2022: ಪಿವಿ ಸಿಂಧು, ಕಿದಂಬಿ ಶ್ರೀಕಾಂತ್‌ಗೆ ಸೋಲು * ಕೊರಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಹೋರಾಟ ಅಂತ್ಯ * ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ ಪಿ ವಿ ಸಿಂಧು, ಕಿದಂಬಿ ಶ್ರೀಕಾಂತ್ * 2ನೇ ಬಾರಿಗೆ ಪ್ರಶಸ್ತಿ ಗೆಲ್ಲುವ ಪಿ.ವಿ.ಸಿಂಧು ಅವರ ಕನಸು ಭಗ್ನ ಸಿಂಚೊನ್‌(ಏ.10): ಕೊರಿಯಾ ಓಪನ್‌ ಸೂಪರ್‌ 500 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ( ) ಭಾರತದ ಶಟ್ಲರ್‌ಗಳ ಅಭಿಯಾನ ಸೆಮಿಫೈನಲ್‌ನಲ್ಲಿ ಕೊನೆಗೊಂಡಿದೆ. 2ನೇ ಬಾರಿಗೆ ಪ್ರಶಸ್ತಿ ಗೆಲ್ಲುವ ಪಿ.ವಿ.ಸಿಂಧು ( ) ಅವರ ಕನಸು ಭಗ್ನಗೊಂಡಿದೆ. ಶನಿವಾರ ನಡೆದ ಮಹಿಳಾ ಸಿಂಗಲ್ಸ್‌ನಲ್ಲಿ ಮಾಜಿ ವಿಶ್ವ ಚಾಂಪಿಯನ್‌ ಸಿಂಧು, ದಕ್ಷಿಣ ಕೊರಿಯಾದ ಆನ್‌ ಸೆ ಯಂಗ್‌ ವಿರುದ್ಧ 14-21, 17-21 ಗೇಮ್‌ಗಳಲ್ಲಿ ಪರಾಭವಗೊಂಡರು. 20 ವರ್ಷದ ಯಂಗ್‌ ವಿರುದ್ಧ ಸಿಂಧುಗೆ ಇದು ಸತತ 4ನೇ ಸೋಲು. ಪುರುಷರ ಸಿಂಗಲ್ಸ್‌ನಲ್ಲಿ ಮಾಜಿ ವಿಶ್ವ ನಂ.1 ಕಿದಂಬಿ ಶ್ರೀಕಾಂತ್‌ ( ), ಏಷ್ಯನ್‌ ಗೇಮ್ಸ್‌ ಚಾಂಪಿಯನ್‌ ಇಂಡೋನೇಷ್ಯಾದ ಜೊನಾಥನ್‌ ಕ್ರಿಸ್ಟೀ ಎದುರು 19-21, 16-21 ಗೇಮ್‌ಗಳಿಂದ ಸೋಲನುಭವಿಸಿದರು. ಮೊದಲ ಗೇಮ್‌ನಲ್ಲಿ ಜೊನಾಥನ್ ಕ್ರಿಸ್ಟೀ ಎದುರು ಶ್ರೀಕಾಂತ್ ಆರಂಭಿಕ ಮುನ್ನಡೆ ಕಾಯ್ದುಕೊಂಡಿದ್ದರು, ಆದರೆ ಆ ಬಳಿಕ ಪಂದ್ಯದ ಮೇಲೆ ಹಿಡಿತ ಸಾಧಿಸುವಲ್ಲಿ ಇಂಡೋನೇಷ್ಯಾದ ಶಟ್ಲರ್ ಯಶಸ್ವಿಯಾದರು. ಕೇವಲ 50 ನಿಮಿಷ ನಡೆದ ಕಾದಾಟದಲ್ಲಿ ಭರ್ಜರಿ ಗೆಲುವು ಸಾಧಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟರು. ಶ್ರೀಕಾಂತ್‌ ಇತ್ತೀಚೆಗೆ ನಡೆದ ಸ್ವಿಸ್‌ ಓಪನ್‌ನಲ್ಲಿಯೂ ( ) ಕ್ರಿಸ್ಟೀ ವಿರುದ್ಧ ಸೆಮೀಸ್‌ನಲ್ಲಿ ಸೋತಿದ್ದರು. ಇದೀಗ ಮತ್ತೊಮ್ಮೆ ಶ್ರೀಕಾಂತ್‌ ಸೆಮೀಸ್‌ನಲ್ಲಿ ಮುಗ್ಗರಿಸಿದ್ದಾರೆ. ವಿಶ್ವ ಡಬಲ್ಸ್‌ ಸ್ಕ್ವಾಶ್‌: 2 ಪ್ರಶಸ್ತಿ ಗೆದ್ದ ಭಾರತ ಗ್ಲಾಸ್ಗೋ: ಅವಳಿ ಮಕ್ಕಳಿಗೆ ಜನ್ಮ ನೀಡಿದ 6 ತಿಂಗಳೊಳಗಾಗಿ ಭಾರತದ ಸ್ಕ್ವಾಶ್ ತಾರೆ ದೀಪಿಕಾ ಪಳ್ಳಿಕಲ್‌ ವಿಶ್ವ ಡಬಲ್ಸ್‌ ಸ್ಕ್ವಾಶ್ ಚಾಂಪಿಯನ್‌ಶಿಪ್‌ನಲ್ಲಿ ಅವಳಿ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ. ಶನಿವಾರ ನಡೆದ ಮಿಶ್ರ ಡಬಲ್ಸ್‌ ಫೈನಲ್‌ನಲ್ಲಿ ಸೌರವ್‌ ಘೋಷಲ್‌ ಜೊತೆಗೂಡಿ ಇಂಗ್ಲೆಂಡ್‌ನ ಆ್ಯಡ್ರಿಯಾನ್‌ ವಾಲ್ಲರ್‌ ಮತ್ತು ಅಲಿಸನ್‌ ವಾಟ​ರ್ಸ್‌ ಜೋಡಿ ವಿರುದ್ಧ 11-6, 11-8 ಅಂತರದಲ್ಲಿ ಜಯಗಳಿಸಿದರು. ಬಳಿಕ ನಡೆದ ಮಹಿಳಾ ವಿಭಾಗದ ಫೈನಲ್‌ನಲ್ಲಿ ಜೋಶ್ನಾ ಚಿನ್ನಪ್ಪ ಜೊತೆ ಸೇರಿ ಇಂಗ್ಲೆಂಡ್‌ನ ಸಾರಾ ಪೆರ್ರಿ-ವಾಟರ್ಸ್‌ ಜೋಡಿ ವಿರುದ್ಧ 11-9, 4-11, 11-8 ಅಂತರದಲ್ಲಿ ಗೆದ್ದು ಪ್ರಶಸ್ತಿ ತಮ್ಮದಾಗಿಸಿಕೊಂಡರು. ರಾಷ್ಟ್ರೀಯ ಬಾಸ್ಕೆಟ್‌ಬಾಲ್‌: ಕರ್ನಾಟಕಕ್ಕೆ ಸೋಲು ಚೆನ್ನೈ: 71ನೇ ರಾಷ್ಟ್ರೀಯ ಬಾಸ್ಕೆಟ್‌ಬಾಲ್‌ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಪುರುಷರ ತಂಡ ಸೆಮಿಫೈನಲ್‌ನಲ್ಲಿ ಅಭಿಯಾನ ಕೊನೆಗೊಳಿಸಿತು. ಶನಿವಾರ ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ ರಾಜ್ಯ ತಂಡ 75-88 ಅಂಕಗಳ ಅಂತರದಲ್ಲಿ ಪರಾಭವಗೊಂಡಿತು. ರಾಜ್ಯದ ಪರ ಅಭಿಷೇಕ್‌ ಗೌಡ 22, ಹರೀಶ್‌ 18 ಅಂಕ ಗಳಿಸಿದರು. ಮಹಿಳಾ ವಿಭಾಗದ 5 ಮತ್ತು 8ನೇ ಸ್ಥಾನಕ್ಕಾಗಿ ನಡೆದ ಸ್ಪರ್ಧೆಯಲ್ಲಿ ಕರ್ನಾಟಕ ತಂಡ ಮಧ್ಯಪ್ರದೇಶ ವಿರುದ್ಧ 69-60 ಅಂಕಗಳಲ್ಲಿ ಜಯ ಸಾಧಿಸಿತು. ಸತತ 2ನೇ ಫಿಫ್ಟಿಸಿಡಿಸಿದ ಸೂರ್ಯ ಪುಣೆ: ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆಯುವುದನ್ನು ಬಹುತೇಕ ಖಚಿತಪಡಿಸಿಕೊಂಡಿರುವ ಸೂರ್ಯಕುಮಾರ್‌ ಯಾದವ್‌, ಆರ್‌ಸಿಬಿ ವಿರುದ್ಧ ಶನಿವಾರ ನಡೆದ ಪಂದ್ಯದಲ್ಲಿ ಮತ್ತೊಮ್ಮೆ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದರು. ಈ ಆವೃತ್ತಿಯಲ್ಲಿ ಸತತ 2ನೇ ಅರ್ಧಶತಕ ಬಾರಿಸಿ ತಂಡಕ್ಕೆ ನೆರವಾದರು. 79 ರನ್‌ಗೆ 6 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ಮುಂಬೈ ತಂಡವನ್ನು 150 ರನ್‌ ತಲುಪಿಸಿದರು. ಕೇವಲ 37 ಎಸೆತಗಳಲ್ಲಿ 5 ಬೌಂಡರಿ, 6 ಸಿಕ್ಸರ್‌ನೊಂದಿಗೆ 68 ರನ್‌ ಸಿಡಿಸಿ ಔಟಾಗದೆ ಉಳಿದರು. ಕಳೆದ ಪಂದ್ಯದಲ್ಲಿ ಕೆಕೆಆರ್‌ ವಿರುದ್ಧ 36 ಎಸೆತಗಳಲ್ಲಿ 52 ರನ್‌ ಗಳಿಸಿದ್ದರು. : ದಕ್ಷಿಣ ಕೊರಿಯಾ ಸೆಮಿಫೈನಲ್‌ಗೆ ಭಾರತ ಲಗ್ಗೆ! ಗಾಯದ ಸಮಸ್ಯೆಯಿಂದಾಗಿ ಒಂದು ತಿಂಗಳು ಕ್ರಿಕೆಟ್‌ನಿಂದ ದೂರವಿದ್ದ ಸೂರ್ಯ, ಎನ್‌ಸಿಎನಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಈ ಕಾರಣದಿಂದಾಗಿ ಅವರು ಈ ಆವೃತ್ತಿಯ ಮೊದಲೆರಡು ಪಂದ್ಯಗಳಿಗೆ ಗೈರಾಗಿದ್ದರು. ಆ ಬಳಿಕ ತಂಡ ಕೂಡಿಕೊಂಡು ಕ್ವಾರಂಟೈನ್‌ ಪೂರ್ಣಗೊಳಿಸಿ, ಕಣಕ್ಕಿಳಿದ ಮೊದಲ ಪಂದ್ಯದಲ್ಲೇ ಅಬ್ಬರದ ಆಟ ಪ್ರದರ್ಶಿಸಿದ್ದರು. ಸೂರ್ಯ ಅವರ ಆಕರ್ಷಕ ಇನ್ನಿಂಗ್ಸ್‌ಗೆ ಸಾಮಾಜಿಕ ತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.