2022: ಚೆನ್ನೈ ಸೂಪರ್ ಕಿಂಗ್ಸ್‌ ತಂಡದಿಂದ ಹೊರಗುಳಿದ ಸ್ಟಾರ್ ಕ್ರಿಕೆಟಿಗ..? * ಸತತ ಸೋಲುಗಳಿಂದ ಕಂಗೆಟ್ಟಿರುವ ಸಿಎಸ್‌ಕೆ * ಸಿಎಸ್‌ಕೆ ತಂಡದಿಂದ ಒಂದು ವಾರ ಹೊರಬಿದ್ದ ಡೆವೊನ್‌ ಕಾನ್‌ವೇ * ಸಿಎಸ್‌ಕೆ ತಂಡಕ್ಕಿಂದು ಮುಂಬೈ ಇಂಡಿಯನ್ಸ್‌ ಸವಾಲು ಬೆಂಗಳೂರು(ಏ.21): ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್‌ ( ) ತಂಡವು 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ( ) ತನ್ನ ಗೆಲುವಿನ ಲಯ ಕಂಡು ಕೊಳ್ಳಲು ಪದೇ ಪದೇ ಎಡವುತ್ತಿದ್ದು, ಸದ್ಯ ಆಡಿದ ಆರು ಪಂದ್ಯಗಳನ್ನಾಡಿ ಒಂದು ಗೆಲುವು ಹಾಗೂ 5 ಸೋಲುಗಳೊಂದಿಗೆ ಕೇವಲ 2 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಕೊನೆಯಿಂದ ಎರಡನೇ ಸ್ಥಾನದಲ್ಲಿದೆ. ಇದೀಗ ರವೀಂದ್ರ ಜಡೇಜಾ ( ) ನೇತೃತ್ವದ ಸಿಎಸ್‌ಕೆ ತಂಡವು ಬದ್ದ ಎದುರಾಳಿ ಮುಂಬೈ ಇಂಡಿಯನ್ಸ್‌ ( ) ಎದುರು ಸೆಣಸಾಡಲು ಸಜ್ಜಾಗಿದೆ. ಪ್ಲೇ ಆಫ್‌ ಪ್ರವೇಶಿಸುವ ದೃಷ್ಟಿಯಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ಪಾಲಿಗೆ ಮುಂಬೈ ಇಂಡಿಯನ್ಸ್‌ ಎದುರಿನ ಪಂದ್ಯ ಒಂದು ರೀತಿ ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿದೆ. ಇದೆಲ್ಲದರ ನಡುವೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಆರಂಭಿಕ ಬ್ಯಾಟರ್ ಡೆವೊನ್ ಕಾನ್‌ವೇ ಮುಂದಿನ ಒಂದು ವಾರಗಳ ಕಾಲ ತಂಡದ ಆಯ್ಕೆಗೆ ಅಲಭ್ಯರಾಗಿದ್ದಾರೆ. ಎಡಗೈ ಬ್ಯಾಟರ್ ಡೆವೊನ್ ಕಾನ್‌ವೇ ( ) ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದು, ಈಗಾಗಲೇ ಭಾರತ ತೊರೆದು ದಕ್ಷಿಣ ಆಫ್ರಿಕಾಗೆ ಬಂದಿಳಿದಿದ್ದಾರೆ. ಡೆವೊನ್‌ ಕಾನ್‌ವೇ ಪ್ರಸಕ್ತ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಒಂದು ಪಂದ್ಯವನ್ನಷ್ಟೇ ಆಡಿದ್ದಾರೆ. ವರದಿಯ ಪ್ರಕಾರ, ಡೆವೊನ್‌ ಕಾನ್‌ವೇ ಏಪ್ರಿಲ್‌ 24ರ (ಭಾನುವಾರ) ವೇಳೆಗೆ ಚೆನ್ನೈ ಸೂಪರ್ ಕಿಂಗ್ಸ್‌ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎನ್ನಲಾಗಿದೆ. ಏಪ್ರಿಲ್‌ 24ಕ್ಕೆ ಭಾರತಕ್ಕೆ ಬಂದಿಳಿದರೂ ಸಹಾ ಕೋವಿಡ್ 19 ಶಿಷ್ಟಾಚಾರವನ್ನು ಪಾಲಿಸಬೇಕಿರುವುದರಿಂದ ಮೂರು ದಿನಗಳ ಕಡ್ಡಾಯ ಕ್ವಾರಂಟೈನ್ ಪಾಲಿಸಬೇಕಿರುವುದರಿಂದ ಒಂದು ವಾರ ಸಿಎಸ್‌ಕೆ () ಆಯ್ಕೆಗೆ ಅಲಭ್ಯರಾಗಿದ್ದಾರೆ. ಹೀಗಾಗಿ ಚೆನ್ನೈ ಸೂಪರ್‌ ಕಿಂಗ್ಸ್ ತಂಡವು ಆಡಲಿರುವ ಎರಡೂ ಪಂದ್ಯಗಳಿಗೆ ಆಯ್ಕೆಗೆ ಅಲಭ್ಯರಾಗಲಿದ್ದಾರೆ. 2022: ಆರ್‌ಸಿಬಿ ಎದುರು ಸೋಲಿನ ಬೆನ್ನಲ್ಲೇ ರಾಹುಲ್‌, ಸ್ಟೋನಿಸ್‌ಗೆ ದಂಡದ ಬರೆ..! ಹಾಲಿ ಚಾಂಪಿಯನ್ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ಇಂದು 5 ಬಾರಿಯ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡವನ್ನು ಎದುರಿಸಲಿದೆ. ಇದಾದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಏಪ್ರಿಲ್‌ 25(ಸೋಮವಾರ)ರಂದು ಪಂಜಾಬ್ ಕಿಂಗ್ಸ್‌ ಎದುರು ಕಣಕ್ಕಿಳಿಯಲಿದೆ. ಇದಾದ ಬಳಿಕ ಮೇ.01ರಂದು ಸನ್‌ರೈಸರ್ಸ್‌ ಹೈದರಾಬಾದ್‌ ( ) ಎದುರು ಕಣಕ್ಕಿಳಿಯಲಿದೆ. ಡೆವೊನ್ ಕಾನ್‌ವೇ ಪ್ರಿ-ವೆಡ್ಡಿಂಗ್ ಕಾರ್ಯಕ್ರಮ ಆಯೋಜಿಸಿದ ಚೆನ್ನೈ ಸೂಪರ್ ಕಿಂಗ್ಸ್‌: ಡೆವೊನ್ ಕಾನ್‌ವೇ, ದಕ್ಷಿಣ ಆಫ್ರಿಕಾಗೆ ವಿಮಾನ ಏರುವ ಮುನ್ನ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಪ್ರಿ-ವೆಡ್ಡಿಂಗ್ ಕಾರ್ಯಕ್ರಮ ಆಯೋಜಿಸಿತ್ತು. ಡೆವೊನ್‌ ಕಾನ್‌ವೇ ಅವರನ್ನು ಐಪಿಎಲ್‌ ಮೆಗಾ ಹರಾಜಿನಲ್ಲಿ ಒಂದು ಕೋಟಿ ರುಪಾಯಿ ನೀಡಿ ಖರೀದಿಸಿತ್ತು. 15ನೇ ಆವೃತ್ತಿಯ ಐಪಿಎಲ್‌ ಮೂಲಕ ಇಂಡಿಯನ್ ಪ್ರೀಮಿಯರ್‌ ಲೀಗ್‌ಗೆ ಪಾದಾರ್ಪಣೆ ಮಾಡಿದ್ದರು. ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಡೆವೊನ್‌ ಕಾನ್‌ವೇ, ಕೋಲ್ಕತಾ ನೈಟ್‌ ರೈಡರ್ಸ್‌ ( ) ವಿರುದ್ದ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದರು. ಮೊದಲ ಪಂದ್ಯದಲ್ಲಿ ಕೆಕೆಆರ್ ವಿರುದ್ದ ಡೆವೊನ್ ಕಾನ್‌ವೇ 3 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದರು. ಇದಾದ ಬಳಿಕ ಡೆವೊನ್‌ ಕಾನ್‌ವೇಗೆ ಸಿಎಸ್‌ಕೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಕ್ಕಿರಲಿಲ್ಲ. ರಾಬಿನ್ ಉತ್ತಪ್ಪ ( ) ಹಾಗೂ ಋತುರಾಜ್ ಗಾಯಕ್ವಾಡ್ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದಾರೆ.