2022: ಚೆನ್ನೈ ತಂಡ ಸೇರಲು ನಾನಿನ್ನು 2 ವರ್ಷ ಚಿಕ್ಕವನು ಅಂದಿದ್ದೇಕೆ ಅಮಿತ್ ಮಿಶ್ರಾ..? * 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ನೀರಸ ಪ್ರದರ್ಶನ ತೋರುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್‌ * ಟೂರ್ನಿಯಲ್ಲಿ ಸತತ 4 ಸೋಲು ಕಂಡ ರವೀಂದ್ರ ಜಡೇಜಾ ನೇತೃತ್ವದ ಸಿಎಸ್‌ಕೆ * ಸಿಎಸ್‌ಕೆ ತಂಡ ಸೇರಿಕೊಳ್ಳಿ ಎನ್ನುವ ಅಭಿಮಾನಿಯ ಪ್ರಶ್ನೆಗೆ ವ್ಯಂಗ್ಯ ಉತ್ತರ ನೀಡಿದ ಅಮಿತ್ ಮಿಶ್ರಾ ಬೆಂಗಳೂರು(ಏ.10): ಪ್ರಸಕ್ತ ಐಪಿಎಲ್​​ನಲ್ಲಿ ( 2022) ಹಾಲಿ ಚಾಂಪಿಯನ್​​ ಚೆನ್ನೈ ಸೂಪರ್ ಕಿಂಗ್ಸ್‌ ( ) ತಂಡ ಹಿಂದೆಂದು ಕಾಣದಷ್ಟು ಕಳಪೆ ಪ್ರದರ್ಶನ ನೀಡುತ್ತಿದೆ. ಸತತ ನಾಲ್ಕು ಸೋಲು ತಂಡದ ಆತ್ಮವಿಶ್ವಾಸ ಕುಗ್ಗಿಸಿದೆ. 4 ಟ್ರೋಫಿ ವಿನ್ನರ್ಸ್ ಈಗ ​​ಗೆಲುವಿಗಾಗಿ ಹೆಣಗಾಡ್ತಿದ್ದಾರೆ. ತಂಡದಲ್ಲಿ ಅನುಭವಿ ಪ್ಲೇಯರ್ಸ್​ ಇದ್ರೂ ಯಾವುದೇ ಪ್ರಯೋಜನವಿಲ್ಲದಂತಾಗಿದೆ. ತಂಡದ ಕಳಪೆ ಪರ್ಫಾಮೆನ್ಸ್​​ ಬಗ್ಗೆ ಭಾರೀ ಟೀಕೆ ಹಾಗೂ ಚರ್ಚೆ ನಡೆಯುತ್ತಿರುವಾಗಲೇ ಟೀಂ​ ಇಂಡಿಯಾ ಮಾಜಿ ಆಟಗಾರನೊಬ್ಬ ಯೆಲ್ಲೋ ಆರ್ಮಿ ಬಗ್ಗೆ ವ್ಯಂಗವಾಡಿದ್ದಾರೆ. ಯೆಸ್​​​, ಈಗಾಗ್ಲೇ ಚೆನ್ನೈ ಡ್ಯಾಡ್ಸ್​ ಆರ್ಮಿ, ತಂಡದಲ್ಲಿ ಉತ್ಸಾಹವಿಲ್ಲ ಎಂದು ಟ್ರೋಲ್​​ ಮತ್ತು ಟೀಕೆ ಮಾಡಲಾಗ್ತಿದೆ. ಹಲವು ಸೀಸನ್​ಗಳಿಂದ ವಯಸ್ಕರ ತಂಡ ಹಣೆಪಟ್ಟಿ ಅಂಟಿದೆ. ಇದೇ ಡ್ಯಾಡ್ಸ್​ ಆರ್ಮಿ ಟೀಂ ಎರಡು ಬಾರಿ ಟ್ರೋಫಿ ಗೆದ್ರೂ ತಂಡವನ್ನ ಕಾಲೆಳೆಯುವರ ಸಂಖ್ಯೆ ಮಾತ್ರ ಕಮ್ಮಿಯಾಗಿಲ್ಲ. ಈಗ ಸ್ಟಾರ್​ ಸ್ಪಿನ್ನರ್ ಅಮಿತ್ ಮಿಶ್ರಾ ( ) ಚೆನ್ನೈ ತಂಡವನ್ನು ಕಿಚಾಯಿಸಿದ್ದಾರೆ. ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಬಲಿಷ್ಠ ತಂಡಗಳನ್ನೆಲ್ಲ ಬಗ್ಗುಬಡಿದು ನಾಲ್ಕನೇ ಬಾರಿಗೆ ಐಪಿಎಲ್ ಟ್ರೋಫಿಗೆ ಮಹೇಂದ್ರ ಸಿಂಗ್ ಧೋನಿ ( ) ಪಡೆ ಮುತ್ತಿಕ್ಕಿತ್ತು. ಆದರೆ ಇದೀಗ ರವೀಂದ್ರ ಜಡೇಜಾ ( ) ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಮೊದಲ 4 ಪಂದ್ಯಗಳಲ್ಲೂ ಹೀನಾಯ ಸೋಲು ಅನುಭವಿಸಿದೆ. ಸಿಎಸ್​​ಕೆ ಸೇರಲು ಮನವಿ ಮಾಡಿದ ಫ್ಯಾನ್ಸ್​​​​​​​​ಗೆ​ ಮಿಶ್ರಾ ವ್ಯಂಗ್ಯ: ಪಂಜಾಬ್​ ಕಿಂಗ್ಸ್ ವಿರುದ್ಧ ಗುಜರಾತ್ ಟೈಟಾನ್ಸ್‌​ ( ) ರೋಚಕ ಗೆಲುವು ಸಾಧಿಸಿದ ಬಳಿಕ ಮಾಜಿ ಕ್ರಿಕೆಟಿಗ ಅಮಿತ್ ಮಿಶ್ರಾ ಟ್ವೀಟ್ ಮಾಡಿದ್ದು, ಕೋಚ್​ ಆಶಿಶ್​​​​ ನೆಹ್ರಾರನ್ನ ಕೊಂಡಾಡಿದ್ರು. ಅಮಿತ್​ ಹೀಗೆ ಗುಜರಾತ್ ಟೈಟನ್ಸ್​ ಬಗ್ಗೆ ಟ್ವೀಟ್ ಮಾಡ್ತಿದ್ದಂತೆ ನೆಟ್ಟಿಗನೋರ್ವ ರಿಪ್ಲೈ ಮಾಡಿ ಚೆನ್ನೈ ತಂಡಕ್ಕೆ ಬನ್ನಿ ಎಂದು ಟ್ವೀಟ್​ ಮೂಲಕ ಮನವಿ ಮಾಡಿದ್ರು. ಸೈಮಂಡ್ಸ್‌, ಫ್ರಾಂಕ್ಲಿನ್‌ ನನ್ನ ಕೈಕಾಲು ಕಟ್ಟಿ ಕೂಡಿಹಾಕಿದ್ದರು..! ಆಘಾತಕಾರಿ ಘಟನೆ ಬಿಚ್ಚಿಟ್ಟ ಚಹಲ್ ಇನ್ನು ಅಭಿಮಾನಿ ಕೋರಿಕೆಗೆ ರಿಪ್ಲೇ ಮಾಡಿರೋ ಲೆಗ್​ ಬ್ರೇಕರ್​, ಕ್ಷಮಿಸು ಗೆಳೆಯ. ಚೆನ್ನೈ ತಂಡ ಸೇರಲು ನಾನಿನ್ನೂ ಎರಡು ವರ್ಷ ಚಿಕ್ಕವನು ಎಂದು ಬರೆದುಕೊಂಡಿದ್ರು. ಇದರೊಂದಿಗೆ ನೇರವಾಗಿ ಅಮಿತ್​ ಮಿಶ್ರಾ ಚೆನ್ನೈ ತಂಡ ಸೇರಿಕೊಳ್ಳಲು ಹೆಚ್ಚಿನ ವಯಸ್ಸಾಗಿರಬೇಕು, ಸಿಎಸ್​ಕೆ ತಂಡದ ಪ್ಲೇಯರ್ಸ್​ ವಯಸ್ಸಾದವರು ಎಂದೂ ಪರೋಕ್ಷವಾಗಿಯೇ ಕಿಚಾಯಿಸಿದ್ದಾರೆ. ಚೆನ್ನೈ ಅಂದ್ರೆ ಅಮಿತ್​​ ಮಿಶ್ರಾಗೆ ಸಿಟ್ಟೇಕೆ ..?: ಅಮಿತ್​ ಮಿಶ್ರಾ ಹೀಗೆ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಕಾಲೆಳೆಯಲು ಒಂದು ಕಾರಣವಿದೆ. ಆಕ್ಷನ್​​ನಲ್ಲಿ ಚೆನ್ನೈ ತಂಡ 35 ವರ್ಷ ಮೇಲ್ಪಟ್ಟ ಡ್ವೇನ್​ ಬ್ರಾವೋ, ಅಂಬಟಿ ರಾಯುಡು ಹಾಗೂ ರಾಬಿನ್​ ಉತ್ತಪ್ಪರನ್ನ ಖರೀದಿಸಿತ್ತು. 39 ವರ್ಷದ ಅಮಿತ್​ ಮಿಶ್ರಾ ಹರಾಜಿನಲ್ಲಿ ಅನ್​ಸೋಲ್ಡ್ ಆಗಿದ್ರು. ಈ ಹಿರಿಯ ಬೌಲರ್​​ನನ್ನ ಖರೀದಿಸುವ ಬೆಸ್ಟ್ ಚಾನ್ಸ್​​​​​ ಚೆನ್ನೈಗಿತ್ತು. ಆದ್ರೆ ಯೆಲ್ಲೊ ಆರ್ಮಿ ಆ ಕೆಲಸ ಮಾಡ್ಲಿಲ್ಲ. ಈ ಬೇಸರದಿಂದಲೇ ಅಮಿತ್​ ಮಿಶ್ರಾ ಚೆನ್ನೈ ತಂಡವನ್ನ ವಯಸ್ಕರ ತಂಡವೆಂದು ಕಿಚಾಯಿಸಿದ್ದಾರೆ. ಐಪಿಎಲ್​​​ನಲ್ಲಿ ಮಿಶ್ರಾ ರೆಕಾರ್ಡ್​ ಅದ್ಭುತವಾಗಿದೆ. 154 ಪಂದ್ಯಗಳಿಂದ 166 ವಿಕೆಟ್​ ಕಬಳಿಸಿದ್ದಾರೆ. ಐಪಿಎಲ್ ಹಿಸ್ಟರಿಯಲ್ಲಿ ಅತ್ಯಧಿಕ ವಿಕೆಟ್​​ ಪಡೆದ 4ನೇ ಪ್ಲೇಯರ್​ ಹಾಗೂ 3 ಬಾರಿ ಹ್ಯಾಟ್ರಿಕ್ ವಿಕೆಟ್​ ಪಡೆದ ಖ್ಯಾತಿ ಇವರದ್ದಾಗಿದೆ. ಇಂತಹ ಬೌಲರ್​​​ ಅನ್​ಸೋಲ್ಡ್​ ಆಗಿದ್ದು ನಿಜಕ್ಕೂ ವಿಷಾದವೇ.