ಬೇಸರದ ನಡುವೆಯೂ ಸತ್ಯ ಬಿಚ್ಚಿಟ್ರಾ ಯುವರಾಜ್ ಸಿಂಗ್..? * ಟೀಂ ಇಂಡಿಯಾ ಮಾಜಿ ನಾಯಕ ಧೋನಿಯ ಕಾಲೆಳೆದ ಯುವರಾಜ್ ಸಿಂಗ್ * ಎಂ ಎಸ್ ಧೋನಿಗೆ ಸಿಕ್ಕಷ್ಟು ಬೆಂಬಲ ಮತ್ಯಾವ ಆಟಗಾರನಿಗೂ ಸಿಕ್ಕಿಲ್ಲ * 2011 ವಿಶ್ವಕಪ್‌ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಯುವರಾಜ್ ಸಿಂಗ್ ಬೆಂಗಳೂರು(ಮೇ.05): ಯುವರಾಜ್ ಸಿಂಗ್ ( )​ ಟಿ20 ಕ್ರಿಕೆಟ್​ನಲ್ಲಿ ಆರು ಬಾಲ್​ಗೆ ಆರು ಸಿಕ್ಸ್ ಸಿಡಿಸಿ ವಿಶ್ವದಾಖಲೆ ಬರೆದ ಆಟಗಾರ. ಧೋನಿ ನಾಯಕತ್ವದಲ್ಲಿ ಗೆದ್ದ ಎರಡು ವಿಶ್ವಕಪ್​ಗಳ ಹೀರೋ. ಹಾಗೆ ಧೋನಿ ನಾಯಕತ್ವದಲ್ಲಿ ಎರಡು ವಿಶ್ವಕಪ್ ಸೋಲಲು ಈತನೇ ಕಾರಣ ಅನ್ನೋದನ್ನು ಯಾರೂ ಹೇಳಲ್ಲ. ಹೇಳೋ ಧೈರ್ಯವನ್ನೂ ಮಾಡಲ್ಲ. ಯಾಕಂದ್ರೆ ಸೋತ ವಿಶ್ವಕಪ್​ಗಳಿಗಿಂತ ಗೆದ್ದ ವಿಶ್ವಕಪ್​ಗಳು ಎಲ್ಲವನ್ನೂ ಮರೆ ಮಾಚುತ್ತೆ. ಈಗ ಇದೇ ಯುವರಾಜ್ ಸಿಂಗ್ ಒಂದು ಬಿಗ್ ಸ್ಟೇಟ್​ಮೆಂಟ್ ಕೊಟ್ಟಿದ್ದಾರೆ. ನಿವೃತ್ತಿ ಸಮಯದಲ್ಲಿ ಎಂ ಎಸ್ ಧೋನಿಗೆ ಸಿಕ್ಕಷ್ಟು ಬೆಂಬಲ ಮತ್ಯಾವ ಆಟಗಾರನಿಗೂ ಸಿಕ್ಕಿಲ್ಲ ಅಂತ ಹೇಳಿದ್ದಾರೆ. ಅಂದರೆ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಸಮಯದಲ್ಲಿ ಕೋಚ್ ರವಿಶಾಸ್ತ್ರಿ( ) ಮತ್ತು ಕ್ಯಾಪ್ಟನ್ ವಿರಾಟ್ ಕೊಹ್ಲಿ ( ) ಬೆಂಬಲಿಸಿದ್ರು. ಹಾಗಾಗಿ ಅವರು ಅಭದ್ರತೆಯಲ್ಲಿ ಟೀಂ ಇಂಡಿಯಾ ( ) ಪರ ಆಡಲಿಲ್ಲ. ಅವರು ಆಡುವಷ್ಟು ಕಾಲ ಆಡಿ ರಿಟೈರ್ಡ್​ ಆದ್ರು ಅನ್ನೋದು ಯುವಿ ಮಾತಿನ ಒಳ ಮರ್ಮಾ. ಯುವರಾಜ್ ಈ ರೀತಿ ಹೇಳೋ ಮೂಲಕ ಒಂದು ಬಿಗ್ ಸಿಕ್ರೇಟ್ ಅನ್ನ ಕ್ರಿಕೆಟ್ ಜಗತ್ತಿನ ಮುಂದೆ ತೆರೆದಿಟ್ಟಿದ್ದಾರೆ. ಅದೇ ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ನಡುವಿನ ಸಂಬಂಧ. ಹೌದು, ಈ ಸಂಬಂಧ ಎಷ್ಟು ಗಟ್ಟಿಯಾಗಿದೆ ಅನ್ನೋದು ಅದೆಷ್ಟೋ ಮಂದಿಗೆ ಗೊತ್ತಿಲ್ಲ ಕಂಡ್ರಿ. ಯುವಿಯ ಈ ಒಂದು ಸ್ಟೇಟ್​ಮೆಂಟ್ ಎಲ್ಲವನ್ನೂ ಬಟ ಬಯಲು ಮಾಡಿದೆ. ಸ್ಟಾರ್ ಆಟಗಾರರು ಡ್ರಾಪ್, ವಿಶ್ವಕಪ್ ಟೀಂ​ನಲ್ಲಿ ಕೊಹ್ಲಿಗೆ ಸ್ಥಾನ: 2011ರ ಏಕದಿನ ವಿಶ್ವಕಪ್ ಆಡಲು ಅದೆಷ್ಟೋ ಆಟಗಾರರು ಕಾಯುತ್ತಿದ್ದರು. ಮೂರು ಟಿ20 ವಿಶ್ವಕಪ್​ಗಳನ್ನಾಡಿದ್ದ ರೋಹಿತ್ ಶರ್ಮಾ ಸಹ ಒನ್​ಡೇ ವರ್ಲ್ಡ್​ಕಪ್​​ ಆಡಲು ಕಾಯ್ತಾ ಕುಳಿತಿದ್ದರು. ಆದ್ರೆ ವರ್ಲ್ಡ್​ಕಪ್ ಟೀಮ್​ನಲ್ಲಿ ಸ್ಥಾನ ಪಡೆದಿದ್ದು ಮಾತ್ರ ಕಿಂಗ್ ಕೊಹ್ಲಿ. ಕಾರಣ ಧೋನಿ ಕೃಪಕಟಾಕ್ಷ. 2008ರ ಅಂಡರ್-19 ವಿಶ್ವಕಪ್ ಗೆಲ್ಲಿಸಿಕೊಟ್ಟ ವಿರಾಟ್ ಕೊಹ್ಲಿ, ಟೀಂ ಇಂಡಿಯಾಗೆ ಎಂಟ್ರಿಯಾಗಿದ್ದು ಧೋನಿ ನಾಯಕತ್ವದಲ್ಲೇ. ಕೊಹ್ಲಿಯನ್ನ ಬೆಳೆಸಿದ್ದು ಧೋನಿಯೇ ಅನ್ನೋದ್ರಲ್ಲಿ ಡೌಟೇ ಬೇಡ. ಧೋನಿಗೆ ಬೇಡವಾಗಿತ್ತು, ಕೊಹ್ಲಿಗೆ ಬೇಕಿತ್ತು: 2016ರ ಟಿ20 ವಿಶ್ವಕಪ್ ಬಳಿಕ ಎಂಎಸ್ ಧೋನಿ ನಿಧಾನವಾಗಿ ತೆರೆಮರೆಗೆ ಸರಿಯುತ್ತಾ ಬಂದ್ರು. ಟೆಸ್ಟ್​, ಒನ್​ಡೇ, ಟಿ20 ಹೀಗೆ ಒಂದೊಂದಾಗಿ ಎಲ್ಲಾ ನಾಯಕತ್ವಕ್ಕೂ ರಾಜೀನಾಮೆ ನೀಡಿದ್ರು. 2018ರಲ್ಲಿ ನಿವೃತ್ತಿಯಾಗೋ ಮನಸ್ಸು ಮಾಡಿದ್ದರು. ಆದ್ರೆ ಕಿಂಗ್ ಕೊಹ್ಲಿಗೆ ಧೋನಿ ಬೇಕಿತ್ತು. 2019ರ ಏಕದಿನ ವಿಶ್ವಕಪ್ ಗೆಲ್ಲಬೇಕು ಅಂದ್ರೆ ಮಾಸ್ಟರ್ ಮೈಂಡ್ ಮಹಿ ಟೀಮ್​ನಲ್ಲಿ ಇರಬೇಕು ಅನ್ನೋದು ಆಗಿನ ನಾಯಕ ಕೊಹ್ಲಿ ಮತ್ತು ಕೋಚ್ ಶಾಸ್ತ್ರಿ ಅಭಿಮತವಾಗಿತ್ತು. ಹಾಗಾಗಿ ಅವರಿಬ್ಬರು ನಿವೃತ್ತಿ ಅಂಚಿನಲ್ಲಿದ್ದ ಧೋನಿಯನ್ನ ಸದಾ ಬೆಂಬಲಿಸಿಕೊಂಡು ಬಂದರು. ಹಾಗಾಗಿಯೇ ಮಹಿಗೆ ಎಲ್ಲೂ ಅಭದ್ರತೆ ಕಾಡಲಿಲ್ಲ. 2022 ಐವರಿಗೆ ಕಂಟಕವಾಗಲಿದೆ ಈ ಬಾರಿಯ ಐಪಿಎಲ್..! ಧೋನಿ ತಮ್ಮನ್ನ ಬೆಳೆಸಿದ್ದಕ್ಕೆ ಕೊಹ್ಲಿ ಋಣ ತೀರಿಸಿದ್ರು. ಆದರೆ ಯುವಿ, ವೀರೂ, ಗೌತಿ ಹೀಗೆ ಅನೇಕ ಆಟಗಾರರಿಗೆ ನಿವೃತ್ತಿ ಅಂಚಿನಲ್ಲಿ ಯಾರೂ ಬೆಂಬಲಕ್ಕೆ ನಿಲ್ಲಿಲ್ಲ. ಹಾಗಾಗಿ ಅವರು ಬೇಗ ರಿಟೈರ್ಡ್​ ಆದ್ರು. ಇದೇ ಬೇಸರದಲ್ಲಿ ಯುವರಾಜ್ ಈ ಹೇಳಿಕೆ ನೀಡಿದ್ದಾರೆ ಅನ್ನೋದು ಕ್ರಿಕೆಟ್ ಜಗತ್ತಿಗೆ ಗೊತ್ತಿಲ್ಲದ ವಿಷಯವೇನು ಅಲ್ಲ ಬಿಡಿ.