಲ ಟ್ರೋಫಿ ಗೆದ್ದು ಕೊಡಬೇಕು ಎಂದಿರುವೆ. ನಾನು ಆರ್‌ಸಿಬಿ ತಂಡದ ಪರ ಉತ್ತಮ ಪ್ರದರ್ಶನ ತೋರಿದ್ದೇನೆ. ಪಂಜಾಬ್ ತಂಡದ ಜತೆಗೂ ಒಳ್ಳೆಯ ನೆನಪುಗಳಿವೆ. ನೋಡೋಣ ಮುಂದೇನು ಆಗುತ್ತದೆ ಎಂದು ಕ್ರಿಸ್‌ ಗೇಲ್‌ ಮಾತು ಮುಗಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 141 ಐಪಿಎಲ್‌ ಇನಿಂಗ್ಸ್‌ಗಳನ್ನಾಡಿ 39.72ರ ಬ್ಯಾಟಿಂಗ್ ಸರಾಸರಿಯಲ್ಲಿ 4,965 ರನ್ ಬಾರಿಸಿದ್ದಾರೆ. ಇದರಲ್ಲಿ 31 ಅರ್ಧಶತಕ ಹಾಗೂ 6 ಸಿಕ್ಸರ್‌ಗಳು ಸೇರಿವೆ. ಕ್ರಿಸ್ ಗೇಲ್ 175 ರನ್ ಬಾರಿಸಿದ್ದು ಇಂದಿಗೂ ಐಪಿಎಲ್‌ನಲ್ಲಿ ದಾಖಲಾದ ಗರಿಷ್ಠ ವೈಯುಕ್ತಿಕ ಸ್ಕೋರ್ ಎನಿಸಿದೆ. ಐಪಿಎಲ್‌ನಲ್ಲಿ ಹಲವಾರು ದಾಖಲೆ ಬರೆದಿರುವ ಗೇಲ್ ಇದುವರೆಗೂ ಐಪಿಎಲ್ ಟ್ರೋಫಿ ಗೆಲ್ಲಲು ಯಶಸ್ವಿಯಾಗಿಲ್ಲ.