: ಆರ್‌ಸಿಬಿಗೆ ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ದವೂ ಗೆಲ್ಲುವ ಕಾತರ * ಆರ್‌ಸಿಬಿಗಿಂದು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಸವಾಲು * ಹ್ಯಾಟ್ರಿಕ್ ಗೆಲುವು ಸಾಧಿಸಿ ಆತ್ಮವಿಶ್ವಾಸದಿಂದ ಬೀಗುತ್ತಿದೆ ಆರ್‌ಸಿಬಿ * ಟೂರ್ನಿಯಲ್ಲಿ ಸತತ 4 ಸೋಲು ಕಂಡು ಕಂಗಾಲಾಗಿದೆ ಚೆನ್ನೈ ಸೂಪರ್ ಕಿಂಗ್ಸ್‌ ನವಿ ಮುಂಬೈ(ಏ.12): ಹ್ಯಾಟ್ರಿಕ್‌ ಗೆಲುವು ಸಾಧಿಸಿ ಉತ್ಸಾಹದಲ್ಲಿರುವ ರಾಯಲ್‌ ಚಾಲೆಂಜ​ರ್ಸ್‌ ಬೆಂಗಳೂರು ( ) 15ನೇ ಆವೃತ್ತಿಯ ಐಪಿಎಲ್‌ನಲ್ಲಿ ( ) ಗೆಲುವಿನ ಓಟ ಮುಂದುವರಿಸುವ ತವಕದಲ್ಲಿದ್ದು, ಮಂಗಳವಾರ ಸತತ 4 ಸೋಲಿನಿಂದ ಕುಗ್ಗಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ( ) ವಿರುದ್ಧ ಸೆಣಸಾಡಲಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ, ಫಾಫ್ ಡು ಪ್ಲೆಸಿಸ್ ( ) ಪಡೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ. ಆರ್‌ಸಿಬಿ () ಆರಂಭಿಕ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ( ) ವಿರುದ್ಧ ಸೋತಿದ್ದರೂ ಬಳಿಕ ಸುಧಾರಿತ ಪ್ರದರ್ಶನ ನೀಡಿ 3 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಆದರೆ ಹೊಸ ನಾಯಕನೊಂದಿಗೆ ಕಣಕ್ಕಿಳಿದಿರುವ ಹಾಲಿ ಚಾಂಪಿಯನ್‌ ಚೆನ್ನೈ ಆಡಿರುವ ಎಲ್ಲಾ 4 ಪಂದ್ಯಗಳಲ್ಲಿ ಪರಾಭವಗೊಂಡಿದೆ. ತಾರಾ ಆಲ್ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ ( ) ಸೇರ್ಪಡೆ ಆರ್‌ಸಿಬಿಯ ಬಲ ಹೆಚ್ಚಿಸಿದ್ದು, ಜೋಶ್‌ ಹೇಜಲ್‌ವುಡ್‌, ಜೇಸನ್‌ ಬೆಹ್ರೆನ್‌ಡೊಫ್‌ರ್‍ ಮೊದಲ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಅನುಜ್‌ ರಾವತ್‌, ಫಾಫ್‌ ಡು ಪ್ಲೆಸಿ, ವಿರಾಟ್‌ ಕೊಹ್ಲಿ ( ) ಬ್ಯಾಟಿಂಗ್‌ ಆಧಾರಸ್ತಂಭಗಳಾಗಿದ್ದು, ದಿನೇಶ್‌ ಕಾರ್ತಿಕ್‌ ( ), ಶಾಬಾಜ್‌ ನದೀಂ ಫಿನಿಶಿಂಗ್‌ ಹೊಣೆಯನ್ನು ಸೂಕ್ತ ರೀತಿಯಲ್ಲಿ ನಿಭಾಯಿಸುತ್ತಿದ್ದಾರೆ. ವನಿಂದು ಹಸರಂಗ, ಆಕಾಶ್‌ ದೀಪ್‌ ಮಿಂಚುತ್ತಿದ್ದರೂ, ಮೊಹಮದ್‌ ಸಿರಾಜ್‌ ದುಬಾರಿಯಾಗುತ್ತಿರುವುದು ತಂಡಕ್ಕೆ ತಲೆನೋವಾಗಿದೆ. ಮನೆಗೆ ತೆರಳಿರುವ ಹರ್ಷಲ್‌ ಪಟೇಲ್‌ ( ) ಈ ಪಂದ್ಯಕ್ಕೆ ಗೈರಾಗುವ ಸಾಧ್ಯತೆ ಇದೆ. ಇನ್ನು, ಸ್ಥಿರ ಪ್ರದರ್ಶನ ನೀಡಲು ವಿಫಲವಾಗುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್‌ ತಂಡದಲ್ಲಿ ಹಲವು ಬದಲಾವಣೆಗಳಾಗುವ ಸಾಧ್ಯತೆಯಿದೆ. ದೀಪಕ್‌ ಚಹರ್‌ ( ) ಅನುಪಸ್ಥಿತಿಯಲ್ಲಿ ಬೌಲಿಂಗ್‌ ಪಡೆ ದುರ್ಬಲವಾಗಿದ್ದು, ಋುತುರಾಜ್‌ ಗಾಯಕ್ವಾಡ್‌ ಇನ್ನಷ್ಟೇ ಲಯಕ್ಕೆ ಮರಳಬೇಕಿದೆ. ಶಿವಂ ದುಬೆ ( ) ಮತ್ತು ಡ್ವೇನ್‌ ಬ್ರಾವೋ ಮಾತ್ರ ಮಿಂಚುತ್ತಿದ್ದಾರೆ. ರಾಬಿನ್‌ ಉತ್ತಪ್ಪ, ಅಂಬಟಿ ರಾಯುಡು, ಮೋಯಿನ್‌ ಅಲಿ ಜವಾಬ್ದಾರಿ ಅರಿತು ಆಡಬೇಕಿದೆ. ರವೀಂದ್ರ ಜಡೇಜಾ ( ), ಎಂ.ಎಸ್‌.ಧೋನಿ ( ) ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿದರೆ ಮಾತ್ರ ತಂಡಕ್ಕೆ ಗೆಲುವು ದಕ್ಕಲಿದೆ. 2022: ಬಿಯರ್‌ ಬ್ರ್ಯಾಂಡ್‌ನಲ್ಲಿ ಧೋನಿ ಹಣ ಹೂಡಿಕೆ ಐಪಿಎಲ್ ಇತಿಹಾಸದಲ್ಲಿ ಇದುವರೆಗೂ ಉಭಯ ತಂಡಗಳು ಒಟ್ಟು 28 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಸ್ಪಷ್ಟ ಮೇಲುಗೈ ಸಾಧಿಸಿದೆ. 28 ಪಂದ್ಯಗಳ ಪೈಕಿ 18 ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನ ನಗೆ ಬೀರಿದ್ದರೆ, 9 ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗೆಲುವಿನ ಸಿಹಿಯುಂಡಿದೆ. ಇನ್ನೊಂದು ಪಂದ್ಯದಲ್ಲಿ ಯಾವುದೇ ಫಲಿತಾಂಶ ಲಭಿಸಿರಲಿಲ್ಲ. ಸಂಭವನೀಯ ಆಟಗಾರರ ಪಟ್ಟಿ ಆರ್‌ಸಿಬಿ:ಫಾಫ್ ಡು ಪ್ಲೆಸಿಸ್(ನಾಯಕ), ಅನೂಜ್ ರಾವತ್‌, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್‌, ದಿನೇಶ್ ಕಾರ್ತಿಕ್‌, ಮಹಿಪಾಲ್ ಲೊಮ್ರೊರ್‌, ಶಾಬಾಜ್ ಅಹಮ್ಮದ್‌, ವನಿಂದು ಹಸರಂಗ, ಮೊಹಮ್ಮದ್ ಸಿರಾಜ್‌, ಆಕಾಶ್‌ದೀಪ್ ಸಿಂಗ್‌, ಜೋಶ್ ಹೇಜಲ್‌ವುಡ್‌, ಚೆನ್ನೈ: ಋುತುರಾಜ್ ಗಾಯಕ್ವಾಡ್‌, ರಾಬಿನ್ ಉತ್ತಪ್ಪ, ಮೋಯಿನ್ ಅಲಿ, ಅಂಬಟಿ ರಾಯುಡು, ಎಂ ಎಸ್ ಧೋನಿ, ರವೀಂದ್ರ ಜಡೇಜಾ(ನಾಯಕ), ಶಿವಂ ದುಬೆ, ಡ್ವೇನ್ ಬ್ರಾವೋ, ಕ್ರಿಸ್ ಜೋರ್ಡನ್‌, ಡ್ವೇನ್ ಪ್ರಿಟೋರಿಯಸ್‌, ಮುಕೇಶ್ ಚೌಧರಿ‌. ಸ್ಥಳ: ನವಿ ಮುಂಬೈ, ಡಿ.ವೈ.ಪಾಟೀಲ್‌ ಸ್ಟೇಡಿಯಂಪಂದ್ಯ: ಸಂಜೆ 7.30ಕ್ಕೆ,ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌