ನಾನು ಟೀಂ ಇಂಡಿಯಾ ಕೋಚ್‌ ಆಗಿದ್ದಕ್ಕೆ ಕೆಲವರು ಹೊಟ್ಟೆ ಕಿಚ್ಚು ಪಟ್ಟಿದ್ದರು: ರವಿಶಾಸ್ತ್ರಿ * ಭಾರತ ಕ್ರಿಕೆಟ್ ತಂಡದ ಹೆಡ್‌ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದ ರವಿಶಾಸ್ತ್ರಿ * 2014ರಲ್ಲಿ ಭಾರತದ ಕೋಚ್‌ ಸ್ಥಾನ ಅಲಂಕರಿಸಿದ್ದ ಶಾಸ್ತ್ರಿ * 2021ರ ಟಿ20 ವಿಶ್ವಕಪ್‌ ಬಳಿಕ ಕೋಚ್ ಹುದ್ದೆಯಿಂದ ಕೆಳಗಿಳಿದಿದ್ದ ರವಿಶಾಸ್ತ್ರಿ ಲಂಡನ್(ಏ.27)‌: ನಾನು ಭಾರತ ತಂಡದ ಕೋಚ್‌ ಆಗಿ ನೇಮಕಗೊಂಡಿದ್ದು ಕೆಲವರಿಗೆ ಹೊಟ್ಟೆ ಕಿಚ್ಚು ತರಿಸಿತ್ತು. ನಾನು ವೈಫಲ್ಯ ಕಾಣಬೇಕು ಎಂದು ಆಶಿಸಿದ್ದರು ಎಂದು ರವಿ ಶಾಸ್ತ್ರಿ ( ) ಕಿಡಿಕಾರಿದ್ದಾರೆ. ಇಂಗ್ಲೆಂಡ್‌ನ ಪ್ರಮುಖ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ‘ನಾನು ಯಾವುದೇ ಕೋಚಿಂಗ್‌ ಪ್ರಮಾಣ ಪತ್ರಗಳನ್ನು ಹೊಂದಿಲ್ಲ. ಹಾಗೆಂದು ಕೋಚ್‌ ಆಗಬಾರದೆಂದೇನೂ ಇಲ್ಲ. ಭಾರತದಲ್ಲಿ ಹೊಟ್ಟೆ ಕಿಚ್ಚಿನ ಜನ ಇರುತ್ತಾರೆ. ಅವರು ನಮ್ಮ ಸೋಲಿಗೆ ಕಾಯುತ್ತಿದ್ದರೂ ನಾನು ಜಗ್ಗಲಿಲ್ಲ. ನಮ್ಮ ಸುತ್ತಲೂ ನಮ್ಮ ಬಗ್ಗೆ ಜನರು ಏನೆಲ್ಲಾ ಮಾತಾಡಿಕೊಳ್ಳುತ್ತಾರೆ. ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳಬಾರದು’ ಎಂದಿದ್ದಾರೆ. 2014ರಲ್ಲಿ ಭಾರತದ ಕೋಚ್‌ ಸ್ಥಾನ ಅಲಂಕರಿಸಿದ್ದ ಶಾಸ್ತ್ರಿ 2021ರ ಟಿ20 ವಿಶ್ವಕಪ್‌ ( T20 ) ಬಳಿಕ ಹುದ್ದೆಯಿಂದ ಕೆಳಗಿಳಿದಿದ್ದರು. ಈ ಮಧ್ಯ ಒಂದು ವರ್ಷ ಅನಿಲ್‌ ಕುಂಬ್ಳೆ ( ) ಭಾರತ ಕ್ರಿಕೆಟ್ ತಂಡದ ಕೋಚ್‌ ಆಗಿ ಕಾರ್ಯ ನಿರ್ವಹಿಸಿದ್ದರು. ಇದೀಗ ರವಿಶಾಸ್ತ್ರಿ ಇಂಗ್ಲೆಂಡ್ ಕ್ರಿಕೆಟ್‌ ತಂಡದ ಕೋಚ್ ಆಗಿ ನೇಮಕವಾಗಬಹುದು ಎನ್ನುವ ಮಾತುಗಳು ಕೇಳಿ ಬಂದಿವೆ. ಇತ್ತೀಚೆಗಷ್ಟೇ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕತ್ವಕ್ಕೆ ಜೋ ರೂಟ್‌ ( ) ಗುಡ್‌ ಬೈ ಹೇಳಿದ್ದರು. ಮುಂಬರುವ ದಿನಗಳಲ್ಲಿ ಬೆನ್ ಸ್ಟೋಕ್ಸ್‌ ( ) ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕರಾಗಬಹುದು ಎಂದು ರವಿಶಾಸ್ತ್ರಿ ಭವಿಷ್ಯ ನುಡಿದಿದ್ದಾರೆ. ಹೆಡ್‌ ಕೋಚ್‌ ಆದ ಬಳಿಕ ರವಿಶಾಸ್ತ್ರಿ ಮಾರ್ಗದರ್ಶನದಲ್ಲಿ ಭಾರತ ಕ್ರಿಕೆಟ್‌ ತಂಡವು ಅತ್ಯುತ್ತಮ ಪ್ರದರ್ಶನ ತೋರಿತ್ತು. ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ತಂಡವು ಎರಡು ಬಾರಿ ಟೆಸ್ಟ್ ಸರಣಿ ಜಯಿಸಿತ್ತು. ಆದರೆ ಐಸಿಸಿ ಟೂರ್ನಿಗಳಲ್ಲಿ ಭಾರತ ತಂಡವು ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿತ್ತು. ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಗಿಲ್ಲ ಬಯೋಬಬಲ್‌? ನವದೆಹಲಿ: ಐಪಿಎಲ್‌ ಮುಗಿದ ಬಳಿಕ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯನ್ನು ಬಯೋಬಬಲ್‌ ವ್ಯವಸ್ಥೆಯೊಳಗೆ ನಡೆಸದಿರಲು ಬಿಸಿಸಿಐ ನಿರ್ಧರಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಐಪಿಎಲ್‌ನಲ್ಲಿ ಆಡುತ್ತಿರುವ ಕ್ರಿಕೆಟಿಗರು ಹೆಚ್ಚೂ ಕಡಿಮೆ 3 ತಿಂಗಳು ಬಯೋಬಬಲ್‌ನಲ್ಲಿ ಇರಲಿದ್ದು ಮತ್ತೆ ಅದೇ ವ್ಯವಸ್ಥೆಯೊಳಗೆ ಪಂದ್ಯಗಳನ್ನು ನಡೆಸಿದರೆ ಮಾನಸಿಕ ಸಮಸ್ಯೆಗಳು ಎದುರಾಗಲಿವೆ ಎನ್ನುವ ಕಾರಣಕ್ಕೆ ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. ಅಲ್ಲದೆ 5 ಪಂದ್ಯಗಳು 5 ವಿವಿಧ ನಗರಗಳಲ್ಲಿ ನಡೆಯಲಿರುವ ಕಾರಣ ಬಯೋಬಬಲ್‌ ವ್ಯವಸ್ಥೆ ಕಷ್ಟಎಂದು ಹೇಳಲಾಗಿದೆ. ಸ್ವಂತ ಟಿ10 ಲೀಗ್‌ ಘೋಷಿಸಿದ ಶಾಹಿದ್ ಅಫ್ರಿದಿ! ಇಸ್ಲಾಮಾಬಾದ್‌: ಪಾಕಿಸ್ತಾನದ ಮಾಜಿ ಆಲ್ರೌಂಡರ್‌ ಶಾಹಿದ್‌ ಅಫ್ರಿದಿ ತಾವು ಸ್ವಂತ ಟಿ10 ಲೀಗ್‌ ಆಯೋಜಿಸುವುದಾಗಿ ಘೋಷಿಸಿದ್ದು, ಮೆಗಾ ಸ್ಟಾ​ರ್‍ಸ್ ಲೀಗ್‌ ಹೆಸರಿನ(ಎಂಎಸ್‌ಎಲ್‌) ಟೂರ್ನಿಯ ಉದ್ಘಾಟನಾ ಆವೃತ್ತಿಯನ್ನು ರಾವಲ್ಪಿಂಡಿಯಲ್ಲಿ ಸೆಪ್ಟೆಂಬರ್‌ನಲ್ಲಿ ನಡೆಸುತ್ತೇವೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಮಂಗಳವಾರ ಮಾಹಿತಿ ನೀಡಿರುವ ಅವರು, ಲೀಗ್‌ನ ಉದ್ದೇಶ ನಿವೃತ್ತ ಆಟಗಾರರು, ಅಥ್ಲೀಟ್ಸ್‌ ಮತ್ತು ಕ್ರೀಡಾ ಪತ್ರಕರ್ತರಿಗೆ ನೆರವಾಗುವುದು ಎಂದಿದ್ದಾರೆ. 2022: ಎಂಟು ಸೋಲಿನ ಬೆನ್ನಲ್ಲೇ ಭಾವನಾತ್ಮಕ ಸಂದೇಶ ರವಾನಿಸಿದ ರೋಹಿತ್ ಶರ್ಮಾ ‘ಎಂಎಸ್‌ಎಲ್‌ನಲ್ಲಿ 6 ತಂಡಗಳಿವೆ. ಟೂರ್ನಿಯಲ್ಲಿ ವಿದೇಶಿ ಆಟಗಾರರೂ ಪಾಲ್ಗೊಳ್ಳಲಿದ್ದಾರೆ. ಪಾಕಿಸ್ತಾನ ಸೂಪರ್‌ ಲೀಗ್‌(ಪಿಎಸ್‌ಎಲ್‌)ನಲ್ಲಿ ಕಿರಿಯರು ಆಡುತ್ತಿದ್ದಾರೆ. ನನ್ನಂಥ ಹಿರಿಯರು ಎಂಎಸ್‌ಎಲ್‌ನಲ್ಲಿ ಆಡಲಿದ್ದೇವೆ’ ಎಂದು ಅಫ್ರಿದಿ ತಿಳಿಸಿದ್ದಾರೆ.