2022: 14 ವರ್ಷಗಳ ವನವಾಸ ಅಂತ್ಯ. ಈ 5 ಕಾರಣಗಳಿಂದ ಈ ಸಲ ಕಪ್ ಗೆದ್ದೇ ಗೆಲ್ಲುತ್ತೆ ಆರ್‌ಸಿಬಿ..! * ಚೊಚ್ಚಲ ಐಪಿಎಲ್ ಟ್ರೋಫಿಯ ಕನವರಿಕೆಯಲ್ಲಿದೆ ಆರ್‌ಸಿಬಿ * 14 ವರ್ಷಗಳಿಂದಲೂ ಐಪಿಎಲ್ ಟ್ರೋಫಿ ಗೆಲ್ಲಲು ವಿಫಲವಾಗಿದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು * ಈ ಬಾರಿ ಆರ್‌ಸಿಬಿ ಐಪಿಎಲ್ ಟ್ರೋಫಿ ಗೆಲ್ಲಲು ಇದೆ ಸುವರ್ಣಾವಕಾಶ ಬೆಂಗಳೂರು(ಏ.19): ಈ ಸಲ ಕಪ್​ ನಮ್ದೇ ( ), ಈ ಸಲ ಕಪ್​​​ ನಮ್ದೇ, ಈ ಸಲ ಕಪ್​ ನಮ್ದೇ. ಹೀಗಂತ ಪ್ಲೇಯರ್ಸ್​, ಫ್ಯಾನ್ಸ್ 14 ವರ್ಷದಿಂದ ಅಂದಿದ್ದೇ ಬಂತು, ಆದ್ರೆ ಈವರೆಗೆ ಕಪ್​​​​​​ ಮಾತ್ರ ಆರ್​ಸಿಬಿಯದ್ದಾಗಿಲ್ಲ. ಹಾಗಂತ ಕೆಂಪಂಗಿ ಸೈನ್ಯ ಕುಗ್ಗಿಲ್ಲ. ಇಂದಲ್ಲ ನಾಳೆ, ಕಪ್​​ ಗೆದ್ದೇ ತೀರುವ ಹುಮ್ಸಸ್ಸಿನಲ್ಲಿದೆ. ಪ್ರತಿ ಸಲದಂತೆ ಈ ಬಾರಿನೂ ಕಪ್​ ಗೆಲ್ಲುವ ಛಲದೊಂದಿಗೆ ಅಖಾಡಕ್ಕೆ ಧುಮುಕಿದೆ. 6ರಲ್ಲಿ ನಾಲ್ಕು ಗೆದ್ದು ಅದನ್ನು ನಿಜವಾಗಿಸುವತ್ತ ಹೆಜ್ಜೆ ಇಟ್ಟಿದೆ. ಇನ್ನೂ ಈ ಸಲ ಆರ್​ಸಿಬಿ ಹಿಂದಿನಂತಿಲ್ಲ. ಕಂಪ್ಲೀಟ್ಲಿ ಬದಲಾಗಿದೆ. ಹೊಸ ಕ್ಯಾಪ್ಟನ್ ಎಂಟ್ರಿ ಬಳಿಕ, ಹೊಸ ಎನರ್ಜಿ ಬಂದಿದೆ. ಹೀಗಾಗಿ ಈ ಸಲ ಕಪ್​ ಗೆದ್ದೇ ಗೆಲ್ಲುತ್ತೆ ಅನ್ನೋ ಹೊಸ ಆಶಾಭಾವ ಮೂಡಿದೆ. ಜೊತೆಗೆ ಈ ಐದು ಕಾರಣಗಳು ಖಂಡಿತ ಚೊಚ್ಚಲ ಟ್ರೋಫಿ ಎತ್ತಿ ಹಿಡಿಯಲು ನೆರವಾಗಲಿವೆ. ರೀಸನ್​​​-1 - ಡುಪ್ಲೆಸಿಸ್ ಜೀನಿಯಸ್ & ಅನುಭವಿ ಕ್ಯಾಪ್ಟನ್​: ಫಾಫ್ ಡು ಪ್ಲೆಸಿಸ್ RCBಗೆ ಎಂಟ್ರಿ ಕೊಡ್ತಿದ್ದಂತೆ ಕಪ್​ ಕನಸು ಚಿಗುರೊಡೆದಿದೆ. ಯಾಕಂದ್ರೆ ಪ್ಲೆಸಿಸ್​​ ಜೀನಿಯಸ್ ಕ್ರಿಕೆಟರ್​ ಮತ್ತು ಅನುಭವಿ ಕ್ಯಾಪ್ಟನ್​​. ದಕ್ಷಿಣ ಆಫ್ರಿಕಾ ಕಂಡ ಯಶಸ್ವಿ ನಾಯಕ. ದಕ್ಷಿಣ ಆಫ್ರಿಕಾ ಪರ ನಾಯಕನಾಗಿ 115 ಪಂದ್ಯಗಳಲ್ಲಿ 70 ಗೆಲ್ಲಿಸಿದ್ದಾರೆ. ನಾಲ್ಕು ಬಾರಿ ಚಾಂಪಿಯನ್ ಆಗಿರೋ ಚೆನ್ನೈ ತಂಡದಲ್ಲಿ ಹಿಂದೆ ಆಡಿ ಕೂಲೆಸ್ಟ್​​ ಬ್ರೈನ್​ ಧೋನಿ ಗರಡಿಯಲ್ಲಿ ಪಳಗಿದ್ದಾರೆ. ಸದ್ಯ ಈ ಅನುಭವ ಪ್ಲೆಸಿಸ್​​ ಕೈಹಿಡಿತಿದೆ. ನಾಯಕನಾಗಿ ಆರ್​ಸಿಬಿಗೆ ಪ್ರಶಸ್ತಿ ಗೆಲ್ಲಿಸಿಕೊಟ್ರು ಅಚ್ಚರಿಯೇನಿಲ್ಲ. ರೀಸನ್​​​-2- ಯಂಗ್​ಸ್ಟರ್ಸ್​ ಘರ್ಜನೆ: ಇನ್ನು ಯಂಗ್​ಸ್ಟರ್ಸ್​ಗಳಾದ ಅನೂಜ್​​ ರಾವತ್​​​, ಶಹಬಾಜ್​​​ ಅಹ್ಮದ್​​​ ಹಾಗೂ ಸುಯಾಶ್​ ಪ್ರಭುದೇಸಾಯಿ ಇಂಪ್ರೆಸ್ಸಿವ್​​ ಆಟವಾಡ್ತಿದ್ದಾರೆ. ಇದು ಬ್ಯಾಟಿಂಗ್​ ವಿಭಾಗಕ್ಕೆ ಹೊಸ ಚೈತನ್ಯ ತುಂಬಿದೆ. ಇನ್ನುಳಿದ ಪಂದ್ಯಗಳಲ್ಲೂ ಈ ಯಂಗ್​ಸ್ಟರ್ಸ್​ ಘರ್ಜಿಸಿದ್ರೆ, ಆರ್​ಸಿಬಿಗೆ ಕಪ್​ ಮಿಸ್ಸಾಗೋ ಮಾತೇ ಇಲ್ಲ. T20 : ಮ್ಯಾಚ್‌ ಫಿನಿಶರ್‌ ಪಾತ್ರಕ್ಕೆ ಯಾರು ಹಿತವರು ಈ ನಾಲ್ವರಲ್ಲಿ..? ರೀಸನ್​​​-3- ಹಸರಂಗ ಸ್ಪಿನ್​ ಮ್ಯಾಜಿಕ್​.ಎದುರಾಳಿ ಶೇಕ್​​..: ಆಕ್ಷನ್​​​ನಲ್ಲಿ 10.75 ಕೋಟಿಗೆ ವನಿಂದು ಹಸರಂಗರನ್ನ ಖರೀದಿಸಿತ್ತು. ಆ ನಂಬಿಕೆಯನ್ನ ಲೆಗ್​​ ಬ್ರೇಕರ್​ ಉಳಿಸಿಕೊಂಡಿದ್ದು, ವಿಕೆಟ್ ಸರಮಾಲೆ ಕಟ್ಟಿದ್ದಾರೆ. ಈವರೆಗೆ 11 ವಿಕೆಟ್​ ಕಬಳಿಸಿ ಸ್ಪಿನ್​ ಕೈಚಳಕ ತೋರಿದ್ದಾರೆ. ಇದು ರಿಪೀಟ್ ಆದ್ರೆ ಎದುರಾಳಿ ಪಡೆ ಶೇಕ್ ಆಗಿ, ಆರ್‌ಸಿಬಿ ಕಪ್​ ಎತ್ತಿ ಹಿಡಿದು ಶೈನ್ ಆಗಲಿದೆ. ರೀಸನ್​​​-4 ರಣಕಲಿ ಡಿಕೆ ವೀರಾವೇಶ: ಒಂದು ಟೈಮ್​​ನಲ್ಲಿ ಅಂದ್ರೆ ಕೊಹ್ಲಿ, ಎಬಿಡಿ ಅನ್ನುವಂತಾಗಿತ್ತು. ಆದ್ರೀಗ RCBಯಲ್ಲಿ ಡಿಕೆ ಹೆಸರು ಪ್ರತಿಧ್ವನಿಸ್ತಿದೆ. ಮ್ಯಾಚ್​ ವಿನ್ನರ್​​​​​​, ಫಿನಿಶರ್​ ಆಗಿ ರನ್​​ ಹೊಳೆ ಹರಿಸ್ತಿದ್ದಾರೆ. 207ರ ಸ್ಟ್ರೈಕ್​ರೇಟ್​​​ನಲ್ಲಿ 197 ರನ್​​ ಕಲೆಹಾಕಿದ್ದಾರೆ. ಡಿಕೆ ಆರ್ಭಟ ಸದ್ಯ ಆರ್​ಸಿಬಿ ವಿಕ್ಟರಿ ಕೇಕೆಗೆ ಕಾರಣವಾಗ್ತಿದೆ. ಒಂದು ವೇಳೆ ತಮಿಳ್​ ಮಗನ್​ ಈ ಸಿಂಹಘರ್ಜನೆ ಮುಂದುವರಿದ್ರೆ 14 ವರ್ಷದ ಆರ್​ಸಿಬಿ ಟ್ರೋಫಿ ಬರ ನೀಗೋದ್ರಲ್ಲಿ ಯಾವುದೇ ಸಂದೇಹವಿಲ್ಲ. ರೀಸನ್​​​-5 ಫವರ್​ಫುಲ್​​​​​ ಬ್ಯಾಟಿಂಗ್​​ & ಬೌಲಿಂಗ್ ಲೈನ್​ಅಪ್​​: ಇನ್ನು ಕಳೆದ ಬಾರಿಗೆ ಹೋಲಿಸಿದ್ರೆ ಈ ಸಲ ತಂಡ ಫವರ್​​ಫುಲ್​​​ ಬ್ಯಾಟಿಂಗ್ ಮತ್ತು ಬೌಲಿಂಗ್​​ ಪಡೆಯನ್ನ ಹೊಂದಿದೆ. ಬ್ಯಾಟಿಂಗ್​​ನಲ್ಲಿ ಪ್ಲೆಸಿಸ್​​​, ಕೊಹ್ಲಿ, ಮ್ಯಾಕ್ಸ್​ವೆಲ್​​ ಎದುರಾಳಿಯನ್ನ ಡೆಸ್ಟ್ರಾಯ್​ ಮಾಡಿದ್ರೆ, ಬೌಲಿಂಗ್​​ನಲ್ಲಿ ಹರ್ಷಲ್​​ ಪಟೇಲ್​​​, ಜೋಶ್​ ಹೆಜಲ್​ವುಡ್​​, ಸಿರಾಜ್​ ವಿಕೆಟ್ ಬೇಟೆಯಾಡ್ತಿದ್ದಾರೆ. ಇದರಿಂದಾಗಿ ಸಾಂಘಿಕ ಪ್ರದರ್ಶನ ಮೂಡಿ ಬರ್ತಿದೆ. ಇದು ಹೀಗೆ ಮುಂದುವರಿದಿದ್ದೇ ಆದಲ್ಲಿ ಆರ್​ಸಿಬಿಯ 14 ವರ್ಷದ ಕಪ್​ ವನವಾಸ ಕೊನೆಗೊಂಡು, ಚೊಚ್ಚಲ ಟ್ರೋಫಿಯನ್ನ ಎತ್ತಿ ಹಿಡಿಯಲಿದೆ.