2022: ಸನ್‌ರೈಸರ್ಸ್‌ ಮುಳುಗಿಸಿ ಸೇಡು ತೀರಿಸಿಕೊಂಡ ಡೇವಿಡ್ ವಾರ್ನರ್..!​ * ಸನ್‌ರೈಸರ್ಸ್ ವಿರುದ್ದ ಭರ್ಜರಿ ಬ್ಯಾಟಿಂಗ್ ನಡೆಸಿ ಮಿಂಚಿದ ಡೇವಿಡ್‌ ವಾರ್ನರ್‌ * ಹಳೆಯ ತಂಡಕ್ಕೆ ಬ್ಯಾಟಿಂಗ್ ಮೂಲಕವೇ ಉತ್ತರಿಸಿದ ಎಡಗೈ ಬ್ಯಾಟರ್‌ * ಕಳೆದ ಆವೃತ್ತಿಯಲ್ಲಿ ಅನುಭವಿಸಿದ ಅವಮಾನಕ್ಕೆ ಸೇಡು ತೀರಿಸಿಕೊಂಡ ವಾರ್ನರ್‌ ಮುಂಬೈ(ಮೇ.07): ಐಪಿಎಲ್​ನಲ್ಲಿ ( 2022) ಆಟಗಾರರ ಮಧ್ಯೆ ಸ್ನೇಹ ಎಷ್ಟಿರುತ್ತೋ ಅಷ್ಟೇ ಧ್ವೇಷ ಸಹ ಇರುತ್ತದೆ. ಪ್ಲೇಯರ್ಸ್ ಮತ್ತು ಫ್ರಾಂಚೈಸಿಗಳ ನಡುವೆಯೂ ಹಾಗೆ. ಫ್ರಾಂಚೈಸಿಗಳಿಗೆ ಕೆಲ ಆಟಗಾರರು ನಿಷ್ಟರಾಗಿರುತ್ತಾರೆ. ಆದ್ರೆ ಕೆಲ ಪ್ಲೇಯರ್​ಗಳಿಗೆ ಫ್ರಾಂಚೈಸಿಗಳೆಂದರೆ ಸಿಡಿಮಿಡಿಗೊಳ್ತಾರೆ. ಅದಕ್ಕೆ ಕಾರಣವೂ ಇದೆ. ಆಟಗಾರರು ಒಂದು ತಂಡದ ಪರ ಆಡುವಾಗ ಆ ತಂಡದ ಫ್ರಾಂಚೈಸಿ ಆಟಗಾರರನ್ನ ಸರಿಯಾಗಿ ನಡೆಸಿಕೊಂಡಿರಲ್ಲ. ಅವಮಾನ ಸಹ ಮಾಡಿರುತ್ತಾರೆ. ಹಾಗಾಗಿ ಕೆಲ ಪ್ಲೇಯರ್ಸ್​​ಗೆ ಕೆಲ ಫ್ರಾಂಚೈಸಿ ಅಂದರೆ ಆಗಿ ಬರೋಲ್ಲ. ಕಳೆದ ವರ್ಷ ಕುಲ್ದೀಪ್ ಯಾದವ್ ( )​ ಅವರನ್ನ ಬೆಂಚ್ ಕಾಯಿಸಿ ಅವಮಾನ ಮಾಡಿತ್ತು ಕೆಕೆಆರ್ (). ಈ ಸಲ ಡೆಲ್ಲಿ ಕ್ಯಾಪಿಟಲ್ಸ್ ( ) ಸೇರಿಕೊಂಡ ಕುಲ್ದೀಪ್, ​ ಅದ್ಭುತ ಪ್ರದರ್ಶನ ನೀಡಿ ಕೆಕೆಆರ್​ ಸೋಲಿಸಿದ್ದರು. ಇನ್ನು ಆರ್​ಸಿಬಿ ವಿರುದ್ಧ ಯುಜವೇಂದ್ರ ಚಹಲ್ ( ) ಅದ್ಭುತ ಪ್ರದರ್ಶನ ನೀಡಿದ್ದರು. ಕುಲ್ಚಾ ಜೋಡಿ ನಂತರ ಈಗ ಡೇವಿಡ್ ವಾರ್ನರ್ ( ) ಸರದಿ. ಮೊನ್ನೆ ಸನ್‌ರೈಸರ್ಸ್ ವಿರುದ್ಧ ಭರ್ಜರಿ ಬ್ಯಾಟಿಂಗ್ ಮಾಡಿ ಡೆಲ್ಲಿ ಕ್ಯಾಪಿಟಲ್ಸ್ ಗೆಲ್ಲಿಸಿದ್ದು ಹೈದ್ರಾಬಾದ್ ಮಾಜಿ ಪ್ಲೇಯರ್ ಡೇವಿಡ್ ವಾರ್ನರ್. ನಾಯಕತ್ವವೂ ಹೋಯ್ತು, ಪ್ಲೇಯಿಂಗ್-11ನಲ್ಲಿ ಸ್ಥಾನವೂ ಹೋಗಿತ್ತು: ಸನ್‌ರೈಸರ್ಸ್ ಹೈದ್ರಾಬಾದ್​ಗೆ ( ) ಐಪಿಎಲ್ ಕಪ್ ಗೆಲ್ಲಿಸಿಕೊಟ್ಟ ನಾಯಕ ಡೇವಿಡ್ ವಾರ್ನರ್. ಕಳೆದ ಸೀಸನ್​ನಲ್ಲಿ ಮನೀಶ್ ಪಾಂಡೆಯನ್ನ ಬೆಂಬಲಿಸಿದ್ರು ಮತ್ತು ಕಳಪೆ ಫಾರ್ಮ್​ನಲ್ಲಿದ್ದಾರೆ ಅನ್ನೋ ಕಾರಣಕ್ಕೆ ಸೀಸನ್ ಮಧ್ಯೆಯೇ ಡೇವಿಡ್ ವಾರ್ನರ್​​ ಅವರನ್ನ ನಾಯಕತ್ವದಿಂದ ಕೆಳಗಿಸಿ, ಬೆಂಚ್ ಕಾಯಿಸುವಂತೆ ಮಾಡಿತ್ತು ಫ್ರಾಂಚೈಸಿ. ಡೇವಿಡ್ ವಾರ್ನರ್ ಜನರ ಮಧ್ಯೆ ಕೂತು ಪಂದ್ಯವನ್ನೂ ವೀಕ್ಷಿಸಿದ್ರು. ಕೆಲ ಪಂದ್ಯಗಳಿಗೆ ಸ್ಟೇಡಿಯಂಗೂ ಕರೆದುಕೊಂಡು ಬರದೆ ಹೋಟೆಲ್​ನಲ್ಲಿ ಬಿಟ್ಟು ಬಂದು ಅವಮಾನ ಮಾಡಿತ್ತು ಹೈದ್ರಾಬಾದ್ ಫ್ರಾಂಚೈಸಿ. ಅವಮಾನಕ್ಕೆ ಪ್ರತಿಕಾರ ತೀರಿಸಿಕೊಂಡ ವಾರ್ನರ್: ಹೈದ್ರಾಬಾದ್ ಫ್ರಾಂಚೈಸಿ ಮಾಡಿದ ಅವಮಾನಕ್ಕೆ ಪ್ರತಿಕಾರ ತೀರಿಸಿಕೊಳ್ಳಲು ಡೇವಿಡ್ ವಾರ್ನರ್​ ವರ್ಷದಿಂದ ಕಾಯುತ್ತಿದ್ದರು. ಮೊನ್ನೆ ಸನ್‌ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿದ ವಾರ್ನರ್​, 58 ಬಾಲ್​ನಲ್ಲಿ 12 ಬೌಂಡ್ರಿ, 3 ಸಿಕ್ಸ್​ ಸಹಿತ ಅಜೇಯ 92 ರನ್ ಬಾರಿಸಿದ್ರು. ಹೈದ್ರಾಬಾದ್​ 21 ರನ್​ನಿಂದ ಪಂದ್ಯ ಸೋತಿತು. ವಾರ್ನರ್​ ಪಂದ್ಯಶ್ರೇಷ್ಠರಾಗಿ ಸನ್‌ರೈಸರ್ಸ್ ವಿರುದ್ಧ ಸೇಡು ತೀರಿಸಿಕೊಂಡರು. ಈಗ ಹೈದ್ರಾಬಾದ್ ಫ್ರಾಂಚೈಸಿ ಕಾವ್ಯ ಮಾರನ್ ಫುಲ್ ಟ್ರೋಲ್ ಆಗ್ತಿದ್ದಾರೆ. 2022: ವಿರಾಟ್ ಕೊಹ್ಲಿ ಜೊತೆ ಬ್ಯಾಟಿಂಗ್ ಮಾಡಲು ಸಾಧ್ಯವಿಲ್ಲ ಮ್ಯಾಕ್ಸ್​ವೆಲ್ ಹೇಳಿದ್ದೇಕೆ..? ಐಪಿಎಲ್​ನಲ್ಲಿ ದಾಖಲೆ ಬರೆದ ವಾರ್ನರ್: ಮೊನ್ನೆ ಹೈದ್ರಾಬಾದ್ ವಿರುದ್ಧ 92 ರನ್ ಬಾರಿಸೋ ಮೂಲಕ ಡೇವಿಡ್ ವಾರ್ನರ್ ದಾಖಲೆ ಬರೆದಿದ್ದಾರೆ. ಐಪಿಎಲ್​ನಲ್ಲಿ ಅತಿಹೆಚ್ಚು 90 ರನ್ ಹೊಡೆದ ಆಟಗಾರ ಎನಿಸಿಕೊಂಡಿದ್ದಾರೆ. ವಾರ್ನರ್ ಬ್ಯಾಟ್​​​ನಿಂದ 6 ಸಲ 90 ರನ್​ಗಳು ಬಂದಿವೆ. ಇನ್ನು ಐಪಿಎಲ್​ನಲ್ಲಿ ಗರಿಷ್ಠ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರರ ಲಿಸ್ಟ್​​ನಲ್ಲಿ 3ನೇ ಸ್ಥಾನದಲ್ಲಿದ್ದಾರೆ. 18 ಸಲ ಮ್ಯಾಚ್ ಆಫ್ ದ ಮ್ಯಾಚ್ ಅವಾರ್ಡ್​ ಪಡೆದಿದ್ದಾರೆ ವಾರ್ನರ್.