2022: ವಿರಾಟ್ ಕೊಹ್ಲಿ ಸಲೆಬ್ರೇಶನ್ ಕಾಪಿ ಮಾಡಿದ ಡೆಲ್ಲಿ ಬಾಯ್..!​ * ಲಖನೌ ತಂಡದಲ್ಲಿದ್ದಾರೆ ಜೂನಿಯರ್ ಎಬಿ ಡಿವಿಲಿಯರ್ಸ್‌ * ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆಯುತ್ತಿರುವ ಆಯುಶ್ ಬದೋನಿ * ಕೊಹ್ಲಿ ರೀತಿ ಸಂಭ್ರಮಾಚರಣೆ ಮಾಡಿ ಗಮನ ಸೆಳೆದ ಆಯುಶ್ ಬದೋನಿ ಮುಂಬೈ(ಏ.10): ಇಂಡಿಯನ್ ಪ್ರೀಮಿಯರ್ ಲೀಗ್ ( ) ಕೇವಲ ಕಲರ್ ಫುಲ್ ಟೂರ್ನಿ ಮಾತ್ರವಲ್ಲ. ಕಲರ್ ಫುಲ್ ಆಟಗಾರರನ್ನೂ ಬೆಳಕಿಗೆ ತರೋ ಟೂರ್ನಿ. ಐಪಿಎಲ್ ಮೂಲಕ ಪ್ರತಿ ವರ್ಷ ಹೊಸ ಹೊಸ ಪ್ರತಿಭೆಗಳು ಬೆಳಕಿಗೆ ಬರುತ್ತವೆ. ಈ ವರ್ಷವೂ ಸಾಕಷ್ಟು ಯಂಗ್‌ಸ್ಟರ್​ಗಳು ಕಲರ್ ಫುಲ್ ಟೂರ್ನಿಯಲ್ಲಿ ಬೆಳಕಿಗೆ ಬಂದಿದ್ದಾರೆ. ಹಿಂದಿನ ವರ್ಷಗಳಿಗೆ ಹೋಲಿಸಿದ್ರೆ ಈ ವರ್ಷ ಹೆಚ್ಚಾಗಿಯೇ ಯುವ ಆಟಗಾರರ ಉಗಮವಾಗಿದೆ. ಅದರಲ್ಲಿ ಒಬ್ಬರು ಡೆಲ್ಲಿ ಡ್ಯಾಶರ್​ ಆಯುಶ್ ಬದೋನಿ ( ). ಯೆಸ್, ಡೆಲ್ಲಿಯ ಬಲಗೈ ಬ್ಯಾಟರ್​​ ಅಯುಶ್ ಬದೋನಿ, ಭಾರತ ಅಂಡರ್​-19 ತಂಡದ ಮೆಂಬರ್. ಆದರೆ ಇನ್ನೂ ಡೆಲ್ಲಿ ರಣಜಿ ಟೀಂ​ನಲ್ಲಿ ( ) ಸ್ಥಾನ ಪಡೆದಿಲ್ಲ. ಐಪಿಎಲ್ ಆಡೋದಕ್ಕೂ ಮುನ್ನ ಅವರು ಡೆಲ್ಲಿ ಪರ ಆಡಿದ್ದು ಜಸ್ಟ್ 5 ಟಿ20 ಮ್ಯಾಚ್​ಗಳನ್ನ ಮಾತ್ರ. ಅದರಲ್ಲಿ ಅವರು ಹೊಡೆದಿದ್ದು, ಬರೀ 8 ರನ್​ಗಳನ್ನ. ಆದರೂ ಲಖನೌ ಸೂಪರ್ ಜೈಂಟ್ಸ್​ ಫ್ರಾಂಚೈಸಿ​ ಈ ಸಲ ಅವರನ್ನ ಮೂಲ ಬೆಲೆ 20 ಲಕ್ಷ ಕೊಟ್ಟು ಖರೀದಿಸಿತ್ತು. ಲಖನೌ ಮೆಂಟರ್​ ಗೌತಮ್ ಗಂಭೀರ್ ( )​ ಶೋಧ ಮಾಡಿ ತಂದ ಪ್ರತಿಭೆನೇ ಈ ಆಯುಶ್. ಕಳೆದ ಸಲ ಆನ್ ಸೋಲ್ಟ್ ಆಗಿದ್ದರು ಬದೋನಿ. ವಿರಾಟ್ ಕೊಹ್ಲಿ ಸ್ಟೈಲ್​ನಲ್ಲಿ ವಿನ್ನಿಂಗ್ ಸಲೆಬ್ರೇಶನ್: ಮೊನ್ನೆ ಡೆಲ್ಲಿ ಕ್ಯಾಪಿಟಲ್ಸ್ ( ) ವಿರುದ್ಧ ಲಖನೌ ಟೀಂ ಕೊನೆ ಓವರ್​​​ನಲ್ಲಿ ರೋಚಕ ಜಯ ಸಾಧಿಸಿತು. ಆ ಪಂದ್ಯದಲ್ಲಿ 22 ವರ್ಷದ ಆಯುಶ್ ಬದೋನಿ, ಸಿಕ್ಸ್ ಮೂಲಕ ವಿನ್ನಿಂಗ್​ ಶಾಟ್ ಹೊಡೆದ್ರು. ಇದರಲ್ಲಿ ವಿಶೇಷ ಏನಿಲ್ಲ. ಆದರೆ ಸಿಕ್ಸರ್ ಬಾರಿಸಿ ಲಖನೌ ಗೆಲ್ಲುತ್ತಿದಂತೆ ಆಯುಶ್ ಬದೋನಿ, ವಿರಾಟ್ ಕೊಹ್ಲಿ ( ) ಸ್ಟೈಲ್​ನಲ್ಲಿ ಸಲೆಬ್ರೇಶನ್ ಮಾಡಿದ್ರು. ಅದು ಎಲ್ಲರ ಗಮನ ಸೆಳೆಯಿತು. ಕಿಂಗ್ ಕೊಹ್ಲಿ ಸೆಂಚುರಿ ಬಾರಿಸಿದಾಗ ಅಥವಾ ಅವರು ಕ್ರೀಸಿನಲ್ಲಿದ್ದಾಗ ಟೀಂ ಇಂಡಿಯಾ ( ) ಅಥವಾ ಆರ್​ಸಿಬಿ () ವಿನ್ ಆದ್ರೆ ಆಗ ಅವರು, ಜೆರ್ಸಿ ಹಿಂದಿರುವ ತಮ್ಮ ಹೆಸರನ್ನ ತೋರಿಸಿಕೊಂಡು ಸೆಲಬ್ರೇಶನ್ ಮಾಡ್ತಾರೆ. ಥೇಟ್ ಹಾಗೆಯೇ ಆಯುಶ್ ಬದೋನಿ ಮೊನ್ನೆ ಡೆಲ್ಲಿ ವಿರುದ್ಧ ಗೆದ್ದ ನಂತರ ಸೆಲೆಬ್ರೇಶನ್ ಮಾಡಿದ್ದಾರೆ. ಆ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಬದೋನಿ ಫೇವರಿಟ್ ಪ್ಲೇಯರ್ ಎಬಿಡಿ..! ವಿರಾಟ್ ಕೊಹ್ಲಿ ಸಲೆಬ್ರೇಶನ್ ಕಾಪಿ ಮಾಡಿದ್ರೂ ಆಯೋಶ್ ಬದೋನಿ ಫೇವರಿಟ್ ಪ್ಲೇಯರ್, ಕೊಹ್ಲಿ ಅಲ್ಲ. ಕೊಹ್ಲಿಯ ಆತ್ಮೀಯ ಗೆಳೆಯ ಎಬಿ ಡಿವಿಲಿಯರ್ಸ್ ( )​. ಇದನ್ನ ಅವರೇ ಹೇಳಿಕೊಂಡಿದ್ದಾರೆ. ನನ್ನ ಫೇವರಿಟ್ ಪ್ಲೇಯರ್ ಎಬಿಡಿ ಅಂತ ಲಕ್ನೋ ತಂಡದ ಕ್ಯಾಪ್ಟನ್ ಕೆ,ಎಲ್. ರಾಹುಲ್ ( ) ಬಳಿ ಬದೋನಿ ಹೇಳಿದ್ರಂತೆ. ಆಗ ರಾಹುಲ್, ಹಾಗಾದ್ರೆ ಎಬಿಡಿ ಸ್ಟೈಲ್​ನಲ್ಲೇ ಬ್ಯಾಟಿಂಗ್ ಮಾಡು ಅಂದ್ರಂತೆ. ಹಾಗಾಗಿನೇ ಬದೋನಿ, ಎಬಿಡಿ ಸ್ಟೈಲ್​ನಲ್ಲಿ ಬ್ಯಾಟ್ ಬೀಸಿದ್ದು. ಇನ್ನು ಆಯುಶ್ ಬದೋನಿ ಶಾರ್ಟ್​ ನೇಮ್ ಎಬಿಡಿ. ಆತ ಆಫ್ರಿಕಾ ಎಬಿಡಿಯಾದ್ರೆ, ಈತ ಭಾರತದ ಎಬಿಡಿ. ಕೆ.ಎಲ್ ರಾಹುಲ್ ಬದೋನಿಯನ್ನ ಎಬಿ ಅಂತ ಕರೆಯತ್ತಾರಂತೆ. 2022: ದಿನೇಶ್​ ಕಾರ್ತಿಕ್ ಡಿಫರೆಂಟ್​​ ಹೆಲ್ಮೆಟ್​​ ಹಾಕಿ ಆಡೋದ್ಯಾಕೆ..? ಐಪಿಎಲ್ ಪಾದಾರ್ಪಣೆ ಪಂದ್ಯದಲ್ಲೇ ಆಯುಶ್ ಬದೋನಿ ಗುಜರಾತ್ ಟೈಟಾನ್ಸ್ ಎದುರು ಆಕರ್ಷಕ ಅರ್ಧಶತಕ ಚಚ್ಚಿದ್ದರು. ಇದಾದ ಬಳಿಕ ಚೆನ್ನೈ ಎದುರು 9 ಎಸೆತಗಳಲ್ಲಿ 19 ರನ್ ಚಚ್ಚಿದ್ದರು. ಇನ್ನು ಡೆಲ್ಲಿ ಕ್ಯಾಪಿಟಲ್ಸ್ ಎದುರು ಸಿಕ್ಸರ್‌ ಬಾರಿಸುವ ಮೂಲಕ ಲಖನೌ ತಂಡಕ್ಕೆ ಬದೋನಿ ರೋಚಕ ಗೆಲುವು ತಂದುಕೊಟ್ಟಿದ್ದರು.