10 ಟ್ರೋಫಿ ಗೆದ್ದಿರುವ 3 ತಂಡಗಳು ಒಂದೂ ಪಂದ್ಯ ಗೆದ್ದಿಲ್ಲ..! * 15ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆಯಲು ಪರದಾಡುತ್ತಿವೆ ಈ 3 ತಂಡಗಳು * 10 ಐಪಿಎಲ್ ಟ್ರೋಫಿ ಗೆದ್ದಿರುವ ಮೂರು ತಂಡಗಳಿಗೆ ಇನ್ನೂ ಸಿಕ್ಕಿಲ್ಲ ಜಯ * ಹ್ಯಾಟ್ರಿಕ್ ಸೋಲುಂಡು ಮುಖಭಂಗ ಅನುಭವಿಸಿದೆ ಚೆನ್ನೈ ಸೂಪರ್ ಕಿಂಗ್ಸ್‌ ಮುಂಬೈ(ಏ.06): ಐಪಿಎಲ್ 15ನೇ ಸೀಸನ್​ನಲ್ಲಿ ( 2022) 13 ಪಂದ್ಯಗಳು ಮುಗಿದು ಹೋಗಿವೆ. ಇಂದು 14ನೇ ಪಂದ್ಯದಲ್ಲಿ ಮಾಜಿ ಚಾಂಪಿಯನ್​ಗಳಾದ ಮುಂಬೈ ಇಂಡಿಯನ್ಸ್ ( ) ಮತ್ತು ಕೋಲ್ಕತಾ ನೈಟ್ ರೈಡರ್ಸ್​ ( ) ಮುಖಾಮುಖಿಯಾಗ್ತಿವೆ. ಈ ನಡುವೆ ಕಳೆದ 14 ಸೀಸನ್​​ಗಳಲ್ಲಿ 10 ಐಪಿಎಲ್ ಟ್ರೋಫಿಗಳ ಗೆದ್ದ ಮೂರು ತಂಡಗಳು ಈ ಸೀಸನ್​​​ನಲ್ಲಿ ಒಂದೇ ಒಂದು ಜಯ ದಾಖಲಿಸಿಲ್ಲ. ಪಾಯಿಂಟ್ ಟೇಬಲ್​ನಲ್ಲಿ ಕೊನೆ ಸ್ಥಾನ ಪಡೆದುಕೊಂಡು ಕೂತಿವೆ. ಹೇಳಿಕೊಳ್ಳೋಕೆ ಮಾಜಿ ಚಾಂಪಿಯನ್ಸ್​. ಈ ತಂಡಗಳ ಹೆಸರು ಹೇಳಿದರೆ ಎದುರಾಳಿ ತಂಡಗಳು ಹೆದರುತ್ತವೆ. ಆದರೆ ಈ ಟೀಮ್​ಗಳು ಮಾತ್ರ ಈ ಸೀಸನ್​ನಲ್ಲಿ ತೀರ ಕಳಪೆ ಪ್ರದರ್ಶನ ನೀಡಿವೆ. ಮೂರು ತಂಡಗಳು ಸೇರಿ 7 ಪಂದ್ಯಗಳನ್ನಾಡಿದ್ರೂ ಜಯ ಮಾತ್ರ ದಕ್ಕಿಲ್ಲ. ಬರೀ ಸೋಲುಗಳೇ. ಮುಂಬೈ ಇಂದಾದ್ರೂ ಗೆಲುವಿನ ಖಾತೆ ತೆರೆಯುತ್ತಾ..?: ದಾಖಲೆಯ 5 ಬಾರಿ ಐಪಿಎಲ್ ಟ್ರೋಫಿ ಗೆದ್ದಿರುವ ಮುಂಬೈ ಇಂಡಿಯನ್ಸ್ ಈ ಸೀಸನ್​ನಲ್ಲಿ ಸತತ ಎರಡು ಪಂದ್ಯ ಸೋತಿದೆ. ಇಂದು ಪುಣೆಯಲ್ಲಿ 3ನೇ ಪಂದ್ಯವನ್ನ ವಿರುದ್ಧ ಆಡಲಿದ್ದು, ಇಂದಾದ್ರೂ ಗೆಲುವಿನ ಖಾತೆ ತೆರೆಯುತ್ತಾ ಅನ್ನೋ ಪ್ರಶ್ನೆ ಮೂಡಿದೆ. ಮುಂಬೈನಲ್ಲೇ ಐಪಿಎಲ್ ನಡೆಯುತ್ತಿದ್ದರೂ, ಅಲ್ಲಿಯೇ ಡೆಲ್ಲಿ ಕ್ಯಾಪಿಟಲ್ಸ್, ರಾಜಸ್ಥಾನ ರಾಯಲ್ಸ್‌ ( ) ವಿರುದ್ಧ ಪರಾಭವಗೊಂಡಿದೆ. ಮುಂಬೈನಲ್ಲಿ ಸಿಗದ ಜಯ, ಇಂದು ಪುಣೆಯಲ್ಲಿ ಸಿಗುತ್ತಾ..? ಸತತ ಸೋಲಿನಿಂದ ಹೊರಬರುತ್ತಾ ಅನ್ನೋ ಕುತೂಹಲವಿದೆ. ಹಾಲಿ ಚಾಂಪಿಯನ್ಸ್​​ಗೆ ಹ್ಯಾಟ್ರಿಕ್ ಸೋಲು: ಚೆನ್ನೈ ಸೂಪರ್ ಕಿಂಗ್ಸ್​ ( ) ಹಾಲಿ ಚಾಂಪಿಯನ್. ಮುಂಬೈ ಬಿಟ್ಟರೆ ಅತಿಹೆಚ್ಚು ಅಂದರೆ 4 ಬಾರಿ ಐಪಿಎಲ್ ಟ್ರೋಫಿ ಗೆದ್ದಿರೋ ಸಿಎಸ್​ಕೆ, ಈ ಸಲ ಹ್ಯಾಟ್ರಿಕ್ ಸೋಲು ಅನುಭವಿಸಿದೆ. ಉದ್ಘಾಟನಾ ಪಂದ್ಯದಲ್ಲೇ ಕೆಕೆಆರ್ ವಿರುದ್ಧ ಸೋತಿದ್ದ ಚೆನ್ನೈ, ಬಳಿಕ ಲಖನೌ ಸೂಪರ್‌ ಜೈಂಟ್ಸ್‌ ಮತ್ತು ಪಂಜಾಬ್ ಕಿಂಗ್ಸ್‌ ( ) ವಿರುದ್ಧವೂ ಹೀನಾಯವಾಗಿ ಸೋತಿದೆ. ತಂಡದಲ್ಲಿ ಆಗಿರೋ ಕೆಲ ಬದಲಾವಣೆಗಳು ಮತ್ತು ಕ್ಯಾಪ್ಟನ್ಸಿ ಚೇಂಜ್ ಆಗಿರೋದು ಸೋಲಿಗೆ ಕಾರಣ ಅನ್ನಲಾಗ್ತಿದೆ. ಆದರೆ ಸಿಎಸ್​ಕೆ ಫ್ಯಾನ್ಸ್ ಮಾತ್ರ ನೂತನ ನಾಯಕ ರವೀಂದ್ರ ಜಡೇಜಾ ( ) ಬೆನ್ನಿಗೆ ನಿಂತಿದ್ದಾರೆ. ಜಡೇಜಾಗೆ ಕ್ಯಾಪ್ಟನ್ಸಿ ಮಾಡಲು ಬಿಡಿ ಎಂದು ಟ್ರೋಲ್ ಮಾಡ್ತಿದ್ದಾರೆ. ಕಾರಣ, ಜಡ್ಡು ನಾಯಕನಾದ್ರೂ ಎಲ್ಲಾ ಡಿಶಿಷನ್ ತೆಗೆದುಕೊಳ್ತಿರೋದು ಎಂಎಸ್ ಧೋನಿ ( ). ನಾಳೆ ಲಖನೌ ಸೂಪರ್‌ ಜೈಂಟ್ಸ್‌ ವಿರುದ್ಧ ಗೆದ್ದು ಹ್ಯಾಟ್ರಿಕ್ ಸೋಲಿನಿಂದ ಹೊರಬರುತ್ತಾ ನೋಡಬೇಕು. 2022 ಫಾರಿನ್ ಪ್ಲೇಯರ್ಸ್ ವಿರಾಟ್ ಕೊಹ್ಲಿಗೆ ಕ್ಲೋಸ್ ಫ್ರೆಂಡ್ಸ್ ಆಗ್ತಿರೋದ್ಯಾಕೆ..? ಸನ್‌ರೈಸರ್ಸ್​ಗೆ ಈ ಸೀಸನ್​ನಲ್ಲಿ ಸತತ ಎರಡು ಸೋಲು: ಸನ್‌ರೈಸರ್ಸ್ ಹೈದ್ರಾಬಾದ್ ( ) ಸಮಸ್ಯೆಗಳು ಮುಗಿಯುವಂತೆ ಕಾಣುತ್ತಿಲ್ಲ. ಕಳೆದ ಸೀಸನ್​ನಲ್ಲಿ ಡೇವಿಡ್ ವಾರ್ನರ್ ( ) ಜೊತೆ ಕಿರಿಕ್ ಮಾಡಿಕೊಂಡು ಟೂರ್ನಿ ಮಧ್ಯೆಯೇ ಕ್ಯಾಪ್ಟನ್ಸಿಯಿಂದ ಕೆಳಗಿಳಿಸಿದ್ದ ಸನ್‌ರೈಸರ್ಸ್, ಈ ಸಲ ಬಿಡ್​ನಲ್ಲಿ ಫ್ರಾಂಚೈಸಿಗಳು ತನಗೆ ಬೇಕಾದ ಆಟಗಾರರನ್ನ ಖರೀದಿಸಿದ್ದರು. ಇದರಿಂದ ಸಹಾಯಕ ಕೋಚ್ ಸೈಮನ್ ಕ್ಯಾಟಿಚ್ ರಾಜೀನಾಮೆ ನೀಡಿ ತಂಡ ಬಿಟ್ಟಿದ್ದರು. ಇಷ್ಟೆಲ್ಲಾ ಕಿರಿಕ್ ಮಾಡಿಕೊಂಡ ಹೈದ್ರಾಬಾದ್​, ಈ ಸಲ ಆಡಿದ ಎರಡು ಪಂದ್ಯಗಳನ್ನೂ ಸೋತಿದೆ. ಜೊತೆಗೆ ಕಳೆದ 16 ಪಂದ್ಯಗಳಲ್ಲಿ ಗೆದ್ದಿರೋದು ಮೂರನ್ನ ಮಾತ್ರ. ಒಟ್ನಲ್ಲಿ 10 ಕಪ್​ಗಳನ್ನ ಗೆದ್ದ ತಂಡಗಳು ಜಯ ದಾಖಲಿಸಲು ಪರದಾಡುತ್ತಿರುವುದಂತೂ ಸುಳ್ಳಲ್ಲ.