2022: ಕ್ರಿಕೆಟ್‌ ಕಿಟ್ ಕೊಳ್ಳಲು ಪರದಾಡಿದ್ದ ತಿಲಕ್‌ ವರ್ಮಾ, ಈಗ ಮುಂಬೈ ಸೆನ್ಸೇಷನ್ ಪ್ಲೇಯರ್..! * ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಆಟಗಾರ ತಿಲಕ್ ವರ್ಮಾ ಹಿಂದಿದೆ ಕರುಣಾಜನಕ ಸ್ಥಿತಿ * ಮುಂಬೈ ಇಂಡಿಯನ್ಸ್‌ ಬ್ಯಾಟಿಂಗ್ ಸೆನ್ಸೇಷನ್ ತಿಲಕ್ ವರ್ಮಾ ಕುಟುಂಬಕ್ಕೆ ಇಲ್ಲ ಸ್ವಂತ ಮನೆ * ಐಪಿಎಲ್ ಹಣದಲ್ಲಿ ಸ್ವಂತ ಮನೆ ಕಟ್ಟುವ ಕನಸು ಕಾಣುತ್ತಿರುವ ತಿಲಕ್ ವರ್ಮಾ ಮುಂಬೈ(ಏ.05): ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಎಂಟ್ರಿಕೊಟ್ರೆ ಸಾಕು ಕ್ರಿಕೆಟರ್ಸ್​ ಲೈಫೇ ಚೇಂಜ್ ಆಗುತ್ತೆ. ಆದರೆ ಆಗಮನಕ್ಕೂ ಮುನ್ನ ಅವರ ಬದುಕು ನಿಜಕ್ಕೂ ದುಸ್ತರ. ಐಪಿಎಲ್​ ಇತಿಹಾಸದ ಪುಟಗಳನ್ನ ಒಮ್ಮೆ ತಿರುವಿ ಹಾಕಿದರೆ ಅದೆಷ್ಟೋ ಮನಮಿಡಿಯುವ ಕಥೆಗಳು ನಮಗೆ ಕಾಣ ಸಿಗುತ್ತೆ. ಬಡತನ ಬೇಗೆ ಮೆಟ್ಟಿನಿಂತು ಉಸಿರಾಗಿಸಿಕೊಂಡು ಕ್ರಿಕೆಟ್​​​ ಆಟದಲ್ಲಿ ಗೆದ್ದವರಿದ್ದಾರೆ. ಇದರಿಂದ ಬದುಕು ಬೆಳಗಿದೆ. ಇನ್ಸ್​​ಸ್ಪಿರೇಶನ್​ ಪ್ಲೇಯರ್ಸ್​ ಅಂತ ಕರೆಸಿಕೊಳ್ಳೋ ಜಸ್‌ಪ್ರೀತ್​ ಬುಮ್ರಾ ( ), ಸೂರ್ಯಕುಮಾರ್​ ಯಾದವ್ ( )​ ಇದಕ್ಕೆ ಬೆಸ್ಟ್ ಎಕ್ಸಾಂಪಲ್ಸ್​​​. ಸದ್ಯ ಈ ಲಿಸ್ಟ್​ಗೆ ಸೇರಿಕೊಳ್ಳಲು ತಿಲಕ್ ವರ್ಮಾ ( ) ಹವಣಿಸ್ತಿದ್ದಾರೆ. ಈಗ ತಾನೇ ಐಪಿಎಲ್ () ಲೋಕದಲ್ಲಿ ಅಂಬೆಗಾಲಿಟ್ಟಿರೋ ತಿಲಕ್ ವರ್ಮಾ​ ಸ್ಪೋಟಕ ಆಟದಿಂದ ಸುದ್ದಿಯಲ್ಲಿದ್ದಾರೆ. ಅದು ಜಸ್ಟ್​​​ ಎರಡೇ ಪಂದ್ಯದಿಂದ. ಮುಂಬೈ ಇಂಡಿಯನ್ಸ್ ಪರ ಮೊದಲೆರಡು ಪಂದ್ಯಗಳಲ್ಲಿ ತಿಲಕ್ ವರ್ಮಾ ಕ್ರಮವಾಗಿ 21 ಹಾಗೂ 61 ರನ್ ಬಾರಿಸಿದ್ದಾರೆ. ಅಭಿಮಾನಿಗಳ ಪ್ರೀತಿ ಸಂಪಾದಿಸಿದ್ದಾರೆ. ಆದರೆ ಅಂಗಳದಲ್ಲಿ ಹೀಗೆ ಬೌಂಡರಿ-ಸಿಕ್ಸರ್​​​ ಸಿಡಿಸಿ ಫ್ಯಾನ್ಸ್​ ದಿಲ್​ ಗೆದ್ದಿರೋ ಹೈದ್ರಾಬಾದ್​​ ಆಟಗಾರನ ಹಿಂದೆ ಒಂದು ಮನಮಿಡಿಯುವ ಕಥೆ ಇದೆ. ಅದು ಬೆಂಕಿಯಲ್ಲಿ ಅರಳಿದ ಹೂವಿನ ಕಥೆ. ಹೊಸ ಕಿಟ್ಸ್ ಕೊಂಡುಕೊಳ್ಳಲು ದುಡ್ಡಿಲ್ಲದೆ ಪರದಾಟ: ಇಂದು ತಿಲಕ್​ ಐಪಿಎಲ್​​ನ ಮೋಸ್ಟ್​​ ಸಕ್ಸಸ್​ಫುಲ್​​ ತಂಡದ ಪರ ಆಡ್ತಿರಬಹುದು. ಎರಡೇ ಪಂದ್ಯದಲ್ಲಿ ಎಡಗೈ ಬ್ಯಾಟರ್ ಪ್ರತಿಭೆ ಅನಾರಣಗೊಂಡಿರಬಹುದು. ಆದರೆ ತಿಲಕ್​​ ಕ್ರಿಕೆಟ್​ ಬದುಕು ಅಂದುಕೊಂಡಷ್ಟು ಸುಲಭವಿರ್ಲಿಲ್ಲ. ಇವರದ್ದು ಕಡು ಬಡತನದ ಕುಟುಂಬ. ತಂದೆ ಹೈದ್ರಾಬಾದ್​​ನಲ್ಲಿ ಎಲೆಕ್ಟ್ರಿಷಿಯನ್​​​. ಬಂದ ಆದಾಯದಲ್ಲೇ ಕುಟುಂಬ ನಿರ್ವಹಣೆ ಮಾಡಬೇಕಿತ್ತು. ಹೀಗಾಗಿ ತಿಲಕ್​ ಕ್ರಿಕೆಟ್​ ಕಲಿಕೆಗೆ ತಂದೆಯಿಂದ ಹೆಚ್ಚಿನ ಸಪೋರ್ಟ್​ ಸಿಗ್ಲಿಲ್ಲ. ಆದ್ರೂ ಮಗನನ್ನ ದೊಡ್ಡ ಕ್ರಿಕೆಟ್​ ಮಾಡಬೇಕೆಂದು ಕನಸು ಕಂಡಿದ್ರು. ಆರ್ಥಿಕ ಸಮಸ್ಯೆಯಿಂದ ತಿಲಕ್​ ಕ್ರಿಕೆಟ್​ ಬದುಕಿಗೆ ಮುಗಿದೆ ಹೋಯ್ತು ಅನ್ನೋವಾಗ್ಲೇ ನೆರವಿಗೆ ಬಂದಿದ್ದು ಕೋಚ್ ಸಲಾಂ ಬಿಯಾಸ್​​​. ಬಿಯಾಸ್​, ತಿಲಕ್​​ ಕೋಚಿಂಗ್ ಜೊತೆ ಆರ್ಥಿಕ ನೆರವು ನೀಡಿದ್ರು. ಟೂಲ್ಸ್​ ಜೊತೆ ಮುರಿದ ಬ್ಯಾಟ್​​ನಲ್ಲಿ ಆಡ್ತಿದ್ದ ವರ್ಮಾಗೆ ಹೊಸ ಬ್ಯಾಟ್ ತಂದುಕೊಟ್ರು. ನಂತರ ವರ್ಮಾಗೆ ಅಂಡರ್​​​​​​ -19 ವಿಶ್ವಕಪ್​​ನಲ್ಲಿ ( -19 ) ಅವಕಾಶ ಸಿಗ್ತು. ಹೈದರಾಬಾದ್ ಪರ ಡೊಮೆಸ್ಟಿಕ್​​​​ ಕ್ರಿಕೆಟ್ ಆಡಿದ್ರು. ಅಲ್ಲಿ ತೋರಿದ ಅದ್ಭುತ ಪ್ರದರ್ಶನದಿಂದ ಐಪಿಎಲ್​​​ನಲ್ಲಿ ಆಡಲು ಚಾನ್ಸ್ ಗಿಟ್ಟಿಸಿಕೊಂಡ್ರು. ಮುಂಬೈ ಬಿಡ್​ ಮಾಡ್ತಿದ್ದಂತೆ ಕುಣಿದು ಕುಪ್ಪಳಿಸಿದ್ದ ತಿಲಕ್​: ಇನ್ನು ಅನ್​​​ಕ್ಯಾಪ್ಡ್ ತಿಲಕ್​​ ವರ್ಮಾ ಆಕ್ಷನ್​​ನಲ್ಲಿ 20 ಲಕ್ಷ ಮೂಲಬೆಲೆ ಘೋಷಿಸಿಕೊಂಡಿದ್ರು. ಇವರ ಖರೀದಿಗೆ ರಾಜಸ್ಥಾನ, ಹೈದ್ರಾಬಾದ್​​​, ಮುಂಬೈ ಹಾಗೂ ಚೆನ್ನೈ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಕೊನೆಗೆ 1.7 ಕೋಟಿ ರೂಪಾಯಿ ನೀಡಿ ಮುಂಬೈ ಇಂಡಿಯನ್ಸ್ ( ) ತೆಕ್ಕೆಗೆ ಹಾಕಿಕೊಳ್ತು. ಮುಂಬೈ ಪಾಲಾಗ್ತಿದ್ದಂತೆ ವರ್ಮಾ ಸ್ನೇಹಿತರನ್ನ ತಬ್ಬಿಕೊಂಡು ಕುಣಿದು ಕುಪ್ಪಳಿಸಿದ್ರು. ಸ್ವಂತ ಸೂರಿಲ್ಲ, ದುಡ್ಡಲ್ಲಿ ಮನೆ ಕಟ್ಟಿಲು ನಿರ್ಧಾರ: ಯೆಸ್​​, ಮುಂಬೈ ತಂಡದ ತಿಲಕ್​ ವರ್ಮಾ ಅವರಿಗೆ ಇನ್ನೂ ಸ್ವಂತ ಸೂರಿಲ್ಲ. ಬಾಡಿಗೆ ಮನೆಯಲ್ಲಿ ವಾಸ್ತಿದ್ದಾರೆ. ಹೀಗಾಗಿ ಐಪಿಎಲ್​​ನಿಂದ ಗಳಿಸುವ ದುಡ್ಡಿನಲ್ಲಿ ಸ್ವಂತ ಮನೆ ಖರೀದಿಸಲು ಲೆಫ್ಟಿ ಪ್ಲೇಯರ್ ನಿರ್ಧರಿಸಿದ್ದಾರೆ. ಆ ಮೂಲಕ ತಂದೆ ತಾಯಿಗೆ ಬಿಗ್​ ಗಿಫ್ಟ್​ ನೀಡಲು ಮುಂದಾಗಿದ್ದಾರೆ. ಇದರಲ್ಲಿ ಇದರಲ್ಲಿ ಯಶಸ್ಸು ಸಿಗಲಿ ಎನ್ನುವುದು ನಮ್ಮ ಹಾರೈಕೆ.