ಈ ಐಪಿಎಲ್​ನಲ್ಲಿ ಭವಿಷ್ಯದ ಟೀಂ ಇಂಡಿಯಾ ನಾಯಕನ ಉಗಮ..! * 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಹೊಸ ಟೀಂ ಇಂಡಿಯಾ ನಾಯಕನ ಉಗಮ * ರೋಹಿತ್ ಬಳಿಕ ನಾಯಕನಾಗುವ ರೇಸ್‌ನಲ್ಲಿದ್ದಾರೆ ಟೀಂ ಇಂಡಿಯಾದ ಮೂವರು ಆಟಗಾರರು * ಕನ್ನಡಿಗ ಕೆ.ಎಲ್. ರಾಹುಲ್ ಮೇಲೆ ಹೆಚ್ಚಿನ ನಿರೀಕ್ಷೆ ಬೆಂಗಳೂರು(ಮಾ.29): ​ನಲ್ಲಿ ಕೇವಲ ಯುವ ಆಟಗಾರರ ಉಗಮವಷ್ಟೇಯಲ್ಲ, ಇಲ್ಲಿ ನಾಯಕರ ಉಗಮವೂ ಆಗುತ್ತೆ. ಶೇನ್ ವಾರ್ನ್​ ಮತ್ತು ಅನಿಲ್ ಕುಂಬ್ಳೆ ಅವರು ದಿಗ್ಗಜ ಆಟಗಾರರು ಮಾತ್ರವಲ್ಲ, ಅವರು ಸಹ ಉತ್ತಮ ನಾಯಕರು ಅನ್ನೋದನ್ನ ಕ್ರಿಕೆಟ್ ಜಗತ್ತಿಗೆ ತೋರಿಸಿಕೊಟ್ಟಿದ್ದು ಇದೇ . ಅಷ್ಟೇಕೆ, ಟೀಂ ಇಂಡಿಯಾ ನಾಯಕನಾಗುವುದಕ್ಕೂ ಮುಂಚೆ ರೋಹಿತ್ ಶರ್ಮಾ ( ) ದಿ ಬೆಸ್ಟ್ ಕ್ಯಾಪ್ಟನ್ ಎನಿಸಿಕೊಂಡಿದ್ದು ಐಪಿಎಲ್​ನಲ್ಲೇ. ಮುಂಬೈ ಇಂಡಿಯನ್ಸ್​ಗೆ( ) 5 ಐಪಿಎಲ್ ಟ್ರೋಫಿ ಗೆಲ್ಲಿಸಿಕೊಟ್ಟ ನಂತರವೇ ರೋಹಿತ್ ನಾಯಕತ್ವ ವಿಶ್ವ ಕ್ರಿಕೆಟ್​ಗೆ ಗೊತ್ತಾಗಿದ್ದು. ಅವರು ಭಾರತ ಮೂರು ಮಾದರಿ ತಂಡದ ನಾಯಕನಾಗಿದ್ದು. ಈ ಸಲದ ​ನಲ್ಲಿ ಒಟ್ಟು 10 ತಂಡಗಳು ಕಣದಲ್ಲಿವೆ. ಎರಡು ತಂಡಗಳಿಗೆ ಫಾರಿನ್ ಪ್ಲೇಯರ್ಸ್​ ಕ್ಯಾಪ್ಟನ್​ಗಳಾಗಿದ್ದರೆ, ಉಳಿದ 8 ತಂಡಗಳಿಗೆ ಭಾರತೀಯ ಆಟಗಾರರೇ ನಾಯಕರು. ಅದರಲ್ಲಿ ರೋಹಿತ್ ಶರ್ಮಾ ಟೀಂ ಇಂಡಿಯಾ ( ) ನಾಯಕ ಕೂಡ. ರೋಹಿತ್ ನಂತರ ಟೀಂ ಇಂಡಿಯಾ ಕ್ಯಾಪ್ಟನ್ ಆಗಲು ಉಳಿದ 7 ನಾಯಕರು ರೇಸ್​ನಲ್ಲಿದ್ದಾರೆ. ತಮ್ಮ ತಮ್ಮ ತಂಡಗಳಿಗೆ ಟ್ರೋಫಿ ಗೆಲ್ಲಿಸಿಕೊಟ್ಟು ದಿ ಬೆಸ್ಟ್ ಕ್ಯಾಪ್ಟನ್ ಎನಿಸಿಕೊಳ್ಳಲು ಎಲ್ಲರೂ ತುದಿಗಾಲಲ್ಲಿ ನಿಂತಿದ್ದಾರೆ. ಕ್ಯಾಪ್ಟನ್ಸಿ ರೇಸ್​ನಿಂದ 7ರಲ್ಲಿ ನಾಲ್ವರು ಹೊರಬಿದ್ದಿದ್ದೇಕೆ..?: 7 ಭಾರತೀಯ ಆಟಗಾರರು IPLನಲ್ಲಿ ನಾಯಕರಾಗಿದ್ದರೂ ಭವಿಷ್ಯದಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್ ಆಗೋ ಸಾಮರ್ಥ್ಯ ಇರೋದು ಮೂವರಿಗೆ ಮಾತ್ರ. ಉಳಿದ ನಾಲ್ವರು ​​ನಲ್ಲಿ ಎಷ್ಟೇ ಉತ್ತಮ ಪ್ರದರ್ಶನ ನೀಡಿದ್ರೂ ಆಟಗಾರರಾಗಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಬಹುದೇ ಹೊರತು, ನಾಯಕರಾಗಲು ಸಾಧ್ಯವಿಲ್ಲ. ಸಿಎಸ್​ಕೆ ಕ್ಯಾಪ್ಟನ್ ರವೀಂದ್ರ ಜಡೇಜಾ ( ) ವಯಸ್ಸು 30 ಪ್ಲಸ್ ಆಗಿರೋದ್ರಿಂದ ಟೀಂ ಇಂಡಿಯಾ ಕಪ್ತಾನ ಆಗೋ ರೇಸ್​​ನಿಂದ ಹೊರಬಿದ್ದಿದ್ದಾರೆ. ರಾಜಸ್ಥಾನ ರಾಯಲ್ಸ್​ ನಾಯಕ ಸಂಜು ಸ್ಯಾಮ್ಸನ್ಸ್​ಗೆ ( ) ಟೀಂ ಇಂಡಿಯಾದಲ್ಲೇ ಖಾಯಂ ಸ್ಥಾನವಿಲ್ಲ. ಮಯಾಂಕ್​ ಅಗರ್ವಾಲ್​​​​​​​​​​​​​​​​​​​​​​​​​ ( ) ಟೆಸ್ಟ್ ಟೀಂ​ನಲ್ಲಿ ಮಾತ್ರ ಸ್ಥಾನ. ಇನ್ನು ಹಾರ್ದಿಕ್ ಪಾಂಡ್ಯಗೆ ಟೀಂ ಇಂಡಿಯಾದಲ್ಲೇ ಸ್ಥಾನವಿಲ್ಲ. ಹಾಗಾಗಿ ಈ ನಾಲ್ವರು ಕಪ್ ಗೆದ್ದರೂ ಭವಿಷ್ಯದಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್ ಆಗೋದು ತುಂಬಾನೇ ಕಷ್ಟ. 2022: ತಮ್ಮನ್ನು ರೀಟೈನ್ ಮಾಡಿಕೊಳ್ತೇವೆ ಎಂದು ಒಂದು ಮಾತು ಆರ್‌ಸಿಬಿ ಹೇಳಲಿಲ್ಲ..! ಕನ್ನಡಿಗ ರಾಹುಲ್​ಗೆ ಮಹತ್ವದ ಐಪಿಎಲ್: ರೋಹಿತ್ ಶರ್ಮಾ ನಂತರ ಟೀಂ ಇಂಡಿಯಾ ಚುಕ್ಕಾಣಿ ಹಿಡಯೋ ರೇಸ್​ನಲ್ಲಿ ಮುಂಚೂಣಿಯಲ್ಲಿರೋದು ಕನ್ನಡಿಗ ಕೆಎಲ್ ರಾಹುಲ್ ( ). ಈ ಸಲ ಲಖನೌ ಸೂಪರ್ ಜೈಂಟ್ಸ್​ ತಂಡವನ್ನ ಲೀಡ್ ಮಾಡ್ತಿರೋ ರಾಹುಲ್, ವೈಯಕ್ತಿಕವಾಗಿ ಉತ್ತಮ ಪ್ರದರ್ಶನ ನೀಡೋ ಜೊತೆ ತಂಡವನ್ನೂ ಚಾಂಪಿಯನ್ ಮಾಡೋ ಒತ್ತಡದಲ್ಲಿದ್ದಾರೆ. ಸೌತ್ ಆಫ್ರಿಕಾದಲ್ಲಿ ಒಂದು ಟೆಸ್ಟ್, ಮೂರು ಒನ್​ಡೇ ಮ್ಯಾಚ್​ಗಳನ್ನ ಲೀಡ್ ಮಾಡಿದ್ದ ರಾಹುಲ್, ಎಲ್ಲಾ ಪಂದ್ಯಗಳನ್ನೂ ಸೋತಿದ್ದಾರೆ. ನಾನೊಬ್ಬ ಉತ್ತಮ ಓಪನರ್ ಜೊತೆ ಉತ್ತಮ ನಾಯಕ ಅನ್ನೋದನ್ನ ಈ ​ನಲ್ಲಿ ಪ್ರೂವ್ ಮಾಡಬೇಕಿದೆ. ಆಗ ಮಾತ್ರ ಭವಿಷ್ಯದಲ್ಲಿ ಟೀಂ ಇಂಡಿಯಾ ಕಪ್ತಾನ ಆಗೋಕೆ ಸಾಧ್ಯ. ರಾಹುಲ್​ ಹಿಂದಿಕುತ್ತಾರಾ ರಿಷಬ್ ಪಂತ್​..? ರಾಹುಲ್ ನಂತರ ರಿಷಭ್ ಪಂತ್ ( ) ಟೀಂ ಇಂಡಿಯಾ ಕ್ಯಾಪ್ಟನ್ ಆಗೋ ರೇಸ್​ನಲ್ಲಿದ್ದಾರೆ. ಕಳೆದ ವರ್ಷದ ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನ ಯಶಸ್ವಿಯಾಗಿ ಮುನ್ನಡೆಸಿದ್ದರು. ಈ ವರ್ಷವೂ ಅದೇ ಪ್ರದರ್ಶನವನ್ನ ಡೆಲ್ಲಿ ನೀಡಿದ್ರೆ ಆ ಶ್ರೇಯ, ಪಂತ್​ಗೆ ಸಲ್ಲಬೇಕು. ಡೆಲ್ಲಿ ತಂಡವನ್ನೂ ಉತ್ತಮವಾಗಿ ಲೀಡ್ ಮಾಡಿ, ವೈಯಕ್ತಿಕವಾಗಿಯೂ ಉತ್ತಮ ಪ್ರದರ್ಶನ ನೀಡಿದ್ರೆ ಆಗ ರಿಷಭ್ ಪಂತ್ ಬಿಸಿಸಿಐ ಗಮನ ಸೆಳೆಯಬಹುದು. ರಾಹುಲ್-ಪಂತ್​​ಗೆ ಟಕ್ಕರ್ ಕೊಡಲು ಶ್ರೇಯಸ್ ಸ್ಕೆಚ್ ರಾಹುಲ್​-ರಿಷಭ್​ ಅವರಂತೆ ಶ್ರೇಯಸ್ ಅಯ್ಯರ್ ( ) ಕೂಡ ಮೂರು ಮಾದರಿ ಟೀಂ ಇಂಡಿಯಾದಲ್ಲಿ ಸ್ಥಾನವಿದೆ. ರಾಹುಲ್​-ಪಂತ್ ಟೀಂ ಇಂಡಿಯಾ ವೈಸ್ ಕ್ಯಾಪ್ಟನ್ ಆಗಿದ್ದವರು. ಆದರೆ ಶ್ರೇಯಸ್​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​ ಕೇಲ ಪ್ಲೇಯರ್. ಆದರೆ ಡೊಮೆಸ್ಟಿಕ್​ನಲ್ಲಿ ಮುಂಬೈ ಮತ್ತು IPLನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನ ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಈ ಸಲ ಕೆಕೆಆರ್​​​​​​​ ತಂಡವನ್ನ ಲೀಡ್​ ಮಾಡುತ್ತಿದ್ದು, ಮೊದಲ ಪಂದ್ಯವನ್ನ ಗೆಲ್ಲಿಸಿಕೊಟ್ಟಿದ್ದಾರೆ. ರಾಹುಲ್ ಹಾಗೂ ಪಂತ್​​ಗೆ ಹೋಲಿಸಿದ್ರೆ ನಾಯಕತ್ವದಲ್ಲಿ ಶ್ರೇಯಸ್ ಬೆಟರ್​. ಅದ್ಭುತ ಬ್ಯಾಟ್ಸ್​ಮನ್. ಈ ಸಲ ಟ್ರೋಫಿ ಹಿಡಿದ್ರೆ, ಶ್ರೇಯಸ್​ ಟೀಂ ಇಂಡಿಯಾ ಕ್ಯಾಪ್ಟನ್ ರೇಸ್​​ನಲ್ಲಿ ರಾಹುಲ್​-ಪಂತ್​ ಅವರನ್ನ ಹಿಂದಿಕ್ಕಿದ್ರೂ ಆಶ್ಚರ್ಯಪಡಬೇಕಿಲ್ಲ.